ಆಹಾರ ಬಿಸಿಯಾಗಿರಲು ಬಳಸುವ ಅಲ್ಯುಮಿನಿಯಂ ಫಾಯಿಲ್ ಎಷ್ಟು ಸೇಫ್?

ಆಹಾರ ಬಿಸಿಯಾಗಿರಲಿ ಎಂಬ ಕಾರಣಕ್ಕೆ ಇದನ್ನು ಬಳಸಲಾಗುತ್ತದೆ. ಈ ಅಲ್ಯೂಮಿನಿಯಂ ಫಾಯಿಲ್ ಅನ್ನು ಟಿನ್ ಫಾಯಿಲ್ ಎಂದೂ ಕರೆಯುತ್ತಾರೆ. ಇದನ್ನು ಬಳಸುವುದರಿಂದ ಆರೋಗ್ಯದ ಮೇಲೆ ಅಡ್ಡಪರಿಣಾಮಗಳು ಆಗುವುದಿಲ್ಲವೇ? ಎಂಬ ಪ್ರಶ್ನೆಗೆ ಇಲ್ಲಿದೆ ಮಾಹಿತಿ.

ಜೊಮ್ಯಾಟೋ, ಸ್ವಿಗ್ಗಿಯಲ್ಲಿ ಫುಡ್ ಆರ್ಡರ್ ತರಿಸುವಾಗ ಅಥವಾ ಹೋಟೆಲ್​ನಿಂದ ಬಿಸಿಯಾದ ಫುಡ್ ಪಾರ್ಸಲ್ ತರುವಾಗ ಅದನ್ನು ಸಿಲ್ವರ್ ಬಣ್ಣದ ಪೇಪರ್​​ನಿಂದ ಸುತ್ತಲಾಗಿರುತ್ತದೆ. ಇದಕ್ಕೆ ಅಲ್ಯೂಮಿನಿಯಂ ಫಾಯಿಲ್ ಎನ್ನುತ್ತಾರೆ. ಆಹಾರ ಬಿಸಿಯಾಗಿರಲಿ ಎಂಬ ಕಾರಣಕ್ಕೆ ಇದನ್ನು ಬಳಸಲಾಗುತ್ತದೆ. ಈ ಅಲ್ಯೂಮಿನಿಯಂ ಫಾಯಿಲ್ ಅನ್ನು ಟಿನ್ ಫಾಯಿಲ್ ಎಂದೂ ಕರೆಯುತ್ತಾರೆ. ಇದನ್ನು ಬಳಸುವುದರಿಂದ ಆರೋಗ್ಯದ ಮೇಲೆ ಅಡ್ಡಪರಿಣಾಮಗಳು ಆಗುವುದಿಲ್ಲವೇ? ಎಂಬ ಪ್ರಶ್ನೆಗೆ ಇಲ್ಲಿದೆ ಮಾಹಿತಿ.

ಅಲ್ಯುಮಿನಿಯಂ ಫಾಯಿಲ್ ಕಿರಾಣಿ ಅಂಗಡಿಗಳಲ್ಲಿ ಸುಲಭವಾಗಿ ಸಿಗುತ್ತದೆ. ಕೆಲವು ಮನೆಗಳಲ್ಲೂ ಅಡುಗೆಯನ್ನು ಬಿಸಿಯಾಗಿಡಲು ಈ ಪೇಪರ್ ಬಳಸುತ್ತಾರೆ. ಹೋಟೆಲ್​ಗಳಲ್ಲಂತೂ ಇದರ ಬಳಕೆ ಸರ್ವೇಸಾಮಾನ್ಯ. ಅಲ್ಯೂಮಿನಿಯಂ ಫಾಯಿಲ್ ಅನ್ನು ಅಪಾಯಕಾರಿ ಎಂದು ಹೇಳಲು ಸಾಧ್ಯವಿಲ್ಲ. ಆದರೆ ಇದು ನಿಮ್ಮ ಆಹಾರದ ಅಲ್ಯೂಮಿನಿಯಂ ಅಂಶವನ್ನು ಕೊಂಚ ಪ್ರಮಾಣದಲ್ಲಿ ಹೆಚ್ಚಿಸಬಹುದು. ನಿಮ್ಮ ಆಹಾರದಲ್ಲಿ ಅಲ್ಯೂಮಿನಿಯಂ ಪ್ರಮಾಣ ಕಡಿಮೆ ಮಾಡಬೇಕೆಂದು ನೀವು ಬಯಸಿದ್ದರೆ ನೀವು ಅಲ್ಯೂಮಿನಿಯಂ ಫಾಯಿಲ್ ಬಳಕೆಯನ್ನು ಕಡಿಮೆ ಮಾಡಬೇಕು.

ಆದರೆ, ಪೌಷ್ಟಿಕತಜ್ಞರಾದ ಪ್ರಿಯಾ ಕತ್ಪಾಲ್ ಪ್ರಕಾರ, ನೀವು ಎಂದಿಗೂ ಬಿಸಿಯಾದ ಆಹಾರವನ್ನು ಅಲ್ಯೂಮಿನಿಯಂ ಫಾಯಿಲ್‌ನಲ್ಲಿ ಸುತ್ತಬಾರದು. ಇದರಿಂದ ನೀವು ಸುತ್ತುವ ಆಹಾರದಲ್ಲಿ ಫಾಯಿಲ್ ಸೋರಿಕೆಯಾಗುತ್ತದೆ. ಇದು ಬುದ್ಧಿಮಾಂದ್ಯತೆ ಮತ್ತು ಆಲ್ಝೈಮರ್‌ಗಳಂತಹ ಅನೇಕ ಕಾಯಿಲೆಗಳಿಗೆ ಕಾರಣವಾಗಬಹುದು. ಹೀಗಾಗಿ, ನೀವು ಚಪಾತಿ ಮತ್ತು ಸ್ಯಾಂಡ್‌ವಿಚ್‌ಗಳಂತಹ ಆಹಾರಗಳನ್ನು ಕಟ್ಟಲು ಉತ್ತಮ ಗುಣಮಟ್ಟದ ಕಾಗದವನ್ನು ಬಳಸಬಹುದು ಎಂದು  ಸಲಹೆ ನೀಡಿದ್ದಾರೆ.

ಆಮ್ಲೀಯ ಆಹಾರವನ್ನು ಅಲ್ಯುಮಿನಿಯಂ ಫಾಯಿಲ್​ನಲ್ಲಿ ಸುತ್ತಬೇಡಿ. ಅಂದರೆ, ವಿನೆಗರ್, ಟೊಮೆಟೊ ಮತ್ತು ಟೊಮೆಟೊ ಸಾಸ್‌ನಿಂದ ಮಾಡಿದ ಆಹಾರಗಳನ್ನು ಅಲ್ಯೂಮಿನಿಯಂ ಫಾಯಿಲ್‌ನಲ್ಲಿ ಪ್ಯಾಕ್ ಮಾಡಬಾರದು. ಆಹಾರದಲ್ಲಿರುವ ಆಮ್ಲವು ಅಲ್ಯೂಮಿನಿಯಂನೊಂದಿಗೆ ಸೇರಿ ತೇವಾಂಶ ಮತ್ತು ಬ್ಯಾಕ್ಟೀರಿಯಾವನ್ನು ಆಹಾರಕ್ಕೆ ಪ್ರವೇಶಿಸಲು ಅನುವು ಮಾಡಿಕೊಡುತ್ತದೆ. ಹೀಗಾಗಿ, ಅಲ್ಯುಮಿನಿಯಂ ಫಾಯಿಲ್ ಬಳಸುವಾಗ ಎಚ್ಚರಿಕೆ ವಹಿಸುವುದು ಅಗತ್ಯ.

Source : https://tv9kannada.com/health/food-safety-tips-is-it-safe-to-use-aluminium-foil-for-packing-hot-food-sct-684038.html

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

 WhatsApp Group : https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharechat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *