ಮನೆಯಲ್ಲಿ ಇದ್ಯಾ ಜಾಯಿಕಾಯಿ..! ಹಾಗಾದ್ರೆ ಆರೋಗ್ಯದ ಟೆನ್ಶನ್‌ಗೆ ಹೇಳಿ ಗುಡ್‌ ಬೈ.

Tips for health: ಮನೆಯಲ್ಲಿ ಅಡುಗೆಗೆ ಬಳಸುವ ಜಾಯಿಕಾಯಿಯಲ್ಲಿ ಅನೇಕ ಔಷಧೀಯ ಗುಣಗಳಿದ್ದು, ಹಲವಾರು ಕಾಯಿಲೆಗಳನ್ನು ಗುಣಮುಖ ಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ.

Nutmeg benefits: ಅಡುಗೆಗೂ ಸೈ ಔಷಧಿಗೂ ಸೈ!ಏನಿದು ಅಂತ ಯೋಚಿಸ್ತಾ ಇದ್ದಿರಾ, ಮಸಾಲ ಪದಾರ್ಥಗಳು ಕೇವಲ ಅಡುಗೆಯ ಸುವಾಸನೆ ಮತ್ತು ರುಚಿಯನ್ನು ಹೆಚ್ಚಿಸಲು ಮಾತ್ರ ಬಳಸಲಾಗುತ್ತದೆ ಎಂದು ಕೆಲವರು ಭಾವಿಸಿದ್ದಾರೆ. ಆದರೆ  ಎಷ್ಟೊ ಜನಕ್ಕೆ ಗೊತ್ತೆ ಇಲ್ಲ ನಾವು ಉಪಯೋಗಿಸುವ ಮಸಾಲ ಪದಾರ್ಥಗಳಲ್ಲಿ ಔಷಧಿಯ ಗುಣ ಆವೃತ್ತಿಯನ್ನು ಹೊಂದಿದೆ ಎಂದು. ಅಂತಹದ್ದೆ ಒಂದು ಗುಣವನ್ನು ಹೊಂದಿರುವ ಮಸಾಲ ಪದಾರ್ಥದ ಬಗ್ಗೆ ನಾವು ಹೇಳಹೊರಟಿದ್ದೇವೆ. ಆ ಮಸಾಲ ಪದಾರ್ಥವಾದರೂ ಯಾವುದು? ಅವುಗಳ ವೈಶಿಷ್ಟ್ಯವೇನು ಎಂಬುದರ ಸಂಪೂರ್ಣ ಡಿಟೈಲ್ಸ್‌ ಇಲ್ಲಿದೆ.

ಕಾಯಿಲೆಗಳಿಗೆ ರಾಮಬಾಣದಂತೆ ಕಾರ್ಯನಿರ್ವಹಿಸುವ  ಆ ಮಸಾಲ ಪದಾರ್ಥವೇ ಜಾಯಿಕಾಯಿ ಇದನ್ನು ವೈಜ್ಞಾನಿಕವಾಗಿ ಮಿರಿಸ್ಟಿಕಾ ಫಗ್ರಾನ್ಸ್‌ ಎಂದು ಕರೆಯಲಾಗುತ್ತದೆ. ಅಲ್ಲದೇ ಆಯುರ್ವೇದ ಲೋಕದಲ್ಲಿ ಜೈಫಲ್‌ ಎಂದು ಕೂಡ ಕರೆಯಲಾಗುತ್ತದೆ. ಸಮಾನ್ಯವಾಗಿ ಅಡುಗೆಯಲ್ಲಿ ಸಿಹಿ ಮತ್ತು ನಾನ್‌ ವೆಜಿಟೆರಿಯನ್‌ ಅಡುಗೆಗಳಲ್ಲಿ ಜಾಯಿಕಾಯಿ ಬಳಸಲಾಗುತ್ತದೆ.ಜೊತೆಗೆ ಆರ್ಯುವೇದ ಔಷಧ ಸೇರಿದಂತೆ ಸಾಂಪ್ರದಾಯಿಕ ಔಷಧಿಯ ಬಳಕೆಯಲ್ಲಿಯೂ ದೀರ್ಘ ಇತಿಹಾಸ ಹೊಂದಿದೆ ಎಂದರೆ ತಪ್ಪಾಗಲಾರದು. ಆಯುರ್ವೇದದಲ್ಲಿ, ಇದನ್ನು ಅನೇಕ ರೋಗಗಳ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. ಜಾಯಿಕಾಯಿಯಲ್ಲಿ ವಿಟಮಿನ್ ಬಿ6,  ಥಯಾಮಿನ್,  ಫೈಬರ್, ಕಬ್ಬಿಣ, ಕ್ಯಾಲ್ಸಿಯಂ, ಮ್ಯಾಂಗನೀಸ್, ಪೊಟ್ಯಾಸಿಯಮ್ ಮುಂತಾದ ಪೋಷಕಾಂಶಗಳು ಹೇರಳವಾಗಿವೆ. ಇನ್ನೂ ಕೆಲವೊಮ್ಮೆ ಸೌಂಧರ್ಯ ವರ್ಧಕಗಳಲ್ಲಿಯೂ ಜಾಯಿಕಾಯಿ ಎಣ್ಣೆಯನ್ನು ಬಳಸಲಾಗುತ್ತ

ಜಾಯಿಕಾಯಿಯ ಪ್ರಯೋಜನಗಳು 

ಆಗಾದರೆ ಇದು ಯಾವ ಯಾವ ಕಾಯಿಲೆಗಳಿಗೆ ರಾಮಬಾಣ ಇದರ ಪ್ರಯೋಜವೇನು ಅಂತ ನೊಡೋದಾದ್ರೆ,ಜಾಯಿಕಾಯಿ ದುರ್ಬಲ ಲೈಂಗಿಕ ಸಾಮರ್ಥ್ಯ ಮತ್ತು ಬಂಜೆತನ ಸಮಸ್ಯೆಗಳಿಂದ ಬಳಲುತ್ತಿರುವ ಪುರುಷರಿಗೆ ಬಹಳ ಒಳ್ಳೆಯದು.ಇದು ಲೈಂಗಿಕ ಸಾಮರ್ಥ್ಯವನ್ನು ಹೆಚ್ಚಿಸುವುದು ಮಾತ್ರವಲ್ಲದೆ ವೀರ್ಯ ಕೋಶಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಇದು ದೇಹದಾದ್ಯಂತ ಉರಿಯೂತವನ್ನು ಕಡಿಮೆ ಮಾಡಲು ಮತ್ತು ಸಂಧಿವಾತದಂತಹ ಪರಿಸ್ಥಿತಿಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.ಹಾಗೂ ಜೈಫಲ್  ನೋವು ನಿವಾರಕವಾಗಿ ಮತ್ತು ಸ್ಮರಣೆಯನ್ನು ಹೆಚ್ಚಿಲು ಇದನ್ನು ಬಳಸಲಾಗುತ್ತದೆ. ಇದರೊಳಗೆ ಬ್ಯಾಕ್ಟೀರಿಯಾ ನಿರೋಧಕ ಅಂಶ ಒಳಗೊಂಡಿದ್ದು, ರಾಮಬಾಣದಂತೆ ಸೊಂಕುಗಳನ್ನು ನಿವಾರಿಸುವ ಗುಣವನ್ನು ಹೊಂದಿದೆ.

ಚಳಿಗಾಲದಲ್ಲಿ ಕೆಲವರಿಗೆ ಅಲಸ್ಯದ ಭಾವನೆ ಉಂಟಾಗುವುದು ಸರ್ವೇ ಸಾಮಾನ್ಯ. ಆದರೆ ಜಾಫೈಲ್‌ ಸೇವಿಸುವುದರಿಂದ ಮೈಂಡ್‌ ರಿಫ್ರೆಶ್ ಆಗುತ್ತದೆ. ಇದು ಖಿನ್ನತೆಗೆ ಶಮನಕಾರಿ ಔಷಧಿಯಂತೆ ಕೆಲಸ ಮಾಡುವುದರೊಂದಿಗೆ ಒತ್ತಡವನ್ನೂ ನಿವಾರಿಸಲು ಸಹಕಾರಿಯಾಗಿದೆ. ಇದರಲ್ಲಿ ಇರುವ ‘ಮಿರಿಸ್ಟಿಸಿನ್’ ಎಂಬ ವಸ್ತುವು ಮೆದುಳು ಸಕ್ರಿಯವಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ.ಇಷ್ಟೇ ಅಲ್ಲದೇ ಇನ್ನೂ ಹಲವಾರು ಕಾಯಿಲೆಗಳಿಗೆ ಇದನ್ನು ಔಷಧೀಯವಾಗಿ ಬಳಸಲಾಗುತ್ತದೆ.

ಆಗಂತ ಇದನ್ನು ಒಂದೇ ಸಲ ವಿಪರೀತವಾಗಿ ಬಳಸಿದ್ರೆ ಅಷ್ಟೆ. ಇದರಲ್ಲಿ ಎಷ್ಟು ಅಮೃತದ ಗುಣವಿದೆಯೋ, ಅಷ್ಟೆ ಸೈಡ್‌ ಎಫೆಕ್ಟ್‌ ಕೂಡ ಇದೆ. ಅತೀಯಾಗಿ ಇದನ್ನು ಸೇವಿಸಿದರೆ ಭ್ರಮೆ, ವಾಕರಿಕೆ, ವಾಂತಿ ಮತ್ತು ಕೋಮಾ ಸೇರಿದಂತೆ ಹಾನಿಕಾರಕ ಪರಿಣಾಮ ಉಂಟಾಗುತ್ತದೆ. ಅಲ್ಲದೇ  ಗರ್ಭೀಣಿ ಮಹಿಳೆಯರಿಗಂತು  ಜಾಫೈಲ್‌ ಕೋಟ್ಟರೆ ಗರ್ಭಪಾತವೇ ಆಗುವ ಸಾಧ್ಯತೆ ಹೆಚ್ಚು.

ಸೂಚನೆ: ಆತ್ಮೀಯ ಓದುಗರೇ, ನಮ್ಮ ಸುದ್ದಿಗಳನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮಗೆ ಅರಿವು ಮೂಡಿಸುವ ಉದ್ದೇಶದಿಂದ ಬರೆಯಲಾಗಿದೆ. ಇದನ್ನು ಬರೆಯುವಲ್ಲಿ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ತೆಗೆದುಕೊಂಡಿದ್ದೇವೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಯಾವುದನ್ನಾದರೂ ನೀವು ಎಲ್ಲಿಯಾದರೂ ಓದಿದ್ದರೆ, ಅದನ್ನು ಅಳವಡಿಸಿಕೊಳ್ಳುವ ಮೊದಲು ಖಂಡಿತವಾಗಿಯೂ ವೈದ್ಯರನ್ನು ಸಂಪರ್ಕಿಸಿ.

Source : https://zeenews.india.com/kannada/health/say-goodbye-to-health-tension-if-you-have-this-nutmeg-at-home-177003

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group : https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharechat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Views: 0

Leave a Reply

Your email address will not be published. Required fields are marked *