Viral News: ಈ ನದಿಯ ನೀರು ಬೀಟ್ರೂಟ್ ನಂತಹ ಕೆಂಪು ಬಣ್ಣಕ್ಕೆ ತಿರುಗಿದೆಯಂತೆ! ಕಾರಣವಾದ್ರೂ ಏನಿರಬಹುದು?

ಆಘಾತಕಾರಿ ಪರಿಸರದ ವಿಷಯದಲ್ಲಿ ದಕ್ಷಿಣ ರಷ್ಯಾದ ಕೆಮೆರೊವೊದಲ್ಲಿನ ಇಸ್ಕಿಟಿಮ್ಕಾ ನದಿಯು ಆತಂಕಕಾರಿ ರೂಪಾಂತರಕ್ಕೆ ಒಳಗಾಗಿದೆ, ಅದರ ನೀರು ಇದ್ದಕಿದ್ದಂತೆ ಕೆಂಪು ಬಣ್ಣದ ವಿಶಿಷ್ಟ ಛಾಯೆಯನ್ನು ತೋರಿದೆ.

ಸಾಮಾನ್ಯವಾಗಿ ನದಿಯ ನೀರು ಆಯಾ ಪ್ರದೇಶದ ವಾತಾವರಣಕ್ಕೆ ಅನುಗುಣವಾಗಿ ಇರುತ್ತದೆ ಎಂಬುದು ನಮಗೆಲ್ಲಾ ಗೊತ್ತಿರುವ ವಿಚಾರವಾಗಿದೆ. ನದಿಯ (River) ಸುತ್ತಲೂ ಮತ್ತು ನದಿಯಲ್ಲಿ ತುಂಬಾನೇ ಪಾಚಿ ಮತ್ತು ಸಣ್ಣ ಸಣ್ಣ ಸಸ್ಯಗಳು ಬೆಳೆದುಕೊಂಡಿದ್ದರೆ, ಆ ನೀರು (Water) ಹಸಿರಾಗಿ ಕಾಣುತ್ತದೆ. ಒಂದೊಮ್ಮೆ ನೀರು ತುಂಬಾನೇ ನೀಲಿ ಬಣ್ಣದ ರೀತಿಯಲ್ಲಿ ಕಾಣುತ್ತಿರುತ್ತದೆ, ಇದಕ್ಕೆ ಕಾರಣ ಎಂದರೆ ನೀಲಿ ಆಕಾಶದ ಛಾಯೆ ಆ ನೀರಿನ ಮೇಲೆ ಬೀಳುತ್ತದೆ. ಹೀಗೆ ನದಿಯ ನೀರು ಒಮ್ಮೊಮ್ಮೆ ಹಸಿರು, ಬಿಳಿ (White) ಮತ್ತು ನೀಲಿ (Blue) ಕಂಡರೆ ಅದೇನು ಆಶ್ಚರ್ಯವಲ್ಲ. ಆದರೆ ಅದೇ ನೀರು ಕೆಂಪು ಬಣ್ಣದಲ್ಲಿ ಕಂಡರೆ ಅದು ನಿಜಕ್ಕೂ ಆಘಾತಕಾರಿ ವಿಷಯವಾಗಿರುತ್ತದೆ.

ರಷ್ಯಾದ ನದಿಯ ನೀರು ಕೆಂಪು ಬಣ್ಣಕ್ಕೆ ತಿರುಗಿದೆಯಂತೆ

ಆಘಾತಕಾರಿ ಪರಿಸರದ ವಿಷಯದಲ್ಲಿ ದಕ್ಷಿಣ ರಷ್ಯಾದ ಕೆಮೆರೊವೊದಲ್ಲಿನ ಇಸ್ಕಿಟಿಮ್ಕಾ ನದಿಯು ಆತಂಕಕಾರಿ ರೂಪಾಂತರಕ್ಕೆ ಒಳಗಾಗಿದೆ, ಅದರ ನೀರು ಇದ್ದಕಿದ್ದಂತೆ ಕೆಂಪು ಬಣ್ಣದ ವಿಶಿಷ್ಟ ಛಾಯೆಯನ್ನು ತೋರಿದೆ.

ಈ ನಿಗೂಢ ಘಟನೆಯು ನೀರಿನ ಗುಣಮಟ್ಟದಲ್ಲಿ ಇರಬಹುದಾದ ಸಮಸ್ಯೆಯನ್ನು ಗಮನಕ್ಕೆ ತಂದಿದೆ. ನೀರಿನ ಮಾಲಿನ್ಯವನ್ನು ಎದುರಿಸಲು ಜಾಗತಿಕ ಕ್ರಮದ ತುರ್ತು ಅಗತ್ಯವನ್ನು ಒತ್ತಿ ಹೇಳಿದೆ.

ತೊಂದರೆಗೀಡಾದ ಸ್ಥಳೀಯರು ಅಸ್ವಾಭಾವಿಕ ರೂಪಾಂತರವನ್ನು ಮೊದಲು ವೀಕ್ಷಿಸಿದರು, ಒಂದು ಕಾಲದಲ್ಲಿ ಸ್ಪಷ್ಟವಾದ ನದಿ ಈಗ ರಕ್ತದ ನದಿಯಂತೆ ಗೋಚರಿಸುತ್ತಿದೆ.

ಸಾಮಾನ್ಯವಾಗಿ ನೀರಿನಲ್ಲಿ ನಿರಾಳವಾಗಿ ತೇಲಾಡಿಕೊಂಡು ಇರುವ ಬಾತುಕೋಳಿಗಳು ಸಹ ಈ ಕಡುಗೆಂಪು ಬಣ್ಣದ ನದಿಯನ್ನು ಪ್ರವೇಶಿಸಲು ನಿರಾಕರಿಸಿದ್ದು ಇದು ಸಂಕಷ್ಟದ ತುರ್ತು ಪರಿಸ್ಥಿತಿಯನ್ನು ಸಾರುತ್ತಿದೆ ಎನ್ನಬಹುದು.

ಈ ನದಿಯ ಫೋಟೋ ಮತ್ತು ವೀಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ

ಈ ಘಟನೆಯ ಫೋಟೋಗಳು ಮತ್ತು ವೀಡಿಯೋಗಳು ಈಗ ಸಾಮಾಜಿಕ ಮಾಧ್ಯಮದಲ್ಲಿ ತುಂಬಾನೇ ದೊಡ್ಡ ಸುದ್ದಿಯನ್ನೆ ಸೃಷ್ಟಿಸಿವೆ. ಈ ಫೋಟೋಗಳು ಮತ್ತು ವೀಡಿಯೋಗಳು ವಿಲಕ್ಷಣವಾದ ಕೆಂಪು ವರ್ಣವನ್ನು ಸೆರೆ ಹಿಡಿದಿದ್ದು ಸಂಭಾವ್ಯ ಪರಿಸರ ಪರಿಣಾಮಗಳ ಬಗ್ಗೆ ಸ್ಥಳಿಯರಲ್ಲಿ ಭಯವನ್ನು ಸಹ ಹುಟ್ಟು ಹಾಕಿವೆ ಎಂಬುದು ತಿಳಿದುಬಂದಿದೆ.

ಪರಿಸರ ಇಲಾಖೆಯ ಅಧಿಕಾರಿಗಳು ಶೀಘ್ರವಾಗಿ ಗುರುತಿಸಲಾಗದ ಮಾಲಿನ್ಯಕಾರಕದಿಂದ ಈ ರೀತಿಯ ಬೆಚ್ಚಿ ಬೀಳಿಸುವ ಬಣ್ಣಕ್ಕೆ ನದಿಯ ನೀರು ತಿರುಗಿದೆ ಎಂದು ಅಂದಾಜಿಸಿದ್ದು ನಿರ್ಬಂಧಿಸಲಾದ ಡ್ರೈನ್ ಒಡೆದು ಇದಕ್ಕೆ ಕಾರಣವಾಗಿರಬಹುದು ಎಂದು ಅನುಮಾನಿಸಲಾಗುತ್ತಿದೆ.

ಕೆಮೆರೋವ್‌ನ ಡೆಪ್ಯುಟಿ ಗವರ್ನರ್ ಆಂಡ್ರೇ ಪನೋವ್ ನಗರದ ಒಳಚರಂಡಿ ವ್ಯವಸ್ಥೆಯೇ ಈ ನದಿ ಮಾಲಿನ್ಯಕ್ಕೆ ಸಂಭಾವ್ಯ ಕೊಡುಗೆ ಎಂದು ಸೂಚಿಸಿದ್ದಾರಾದರೂ ನದಿಯ ನೀರಿನ ಕೆಂಪು ಬಣ್ಣಕ್ಕೆ ಕಾರಣವಾದ ನಿರ್ದಿಷ್ಟ ರಾಸಾಯನಿಕ ಪತ್ತೆ ಕಾರ್ಯ ಇನ್ನೂ ತನಿಖೆಯಲ್ಲಿದೆ.

ಇದೇ ರೀತಿಯ ಘಟನೆಗಳು ಹಿಂದೆಯೂ ನಡೆದಿದ್ದವು

ಈ ರೀತಿಯ ಘಟನೆಯೊಂದು ಜೂನ್ 2020 ರಲ್ಲಿ ನಡೆದಿತ್ತು. ಉತ್ತರ ಸೈಬೀರಿಯಾದ ನೊರಿಲ್ಸ್ಕ್ ಬಳಿಯ ವಿದ್ಯುತ್ ಕೇಂದ್ರದಲ್ಲಿ ಡೀಸೆಲ್ ಜಲಾಶಯದ ಕುಸಿತದ ನಂತರ ಹಲವಾರು ಆರ್ಕ್ಟಿಕ್ ನದಿಗಳು ಕೆಂಪು ಬಣ್ಣಕ್ಕೆ ತಿರುಗಿದ್ದವು.

ಈ ದುರಂತವು 15,000 ಟನ್ ಇಂಧನವನ್ನು ನದಿಗೆ ಮತ್ತು 6,000 ಟನ್ ಅನ್ನು ಮಣ್ಣಿನಲ್ಲಿ ಬಿಡುಗಡೆ ಮಾಡಿತ್ತು. ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ತುರ್ತು ಪರಿಸ್ಥಿತಿಯನ್ನು ಸಹ ಘೋಷಿಸಲು ಈ ಘಟನೆ ಕಾರಣವಾಗಿತ್ತು.

ಗ್ರೀನ್‌ಪೀಸ್ ರಷ್ಯಾ ಅಪಘಾತದ ಅಭೂತಪೂರ್ವ ಪ್ರಮಾಣವನ್ನು ಒತ್ತಿ ಹೇಳಿತು, ಇದು ಆರ್ಕ್ಟಿಕ್‌ನಲ್ಲಿ ನಡೆದ ಮೊದಲನೆಯ ಘಟನೆ ಎಂದು ಗುರುತಿಸಲಾಗಿದೆ.

ಇಸ್ಕಿಟಿಮ್ಕಾ ನದಿ ಮತ್ತು ನೊರಿಲ್ಸ್ಕ್ ಘಟನೆಗಳು ಪ್ರಪಂಚದಾದ್ಯಂತ ಕೈಗಾರಿಕಾ ಚಟುವಟಿಕೆಗಳು ಮತ್ತು ಅಪಘಾತಗಳಿಂದ ಉಂಟಾದ ಹೆಚ್ಚುತ್ತಿರುವ ಪರಿಸರ ಸವಾಲುಗಳನ್ನು ಒತ್ತಿ ಹೇಳುತ್ತವೆ.

ನೀರಿನಲ್ಲಿ ಕರಗುವ ಇಂಧನವು ಸಮುದ್ರ ಜೀವಿಗಳಿಗೆ ತೀವ್ರ ಅಪಾಯವನ್ನುಂಟು ಮಾಡುತ್ತದೆ, ಪರಿಸರದ ಪ್ರಭಾವವನ್ನು ತಗ್ಗಿಸಲು ಸಮಗ್ರ ಶುದ್ಧೀಕರಣ ಉಪಕ್ರಮಗಳ ನಿರ್ಣಾಯಕ ಅಗತ್ಯವನ್ನು ಎತ್ತಿ ತೋರಿಸುತ್ತದೆ.

Source : https://kannada.news18.com/news/national-international/the-water-in-russias-ischytimka-river-has-turned-red-like-beetroot-stg-hhb-1505372.html

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group : https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *