ಬೆಂಗಳೂರು: ಚಿತ್ರದುರ್ಗ ಜಿಲ್ಲಾ ಸಹಕಾರಿ ಕೇಂದ್ರೀಯ ಬ್ಯಾಂಕ್ (DCC) ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿ ಪ್ರಕ್ರಿಯೆ ಆರಂಭಿಸಿದ್ದು, ಅರ್ಹರಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಬ್ಯಾಂಕಿಂಗ್ ಉದ್ಯೋಗ ಹುಡುಕುವವರಿಗೆ ಇದೊಂದು ಉತ್ತಮ ಅವಕಾಶವಾಗಿದೆ. ಅಕ್ಟೋಬರ್ 16ರೊಳಗೆ ಅರ್ಜಿ ಸಲ್ಲಿಸಬೇಕು ಎಂದು ಬ್ಯಾಂಕ್ ತಿಳಿಸಿದೆ.

ಚಿತ್ರದುರ್ಗ ಜಿಲ್ಲಾ ಸಹಕಾರಿ ಕೇಂದ್ರೀಯ ಬ್ಯಾಂಕ್ (DCC) ನಲ್ಲಿ ಒಟ್ಟು 68 ಸೆಕೆಂಡ್ ಡಿವಿಶನ್ ಅಸಿಸ್ಟೆಂಟ್, ಡ್ರೈವರ್ ಹುದ್ದೆಗಳು ಖಾಲಿ ಇವೆ. ಆಯ್ಕೆ ಆಗುವ ಅಭ್ಯರ್ಥಿಗಳಿಗೆ ಚಿತ್ರದುರ್ಗದಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಕೆಗೂ ಮುನ್ನ ನೇಮಕಾತಿಯ ಪೂರ್ಣ ವಿವರ ತಿಳಿಯಿರಿ.
ನೇಮಕಾತಿ ಪೂರ್ಣ ವಿವರ ಸಂಸ್ಥೆ ಹೆಸರು: ಚಿತ್ರದುರ್ಗ ಜಿಲ್ಲಾ ಸಹಕಾರಿ ಕೇಂದ್ರೀಯ ಬ್ಯಾಂಕ್ (DCC)
ಹುದ್ದೆ ಹೆಸರು: ಡ್ರೈವರ್, ಸೆಕೆಂಡ್ ಡಿವಿಶನ್ ಅಸಿಸ್ಟೆಂಟ್
ಖಾಲಿ ಹುದ್ದೆ ಸಂಖ್ಯೆ: 68 ಮಾಸಿಕ ವೇತನ: 40,900 ರಿಂದ 78,200 ರೂಪಾಯಿ
ಪೋಸ್ಟಿಂಗ್ ಎಲ್ಲಿ: ಚಿತ್ರದುರ್ಗ
ಅರ್ಜಿ ಸಲ್ಲಿಕೆ ಕೊನೆ ದಿನಾಂಕ: ಅಕ್ಟೋಬರ್ 16
ಒಟ್ಟು ಹುದ್ದೆಗಳ ವಿವರ: ಚಿತ್ರದುರ್ಗ ಜಿಲ್ಲಾ ಸಹಕಾರಿ ಕೇಂದ್ರೀಯ ಬ್ಯಾಂಕ್ (DCC)ನಲ್ಲಿ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಹುದ್ದೆಗಳು 06, ಪ್ರಥಮ ದರ್ಜೆ ಸಹಾಯಕ (FDA) 09 ಹುದ್ದೆ, ದ್ವಿತೀಯ ದರ್ಜೆ ಸಹಾಯಕ (SDA) 35ಹುದ್ದೆ, ಕಂಪ್ಯೂಟರ್ ಎಂಜಿನಿಯರ್ 02 ಹುದ್ದೆ, ಡ್ರೈವರ್ 02, ಅಟೆಂಡರ್ 14 ಹುದ್ದೆಗಳು ಖಾಲಿ ಇವೆ. ಶೈಕ್ಷಣಿಕ ಅರ್ಹತೆ ಚಿತ್ರದುರ್ಗ ಜಿಲ್ಲಾ ಸಹಕಾರಿ ಕೇಂದ್ರೀಯ ಬ್ಯಾಂಕ್ (DCC) ವಿವಿಧ ಹುದ್ದೆಗಳಿಗೆ ಸ್ನಾತಕೋತ್ತರ ಪದವಿ, ಪದವಿ, ಕಂಪ್ಯೂಟರ್ ಸೈನ್ಸ್ನಲ್ಲಿ ಬಿ.ಎಸ್ಸಿ, ಬಿಇ, ಬಿಸಿಎ ಮತ್ತು ಹತ್ತನೇ ತರಗತಿ (ಡ್ರೈವರ್ ಹುದ್ದೆಗೆ) ಉತ್ತೀರ್ಣ ಆಗಿರಬೇಕು ಎಂದು ಬ್ಯಾಂಕ್ ಮಾಹಿತಿ ನೀಡಿದೆ.
ವಯೋಮಿತಿ ಹಾಗೂ ಸಡಿಲಿಕೆ ವಿವರ : ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳ ವಯಸ್ಸು ಮುಂದಿನ ತಿಂಗಳ ಅಕ್ಟೋಬರ್ 16 ಕನಿಷ್ಠ 18 ವರ್ಷ ಹಾಗೂ ಗರಿಷ್ಠ 35 ವರ್ಷ ಇರಬೇಕು ಎಂದು ಮಿತಿ ನಿಗದಿ ಮಾಡಲಾಗಿದೆ. ಪ್ರವರ್ಗ-2ಎ/2ಬಿ/3ಎ &3ಬಿ ಅಭ್ಯರ್ಥಿಗಳಿಗೆ ಮೂರ ವರ್ಷ , ಪರಿಶಿಷ್ಟ ಜಾತಿ ಮತ್ತು ಪಂಗಡ/ಪ್ರವರ್ಗ-1 ಅಭ್ಯರ್ಥಿಗಳಿಗೆ 5 ವರ್ಷ, PH/ ವಿಧವಾ ಅಭ್ಯರ್ಥಿಗಳು 10 ವರ್ಷ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ.
ಮಾಸಿಕ ವೇತನದ ಮಾಹಿತಿ:
ಕಂಪ್ಯೂಟರ್ ಎಂಜಿನಿಯರ್- ಮಾಸಿಕ 30,350 ನಿಂದ 58,250 ರೂಪಾಯಿ
ಡ್ರೈವರ್- ಮಾಸಿಕ 27,650 ನಿಂದ 52,650 ರೂಪಾಯಿ
ಅಟೆಂಡರ್- ಮಾಸಿಕ 23,500 ನಿಂದ 47,650 ರೂಪಾಯಿ
ಅಸಿಸ್ಟೆಂಟ್ ಜನರಲ್ ಮ್ಯಾನೇಜರ್: ಮಾಸಿಕ 40,900 ನಿಂದ 78,200 ರೂಪಾಯಿ
ಪ್ರಥಮ ದರ್ಜೆ ಸಹಾಯಕ: ಮಾಸಿಕ 37,900 ನಿಂದ 70,850 ರೂಪಾಯಿ
ದ್ವಿತೀಯ ದರ್ಜೆ ಸಹಾಯಕ: ಮಾಸಿಕ 30,350 ನಿಂದ 58,250 ರೂಪಾಯಿ
ಅರ್ಜಿ ಶುಲ್ಕದ ಮಾಹಿತಿ : ಪರಿಶಿಷ್ಟ ಜಾತಿ-ಪಂಗಡದ/ ಪ್ರವರ್ಗ-1/PH/ವಿಧವಾ & ಮಾಜಿ ಸೈನಿಕ ಅಭ್ಯರ್ಥಿಗಳಿಗೆ 750 ರೂಪಾಯಿ, ಸಾಮಾನ್ಯ/ ಪ್ರವರ್ಗ-2ಎ/2ಬಿ/3ಎ & 3ಬಿ ಅಭ್ಯರ್ಥಿಗಳಿಗೆ 1500 ರೂಪಾಯಿ ನಿಗದಿ ಮಾಡಲಾಗಿದ್ದು, ಆನ್‌ಲೈನ್ ಮೂಲಕ ಪಾವತಿಸಬೇಕು. ಲಿಖಿತ ಪರೀಕ್ಷೆ ಮತ್ತು ಸಂದರ್ಶನ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ನಂತರ ಚಿತ್ರದುರ್ಗದಲ್ಲಿ ಪೋಸ್ಟಿಂಗ್ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಅ ದೂರವಾಣಿಗೆ 9019796412 ಸಂಪರ್ಕಿಸಬೇಕು.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group : https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharechat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1