
ಚಿತ್ರದುರ್ಗ, ಸೆಪ್ಟೆಂಬರ್ 28: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಉಡುವಳ್ಳಿ ಬಳಿ ಇರುವ ಜವಾಹರ್ ನವೋದಯ ವಿದ್ಯಾಲಯ ಶಾಲೆಯ 8 ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಪ್ಯೂಟರ್ ಶಿಕ್ಷಕಿ ಪ್ರಿಯಾಂಕಾ ವಿರುದ್ಧ ಪೋಷಕರು ಹಿರಿಯೂರು ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಹೊಸದುರ್ಗ ತಾಲೂಕಿನ ಬೆಲಗೂರು ಗ್ರಾಮದ 9ನೇ ತರಗತಿ ವಿದ್ಯಾರ್ಥಿ ತಂದೆ ಕೃಷ್ಣಮೂರ್ತಿ ಅವರು ನವೋದಯ ವಿದ್ಯಾಲಯ ಶಾಲೆಯ ಶಿಕ್ಷಕಿ ವಿರುದ್ಧ ಪ್ರಕರಣ ದಾಖಲಿಸಿದ್ದು, ಪ್ರಕರಣ ಈ ರೀತಿ ಇದೆ.
ದಿನಾಂಕ 27ರಂದು ಬೆಳಗ್ಗೆ ನನ್ನ ಮಗ ಹಾಗೂ ಇತರ ವಿದ್ಯಾರ್ಥಿಗಳಿಗೆ ಆರೋಗ್ಯ ಸರಿ ಇಲ್ಲದೆ ಹಿರಿಯೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂಬ ವಿಚಾರ ತಿಳಿದು ಸರ್ಕಾರಿ ಆಸ್ಪತ್ರೆಗೆ ಹೋಗಿ ನೋಡಿದಾಗ ನನ್ನ ಮಗನಿಗೆ ವಾಂತಿ, ಸುಸ್ತಾಗಿತ್ತು. ಅವನಿಗೆ ವಿಚಾರ ಮಾಡಿದಾಗ ದಿನಾಂಕ 26ರಂದು ಬೆಳಿಗ್ಗೆ 9:00ಗೆ ತಿಂಡಿಗೆ ಹೋಗಲು ಹೊರಟಾಗ ನಮ್ಮ ಶಾಲೆಯ ಕಂಪ್ಯೂಟರ್ ಶಿಕ್ಷಕಿಯಾದ ಪ್ರಿಯಾಂಕಾ ನನಗೆ ಮತ್ತು ತಿಪ್ಪೇಸ್ವಾಮಿ,ಪ್ರಜ್ವಲ್, ಚಿರಂತ್, ಭಾರತ್, ರೋಹಿತ್ ಸುದರ್ಶನ್ ನಾಯಕ್, ಮನೋಜ್‌ಗೆ ಕೊಕೊನಟ್ ವಾಟರ್ ಲೋಟದಲ್ಲಿ ಹಾಕಿ ಕುಡಿಸಿರುತ್ತಾರೆ.
ಕೊಕೊನೆಟ್ ವಾಟರ್ ಕುಡಿದ ಸ್ವಲ್ಪ ಸಮಯದ ನಂತರ ವಾಕರಿಕೆ, ವಾಂತಿ, ಹೊಟ್ಟೆ ನೋವು ಇತ್ಯಾದಿ ಸಮಸ್ಯೆಗಳು ಕಂಡು ಬಂದಿದ್ದು, ಈ ವಿಚಾರವನ್ನು ಶ್ರೀಮತಿ ಅವರಿಗೆ ತಿಳಿಸಿದ್ದು ಆದರೆ ಅವರು ಗಮನಕ್ಕೆ ತೆಗೆದುಕೊಳ್ಳಲಿಲ್ಲ ಸಂಜೆಯ ಹೊತ್ತಿಗೆ ಮೇಲ್ಕಂಡ ಎಲ್ಲರಿಗೂ ಪೂರ್ತಿ ಸುಸ್ತಾದಾಗ ಉಪ ಪ್ರಾಂಶುಪಾಲರು ಸಂಜೆ 7:00ಗೆ ಹಿರಿಯೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆಗೆ ದಾಖಲಿಸಿದ್ದಾರೆಂಬ ವಿಚಾರ ತಿಳಿಸಿದ್ದಾನೆ.
ಶಾಲೆಯ ಉಪ ಪ್ರಾಂಶುಪಾಲರಾದ ಕೆ. ಶ್ರೀಮತಿ ಅವರು ಸದರಿ ಶಿಕ್ಷಕಿ ಪ್ರಿಯಾಂಕ ಅವರನ್ನು ರಾತ್ರೋರಾತ್ರಿ ಯಾರಿಗೂ ವಿಷಯ ತಿಳಿಸದೆ ಬೆಂಗಳೂರಿಗೆ ಕಳಿಸಿರುತ್ತಾರೆ. ನವೋದಯ ಶಾಲೆಯ ಕಂಪ್ಯೂಟರ್ ಶಿಕ್ಷಕಿಯಾದ ಪ್ರಿಯಾಂಕ ಎನ್ನುವವರು ಮತ್ತು ಬರುವ ಅನಾರೋಗ್ಯಕರವಾದ ಪದಾರ್ಥವನ್ನು ಬೆರೆಸಿ, ನನ್ನ ಮಗನಾದ ಲಿಖಿತ್ ರಾಜ್ ಹಾಗೂ ಇತರೆ ವಿದ್ಯಾರ್ಥಿಗಳಿಗೆ ಕೊಕೊನಟ್ ವಾಟರ್ ನಲ್ಲಿ ಯಾವುದೋ ಮತ್ತು ಬರುವ ಅನಾರೋಗ್ಯಕರವಾದ ಪದಾರ್ಥವನ್ನು ಬೆರೆಸಿ ನನ್ನ ಮಗನಾದ ಲಿಖಿತ್ ರಾಜ್ ಹಾಗೂ ಇತರೆ ವಿದ್ಯಾರ್ಥಿಗಳಿಗೆ ಒತ್ತಾಯ ಪೂರ್ವಕವಾಗಿ ಕುಡಿಸಿದ್ದಾರೆ.
ಮಕ್ಕಳ ಆರೋಗ್ಯಕ್ಕೆ ಹಾನಿ ಮತ್ತು ಗಾಯ ಉಂಟಾಗುತ್ತದೆ ಎಂದು ತಿಳಿದು ಉದ್ದೇಶಪೂರ್ವಕವಾಗಿ ಕೊಕೊನಟ್ ವಾಟರ್ ಕುಡಿಸಿರುತ್ತಾರೆ. ಸದರಿ ಶಿಕ್ಷಕಿ ಪ್ರಿಯಾಂಕ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ವಿದ್ಯಾರ್ಥಿ ತಂದೆ ಕೃಷ್ಣಮೂರ್ತಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಪ್ರಕರಣ ಹಿನ್ನೆಲೆ ಏನು..?
ತಾಲೂಕಿನ ಉಡುವಳ್ಳಿ ಬಳಿ ಇರುವ ಜವಾಹರ್ ನವೋದಯ ಶಾಲೆಯ 8 ಜನ ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದ ಘಟನೆ ಮಂಗಳವಾರ ಪ್ರಕರಣ ನಡೆದಿತ್ತು. ಅಸ್ವಸ್ಥರಾಗೊಂಡ ವಿದ್ಯಾರ್ಥಿಗಳನ್ನು ಹಿರಿಯೂರಿನ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.
ಎಂಟನೇ ತರಗತಿ ವಿದ್ಯಾರ್ಥಿನಿ ಪ್ರಜ್ವಲ್ ಮಾತನಾಡಿ ಬೆಳಗ್ಗೆ ಇಡ್ಲಿ ಚಟ್ನಿ ಸಾಂಬಾರ್ ಕೊಟ್ಟಿದ್ದರು. ತಿಂದ ನಂತರ ವಾಂತಿ, ತಲೆ ಸುತ್ತು ಬಂತು ಎಂದಿದ್ದಾನೆ. ತಿಪ್ಪೇಸ್ವಾಮಿ, ಚಿರಂತ್, ಮನೋಜ್, ನಾಗೇಶ್, ಭರತ್ ಮತ್ತು ಒಂಬತ್ತನೇ ತರಗತಿಯ ಸುದರ್ಶನ್ ನಾಯಕ ರೋಹಿತ್ ಮತ್ತು ಲಿಖಿತ್ ರಾಜ್ ಅಸ್ವಸ್ಥರಾದ ವಿದ್ಯಾರ್ಥಿಗಳು. ಈ ವಿದ್ಯಾರ್ಥಿಗಳಿಗೆ ಮಕ್ಕಳ ತಜ್ಞರಾದ ಡಾ. ಶ್ರೀರಂಗೇಗೌಡ ತಪಾಸಣೆ ನಡೆಸಿ ಚಿಕಿತ್ಸೆ ನೀಡಿದ್ದರು. ಈ ಘಟನೆ ಬಗ್ಗೆ ಸ್ಥಳೀಯ ವ್ಯಕ್ತಿ ನಾಗೇಶ್ ಮಾತನಾಡಿ ‘ಕೇವಲ ಎಂಟು ಜನ ವಿದ್ಯಾರ್ಥಿಗಳಿಗೆ ಮಾತ್ರ ಈ ರೀತಿ ಘಟನೆ ಆಗಿದ್ದು ಅನುಮಾನಸ್ಪದವಾಗಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿದ್ದರು.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group : https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharechat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1