ಭಾರತೀಯ ಮೂಲದ ವಿದ್ಯಾರ್ಥಿನಿ ಶ್ರೀಪ್ರಿಯಾ ಕಲ್ಭಾವಿ ಅವರು ಅಮೆರಿಕದ 3M ಯಂಗ್ ಸೈಂಟಿಸ್ಟ್ ಚಾಲೆಂಜ್ 2023 ರಲ್ಲಿ ಎರಡನೇ ಸ್ಥಾನ ಗಳಿಸಿದ್ದಾರೆ.

ನ್ಯೂಯಾರ್ಕ್, ಅಮೆರಿಕ: ಭಾರತೀಯ ಅಮೆರಿಕನ್ ಹದಿಹರೆಯದ ಶ್ರೀಪ್ರಿಯಾ ಕಲ್ಭಾವಿ ವಾರ್ಷಿಕ 2023 3M ಯಂಗ್ ಸೈಂಟಿಸ್ಟ್ ಚಾಲೆಂಜ್‌ನಲ್ಲಿ ಎರಡನೇ ಸ್ಥಾನವನ್ನು ಅಲಂಕರಿಸಿದ್ದಾರೆ.
ಇದು ಅಮೆರಿಕದಲ್ಲಿ ಮಧ್ಯಮ ಶಾಲಾ ವಿದ್ಯಾರ್ಥಿಗಳಿಗೆ ಪ್ರಧಾನ ವಿಜ್ಞಾನ ಸ್ಪರ್ಧೆಯಾಗಿದೆ.
ಕ್ಯಾಲಿಫೋರ್ನಿಯಾದ ಲಿನ್‌ಬ್ರೂಕ್ ಹೈಸ್ಕೂಲ್‌ನಲ್ಲಿ ಒಂಬತ್ತನೇ ತರಗತಿ ವಿದ್ಯಾರ್ಥಿನಿಯಾಗಿರುವ ಕಲ್ಭಾವಿ, EasyBZ ಅನ್ನು ಅಭಿವೃದ್ಧಿಪಡಿಸುವುದಕ್ಕಾಗಿ 2 ಸಾವಿರ ಡಾಲರ್ ಬಹುಮಾನವನ್ನು ಪಡೆದಿದ್ದಾರೆ. ಮಾತ್ರೆಗಳು ಅಥವಾ ಸೂಜಿಗಳಿಲ್ಲದೇ ಸ್ವಯಂಚಾಲಿತ ಔಷಧ ವಿತರಣೆಗಾಗಿ ಮೈಕ್ರೋನೀಡಲ್ ಪ್ಯಾಚ್ ಅಭಿವೃದ್ಧಿಪಡಿಸಿದ್ದಕ್ಕಾಗಿ ಕಲ್ಭಾವಿ ಅವರಿಗೆ ಈ ಪ್ರಶಸ್ತಿ ಲಭಿಸಿದೆ.
ಜೀವನ ಬದಲಾವಣೆಗಾಗಿ ಸಹಾಯ ಮಾಡುವ ಉದ್ದೇಶದಿಂದ ಈ ಸ್ಪರ್ಧೆಯಲ್ಲಿ ಭಾಗವಹಿಸಿದೆ ಎಂದು 3M ಯಂಗ್ ಸೈಂಟಿಸ್ಟ್ ಚಾಲೆಂಜ್ ವೆಬ್‌ಸೈಟ್‌ನ ಬ್ಲಾಗ್ ಪೋಸ್ಟ್‌ನಲ್ಲಿ ಕಲ್ಭಾವಿ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ “ಪ್ರಸಿದ್ಧ ವ್ಯಕ್ತಿಗಳು” ಎಂಬ ಪಾಡ್‌ಕ್ಯಾಸ್ಟ್ ಅನ್ನು ಸಹ ಹೋಸ್ಟ್ ಮಾಡಿದ್ದು, ಅವರ ಕಾರ್ಯಕ್ರಮದ ವಿಷಯದ ಭಾಗವಾಗಿ ಅವರು ಮಹಿಳಾ ವಿಜ್ಞಾನಿಗಳನ್ನು ಸಂಶೋಧಿಸುತ್ತಿದ್ದಾರೆ. ಈ ಕಾರ್ಯಕ್ರಮದ ಭಾಗವಾಗಿ ಅವರ ಜೀವನ, ಸಾಧನೆಗಳು ಮತ್ತು ಸಂಶೋಧನೆಗಳ ಬಗ್ಗೆ ಹೆಚ್ಚಾಗಿ ಬೆಳಕು ಚಲ್ಲುತ್ತಿದ್ದಾರೆ.
ವೈಜ್ಞಾನಿಕ ಸಂಶೋಧನೆಗಳು ಮತ್ತು ಹೊಸ ಪ್ರಯೋಗಗಳು ಯಾವಾಗಲೂ ಆಸಕ್ತಿಯನ್ನು ಹೆಚ್ಚಿಸುತ್ತವೆ. ನನ್ನ ಸುತ್ತಲಿನ ವಿಜ್ಞಾನಿಗಳು, ವಿಶೇಷವಾಗಿ ವೈದ್ಯರು, ಅವರು ಪ್ರತಿದಿನ ಜನರಿಗೆ ಸಹಾಯ ಮಾಡಲು ಕೆಲಸ ಮಾಡುವುದರಿಂದ ಸ್ಪೂರ್ತಿದಾಯಕವಾಗಿರುತ್ತಾರೆ ಎಂದು ನಾನು ಕಂಡುಕೊಂಡಿದ್ದೇನೆ ಎಂದು ಕಲ್ಭಾವಿ ಹೇಳಿದ್ದಾರೆ. ಇವರು ಮುಂದೆ, ನರಶಸ್ತ್ರಚಿಕಿತ್ಸಕರಾಗುವ ಇಚ್ಛೆ ಹೊಂದಿದ್ದಾರೆ.
ನನ್ನ ಆವಿಷ್ಕಾರವಾದ ಮೈಕ್ರೊನೀಡಲ್ ಪ್ಯಾಚ್‌ನೊಂದಿಗಿನ ಅವರ ಔಷಧಗಳು ನೋವುರಹಿತವಾಗಿವೆ. ಅಷ್ಟೇ ಅಲ್ಲ ಹೆಚ್ಚು ಕೈಗೆಟುಕುವ ದರದಲ್ಲಿ ಎಲ್ಲರಿಗೂ ಲಭ್ಯ ಇದ್ದು, ಈ ಮೂಲಕ ಜನರ ಜೀವನವನ್ನು ಸುಧಾರಿಸಲು ನಾನು ಬಯಸುತ್ತೇನೆ. ಜನರಿಗೆ ಸಹಾಯ ಮಾಡಲು ಮಾರ್ಗದರ್ಶಕರಿಂದ ಅನುಭವ ಮತ್ತು ಸಲಹೆಯನ್ನು ಪಡೆಯುತ್ತೇನೆ ಎಂದು ಕಲ್ಭಾವಿ ಹೇಳಿದ್ದಾರೆ.
ಕಲ್ಭಾವಿಯ ಹೊರತಾಗಿ ಇತರ ಐದು ಭಾರತೀಯ – ಅಮೇರಿಕನ್ ಹದಿಹರೆಯದವರು ಮೊದಲ ಹತ್ತು ಅಂತಿಮ ಸ್ಪರ್ಧಿಗಳಲ್ಲಿ ಸ್ಥಾನ ಪಡೆದಿದ್ದಾರೆ. ಪ್ರತಿಯೊಬ್ಬರು 1 ಸಾವಿರ ಡಾಲರ್ ಬಹುಮಾನ ಮತ್ತು 500 ಡಾಲರ್ ಉಡುಗೊರೆ ಕಾರ್ಡ್ ಅನ್ನು ಪಡೆದಿದ್ದಾರೆ.
ಅಮೆರಿಕದ ಹೇಮನ್ ಬೆಕ್ಲೆಗೆ ಮೊದಲ ಬಹುಮಾನ: ಅಮೆರಿಕದ ಟಾಪ್ ಯಂಗ್ ಸೈಂಟಿಸ್ಟ್ ಎಂಬ ಬಿರುದು ಜೊತೆಗೆ $25,000 ಮೊತ್ತದ ಮೊದಲ ಬಹುಮಾನವನ್ನು ವರ್ಜೀನಿಯಾದ ಹೇಮನ್ ಬೆಕ್ಲೆ ಅವರು ಪಡೆದುಕೊಂಡಿದ್ದಾರೆ. ಇವರು ಕಾನ್ಸರ್ ಚಿಕಿತ್ಸೆಗಾಗಿ ಕಂಡು ಹಿಡಿದ ಸಾಬೂನಿಗಾಗಿ ಈ ಗೌರವವನ್ನು ಪಡೆದುಕೊಂಡಿದ್ದಾರೆ.
16 ವರ್ಷಗಳಿಂದ ಈ ಸ್ಪರ್ಧೆ ಜನರ ಕಲ್ಪನೆಗಳು ಮತ್ತು ವಿಜ್ಞಾನದ ಶಕ್ತಿಯನ್ನು ಬಳಸಿಕೊಳ್ಳುವಲ್ಲಿ ನಮ್ಮ ನಂಬಿಕೆಯನ್ನು ಹೆಚ್ಚಿಸುತ್ತಿದೆ. ಅದು ಸಾಧ್ಯವಾದಷ್ಟು ಮರು ರೂಪಿಸುತ್ತದೆ. ಈ ಸ್ಪರ್ಧೆಯಿಂದ ಯುವ ನವೋದ್ಯಮಿಗಳು ಉಜ್ವಲ ಭವಿಷ್ಯವನ್ನು ರೂಪಿಸಲು ಸಹಾಯ ಮಾಡುತ್ತದೆ ಎಂದು 3M ಕಾರ್ಯನಿರ್ವಾಹಕ ಉಪಾಧ್ಯಕ್ಷ ಜಾನ್ ಬಾನೊವೆಟ್ಜ್ ಹೇಳಿದರು.
ದಿ ನ್ಯೂಯಾರ್ಕ್ ಟೈಮ್ಸ್ ಮ್ಯಾಗಜೀನ್, ಫೋರ್ಬ್ಸ್ ಮತ್ತು ಬ್ಯುಸಿನೆಸ್ ಇನ್ಸೈಡರ್‌ನಲ್ಲಿ ಕಾಣಿಸಿಕೊಂಡಿರುವ ಟೈಮ್ ಮ್ಯಾಗಜೀನ್‌ನ ವರ್ಷದ ಮೊದಲ ಕಿಡ್ ಎಂದು ಯುವ ನವೋದ್ಯಮಿಗಳನ್ನು ಹೆಸರಿಸಲಾಗಿದೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group : https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharechat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1