ಅಬ್ಬಬ್ಬಾ ಲಾಟರಿ, ಉಕ್ರೇನ್‌ಗೆ ಬರೋಬ್ಬರಿ 26 ಸಾವಿರ ಕೋಟಿ ಕೊಡುತ್ತಂತೆ ಬ್ರಿಟನ್!

ಉಕ್ರೇನ್ :ಪರಿಸ್ಥಿತಿ ಹೀನಾಯವಾಗಿದೆ ರಷ್ಯಾ ವಿರುದ್ಧ ಯುದ್ಧ ಸಾರಿದ ಬಳಿಕ ತಿನ್ನೋದಕ್ಕೆ ಅನ್ನ ಕೂಡ ಇಲ್ಲವಾಗಿದೆ. ಇದೇ ಕಾರಣಕ್ಕೆ ಕಾಡಿ, ಬೇಡಿ ಬೇರೆ ಬೇರೆ ದೇಶಗಳಿಂದ ದಾನ & ಧರ್ಮ ಪಡೆಯುತ್ತಿದೆ. ಇಷ್ಟುದಿನ ಉಕ್ರೇನ್‌ಗೆ ಸಹಾಯ ಮಾಡುತ್ತಿದ್ದ ಅಮೆರಿಕದಲ್ಲಿ ಈ ಬಗ್ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ, ದೊಡ್ಡಣ್ಣ ಅಮೆರಿಕ ಸೈಲೆಂಟ್ ಆಗಿದೆ.

ಹೀಗಾಗಿ ಉಕ್ರೇನ್ ಈಗ ಬ್ರಿಟನ್ ಎದುರು ಬೇಡಿಕೆ ಇಟ್ಟಿತ್ತು. ಇದೇ ಸಮಯದಲ್ಲಿ ಲಾಟರಿ ಹೊಡೆದಿದೆ. ರಷ್ಯಾ & ಉಕ್ರೇನ್ ಯುದ್ಧ ಈ ಜಗತ್ತಿಗೆ ಒಂದು ಗತಿ ಕಾಣಿಸಲು ಸಜ್ಜಾದಂತೆ ಕಾಣುತ್ತಿದ್ದು ಇದೇ ಮಾತಿಗೆ ಪುಷ್ಟಿ ನೀಡುವ ಘಟನೆಗಳು ಅಲ್ಲಿ ಪ್ರತಿದಿನ ನಡೆಯುತ್ತಿವೆ. ಅದರಲ್ಲೂ ಇಬ್ಬರ ಮಧ್ಯೆ ಘನಘೋರ ಅಸ್ತ್ರಗಳ ಬಳಕೆ ಕೂಡ ಆಗುತ್ತಿರುವುದು ಈ ಭಯ ಹೆಚ್ಚಾಗಿಸುತ್ತಿದೆ.

ರಷ್ಯಾ ಹಾಗೂ ಉಕ್ರೇನ್ ಪರಸ್ಪರ ಡ್ರೋನ್‌ಗಳ ಮೂಲಕ ಬಡಿದಾಡುತ್ತಿದ್ದು, ಅಮೆರಿಕ ದಿಢೀರ್ ಉಕ್ರೇನ್‌ಗೆ ಮಾಡುತ್ತಿದ್ದ ಸಹಾಯ ನಿಲ್ಲಿಸುವ ಭೀತಿ ಆವರಿಸಿತ್ತು. ಕೊನೆಗೂ ಕಾಡಿ & ಬೇಡಿ ಉಕ್ರೇನ್ ಒಂದಷ್ಟು ಸಹಾಯ ಪಡೆದಿದೆ. ಇಷ್ಟಾದ್ರೂ ರಷ್ಯಾ ವಿರುದ್ಧ ಹೋರಾಡುವುದಕ್ಕೆ ಉಕ್ರೇನ್‌ಗೆ ಇನ್ನೂ ಹೆಚ್ಚಿನ ಶಸ್ತ್ರಾಸ್ತ್ರ & ಹಣ ಬೇಕಿದೆ. ಅದನ್ನ ನೀಡಲು ಈಗ ಬ್ರಿಟನ್ ಮುಂದೆ ಬಂದಿದೆ. ಕಷ್ಟದ ಸಮಯದಲ್ಲಿ ಸಿಕ್ಕಿದೆ ಪರಿಹಾರ! ಹೌದು ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ಉಕ್ರೇನ್‌ ರಾಜಧಾನಿ ಕೀವ್‌ಗೆ ಭೇಟಿ ನೀಡಿದ್ದಾರೆ. ಇದೇ ಸಮಯದಲ್ಲಿ ದೊಡ್ಡ ಮಟ್ಟದ ಡೀಲ್ ನಡೆದು ಹೋಗಿದೆ.

ರಷ್ಯಾ ವಿರುದ್ಧ ಘೋರ ಯುದ್ಧ ನಡೆಸುತ್ತಿರುವ ಉಕ್ರೇನ್‌ಗೆ ದೊಡ್ಡ ಮಟ್ಟದಲ್ಲಿ ಸಹಾಯ ಮಾಡಲು ಬ್ರಿಟನ್ ಒಪ್ಪಿಗೆಯನ್ನ ಸೂಚಿಸಿದೆ. ರಷ್ಯಾ ಜತೆಗಿನ ಯುದ್ಧದಲ್ಲಿ ಉಕ್ರೇನ್‌ಗೆ ಮತ್ತಷ್ಟು ಸೇನಾ ನೆರವು ಹೆಚ್ಚಿಸುವ ಜತೆಗೆ ಹೊಸ ಪ್ಯಾಕೇಜ್‌ ಘೋಷಿಸಲಿದ್ದಾರೆ ಎಂದು ಸುನಕ್‌ ಕಚೇರಿ ಮಾಹಿತಿ ನೀಡಿದೆ. ಹೀಗೆ ಹೊಸ ಆಸೆ ಉಕ್ರೇನ್ ನಾಯಕರಲ್ಲಿ ಚಿಗುರೊಡೆದಿದೆ. ಈಗ ಸಿಗುತ್ತಿರುವ ಮಾಹಿತಿ ಪ್ರಕಾರ ಮುಂದಿನ ಹಣಕಾಸು ವರ್ಷದಲ್ಲಿ ಉಕ್ರೇನ್‌ಗೆ ಸುಮಾರು 26 ಸಾವಿರ ಕೋಟಿ ಸೇನಾ ನೆರವು ಸಿಗುವ ಸಾಧ್ಯತೆ ಇದೆ. ಸೇನಾ ನೆರವಿನಲ್ಲಿ, ಅತ್ಯಾಧುನಿಕ ಕ್ಷಿಪಣಿ ಸೇರಿದಂತೆ ವಾಯು ರಕ್ಷಣಾ ವ್ಯವಸ್ಥೆ ಬಾಂಬ್ & ಮದ್ದು ಗುಂಡು ಇರಲಿವೆ. ಅಲ್ಲದೆ ಉಕ್ರೇನ್ ನೆಲದಲ್ಲಿ ನಿಂತು ಪರೋಕ್ಷವಾಗಿ ರಷ್ಯಾ ವಿರುದ್ಧ ಬ್ರಿಟನ್ ಪ್ರಧಾನಿ ಗುಡುಗಿರುವುದು ಈಗ ಮತ್ತಷ್ಟು ಸದ್ದು ಮಾಡುತ್ತಿದೆ. ಮೊದಲಿನಿಂದಲೂ ಬ್ರಿಟನ್ ಇದೇ ರೀತಿ, ಉಕ್ರೇನ್‌ಗೆ ನೆರವನ್ನು ನೀಡುತ್ತಿದೆ.

2ನೇ ವರ್ಷಕ್ಕೆ ರಷ್ಯಾ VS ಉಕ್ರೇನ್ ಯುದ್ಧ ಇನ್ನು 2022 ಫೆಬ್ರವರಿಯಲ್ಲಿ ಶುರುವಾಗಿದ್ದ ರಷ್ಯಾ & ಉಕ್ರೇನ್ ಯುದ್ಧ ಇಲ್ಲಿಗೆ ಬಹುತೇಕ 23 ತಿಂಗಳ ಕಿತ್ತಾಟ ಮುಗಿಸಿದೆ. ಈ 23 ತಿಂಗಳ ಬಡಿದಾಟದಲ್ಲಿ, ಕಳೆದ ಬಾರಿಯ ಚಳಿಗಾಲದಲ್ಲಿ ಉಕ್ರೇನ್‌ನ ವಿದ್ಯುತ್‌ ಗ್ರಿಡ್ ಗುರಿಯಾಗಿಸಿಕೊಂಡು ರಷ್ಯಾ ದಾಳಿ ಮಾಡಿತ್ತು ಎನ್ನುವ ಆರೋಪ ಇತ್ತು. ಹಾಗೇ ಇದೀಗ ರಷ್ಯಾ, ಉಕ್ರೇನ್‌ನಲ್ಲಿ ಇರುವ ರಕ್ಷಣಾ ಉದ್ಯಮ ಗುರಿಯಾಗಿಸಿ ಅಟ್ಯಾಕ್ ಮಾಡುತ್ತಿದೆ ಎಂದು ಗಂಭೀರ ಆರೋಪ ಮಾಡಲಾಗಿದೆ. ಇಷ್ಟೆಲ್ಲದರ ನಡುವೆ ಈಗ ಬ್ರಿಟನ್ ತನ್ನ ಗೆಳೆಯ ಉಕ್ರೇನ್‌ಗೆ ಭಾರಿ ದೊಡ್ಡ ಉಡುಗೊರೆ ನೀಡಲು ಮುಂದಾಗಿದೆ.

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group: https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *