ಆಹಾರದಿಂದ ಸಂಪೂರ್ಣ ಇಂದ್ರಿಯನಿಗ್ರಹವನ್ನು ವಿಭಿನ್ನ ಸಮಯದವರೆಗೆ ಅನುಸರಿಸುವುದನ್ನು ಉಪವಾಸ ಎನ್ನುತ್ತಾರೆ. ಉಪವಾಸವು ಪ್ರಕೃತಿ ಚಿಕಿತ್ಸೆಯ ಪಂಚಸೂತ್ರಗಳಲ್ಲಿ ಒಂದಾಗಿದೆ(ವಾರಕ್ಕೆ ಒಂದು ಬಾರಿ ಉಪವಾಸ ಮಾಡಬೇಕು). ಉಪವಾಸವು ಪ್ರಕೃತಿಯ ಅತ್ಯಂತ ಹಳೆಯ ಹಾಗೂ ಅತ್ಯಂತ ಪರಿಣಾಮಕಾರಿ ವಿಧಾನವಾಗಿದೆ.

Dr. Arnold eheret ರವರು ಉಪವಾಸವನ್ನು ಹೀಗೆ ವಿವರಿಸುತ್ತಾರೆ, ” ಪ್ರಕೃತಿಯ ಏಕೈಕ ಸಾರ್ವತ್ರಿಕ ಮತ್ತು ಸರ್ವಶಕ್ತಿ ಗುಣಪಡಿಸುವ ಪರಿಹಾರ “.
- ಉಪವಾಸ ಮತ್ತು ಧರ್ಮ.
ಉಪವಾಸದ ಅಭ್ಯಾಸವು ಅತ್ಯಂತ ಪುರಾತನದ ಪದ್ಧತಿಗಳಲ್ಲಿ ಒಂದಾಗಿದೆ ಮತ್ತು ವಿವಿಧ ಧರ್ಮಗಳಲ್ಲೂ ಅನುಸರಿಸುತ್ತಾರೆ.
ಹಿಂದೂ ಧರ್ಮದಲ್ಲಿ ನವರಾತ್ರಿ,ಮಹಾಶಿವರಾತ್ರಿ, ಸಂಕಷ್ಟಹರ ಚತುರ್ಥಿ, ಏಕಾದಶಿ ಇನ್ನು ಮುಂತಾದ ದಿನಗಳಲ್ಲಿ ಉಪವಾಸವನ್ನು ಅನುಸರಿಸುವುದು ವಾಡಿಕೆ.
ಇಸ್ಲಾಂ ಧರ್ಮದಲ್ಲಿ ರಂಜಾನ್ ಹಬ್ಬದ ಸಮಯದಲ್ಲಿ ಉಪವಾಸ ಮಾಡುತ್ತಾರೆ.
ಬೌದ್ಧ ಧರ್ಮದಲ್ಲಿ ಬುದ್ಧ ಪೂರ್ಣಿಮಾ ಸಮಯದಲ್ಲಿ ಉಪವಾಸ ಅನುಸರಿಸುತ್ತಾರೆ. ಎಲ್ಲಾ ಧರ್ಮದಲ್ಲೂ ಉಪವಾಸ ಮಾಡುವುದರ ಮೂಲ ಉದ್ದೇಶ ಅಶುದ್ಧ ಆಲೋಚನೆಗಳು, ಕಾರ್ಯಗಳನ್ನು ತ್ಯಜಿಸಿ, ಆಂತರಂಗದಿಂದ ಶುದ್ಧಿಗೊಂಡು ದೇವರ ಮೇಲೆ ಪ್ರಜ್ಞೆಯನ್ನು ಹೆಚ್ಚು ಮಾಡಿಕೊಳ್ಳುವುದು. - ಉಪವಾಸದ ವಿಧಗಳು.
- ನೀರಿನ ಉಪವಾಸ- ನೀರನ್ನು ಸೇವಿಸುತ್ತಾ ಉಪವಾಸ ಮಾಡುವುದು.
- ಹಣ್ಣಿನ ರಸದ (Fruit juice)ಉಪವಾಸ- ನೀರು ಹಾಗೂ ಹಣ್ಣುಗಳ ರಸವನ್ನು ಸೇವಿಸುತ್ತಾ ಉಪವಾಸ ಮಾಡುವುದು.
- ಹಣ್ಣಿನ ಉಪವಾಸ- ನೀರು ಮತ್ತು ಹಣ್ಣುಗಳನ್ನು ಮಾತ್ರ ಸೇವಿಸುತ್ತಾ ಉಪವಾಸ ಮಾಡುವುದು.

- ಉಪವಾಸವನ್ನು ಎಷ್ಟು ಅವಧಿಯವರೆಗೂ ಅನುಸರಿಸಬೇಕು?
ಉಪವಾಸದ ಅವಧಿಯು ವ್ಯಕ್ತಿಯ ವಯಸ್ಸು, ಮತ್ತು ಆರೋಗ್ಯವನ್ನು ಅವಲಂಬಿಸಿರುತ್ತದೆ. ಸಾಮಾನ್ಯವಾಗಿ ವೈದ್ಯರು ಎರಡರಿಂದ ಮೂರು ದಿನಗಳ ಅಲ್ಪಾವಧಿಯ ಉಪವಾಸಗಳ ಸರಣಿಯನ್ನು ಕೈಗೊಳ್ಳಲು ಸಲಹೆ ನೀಡುತ್ತಾರೆ. ಹೀಗೆ ಮಾಡುವುದರಿಂದ ದೇಹದ ಸ್ವಾಭಾವಿಕ ಕಾರ್ಯಾಚಟುವಟಿಕೆ ಯನ್ನು ಗಂಭೀರವಾಗಿ ಪರಿಣಾಮ ಬೀರದೆ ವಿಷಕಾರಿ ತ್ಯಾಜ್ಯವನ್ನು ಕ್ರಮೇಣವಾಗಿ ಮತ್ತು ನಿಧಾನವಾಗಿ ಹೊರಹಾಕಿ ದೀರ್ಘಕಾಲದ ಅನಾರೋಗ್ಯದ ದೇಹವನ್ನು ಸಕ್ರಿಯಗೊಳಿಸುತ್ತದೆ.

- ಉಪವಾಸದ ಸಮಯದಲ್ಲಿ ಅನುಸರಿಸಬೇಕಾದ ನಿಯಮಗಳು.
- ಚಯಾಪಚಯ ತ್ಯಾಜ್ಯ ಮತ್ತು ವಿಷಕಾರಿ ಪದಾರ್ಥಗಳನ್ನು ತೊಡೆದುಹಾಕಲು ನೀರಿನ ಸೇವನೆ ಹೆಚ್ಚು ಇರಬೇಕು.
- ಎನೆಮಾ (ಒಂದು ತರಹದ ಚಿಕಿತ್ಸೆ ) ತೆಗೆದುಕೊಳ್ಳಬೇಕು.
- ಉಪವಾಸವನ್ನು ಅನುಸರಿಸುವವರು ದೇಹದ ಆಂತರಿಕ ಮತ್ತು ಬಾಹ್ಯ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು.
- ಶುದ್ಧ ಗಾಳಿ ಮತ್ತು ಸೂರ್ಯನ ಕಿರಣಗಳಿಗೆ (ಎಳೆ ಬಿಸಿಲು) ದೇಹವನ್ನು ಒಡ್ಡುವುದರಿಂದ ಉಪವಾಸ ಮಾಡುವವರಿಗೆ ತುಂಬಾ ಪ್ರಯೋಜನಕಾರಿಯಾಗಿದೆ
- ಉಪವಾಸದ ಪ್ರಯೋಜನಗಳು.
- ಜೀರ್ಣಾಂಗ ವ್ಯವಸ್ಥೆಯು ವಿಶ್ರಾಂತಿ ಪಡೆಯುತ್ತದೆ.
- ವಿಷಕಾರಿ ಪದಾರ್ಥಗಳನ್ನು ನಮ್ಮ ದೇಹದಿಂದ ಹೊರಹಾಕಲು ಅತ್ಯಂತ ಪ್ರಯೋಜನಕಾರಿ ಪ್ರಕ್ರಿಯೆಯಾಗಿರುತ್ತದೆ.
- ಯಕೃತ್ತು (Liver), ಮೂತ್ರಪಿಂಡ (Kidney), ಕರುಳು(Intestine), ಹೊಟ್ಟೆ (Stomach), ಶ್ವಾಸಕೋಶ(Lungs) ಇವುಗಳ ಕಾರ್ಯವನ್ನು ಸಕ್ರಿಯಗೊಳಿಸುತ್ತದೆ. ಹಾಗೂ ರೋಗ ಪ್ರತಿರೋಧಕ ಶಕ್ತಿಯನ್ನು ಹೆಚ್ಚು ಮಾಡುತ್ತದೆ.
- ಉಪವಾಸ ದೈಹಿಕ ಚಿಕಿತ್ಸೆ ಮಾತ್ರವಲ್ಲ ಮಾನಸಿಕವಾಗಿ ವ್ಯಕ್ತಿಯನ್ನು ಸದೃಢಗೊಳಿಸಲು ಉಪಯಕಾರಿಯಾಗಿರುತ್ತದೆ. ಉಪವಾಸ ಮಾಡುವುದರಿಂದ Epinephrine, cortisol ಹಾರ್ಮೋನ್ ಗಳು ಬಿಡುಗಡೆಗೊಂಡು ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ. ಮೆದುಳಿನಲ್ಲಿ ನರಕೋಶಗಳ ಉತ್ಪಾದನೆಯನ್ನು ಹೆಚ್ಚಿಸುತ್ತದೆ ಹಾಗೆ ಹಾರ್ಮೋನ್ ಗಳನ್ನು ಸಮತೋಲನದಲ್ಲಿ ಇರಿಸುವ ಕಾರ್ಯದಲ್ಲಿ ಉಪಾಯಕಾರಿ ಆಗಿರುತ್ತದೆ.
- ಉಪವಾಸ ಯಾರು ಮಾಡಬಾರದು?
ದುರ್ಬಲ ಮತ್ತು ಸಹಕರಿಸದ ರೋಗಿಗಳು, ಗರ್ಭಿಣಿ ಮಹಿಳೆಯರು, ಮಕ್ಕಳು,ಮಧುಮೇಹ ಇರುವವರು. - ಉಪವಾಸದ ಸಮಯದಲ್ಲಿ ಸಾಮಾನ್ಯವಾಗಿ ಕಂಡುಬರುವ ಲಕ್ಷಣಗಳು:
ವಾಂತಿಯಾಗುತ್ತದೆ, ನಿದ್ರೆಹೀನತೆ,ತಲೆನೋವು ರಕ್ತದೊತ್ತಡ ಹೆಚ್ಚಾಗುತ್ತದೆ. ಉಪವಾಸವನ್ನು ರೂಡಿಗತ ಮಾಡಿಕೊಂಡರೆ ದೇಹವು ಉಪವಾಸಕ್ಕೆ ಹೊಂದಿಕೊಳ್ಳುತ್ತದೆ. - ಉಪವಾಸವನ್ನು ಹೇಗೆ ಕೊನೆಗೊಳಿಸಬೇಕು ?
ಉಪವಾಸದ ಲಾಭವು ಹೆಚ್ಚಾಗಿ ಅದು ಹೇಗೆ ಮುರಿಯಲ್ಪಟ್ಟಿದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಉಪವಾಸ ಮುರಿಯಲು ಅನುಸರಿಸಬೇಕಾದ ನಿಯಮಗಳು – ಉಪವಾಸ ಮುಗಿದ ನಂತರ ಅತಿಯಾಗಿ ಆಹಾರ ತಿನ್ನಬಾರದು, ಮಸಾಲೆಯುಕ್ತ ಆಹಾರ ಮತ್ತು ಜಂಕ್ ಫುಡ್ಗಳಿಂದ ದೂರವಿರಿ.
ಉಪವಾಸದ ನಂತರ ಸೇವಿಸಬೇಕಾದ ಆಹಾರ ಎಂದರೆ :ತರಕಾರಿ ಸಲಾಡ್,ಹಣ್ಣಿನ ಸಲಾಡ್, ಚಪಾತಿ ಮತ್ತು ಕಡಿಮೆ ಎಣ್ಣೆ ಬಳಸಿ ಮಾಡಿದ ಸೊಪ್ಪಿನ ಪಲ್ಯ ಅಥವಾ ತರಕಾರಿ ಪಲ್ಯ,ಇಡ್ಲಿ ಸಾಂಬಾರ್ ಇತ್ಯಾದಿ. ತದನಂತರ ನಿಧಾನವಾಗಿ ಉಚಿತ ಆಹಾರ ಪದ್ಧತಿಯನ್ನು ರೂಢಿಸಿಕೊಳ್ಳಬೇಕು. ಎಲ್ಲಾ ಕಾಯಿಲೆಗಳಿಗೆ ಮೂಲ ಕಾರಣವೆಂದರೆ ಅನುಚಿತ ಆಹಾರ ಪದ್ಧತಿ (ಅತಿಯಾಗಿ ತಿನ್ನೋದು ಹೆಚ್ಚು ಜಂಕ್ ಫುಡ್ ಸೇವಿಸುವುದು). ಹೇಗೆ ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಎಂದು ಹೇಳುತ್ತಾರೋ ಹಾಗೆಯೇ ಎಲ್ಲಾ ಕಾಯಿಲೆಗಳಿಗೆ ಕಾರಣ ಅನುಚಿತ ಆಹಾರ ಪದ್ಧತಿ ಆಗಿರುವುದರಿಂದ
ಅದನ್ನು ಉಪವಾಸ ಮಾಡುವುದರ ಮೂಲಕವೇ ಸರಿದೂಗಿಸಬಹುದು. “ಸದೃಢದೇಹದಲ್ಲಿ ಸದೃಢ ಮನಸ್ಸು ” - ಯಶಸ್ವಿನಿ. ಕೆ.ಭಿ
ದ್ವಿತೀಯ ಬಿ.ಎನ್. ವೈ. ಎಸ್.
ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಬೋಧಕ ಆಸ್ಪತ್ರೆ, ಮೈಸೂರು.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group : https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharechat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1