Brain Boosting Tips: ಮೆದುಳು ಚುರುಕಾಗಿ ಕೆಲಸ ಈ ಸರಳ ಸಲಹೆಗಳನ್ನು ಪಾಲಿಸಿರಿ.

Ways To Improve Brain Health: ಧ್ಯಾನ ಅಥವಾ ಯೋಗ ಮಾಡುವುದರಿಂದ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳನ್ನು ಹೋಗಲಾಡಿಸಬಹುದು. ಧ್ಯಾನ ಮೆದುಳಿನ ಶಕ್ತಿಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ಏಕಾಗ್ರತೆ ಬರುವಂತೆ ಮಾಡುತ್ತದೆ.

ನವದೆಹಲಿ: ಬದಲಾದ ಜೀವನಶೈಲಿ ಮತ್ತು ಕೆಟ್ಟ ಆಹಾರ ಪದ್ಧತಿಯಿಂದ ಇಂದು ಅನೇಕರ ಮಾನಸಿಕ ಆರೋಗ್ಯ ಹದಗೆಡುತ್ತಿದೆ. ನಾವು ಸೇವಿಸುವ ಆಹಾರ ಮೆದುಳಿನ ಮೇಲೆ ನೇರ ಪರಿಣಾಮ ಬೀರುತ್ತದೆ. ಅದೇ ರೀತಿ ಮೆದುಳಿಗೆ ಕೆಲಸ ಕೊಡದಿದ್ದರೆ ಅದು ಜಡತ್ವಕ್ಕೆ ಗುರಿಯಾಗುತ್ತದೆ. ಹೀಗಾಗಿ ಇಂದು ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯ ತುಂಬಾ ಮುಖ್ಯವಾಗಿದೆ. ಮೆದುಳು ಕ್ರಿಯಾಶೀಲವಾಗಿ ಕೆಲಸ ಮಾಡಲು ಮತ್ತು ಚುರುಕಾಗಿರಲು ಏನು ಮಾಡಬೇಕು ಅನ್ನೋದರ ಮಾಹಿತಿ ಇಲ್ಲಿದೆ ನೋಡಿ.

ಮೆದುಳು ಚುರುಕುಗೊಳಿಸಲು ನೀವು ಉತ್ತಮ ಆಹಾರ ಸೇವಿಸುವುದನ್ನು ರೂಢಿಸಿಕೊಳ್ಳಬೇಕು. ಹಸಿರು ತರಕಾರಿಗಳು, ಧಾನ್ಯಗಳು, ಹಣ್ಣುಗಳು, ಬಾದಾಮಿ, ಕೊಬ್ಬಿನ ಮೀನು, ಬ್ಲೂಬೆರ್ರಿಗಳು, ಸ್ಟ್ರಾಬೆರಿಗಳು, ವಾಲ್ನಟ್ಸ್, ಚಹಾ, ಕಾಫಿ ಇತ್ಯಾದಿ ಸೇವಿಸುವುದರಿಂದ ನಿಮ್ಮ ಮೆದುಳು ಕ್ರಿಯಾಶೀಲವಾಗಿರುತ್ತದೆ.

ಪ್ರತಿದಿನ ನೀವು ವ್ಯಾಯಾಮ ಮಾಡಿದ್ರೆ ನಿಮ್ಮ ಮೆದುಳಿನ ಆರೋಗ್ಯ ಸುಧಾರಿಸುತ್ತದೆ. ಹೀಗಾಗಿ ಯಾವುದಾದರೂ ಒಂದು ರೀತಿಯ ವ್ಯಾಯಾಮ ಮಾಡುವುದನ್ನು ರೂಢಿಸಿಕೊಳ್ಳಬೇಕು. ಇದು ನಿಮ್ಮನ್ನು ಆಳದಿಂದ ಆರೋಗ್ಯವಾಗಿರುವಂತೆ ಮಾಡುತ್ತದೆ ಜೊತೆಗೆ ಮನಸ್ಸನ್ನು ಚುರುಕುಗೊಳಿಸುತ್ತದೆ. ನಿಯಮಿತ ವ್ಯಾಯಾಮವು ಮೆದುಳಿನ ಶಕ್ತಿಯನ್ನು ಹೆಚ್ಚಿಸಲು ಸಹಕಾರಿಯಾಗಿದೆ.

ಧ್ಯಾನ ಅಥವಾ ಯೋಗ ಮಾಡುವುದರಿಂದ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳನ್ನು ಹೋಗಲಾಡಿಸಬಹುದು. ಧ್ಯಾನ ಮೆದುಳಿನ ಶಕ್ತಿಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ಏಕಾಗ್ರತೆ ಬರುವಂತೆ ಮಾಡುತ್ತದೆ. ನಿಯಮಿತವಾಗಿ ಯೋಗ ಮಾಡುವುದರಿಂದಲೂ ನಿಮ್ಮ ಮೆದುಳು ಕ್ರಿಯಾಶೀಲವಾಗಿರುತ್ತದೆ.

ಮೆದುಳು ಅತ್ಯಂತ ಕ್ರಿಯಾಶೀಲವಾಗಿ ಕೆಲಸ ಮಾಡಲು ನೀವು ಬೇರೆ ಬೇರೆ ಭಾಷೆಗಳನ್ನು ಕಲಿಯಲು ಪ್ರಯತ್ನಿಸಬೇಕು. ಮಾತೃಭಾಷೆ ಹೊರತುಪಡಿಸಿ ಬೇರೆ ಭಾಷೆ ಕಲಿಯುವುದರಿಂದ ನಿಮ್ಮ ಮನಸ್ಸು ಚುರುಕುಗೊಳ್ಳುತ್ತದೆ. ಇದು ಅನೇಕ ಸಂಶೋಧನೆಯಲ್ಲೂ ಸಾಬೀತಾಗಿದೆ.

ಮೆದುಳು ಕ್ರಿಯಾಶೀಲವಾಗಿ ಕೆಲಸ ಮಾಡಲು ನೀವು ಹೊಸ ಹೊಸ ಚಟುವಟಿಕೆಗಳನ್ನು ಮಾಡುತ್ತೀರಬೇಕು. ಮೆದುಳು-ಬುದ್ಧಿಶಕ್ತಿಗೆ ಸಂಬಂಧಿಸಿದ ಹೊಸ ಚಟುವಟಿಕೆ ಮಾಡುವುದರಿಂದ ಮನಸ್ಸು ಚುರುಕುಗೊಳ್ಳಬಹುದು. ಪಜಲ್ ಆಡುವುದು, ಗಣಿತದ ಸಮಸ್ಯೆಗಳನ್ನು ಪರಿಹರಿಸುವುದರಿಂದ ಸಹ ನಿಮ್ಮ ಮನಸ್ಸು ಚುರುಕಾಗಿ ಕೆಲಸ ಮಾಡುತ್ತದೆ.

Source : https://zeenews.india.com/kannada/photo-gallery/health-tips-five-ways-to-improve-brain-health-178430/ways-to-keep-your-brain-healthy-178431

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group : https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharechat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *