Pratham in Bigg Boss Kannada 10 : ಬಿಗ್ಬಾಸ್ ಸೀಸನ್-4ರ ವಿಜೇತ ಒಳ್ಳೆಯ ಹುಡುಗ ಪ್ರಥಮ್ ಈಗ ಮತ್ತೆ ಬಿಗ್ಹೌಸ್ಗೆ ಎಂಟ್ರಿ ಕೊಟ್ಟಿದ್ದಾರೆ. ಇದರಿಂದ ಆಟ ಮತ್ತಷ್ಟು ಇಂಟ್ರಸ್ಟಿಂಗ್ ಆಗಿ ಹೊರಹೊಮ್ಮಿದೆ. ಅಲ್ಲದೆ, ದಿನದಿಂದ ದಿನಕ್ಕೆ ಸ್ಪರ್ಧಿಗಳಿಗೆ ಸರ್ಪ್ರೈಸ್ ಸಿಗುತ್ತಿದ್ದು, ಪ್ರೇಕ್ಷಕರಿಗೆ ಮನರಂಜನೆ ಹೆಚ್ಚಿಸಿದೆ.

Pratham in Bigg Boss 10 : ಬಿಗ್ಬಾಸ್ ಸೀಸನ್ 10 ಆರಂಭವಾಗಿದ್ದು, ದಿನದಿಂದ ದಿನಕ್ಕೆ ಶೋ ಕ್ಯೂರಿಯಾಸಿಟಿ ಹುಟ್ಟಿಸುತ್ತಿದೆ. ಇತ್ತೀಚಿಗಷ್ಟೇ ಶಾಸಕ ಪ್ರದೀಪ್ ಈಶ್ವರ್ ಬಿಗ್ಹೌಸ್ ಪ್ರವೇಶ ಮಾಡಿ ತಮ್ಮ ಮಾತುಗಳ ಮೂಲಕ ಸ್ಪರ್ಧಿಗಳಿಗೆ ಜೀವನದ ಕುರಿತು ಕೆಲವು ಉಪದೇಶಗಳನ್ನು ಮಾಡಿದ್ರು, ಇದೀಗ ಬಿಗ್ಹೌಸ್ಗೆ ನಟ ಪ್ರಥಮ್ ಎಂಟ್ರಿ ಕೊಟ್ಟಿದ್ದು, ಮೊದಲ ದಿನವೇ ಕಿರಿಕ್ ಶುರು ಮಾಡಿದ್ದಾರೆ.
ಹೌದು.. ಬಿಗ್ಬಾಸ್ ಸೀಸನ್-4ರ ವಿಜೇತ ಒಳ್ಳೆಯ ಹುಡುಗ ಪ್ರಥಮ್ ಈಗ ಮತ್ತೆ ಬಿಗ್ಹೌಸ್ಗೆ ಎಂಟ್ರಿ ಕೊಟ್ಟಿದ್ದಾರೆ. ಇದರಿಂದ ಆಟ ಮತ್ತಷ್ಟು ಇಂಟ್ರಸ್ಟಿಂಗ್ ಆಗಿ ಹೊರಹೊಮ್ಮಿದೆ. ಅಲ್ಲದೆ, ದಿನದಿಂದ ದಿನಕ್ಕೆ ಸ್ಪರ್ಧಿಗಳಿಗೆ ಸರ್ಪ್ರೈಸ್ ಸಿಗುತ್ತಿದ್ದು, ಪ್ರೇಕ್ಷಕರಿಗೆ ಮನರಂಜನೆ ಹೆಚ್ಚಿಸಿದೆ.
ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಬಳಿಕ ಪ್ರಥಮ್ ಬಿಗ್ಬಾಸ್ ಮನೆ ಪ್ರವೇಶ ಮಾಡಿದ್ದಾರೆ. ಅಲ್ಲದೆ, ನಾನು ಬಂದಿರೋದು ನಿಮ್ಮೊಟ್ಟಿಗೆ ಇರೋದಿಕ್ಕೆ ಅಲ್ಲ, ಟಾಸ್ಕ್ ಮಾಡಿಸೋಕೆ ಅಂತ ಬಿಗ್ಹೌಸ್ ಮಂದಿಗೆ ಕಡಕ್ ವಾರ್ನ್ ಮಾಡಿದ್ದಾರೆ. ನ್ಯಾಯ ಅಂದ್ರೆ ಲಾರ್ಡ್ ಪ್ರಥಮ್ ಸರ್, ಪ್ರಥಮ್ ಸರ್ ಅಂದ್ರೆ ನ್ಯಾಯ ಅಂತ ಸ್ಪರ್ಧಿಗಳಿಂದ ಸೆಲ್ಯೂಟ್ ಹೊಡೆಸಿಕೊಂಡಿದ್ದಾರೆ.
ಅಲ್ಲದೆ ಬಿಗ್ಹೌಸ್ಗೆ ಲಾರ್ಡ್ ಪ್ರಥಮ್ ‘ಐಯ್ಯಾಮ್ ವಿಲನ್’ ಅಂತ ಎಂಟ್ರಿ ಕೊಟ್ಟ ಕ್ಷಣವೇ ಸ್ಪರ್ಧಿಗಳಿಗೆ ಕಡಕ್ ವಾರ್ನಿಂಗ್ ಮಾಡಿದ್ದಾರೆ. ಎದುರು ನಿಂತ ಸ್ಪರ್ಧಿಗಳನ್ನು ತಲೆ ಬಗ್ಗಿಸಿ ನಿಲ್ಲಿ ಗುರಾಯಿಸೋದೆಲ್ಲಾ ಬೇಡ ಅಂತ ಎಚ್ಚರಿಕೆ ಕೊಟ್ಟಿದ್ದಾರೆ. ಇದರಿಂದ ಮನೆಯವರು ಕಕ್ಕಾಬಿಕ್ಕಿಯಾಗಿದ್ದಾರೆ. ಬಿಗ್ಹೌಸ್ಗೆ ಪ್ರಥಮ್ ಪ್ರವೇಶದಿಂದ ಸ್ಪರ್ಧಿಗಳಿಗೆ ಭಯ ಶುರುವಾಗಿದ್ರೆ, ಪ್ರೇಕ್ಷಕರು ಮಾತ್ರ ಉತ್ಸುಕುರಾಗಿ ಎಪಿಸೋಡ್ ಎಂಜಾಯ್ ಮಾಡುತ್ತಿದ್ದಾರೆ.
ಬಿಗ್ಬಾಸ್ ಸೀಸನ್ 4ರಲ್ಲಿ ನಟ ಪ್ರಥಮ್ ಭಾಗವಹಿಸಿದ್ದರು. ತಮ್ಮ ವಿಭಿನ್ನ ಮಾತಿನ ಶೈಲಿಯಿಂದ ಜನರ ಮನ ಗೆದ್ದಿದ್ದರು. ಅಲ್ಲದೆ ಹುಚ್ಚ ವೆಂಕಟ್ ಜೊತೆ ಜಗಳವಾಡಿಕೊಂಡಿದ್ದರು. ಹುಚ್ಚ ವೆಂಕಟ್ ಪ್ರಥಮ್ನನ್ನು ಬಾಯಲ್ಲಿ ರಕ್ತ ಬರುವಂತೆ ಹೊಡೆದಿದ್ದರು. ಕೊನೆಗೆ ಆ ಸೀಸನ್ ವಿನ್ನರ್ ಆಗಿ ಪ್ರಥಮ್ ಆಯ್ಕೆಯಾಗಿದ್ದರು.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group : https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharechat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1