Peanuts Benefits: ಚಳಿಗಾಲದಲ್ಲಿ ಪ್ರತಿದಿನ ಕಡಲೆಕಾಯಿಯನ್ನು ತಿನ್ನುವುದರಿಂದ ದೇಹಕ್ಕೆ ಹಲವಾರು ಪ್ರಯೋಜನಗಳು ದೊರೆಯುತ್ತವೆ.

Peanuts Benefits: ಭಾರತದಾದ್ಯಂತ ತಾಪಮಾನ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಹಾಗಾಗಿ ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳುವುದು ತುಂಬಾ ಒಳ್ಳೆಯದು. ಈ ಸಮಯದಲ್ಲಿ ಅನೇಕ ಜನರ ರೋಗನಿರೋಧಕ ಶಕ್ತಿ ದುರ್ಬಲಗೊಳ್ಳುತ್ತದೆ. ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿರುವವರು ಈ ಸಮಯದಲ್ಲಿ ವಿವಿಧ ಆರೋಗ್ಯ ಸಮಸ್ಯೆಗಳಿಗೆ ಗುರಿಯಾಗುತ್ತಾರೆ.
ಚಳಿಗಾಲದಲ್ಲಿ ಪ್ರತಿದಿನ ಕಡಲೆಕಾಯಿಯನ್ನು ಸಂಜೆಯ ತಿಂಡಿಯಾಗಿ ಸೇವಿಸುವುದರಿಂದ ಎಲ್ಲಾ ರೀತಿಯ ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು ಎನ್ನುತ್ತಾರೆ. ಕಡಲೆಕಾಯಿಯನ್ನು ಪ್ರತಿದಿನ ಸೇವಿಸುವುದರಿಂದ ದೇಹಕ್ಕೆ ಸಿಗುತ್ತ ಈ ಕೆಳಗಿನ ಪ್ರಯೋಜನಗಳು.
ಆರೋಗ್ಯಕರ ಚರ್ಮ: ಚಳಿಗಾಲದಲ್ಲಿ ತಣ್ಣನೆಯ ಗಾಳಿ ಬೀಸುವುದರಿಂದ ಅನೇಕ ಜನರು ಚರ್ಮದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕೆಲವರಲ್ಲಿ ಚರ್ಮ ಕಪ್ಪಾಗುತ್ತದೆ. ಆದರೆ ಇಂತಹ ಸಮಸ್ಯೆಗಳನ್ನು ತಪ್ಪಿಸಲು ಕಡಲೆಕಾಯಿಯನ್ನು ಆಹಾರದಲ್ಲಿ ಸೇರಿಸಿಕೊಳ್ಳಬೇಕು. ಇದನ್ನು ಪ್ರತಿದಿನ ಸೇವಿಸುವುದರಿಂದ ತ್ವಚೆಯ ಮೇಲಿನ ಸುಕ್ಕುಗಳು ಕೂಡ ನಿವಾರಣೆಯಾಗುತ್ತದೆ. ಹೈಪರ್ಪಿಗ್ಮೆಂಟೆಡ್ ಕಲೆಗಳು ಸಹ ಕಡಿಮೆಯಾಗುತ್ತವೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.
ಹಸಿವನ್ನು ನಿಯಂತ್ರಿಸುತ್ತದೆ: ಕಡಲೆಕಾಯಿಯಲ್ಲಿ ಮೊನೊಸಾಚುರೇಟೆಡ್ ಕೊಬ್ಬುಗಳಿವೆ. ಇದರಿಂದಾಗಿ ಹೊಟ್ಟೆ ಯಾವಾಗಲೂ ತುಂಬಿರುತ್ತದೆ. ಹಾಗಾಗಿ ತೂಕ ಇಳಿಸಿಕೊಳ್ಳಲು ಬಯಸುವವರು ಪ್ರತಿದಿನ ಕಡಲೆಕಾಯಿಯನ್ನು ಸೇವಿಸಿದರೆ ಉತ್ತಮ ಫಲಿತಾಂಶವನ್ನು ಪಡೆಯಬಹುದು. ಜತೆಗೆ ದೀರ್ಘಕಾಲದ ಕಾಯಿಲೆಗಳೂ ಬರದಂತೆ ತಡೆಯುತ್ತದೆ ಎನ್ನುತ್ತಾರೆ ಆರೋಗ್ಯ ತಜ್ಞರು.
ಮಕ್ಕಳ ಸ್ನಾಯುಗಳನ್ನು ಬಲಪಡಿಸಲು: ಕಡಲೆಕಾಯಿಯಲ್ಲಿ ಉತ್ತಮ ಗುಣಮಟ್ಟದ ಪ್ರೋಟೀನ್ ಇದೆ. ಹಾಗಾಗಿ ಇವುಗಳಿಂದ ತಯಾರಿಸಿದ ಆಹಾರಗಳನ್ನು ಮಕ್ಕಳಿಗೆ ಪ್ರತಿದಿನ ನೀಡುವುದರಿಂದ ಮಕ್ಕಳ ಸ್ನಾಯುಗಳು ಕೂಡ ಬಲಗೊಳ್ಳುತ್ತವೆ. ಇದಲ್ಲದೇ ದೇಹದ ಬೆಳವಣಿಗೆಗೂ ಸಹಕಾರಿ ಎನ್ನುತ್ತಾರೆ ಆರೋಗ್ಯ ತಜ್ಞರು.
ಕ್ಯಾನ್ಸರ್ ನಿಂದ ರಕ್ಷಣೆ : ಶೇಂಗಾದಲ್ಲಿರುವ ಪೋಷಕಾಂಶಗಳು ದೇಹವನ್ನು ಕ್ಯಾನ್ಸರ್ ನಿಂದ ರಕ್ಷಿಸಲು ಸಹ ಸಹಾಯ ಮಾಡುತ್ತದೆ. ಇದರಲ್ಲಿರುವ ಫೈಟೊಸ್ಟೆರಾಲ್ ಪ್ರಾಸ್ಟೇಟ್ ಗೆಡ್ಡೆಯ ಅಪಾಯವನ್ನು ಶೇಕಡಾ 40 ರಷ್ಟು ಕಡಿಮೆ ಮಾಡುತ್ತದೆ. ಇದು ಕ್ಯಾನ್ಸರ್ ಕೋಶಗಳು ದೇಹದ ಇತರ ಭಾಗಗಳಿಗೆ ಹರಡುವ ಸಾಧ್ಯತೆಯನ್ನು 50 ಪ್ರತಿಶತದಷ್ಟು ಕಡಿಮೆ ಮಾಡುತ್ತದೆ. ಇದರಲ್ಲಿರುವ ರೆಸ್ವೆರಾಟ್ರೊಲ್ ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಯಲು ಸಹಾಯ ಮಾಡುತ್ತದೆ.
https://zeenews.india.com/kannada/health/benefits-of-eating-peanuts-in-winter-173407
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group : https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharechat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1