ನೀವು ಬೆಳಗ್ಗೆ ಏನಾದರೂ ತಿಂಡಿ ತಿನ್ನಿ. ಅದರ ಜೊತೆಯಲ್ಲಿ ಅರ್ಧ ಬಾಳೆಹಣ್ಣು ತಿನ್ನಿ. ಇದರಿಂದ ನಿಮ್ಮ ದೇಹಕ್ಕೆ ಎಷ್ಟೆಲ್ಲ ಅನುಕೂಲವಿದೆ ಗೊತ್ತಾ?

ಬಾಳೆಹಣ್ಣು ಸರ್ವ ಬಗೆಯ ಪೌಷ್ಟಿಕಾಂಶಗಳನ್ನು ಒಳಗೊಂಡಿರುವ ಹಣ್ಣಾಗಿದೆ. ಅಂದರೆ ಇದರಲ್ಲಿ ಸಿಗುವ ಪೌಷ್ಟಿಕ ಸತ್ವಗಳು ನಮ್ಮ ದೇಹಕ್ಕೆ ಅತ್ಯವಶ್ಯಕ. ಪ್ರಮುಖ ವಾಗಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ವಿಟಮಿನ್ ‘ಸಿ’, ರಕ್ತದ ಒತ್ತಡವನ್ನು ಕಡಿಮೆ ಮಾಡುವ ಪೊಟ್ಯಾಶಿಯಂ, ನಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಉತ್ತಮಪಡಿಸುವಲ್ಲಿ ಮತ್ತು ದೇಹಕ್ಕೆ ಶಕ್ತಿಯನ್ನು ತಕ್ಷಣ ಒದಗಿಸುವ ವಿಟಮಿನ್ ಬಿ6, ನಾರಿನ ಅಂಶ ಹೀಗೆ ಇದರಲ್ಲಿ ಅಪಾರವಾದ ಶಕ್ತಿ, ಚೈತನ್ಯಗಳು ಅಡಗಿವೆ.

ಹೀಗಾಗಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬಾಳೆಹಣ್ಣು ನಮ್ಮ ದೇಹ ಸೇರಿದರೆ ಇಂತಹ ಎಲ್ಲಾ ಪೌಷ್ಟಿಕ ಸತ್ವಗಳ ಪ್ರಯೋಜನಗಳನ್ನು ನಾವು ಸಂಪೂರ್ಣವಾಗಿ ಪಡೆದು ಕೊಳ್ಳಬಹುದು. ಬೆಳಗ್ಗೆ ತಿಂಡಿ ತಿನ್ನುವಾಗ ಕೂಡ ಜೊತೆಯಲ್ಲಿ ಬಾಳೆಹಣ್ಣು ಸೇವಿಸುವುದರಿಂದ ಸಾಕಷ್ಟು ಲಾಭವಿದೆ. ನಮ್ಮ ದೇಹದಲ್ಲಿ ರಕ್ತ ಸಂಚಾರವನ್ನು ಉತ್ತಮ ಪಡಿಸುವುದು ಮಾತ್ರವಲ್ಲ ಇಡೀ ದಿನ ಶಕ್ತಿ ಮತ್ತು ಚೈತನ್ಯ ನಮಗೆ ಸಿಗುತ್ತದೆ.

ಮೂಳೆಗಳ ಆರೋಗ್ಯ

ಮೂಳೆಗಳ ಆರೋಗ್ಯ

ಬಾಳೆಹಣ್ಣಿನಲ್ಲಿ ಪೊಟ್ಯಾಶಿಯಂ ಪ್ರಮಾಣ ಹೇರಳವಾಗಿ ಕಂಡು ಬರುತ್ತದೆ. ಇದರಿಂದ ಮೂಳೆಗಳಿಗೆ ಸಾಕಷ್ಟು ಒಳ್ಳೆಯದು ಎಂದು ಹೇಳ ಲಾಗುತ್ತದೆ. ಇದರ ಜೊತೆಗೆ ಬಾಳೆಹಣ್ಣಿನಲ್ಲಿ ಕಂಡು ಬರುವ ಮೆಗ್ನೀಷಿ ಯಂ ಮೂಳೆಗಳ ಆರೋಗ್ಯವನ್ನು ರಕ್ಷಿಸುತ್ತದೆ. ನಮ್ಮ ದೇಹದಲ್ಲಿ ಆಸಿಡ್ ಬೇಸ್ ಬ್ಯಾಲೆನ್ಸ್ ಸಹ ಇದರಿಂದ ನಡೆಯುತ್ತದೆ.

ಆಲಸ್ಯವನ್ನು ದೂರ ಮಾಡುತ್ತದೆ

ಆಲಸ್ಯವನ್ನು ದೂರ ಮಾಡುತ್ತದೆ

ನೀವು ಒಂದು ವೇಳೆ ಹೆಚ್ಚಿನ ಪ್ರಮಾಣದಲ್ಲಿ ಆಲ್ಕೋಹಾಲ್ ಸೇವಿಸಿ ನಿತ್ರಾಣಗೊಂಡಿದ್ದರೆ ಅಥವಾ ಆಲಸ್ಯ ಸಮಸ್ಯೆ ಎದುರಿಸುತ್ತಿದ್ದರೆ, ತಕ್ಷಣ ಕುಡಿಯುವ ಬನಾನ ಮಿಲ್ಕ್ ಶೇಕ್ ನಿಮ್ಮ ಆಲಸ್ಯವನ್ನು ಸಂಪೂರ್ಣ ದೂರ ಮಾಡುತ್ತದೆ. ಇದು ದೇಹದ ನಿರ್ಜಲೀಕರಣವನ್ನು ದೂರ ಮಾಡುವುದು ಮಾತ್ರವಲ್ಲದೆ ರಕ್ತದಲ್ಲಿ ಬ್ಲಡ್ ಶುಗರ್ ಲೆವೆಲ್ ಅನ್ನು ಸಮತೋಲನಗೊಳಿಸಿ ಆರೋಗ್ಯವನ್ನು ರಕ್ಷಿಸುತ್ತದೆ.

ಮಾನಸಿಕ ಒತ್ತಡ ನಿವಾರಕ

ಮಾನಸಿಕ ಒತ್ತಡ ನಿವಾರಕ

ಬಾಳೆಹಣ್ಣು ಒಂದು ಆರೋಗ್ಯಕರವಾದ ಆಹಾರವಾಗಿದ್ದು, ಮಾನಸಿಕ ಆರೋಗ್ಯ ನಿರ್ವಹಣೆಯಲ್ಲಿ ತುಂಬಾ ಸಹಾಯಕ. ಇದರಲ್ಲಿ ಪೊಟ್ಯಾಶಿಯಂ, ಡೋಪಮೈನ್, ವಿಟಮಿನ್ ಬಿ6 ಸಾಕಷ್ಟು ಅಡಗಿವೆ. ಇವುಗಳು ರಕ್ತದ ಒತ್ತಡವನ್ನು, ಮಾನಸಿಕ ಒತ್ತಡವನ್ನು ಕಡಿಮೆ ಮಾಡಿ ನರಮಂಡಲವನ್ನು ಶಾಂತಗೊಳಿಸುತ್ತವೆ.

ಪಿರಿಯಡ್ಸ್ ನೋವನ್ನು ಕಡಿಮೆ ಮಾಡುತ್ತದೆ

ಪಿರಿಯಡ್ಸ್ ನೋವನ್ನು ಕಡಿಮೆ ಮಾಡುತ್ತದೆ

ಇದಕ್ಕೆ ಪ್ರಮುಖ ಕಾರಣ ಎಂದರೆ ಬಾಳೆಹಣ್ಣಿನಲ್ಲಿ ಪೋಟಾಸಿಯಂ ಇರುವುದು. ಇದು ಮಹಿಳೆಯರ ಪಿರಿಯಡ್ಸ್ ನೋವನ್ನು ಉಪಶಮನ ಗೊಳಿಸುವ ಗುಣ ಹೊಂದಿದೆ. ಗರ್ಭಕೋಶದ ಹಿಗ್ಗುವಿಕೆ ಮತ್ತು ತಗ್ಗುವಿಕೆ ಯಲ್ಲಿ ಇದರ ಪಾತ್ರ ಇರಲಿದೆ. ಇದರ ಜೊತೆಗೆ ಹೊಟ್ಟೆ ಉಬ್ಬರ ಸಮಸ್ಯೆ ಯನ್ನು ಕಡಿಮೆ ಮಾಡಿ ಆರೋಗ್ಯವನ್ನು ರಕ್ಷಿಸುತ್ತದೆ.

ಮಧುಮೇಹ ನಿರ್ವಹಣೆ

ಮಧುಮೇಹ ನಿರ್ವಹಣೆ

ಬಾಳೆಹಣ್ಣಿನಲ್ಲಿ ಸಿಹಿ ಸೂಚ್ಯಂಕ ಇದೆ ನಿಜ. ಆದರೆ ಇದರಿಂದ ಸಕ್ಕರೆ ಕಾಯಿಲೆ ನಿರ್ವಹಣೆ ಆಗುತ್ತದೆ ಎಂದು ಹೇಳುತ್ತಾರೆ. ಮಧುಮೇಹ ಇರುವವರು ಬೆಳಗ್ಗೆ ತಿಂಡಿ ತಿನ್ನುವ ಸಮಯದಲ್ಲಿ ಅರ್ಧ ಬಾಳೆಹಣ್ಣು ತಿಂದು ತಮ್ಮ ಸಕ್ಕರೆ ಕಾಯಿಲೆಯನ್ನು ನಿರ್ವಹಣೆ ಮಾಡಿಕೊಳ್ಳಬಹುದು.

ಕ್ಯಾನ್ಸರ್ ರೋಗ ನಿರ್ವಹಣೆ

ಕ್ಯಾನ್ಸರ್ ರೋಗ ನಿರ್ವಹಣೆ

ಆಗಾಗ ಬಾಳೆಹಣ್ಣು ಮತ್ತು ಕಿತ್ತಳೆ ಹಣ್ಣನ್ನು ತಿನ್ನುವುದರಿಂದ ಮಕ್ಕಳಲ್ಲಿ ಕಂಡು ಬರುವ ಲುಕೆಮಿಯ ಸಮಸ್ಯೆಯನ್ನು ಸುಲಭವಾಗಿ ನಿರ್ವಹಣೆ ಮಾಡಿಕೊಳ್ಳಬಹುದು ಎಂದು ಹೇಳಲಾಗುತ್ತದೆ. ಗರ್ಭಿಣಿ ಮಹಿಳೆಯರು ಕೂಡ ಇದೇ ಅಭ್ಯಾಸವನ್ನು ಮಾಡಿಕೊಂಡರೆ ಹುಟ್ಟುವ ಮಕ್ಕಳಲ್ಲಿ ಈ ಸಮಸ್ಯೆಯನ್ನು ತಪ್ಪಿಸಬಹುದು. ಇಷ್ಟೇ ಅಲ್ಲದೆ ಬೇರೆ ಬೇರೆ ಬಗೆಯ ಕ್ಯಾನ್ಸರ್ ಗಳಿಂದಲೂ ಕೂಡ ರಕ್ಷಣೆ ಪಡೆದುಕೊಳ್ಳಬಹುದು.

ನಿದ್ರಾಹೀನತೆ ಸಮಸ್ಯೆ ದೂರವಾಗುತ್ತದೆ

ನಿದ್ರಾಹೀನತೆ ಸಮಸ್ಯೆ ದೂರವಾಗುತ್ತದೆ

ಬಾಳೆಹಣ್ಣಿನಲ್ಲಿ ಪೊಟ್ಯಾಶಿಯಂ, ಮೆಗ್ನೀಷಿಯಂ ಜೊತೆಗೆ ಟ್ರಿಪ್ಟೋ ಫ್ಯಾನ್, ಮೆಲಟೋನಿನ್ ಅಂಶ ಕೂಡ ಇದೆ. ಇದು ಮಾಂಸ ಖಂಡ ಗಳನ್ನು ಶಾಂತ ಗೊಳಿಸುವ ಕೆಲಸ ಮಾಡುವುದು ಮಾತ್ರವಲ್ಲದೆ ರಾತ್ರಿಯ ಸಮಯದಲ್ಲಿ ಒಳ್ಳೆಯ ನಿದ್ರೆ ನಮ್ಮದಾಗವಂತೆ ಮಾಡುತ್ತದೆ. ಇದರಿಂದ ನಿದ್ರಾಹೀನತೆ ಸಮಸ್ಯೆ ಸಂಪೂರ್ಣವಾಗಿ ದೂರವಾಗುತ್ತದೆ.

Source:https://vijaykarnataka.com/lifestyle/health/try-having-a-piece-of-banana-in-your-breakfast-to-get-all-these-health-benefits/articleshow/106309475.cms?story=7

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group : https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *