ಲಂಡನ್: ಮಹಿಳೆಯೊಬ್ಬರ ಹೃದಯ ಸುಮಾರು 40 ನಿಮಿಷಗಳ ಕಾಲ ತನ್ನ ಬಡಿತವನ್ನು ನಿಲ್ಲಿಸಿ ಮತ್ತೆ ಸಹಜ ಸ್ಥಿತಿಗೆ ಮರಳಿದ ಆಘಾತಕಾರಿ ಘಟನೆ ಯುನೈಟೆಡ್ ಕಿಂಗ್ಡಮ್ನಲ್ಲಿ ಇತ್ತೀಚೆಗೆ ನಡೆದಿದ್ದು, ವೈದ್ಯ ಲೋಕವೇ ಅಚ್ಚರಿಗೊಂಡಿದೆ.
ಇಂಗ್ಲೆಂಡ್ನ ಉತ್ತರ ಯಾರ್ಕ್‌ಷೈರ್‌ನ ಸ್ಕಾರ್ಬರೋ ಮೂಲದ ಸ್ಟು ಮತ್ತು ಕ್ರಿಸ್ಟಿ ಬೊರ್ಟೊಫ್ಟ್ ದಂಪತಿ ತಮ್ಮ ಮೂವರು ಮಕ್ಕಳೊಂದಿಗೆ ಇತ್ತೀಚಿಗೆ ರಾತ್ರಿ ಪಾರ್ಟಿ ಆಯೋಜನೆ ಮಾಡಿದ್ದರು.
ಈ ವೇಳೆ ಕ್ರಿಸ್ಟಿ ಅವರು ಏಕಾಏಕಿ ಪ್ರಜ್ಞೆ ತಪ್ಪಿ ಬಿದ್ದಿದ್ದು, ಪತಿ ಸ್ಟು ಆಕೆಯನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಿದ್ದಾರೆ. ಅಲ್ಲಿ ಕ್ರಿಸ್ಟಿಯನ್ನು ಪರೀಕ್ಷಿಸಿದ ವೈದ್ಯರು ಆಕೆಗೆ ಹೃದಯಾಘಾತವಾಗಿದೆ ಎಂದು ಹೇಳಿ ಚಿಕಿತ್ಸೆ ನೀಡಿದರು. ಆದರೆ ಕ್ರಿಸ್ಟಿಯ ಹೃದಯ ಬಡಿತ ಮತ್ತಷ್ಟು ನಿಧಾನವಾಯಿತು ಮತ್ತು ಒಂದು ಹಂತದಲ್ಲಿ ಸಂಪೂರ್ಣವಾಗಿ ನಿಂತೇ ಹೋಯಿತು.
ಸಿಪಿಆರ್ ಸೇರಿದಂತೆ ಯಾವುದೇ ಚಿಕಿತ್ಸೆ ನೀಡಿದರೂ ಎಲ್ಲವೂ ವಿಫಲವಾಯಿತು. ವೈದ್ಯರು ಕೂಡ ತಮ್ಮ ಪ್ರಯತ್ನಗಳನೆಲ್ಲ ಕೈಚೆಲ್ಲಿ ಕೊನೆಗೆ ಆಕೆ ಮೃತಪಟ್ಟಿದ್ದಾಳೆ ಎಂಬ ತೀರ್ಮಾನಕ್ಕೆ ಬಂದಿದ್ದರು. ಆದರೆ, 40 ನಿಮಿಷಗಳ ನಂತರ ಕ್ರಿಸ್ಟಿ ಹೃದಯ ಮತ್ತೆ ಬಡಿದುಕೊಳ್ಳಲು ಆರಂಭಿಸಿತು. ಅಲ್ಲದೆ, ಆಕೆ ಮತ್ತೆ ಎದ್ದು ಕುಳಿತಳು. ಈ ವೇಳೆ ಆಕೆಯನ್ನು ನೋಡಿ ಅಲ್ಲಿಯೇ ಇದ್ದವರು ಒಂದು ಕ್ಷಣ ಶಾಕ್ ಆದರು.
ಈ ಬಗ್ಗೆ ಮಾತನಾಡಿರುವ ಕ್ರಿಸ್ಟಿ, ನಾನು ಮೂರ್ಛೆ ಹೋಗುವವರೆಗೂ ಮಾತ್ರ ನನಗೆ ನೆನಪಿದೆ. ಇದಾದ ಬಳಿಕ ನನ್ನ ದೇಹವು ಸ್ವಲ್ಪಮಟ್ಟಿಗೆ ಕುಸಿಯುತ್ತಿರುವಂತೆ ಭಾಸವಾಯಿತು. ಆದರೆ ನೋವಿರಲಿಲ್ಲ. ಇದಾದ ಬಳಿಕ ಒಂದು ವರ್ಣನಾತೀತ ಆಕೃತಿ ನನ್ನ ಮುಂದೆ ಬಂದು ನಿಂತಿತು. ಅದು ನನ್ನ ಆತ್ಮ ಎಂದು ನಾನು ನಂಬುತ್ತೇನೆ. ಬಳಿಕ ನನ್ನ ಸಹೋದರಿಯ ಸಂಪರ್ಕಕ್ಕೆ ನಾನು ಬಂದೆ. ಬಳಿಕ ನಾನು ನನ್ನ ಮಕ್ಕಳು ಮತ್ತು ತಂದೆಗೆ ಕೆಲವು ವಿಷಯಗಳನ್ನು ಬರೆಯಲು ಹೇಳಿದೆ. ನಾನು ಆತ್ಮದ ಒಳಗೆ ಹಿಂತಿರುಗಬಹುದೆಂದು ಭಾವಿಸಲಿಲ್ಲ. ಆದರೆ ನನ್ನ ಸ್ನೇಹಿತ (ಆತ್ಮ) ಇನ್ನೂ ಸಮಯ ಆಗಿಲ್ಲ, ನೀವು ದೇಹದೊಳಗೆ ಹೋಗಬಹುದು. ನೀನು ಹೋಗು ಎಂದು ಹೇಳಿ ನನ್ನನ್ನು ಹೊರಡಲು ಹೇಳಿದರು. ಅಷ್ಟೇ, ನನಗೆ ಮತ್ತೆ ಎಚ್ಚರವಾಯಿತು. ಆಗ ನಾನು ಆಸ್ಪತ್ರೆಯಲ್ಲಿದ್ದೆ. ವೈದ್ಯರು ನನ್ನನ್ನು ಆಶ್ಚರ್ಯದಿಂದ ನೋಡಿದರು ಎಂದು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾಗ ಸಂಭವಿಸಿದ ಘಟನೆಗಳನ್ನು ಕ್ರಿಸ್ಟಿ ವಿವರಿಸಿದರು.
ಇದೇ ಸಂದರ್ಭದಲ್ಲಿ ನನ್ನ ಕುಟುಂಬವು ನನ್ನ ಅಂತಿಮ ಕ್ರಿಯೆಗೆ ಸಿದ್ಧಪಡಿಸುತ್ತಿದ್ದರು ಎಂದು ಕ್ರಿಸ್ಟಿ ಹೇಳಿದ್ದಾರೆ. ಆಕೆ ಎಚ್ಚರಗೊಂಡ ಬಳಿಕ ಸ್ಕ್ಯಾನ್ ಮಾಡಲಾಗಿದ್ದು, ಹೃದಯ ಅಥವಾ ಶ್ವಾಸಕೋಶಕ್ಕೆ ಯಾವುದೇ ಹಾನಿಯಿಲ್ಲ ಎಂಬುದು ವರದಿಯಲ್ಲಿ ಉಲ್ಲೇಖವಾಗಿದೆ.
ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group : ನಮ್ಮ https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1