Actress Savitri : ಸಾಮಾನ್ಯವಾಗಿ ನಟಿಯರು ತಮ್ಮ ಮನೆಯಲ್ಲಿ ಸಣ್ಣ ಪುಟ್ಟ ನಾಯಿ ಮರಿ, ಬೆಕ್ಕು, ಕುದುರೆ, ಹೀಗೆ ಸಾದು ಪ್ರಾಣಿಗಳನ್ನು ಸಾಕುವುದನ್ನು ಕಂಡಿದ್ದೇವೆ. ಆದ್ರೆ ಇಲ್ಲೊಬ್ಬ ನಟಿ ಏಕಾಏಕಿ ತಮ್ಮ ಮೆನೆಯಲ್ಲಿ ಚಿರತೆಯನ್ನು ನಾಯಿಯಂತೆ ಸಾಕಿದ್ದರು. ಯಾರು ಆ ನಟಿ ಅಂತೀರಾ.. ಈ ಸ್ಟೋರಿ ಓದಿ.
Actress Savitri with leopard : ಮನೆಯಲ್ಲಿ ನಾಯಿ, ಬೆಕ್ಕು, ಹಕ್ಕಿಗಳನ್ನು ಸಾಕುವವರ ನಡುವೆ ಕೆಲವರಿಗೆ ಹುಲಿ, ಸಿಂಹದಂತಹ ಕ್ರೂರ ಪ್ರಾಣಿಗಳನ್ನು ಸಾಕಲು ಇಷ್ಟಪಡುತ್ತಾರೆ. ಇದಕ್ಕೆ ನಟ-ನಟಿಯರೂ ಸಹ ಹೊರತಾಗಿಲ್ಲ. ಈ ಹಿಂದೆ ಖ್ಯಾತ ನಟಿಯೊಬ್ಬರು ತಮ್ಮ ಮನೆಯಲ್ಲಿ ಚಿರತೆ ಸಾಕಿದ್ದರು. ಬನ್ನಿ ಯಾರು ಆ ನಟಿ..? ಏನ್ ಕಥೆ ಅಂತ ತಿಳಿಯೋಣ..
ಕನ್ನಡ ಸಿನಿರಂಗದಲ್ಲಿ ಡಾ.ರಾಜ್‌ಕುಮಾರ್ ಮತ್ತು ತಮಿಳು ಚಿತ್ರರಂಗದಲ್ಲಿ ಶಿವಾಜಿ ಗಣೇಶನ್ ಮತ್ತು ಜೆಮಿನಿ ಗಣೇಶನ್ ಅವರಂತಹ ನಟರೊಂದಿಗೆ ಅನೇಕ ಚಿತ್ರಗಳಲ್ಲಿ ನಟಿಸಿ ಸಾವಿತ್ರಿ ಪ್ರಸಿದ್ಧರಾಗಿದ್ದಾರೆ. ಅವರು ಹೆಚ್ಚಾಗಿ ತೆಲುಗು ಮತ್ತು ತಮಿಳು ಚಿತ್ರಗಳಲ್ಲಿ ನಟಿಸಿದ್ದಾರೆ. ದಕ್ಷಿಣ ಭಾರತದ ಅತ್ಯಂತ ಗೌರವಾನ್ವಿತ ನಾಯಕಿಯರಲ್ಲಿ ಇವರು ಒಬ್ಬರು.
ನಟಿ ಮಾತ್ರವಲ್ಲದೆ, ಗಾಯಕಿ ಮತ್ತು ನಿರ್ದೇಶಕಿಯಾಗಿಯೂ ಕೆಲಸ ಮಾಡಿದ್ದಾರೆ. ಅಷ್ಟೇ ಅಲ್ಲ ಆ ಕಾಲದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ. ಸಾವಿತ್ರಿಗೆ ‘ಮಹಾನದಿ’ ಎಂಬ ಇನ್ನೊಂದು ಹೆಸರೂ ಇದೆ. 1934 ರಲ್ಲಿ ಜನಿಸಿದ ಸಾವಿತ್ರಿ ಅವರು 1950 ರಿಂದ 1960 ರವರೆಗೆ ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಪ್ರಮುಖ ನಟಿಯಾಗಿ ಪ್ರವರ್ಧಮಾನಕ್ಕೆ ಬಂದರು.
30 ವರ್ಷಗಳಲ್ಲಿ 250ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ನಟನೆ ಮಾತ್ರವಲ್ಲದೆ ಬಡವರು ಮತ್ತು ಕಷ್ಟದಲ್ಲಿರುವವರಿಗೆ ಸಹಾಯ ಮಾಡುತ್ತಾರೆ. ಸಮಾಜ ಸೇವೆ ಮೂಲಕ ಹೆಸರಾಗಿರುವ ಅವರು ಹಲವರ ಬಾಳಿನಲ್ಲಿ ಬೆಳಗಿದ್ದಾರೆ. ಸಾವಿತ್ರಿ ಜೆಮಿನಿ ಗಣೇಶನ್ ಅವರನ್ನು 1952 ರಲ್ಲಿ ವಿವಾಹವಾದರು ಮತ್ತು ಅವರಿಗೆ ಒಬ್ಬ ಮಗಳು ಮತ್ತು ಮಗನಿದ್ದಾರೆ.
ಹೆಚ್ಚಾಗಿ ನಟಿಯರು ತಮ್ಮ ಮನೆಯಲ್ಲಿ ಸಣ್ಣ ಪುಟ್ಟ ನಾಯಿ ಮರಿ, ಬೆಕ್ಕು, ಕುದುರೆ, ಹೀಗೆ ಸಾದು ಪ್ರಾಣಿಗಳನ್ನು ಸಾಕುವುದನ್ನು ಕಂಡಿದ್ದೇವೆ. ಆದ್ರೆ ಸಾವಿತ್ರಿಯವರು ಕೊಂಚ ವಿಭಿನ್ನ. ಇವರು ತಮ್ಮ ಮನೆಯಲ್ಲಿ ಚಿರತೆಯನ್ನು ಸಾಕಿದ್ದರು ಎನ್ನಲಾಗಿದೆ. ಈ ಕುರಿತ ಫೋಟೋವೊಂದು ಬಿಡುಗಡೆಯಾಗಿದ್ದು, ಫ್ಯಾನ್ಸ್‌ಗೆ ಶಾಕ್ ನೀಡಿದೆ. ಆದ್ರೆ ನಿಜವಾಗಿಯೂ ಸಾವಿತ್ರಿಯವರು ಚಿರತೆಯನ್ನು ಮನೆಯಲ್ಲಿ ಸಾಕಿದ್ರಾ ಅಥವಾ ಇಲ್ಲವೇ ಎಂಬ ಬಗ್ಗೆ ಯಾವುದೇ ಅಧಿಕೃತ ಪುರಾವೆಗಳಿಲ್ಲ ಎಂಬುದು ಗಮನಾರ್ಹ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group : https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharechat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1