Garlic Soup Recipe: ಚಳಿಗಾಲದಲ್ಲಿ ಕಾಡುವ ಗಂಟಲು ನೋವು, ಕೆಮ್ಮಿನಿಂದ ಮುಕ್ತಿ ಪಡೆಯಲು ಮನೆಯಲ್ಲೇ ಈ ಸೂಪರ್​​​​ ಸೂಪ್​ ತಯಾರಿಸಿ

ಬೆಳ್ಳುಳ್ಳಿ ಸೂಪ್ ತಯಾರಿಸಿ ಕುಡಿವುದರಿಂದ ಚಳಿಗಾಲದಲ್ಲಿ ಅನೇಕ ಜನರಲ್ಲಿ ಕಾಡುವ ಶೀತ, ಗಂಟಲು ನೋವು ಮತ್ತು ಕೆಮ್ಮಿನಿಂದ ಮುಕ್ತಿ ಪಡೆಯಬಹುದಾಗಿದೆ. ಆದ್ದರಿಂದ ಈ ಈ ಬೆಳ್ಳುಳ್ಳಿ ಸೂಪ್ ಮಾಡುವುದು ಹೇಗೆ? ಹಾಗೂ ಸೂಪ್​ ಮಾಡಲು ಅಗತ್ಯವಿರುವ ಪದಾರ್ಥಗಳು ಯಾವುವು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಚಳಿಗಾಲ ಪ್ರಾರಂಭದ ಜೊತೆಗೆ ಶೀತ, ಜ್ವರ, ಗಂಟಲು ನೋವು ಹೀಗೆ ಎಲ್ಲವೂ ಒಟ್ಟೊಟ್ಟಿಗೆ ಬಂದು ಬಿಡುತ್ತವೆ. ಆದ್ದರಿಂದ ಈ ಎಲ್ಲಾ ಸಮಸ್ಯೆಯನ್ನು ನಿವಾರಿಸಲು ದೇಹದಲ್ಲಿ ರೋಗ ನಿರೋಧಕ ಶಕ್ತಿ ತುಂಬಾ ಮುಖ್ಯವಾಗಿರುತ್ತದೆ. ಈ ಚಳಿಗಾಲದಲ್ಲಿ ಆರೋಗ್ಯವಾಗಿರುವುದರ ಜೊತೆಗೆ ನಿಮ್ಮನ್ನು ಬೆಚ್ಚಗಿಡಲು ಆರೋಗ್ಯಕರ ಸೂಪ್​​​ ತಯಾರಿಸಿ ತಯಾರಿಸಿ ಸವಿಯಿರಿ. ಬೆಳ್ಳುಳ್ಳಿ ಸೂಪ್ ತಯಾರಿಸಿ ಕುಡಿವುದರಿಂದ ಚಳಿಗಾಲದಲ್ಲಿ ಅನೇಕ ಜನರಲ್ಲಿ ಕಾಡುವ ಶೀತ, ಗಂಟಲು ನೋವು ಮತ್ತು ಕೆಮ್ಮಿನಿಂದ ಮುಕ್ತಿ ಪಡೆಯಬಹುದಾಗಿದೆ. ಆದ್ದರಿಂದ  ಈ ಬೆಳ್ಳುಳ್ಳಿ ಸೂಪ್ ಮಾಡುವುದು ಹೇಗೆ? ಹಾಗೂ ಸೂಪ್​ ಮಾಡಲು ಅಗತ್ಯವಿರುವ ಪದಾರ್ಥಗಳು ಯಾವುವು? ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಬೆಳ್ಳುಳ್ಳಿ ಸೂಪ್ ತಯಾರಿಸಲು ಬೇಕಾಗುವ ಸಾಮಾಗ್ರಿಗಳು:

  • ಬೆಳ್ಳುಳ್ಳಿ
  • ಎಣ್ಣೆ
  • ಕಾರ್ನ್ ಫ್ಲೋರ್/ಜೋಳದ ಹಿಟ್ಟು
  • ಉಪ್ಪು
  • ಕಾಳುಮೆಣಸಿನ ಪುಡಿ
  • ಚಿಲ್ಲಿ ಫ್ಲೇಕ್ಸ್
  • ಕೊತ್ತಂಬರಿ ಸೊಪ್ಪು

ಬೆಳ್ಳುಳ್ಳಿ ಸೂಪ್ ಮಾಡುವ ವಿಧಾನ:

ಈ ಬೆಳ್ಳುಳ್ಳಿ ಸೂಪ್ ಅನ್ನು ಸರಳವಾಗಿ ತಯಾರಿಸಬಹುದು. ಮೊದಲು ಚಿಕ್ಕ ಬಟ್ಟಲಿನಲ್ಲಿ ಕಾರ್ನ್ ಫ್ಲೋರ್ ಗೆ ನೀರು ಹಾಕಿ. ಉಂಡೆಯಾಗದಂತೆ ಕಲಸಿ. ಈಗ ಕಡಾಯಿ ತೆಗೆದುಕೊಂಡು ಎಣ್ಣೆಯನ್ನು ಬಿಸಿ ಮಾಡಿ. ನೀವಿಲ್ಲಿ ಆಲಿವ್ ಎಣ್ಣೆ ಅಥವಾ ತೆಂಗಿನೆಣ್ಣೆಯನ್ನು ಬಳಸಬಹುದು.ಎಣ್ಣೆ ಬಿಸಿಯಾದ ನಂತರ ಅದಕ್ಕೆ ಸಣ್ಣ ತುಂಡುಗಳಾಗಿ ಕತ್ತರಿಸಿ, ರುಬ್ಬಿಟ್ಟ ಹಸಿ ಬೆಳ್ಳುಳ್ಳಿಯನ್ನು ಸೇರಿಸಿ. ಇವುಗಳನ್ನು ಸ್ವಲ್ಪ ಕಂದು ಬಣ್ಣಕ್ಕೆ ಬದಲಾಗುವವರೆಗೆ ಹುರಿಯಬೇಕು.ಈಗ ಒಂದೂವರೆ ಲೋಟ ನೀರು ಹಾಕಿ ಕಲಕಿ. ಈ ನೀರು ಚೆನ್ನಾಗಿ ಕುದಿಯುತ್ತಿರುವಾಗ ಜೋಳದ ಹಿಟ್ಟು ಹಾಕಿ ಚೆನ್ನಾಗಿ ಕಲಸಿ.

ಅದರ ನಂತರ ಸ್ವಲ್ಪ ಕಾಳುಮೆಣಸಿನ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಮತ್ತೆ ಮಿಶ್ರಣ ಮಾಡಿ. ಕುದಿಯುವ ಸೂಪ್‌ಗೆ ಚಿಲ್ಲಿ ಫ್ಲೇಕ್ಸ್ ಮತ್ತು ಕೊತ್ತಂಬರಿ ಸೊಪ್ಪನ್ನು ಸೇರಿಸಿ ಮತ್ತು ಮಿಶ್ರಣ ಮಾಡಿ. ಇನ್ನೊಂದು ನಿಮಿಷ ಒಲೆಯ ಮೇಲೆ ಇಡಿ. ನಂತರ ಸ್ಟವ್ ಆಫ್ ಮಾಡಿ. ಅಷ್ಟೆ, ಬೆಳ್ಳುಳ್ಳಿ ಸೂಪ್ ಸಿದ್ಧವಾಗಿದೆ. ಸಂಜೆಯ ಹೊತ್ತಿನಲ್ಲಿ ಬಿಸಿ ಬಿಸಿಯಾಗಿರುವಾಗ ಕುಡಿದರೆ.. ಹಿತವಾಗಿರುತ್ತದೆ. ತಡವೇಕೆ ಒಮ್ಮೆ ಈ ಸಿಂಪಲ್ ಸೂಪ್ ಟ್ರೈ ಮಾಡಿ ನೋಡಿ. ರುಚಿ ಮಾತ್ರವಲ್ಲ ಆರೋಗ್ಯಕರವೂ ಹೌದು.

Source : https://tv9kannada.com/lifestyle/garlic-soup-recipe-how-to-make-tasty-and-healthy-garlic-soup-at-home-aks-719560.html

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group : https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharechat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *