Science Facts: ಇದೊಂದೇ ಅಲ್ಲ ಮತ್ತೊಂದು ಇದೆಯಂತೆ ಭೂಮಿ! ವಿಜ್ಞಾನಿಗಳಿಂದ ಹೊಸ ಸಂಶೋಧನೆ.

ಈ ಗ್ರಹಕ್ಕೆ ಎಕ್ಸೋಪ್ಲಾನೆಟ್ LTT 1445 Ac ಎಂಬ ಹೆಸರನ್ನಿರಿಸಲಾಗಿದ್ದು ಇದು ಭೂಮಿಯ ಸುಮಾರು 1.37 ಪಟ್ಟು ದ್ರವ್ಯರಾಶಿಯನ್ನು ಹೊಂದಿದ್ದು ಮತ್ತು ಭೂಮಿಯ ತ್ರಿಜ್ಯದ 1.07 ಪಟ್ಟು ಹೆಚ್ಚಿನದಾಗಿದೆ.

ನಮ್ಮ ಭೂಮಂಡಲವು ಅನೇಕ ಕೌತುಕ ಹಾಗೂ ವಿಸ್ಮಯಗಳನ್ನು ತನ್ನೊಳಗೆ ಬಚ್ಚಿಟ್ಟುಕೊಂಡಿದೆ. ವಿಜ್ಞಾನಿಗಳು (Sciemtist) ದಶಕಗಳಿಂದ ಈ ಕೌತುಕವನ್ನು ಬಹಿರಂಗಗೊಳಿಸುವ ಪ್ರಯತ್ನದಲ್ಲಿ ನಿರತರಾಗಿದ್ದು, ಒಂದಲ್ಲಾ ಒಂದು ಹೊಸ ಶೋಧನೆಗಳನ್ನು ನಡೆಸುತ್ತಲೇ ಬಂದಿದ್ದಾರೆ. ಇದೀಗ ವಿಜ್ಞಾನಿಗಳು ಭೂಮಿಯ ಗಾತ್ರದ ಪ್ರಪಂಚವೊಂದನ್ನು 22 ಬೆಳಕಿನ (Light) ವರ್ಷಗಳಷ್ಟು ದೂರದಲ್ಲಿ ಅನ್ವೇಷಿಸಿದ್ದು, ಸಣ್ಣ ಕುಬ್ಜ ನಕ್ಷತ್ರವೊಂದು ಇದರ ಸುತ್ತಲೂ ಪರಿಭ್ರಮಿಸುತ್ತಿದೆ ಎಂಬ ಅಂಶವೊಂದನ್ನು ಬೆಳಕಿಗೆ ತಂದಿದ್ದಾರೆ. ಯುಎಸ್ ವಿಜ್ಞಾನಿಗಳು ಕಂಡುಹಿಡಿದ ಭೂಮಿಯ ಗಾತ್ರದ (Earth Size) ಪ್ರಪಂಚವು ನಮ್ಮ ಸೌರವ್ಯೂಹಕ್ಕೆ ಹತ್ತಿರದಲ್ಲಿದೆ ಎಂಬುದು ಇನ್ನೊಂದು ಗಮನಾರ್ಹ ಸಂಗತಿಯಾಗಿದೆ.

ಹೊಸ ಗ್ರಹದಲ್ಲಿ ಜೀವಿಗಳ ಬದುಕು ಸಾಧ್ಯವೇ?

ಈ ಗ್ರಹಕ್ಕೆ ಎಕ್ಸೋಪ್ಲಾನೆಟ್ LTT 1445 Ac ಎಂಬ ಹೆಸರನ್ನಿರಿಸಲಾಗಿದ್ದು ಇದು ಭೂಮಿಯ ಸುಮಾರು 1.37 ಪಟ್ಟು ದ್ರವ್ಯರಾಶಿಯನ್ನು ಹೊಂದಿದ್ದು ಮತ್ತು ಭೂಮಿಯ ತ್ರಿಜ್ಯದ 1.07 ಪಟ್ಟು ಹೆಚ್ಚಿನದಾಗಿದೆ ಎಂಬುದಾಗಿ ಪತ್ತೆಹಚ್ಚಿರುವುದಾಗಿ ವಿಜ್ಞಾನಿಗಳು ಖಾತ್ರಿಪಡಿಸಿದ್ದಾರೆ.

ಇಲ್ಲಿ ಜೀವಿಗಳು ಜೀವಿಸಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿರುವ ವಿಜ್ಞಾನಿಗಳು ಈ ಗ್ರಹವು ತುಂಬಾ ಬಿಸಿ ಇರುವುದರಿಂದ ಜೀವನ ನಡೆಸುವುದು ಕಷ್ಟ ಎಂದು ತಿಳಿಸಿದ್ದಾರೆ. ಆದರೆ ಭೂಮಿಯನ್ನೇ ಹೋಲುವ ಈ ಗ್ರಹವು, ಗ್ರಹಗಳ ಬಗೆಗಿನ ಹೆಚ್ಚಿನ ಅಧ್ಯಯನಕ್ಕೆ ಪ್ರಯೋಜನಕಾರಿಯಾಗಲಿದೆ ಎಂಬುದು ವಿಜ್ಞಾನಿಗಳ ಅನಿಸಿಕೆಯಾಗಿದೆ.

ಗ್ರಹಗಳು ಹೇಗೆ ವಿಕಸನಗೊಳ್ಳುತ್ತವೆ ಹಾಗೂ ಭೂಮಿಯಂತಹ ಪ್ರಪಂಚವನ್ನು ಅಂತಹ ಮತ್ತೊಂದು ಗ್ರಹಕ್ಕಿಂತ ಯಾವ ಅಂಶಗಳು ವಿಭಿನ್ನವಾಗಿಸುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಈ ಅನ್ವೇಷಣೆ ಸಹಕಾರಿಯಾಗಿದೆ ಎಂಬುದು ವಿಜ್ಞಾನಿಗಳ ಹೇಳಿಕೆಯಾಗಿದೆ.

ವಿಜ್ಞಾನಿಗಳು ಹೊಸ ಅನ್ವೇಷಣೆಯ ಕುರಿತು ಏನು ಹೇಳಿದ್ದಾರೆ?

ವಿಜ್ಞಾನಿಗಳು 2021 ರಲ್ಲಿ TESS ಎಕ್ಸೋಪ್ಲಾನೆಟ್-ಹಂಟಿಂಗ್ ಟೆಲಿಸ್ಕೋಪ್ ಸಂಗ್ರಹಿಸಿದ ಡೇಟಾವನ್ನು ಮೊದಲು LTT 1445 Ac ಅನ್ನು ಗುರುತಿಸಲು ಬಳಸಿದರು.

ಆದರೆ ಅದನ್ನು ವೀಕ್ಷಿಸುವ ಸಮಯದಲ್ಲಿ ಕೆಲವೊಂದು ತೊಂದರೆಗಳನ್ನು ಎದುರಿಸಬೇಕಾಯಿತು ಎಂದು ವಿಜ್ಞಾನಿಗಳು ಹೇಳಿದ್ದು ಖಗೋಳಶಾಸ್ತ್ರಜ್ಞರು ಈ ಹೊಸ ಗ್ರಹದ ಗುಣಲಕ್ಷಣಗಳ ಕುರಿತು ಹೆಚ್ಚು ಖಾತ್ರಿಯಿಲ್ಲ ಎಂಬುದು ಇದರಿಂದ ತಿಳಿದು ಬಂದಿದೆ.

ಈ ಗ್ರಹವು ವಿಭಿನ್ನ ವ್ಯವಸ್ಥೆಯನ್ನೊಳಗೊಂಡಿದ್ದು, ಪರಿಭ್ರಮಿಸುವ ನಕ್ಷತ್ರವು ಮೂರು ನಕ್ಷತ್ರಗಳಲ್ಲಿ ಒಂದಾಗಿದೆ, ಇದು ತ್ರಿಕೋನ ವ್ಯವಸ್ಥೆಯಲ್ಲಿ ಗುರುತ್ವಾಕರ್ಷಣೆಯಿಂದ ಬಂಧಿಸಲ್ಪಟ್ಟಿದೆ ಎಂಬುದಾಗಿ ವಿಜ್ಞಾನಿಗಳು ತಿಳಿಸಿದ್ದಾರೆ.

ವಿಜ್ಞಾನಿಗಳು ಗ್ರಹ ವ್ಯವಸ್ಥೆಗಳನ್ನು ರೂಪಿಸುವ ನಕ್ಷತ್ರದ ಬೆಳಕಿನಲ್ಲಿನ ಬದಲಾವಣೆಗಳನ್ನು ಗಮನಿಸುತ್ತಾರೆ ಮತ್ತು ಬಾಹ್ಯ ಗ್ರಹಗಳನ್ನು ಅಧ್ಯಯನ ಮಾಡುತ್ತಾರೆ, ಆದಾಗ್ಯೂ, ನಕ್ಷತ್ರಗಳ ವ್ಯವಸ್ಥೆಗಳಲ್ಲಿ, ಇತರ ನಕ್ಷತ್ರಗಳು ನಕ್ಷತ್ರಗಳ ಬೆಳಕಿನ ಮೇಲೆ ಪರಿಣಾಮ ಬೀರುತ್ತವೆ ಎಂಬುದು ಅವರ ಅಭಿಪ್ರಾಯವಾಗಿದೆ.

ಎಕ್ಸೋಪ್ಲಾನೆಟ್‌ನ ಗುಣಲಕ್ಷಣಗಳನ್ನು ವಿಜ್ಞಾನಿಗಳು ಹೇಗೆ ಅರ್ಥಮಾಡಿಕೊಳ್ಳುತ್ತಾರೆ?

ಎಕ್ಸೋಪ್ಲಾನೆಟ್‌ನ ಗುಣಲಕ್ಷಣಗಳನ್ನು ಅರ್ಥಮಾಡಿಕೊಳ್ಳಲು ಎರಡು ರೀತಿಯ ಮಾಪನದ ಅಗತ್ಯವಿದೆ. ಮೊದಲನೆಯದು ಟ್ರಾನ್ಸಿಟ್ ಡೇಟಾ, ಇದು ನಕ್ಷತ್ರ ಮತ್ತು ಭೂಮಿಯ ನಡುವೆ ಪರಿಭ್ರಮಿಸುವ ಎಕ್ಸೋಪ್ಲಾನೆಟ್ ಹಾದುಹೋದ ನಂತರ ಸಂಭವಿಸುವ ನಕ್ಷತ್ರದ ಬೆಳಕಿನಲ್ಲಿ ಸಣ್ಣ ಮುಳುಗುವಿಕೆಯನ್ನು ಸೂಚಿಸುತ್ತದೆ.

ವಿಜ್ಞಾನಿಗಳ ಲೆಕ್ಕಾಚಾರಗಳೇನು?

ಎರಡನೆಯ ಮಾಪನವು ರೇಡಿಯಲ್ ವೇಗದ ದತ್ತಾಂಶವಾಗಿದೆ, ಇದು ನಕ್ಷತ್ರದ ಬೆಳಕಿನ ತರಂಗಾಂತರದಲ್ಲಿನ ಬದಲಾವಣೆಗಳನ್ನು ರೆಕಾರ್ಡ್ ಮಾಡುವ ಮೂಲಕ ನಕ್ಷತ್ರದ ಮೇಲೆ ಎಕ್ಸೋಪ್ಲಾನೆಟ್‌ನ ಗುರುತ್ವಾಕರ್ಷಣೆಯ ಅಂಶಗಳ ಪ್ರಮಾಣವನ್ನು ಅಳೆಯುತ್ತದೆ.

ಮಾಹಿತಿಗಳು ವಿಜ್ಞಾನಿಗಳಿಗೆ ಎಕ್ಸೋಪ್ಲಾನೆಟ್‌ನ ತ್ರಿಜ್ಯವನ್ನು ತಿಳಿಸುತ್ತದೆ, ಇದನ್ನು ನಕ್ಷತ್ರಗಳ ಆವರ್ತನೆಯ ಸಮಯದಲ್ಲಿ ಮಂದವಾಗುವ ನಕ್ಷತ್ರದ ಬೆಳಕಿನ ಪ್ರಮಾಣದಿಂದ ಲೆಕ್ಕಹಾಕಬಹುದು. ರೇಡಿಯಲ್ ವೇಗದ ಡೇಟಾವು ವಿಜ್ಞಾನಿಗಳಿಗೆ ಎಕ್ಸೋಪ್ಲಾನೆಟ್‌ನ ದ್ರವ್ಯರಾಶಿಯ ಬಗ್ಗೆ ತಿಳಿಸುತ್ತದೆ.

ದ್ರವ್ಯರಾಶಿ ಮತ್ತು ತ್ರಿಜ್ಯವು ಒಟ್ಟಾಗಿ ವಿಜ್ಞಾನಿಗಳಿಗೆ ಎಕ್ಸೋಪ್ಲಾನೆಟ್‌ನ ಸಾಂದ್ರತೆಯನ್ನು ತಿಳಿಸುತ್ತದೆ ಮತ್ತು ಅದನ್ನು ಬಳಸಿಕೊಂಡು ವಿಜ್ಞಾನಿಗಳು ಎಕ್ಸೋಪ್ಲಾನೆಟ್‌ ಅನ್ನು ಯಾವುದರಿಂದ ಸೃಷ್ಟಿಸಲಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳುತ್ತಾರೆ.

ಗ್ರಹವು ಕಡಿಮೆ ಸಾಂದ್ರತೆಯನ್ನು ಹೊಂದಿದೆ ಎಂದು ಕಂಡುಬಂದರೆ ಅದು ವಾತಾವರಣವನ್ನು ಕಳೆದುಕೊಂಡಿದೆ ಮತ್ತು ಅನಿಲ ದೈತ್ಯದಂತಿದೆ ಎಂದು ಸೂಚಿಸುತ್ತದೆ.

ಹೆಚ್ಚಿನ ಸಾಂದ್ರತೆ ಎಂದರೆ ಅದು ಭೂಮಿ, ಶುಕ್ರ, ಮಂಗಳ, ಅಥವಾ ಬುಧದಂತಹ ಕಲ್ಲಿನ ಸಂಯೋಜನೆಯನ್ನು ಹೊಂದಿದೆ ಎಂದರ್ಥವಾಗಿದೆ.

Source : https://kannada.news18.com/news/trend/this-is-not-the-only-land-like-there-is-another-new-research-by-scientists-stg-hhb-1448649.html

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group : https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharechat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *