Liver Problems And Feet Pain: ಕೆಲವು ಜನರಿಗೆ ಪಾದದಲ್ಲಿ ತೀವ್ರವಾದ ನೋವಿರುತ್ತದೆ. ಅದರಲ್ಲೂ ಅಡಿಭಾಗಗಳಲ್ಲಿ ಮಾತ್ರ. ಆದರೆ ಅಡಿಭಾಗದಲ್ಲಿ ನಿರಂತರ ನೋವು ಇದ್ದರೆ, ಅದು ಯಕೃತ್ತಿನ ವೈಫಲ್ಯಕ್ಕೆ ಕಾರಣವಾಗಬಹುದು.
- ಕೆಲವು ಜನರಿಗೆ ಪಾದದಲ್ಲಿ ತೀವ್ರವಾದ ನೋವಿರುತ್ತದೆ
- ಅಡಿಭಾಗದಲ್ಲಿ ನಿರಂತರ ನೋವು ಇದ್ದರೆ, ಅದು ಯಕೃತ್ತಿನ ವೈಫಲ್ಯಕ್ಕೆ ಕಾರಣವಾಗಬಹುದು
- ಯಕೃತ್ತು ನಮ್ಮ ದೇಹದ ಬಹುಮುಖ್ಯ ಅಂಗವಾಗಿದೆ.

Liver Problems And Feet Pain: ಓಡಾಟ ಹೆಚ್ಚಾದಾಗ ಕೆಲವೊಮ್ಮೆ ಪಾದಗಳಲ್ಲಿ ತೀವ್ರವಾದ ನೋವನ್ನು ಉಂಟುಮಾಡುತ್ತದೆ. ಆದರೆ ಹಲವಾರು ದಿನಗಳವರೆಗೆ ನಿರಂತರವಾಗಿ ನಿಮ್ಮ ಕಾಲುಗಳಲ್ಲಿ ನೋವು ಅನುಭವಿಸುತ್ತಿದ್ದರೆ, ಜಾಗರೂಕರಾಗಿರಬೇಕು. ಏಕೆಂದರೆ ಇವುಗಳು ಯಕೃತ್ತಿಗೆ ಸಮಸ್ಯೆಗಳಿಗೆ ಸಂಬಂಧಿಸಿದ್ದಾಗಿರುತ್ತದೆ.
ಕೆಲವು ಜನರಿಗೆ ಪಾದದಲ್ಲಿ ತೀವ್ರವಾದ ನೋವಿರುತ್ತದೆ. ಅದರಲ್ಲೂ ಅಡಿಭಾಗಗಳಲ್ಲಿ ಮಾತ್ರ. ಆದರೆ ಅಡಿಭಾಗದಲ್ಲಿ ನಿರಂತರ ನೋವು ಇದ್ದರೆ, ಅದು ಯಕೃತ್ತಿನ ವೈಫಲ್ಯಕ್ಕೆ ಕಾರಣವಾಗಬಹುದು.
ಜಂಕ್ ಫುಡ್ ಮತ್ತು ಕರಿದ ಮಸಾಲೆಯುಕ್ತ ಆಹಾರವನ್ನು ತಿನ್ನುವುದು ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಸರಿಯಾದ ಆಹಾರವನ್ನು ಸೇವಿಸದಿರುವುದು ಕೂಡ ಯಕೃತ್ತಿನ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಇತ್ತೀಚಿನ ದಿನಗಳಲ್ಲಿ ಯಕೃತ್ ಸಂಬಂಧಿ ಕಾಯಿಲೆಗಳು ಹೆಚ್ಚಾಗಿ ಜನರಲ್ಲಿ ಕಂಡುಬರುತ್ತಿವೆ. ಯಕೃತ್ತು ನಮ್ಮ ದೇಹದ ಬಹುಮುಖ್ಯ ಅಂಗವಾಗಿದೆ. ಇದು ಸರಿಯಾಗಿ ಕೆಲಸ ಮಾಡದಿದ್ದರೆ ನಮ್ಮ ದೇಹವು ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ.
ಈ ಕುರಿತು ಗುಜರಾತಿನ ದ್ವಾರಕೇಶ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಗೈನೆಕ್ ಲ್ಯಾಪ್ರೊಸ್ಕೋಪಿ ಆರೋಗ್ಯ ತಜ್ಞ ಡಾ. ಬಿನಾಲ್ ಶಾ ಕೆಲ ಲಕ್ಷಣಗಳನ್ನು ವಿವರಿಸಿದ್ದಾರೆ.
ಯಕೃತ್ತಿನ ಕಾಯಿಲೆಯ ಲಕ್ಷಣಗಳು
- ದುರ್ಬಲ ಭಾವನೆ
- ಕಣ್ಣಿನ ಬಣ್ಣವನ್ನು ಬದಲಾವಣೆ
- ಚರ್ಮದ ತೀವ್ರ ತುರಿಕೆ
- ಹೊಟ್ಟೆ ನೋವು
- ಊತ
- ಪಾದದ ಅಡಿಭಾಗದಲ್ಲಿ ಊತ ಮತ್ತು ನೋವು
ಕಾಲುಗಳಲ್ಲಿ ಆಗಾಗ್ಗೆ ಊತ ಮತ್ತು ಜುಮ್ಮೆನಿಸುವಿಕೆ ಇದ್ದರೆ, ಅದು ಯಕೃತ್ ಡ್ಯಾಮೇಜ್ ಆಗಿದೆ ಎಂಬುದನ್ನು ಸೂಚಿಸುತ್ತದೆ. ಯಕೃತ್ತಿನ ಕಾಯಿಲೆಗಳಾದ ಹೆಪಟೈಟಿಸ್ ಬಿ, ಹೆಪಟೈಟಿಸ್ ಸಿ, ಸಿರೋಸಿಸ್, ಫ್ಯಾಟಿ ಲಿವರ್ ಮತ್ತು ಕ್ಯಾನ್ಸರ್ ಇವುಗಳು ಬಾಧಿಸಬಹುದು.
ಪಾದದ ಅಡಿಭಾಗದಲ್ಲಿ ನಿರಂತರ ತುರಿಕೆ ಇದ್ದರೆ, ಅದು ಹೆಪಟೈಟಿಸ್ ಕಾರಣವಾಗಿರಬಹುದು. ಇದು ಮುಂದುವರಿದ ಹಂತದಲ್ಲಿದ್ದಾಗ, ಅಡಿಭಾಗದಲ್ಲಿ ತುರಿಕೆ ಉಂಟಾಗುತ್ತದೆ. ಇದರೊಂದಿಗೆ ಚರ್ಮದ ಮೇಲೆ ತುರಿಕೆಯೂ ಶುರುವಾಗುತ್ತದೆ. ಯಕೃತ್ತಿನ ಕಾಯಿಲೆಯ ಸಮಯದಲ್ಲಿ ಕೈಗಳು ಮತ್ತು ಪಾದಗಳು ಯಾವಾಗಲೂ ಶುಷ್ಕವಾಗಿರುತ್ತವೆ. ನೀವು ಅಂತಹ ಯಾವುದೇ ಸಮಸ್ಯೆಯನ್ನು ಎದುರಿಸುತ್ತಿದ್ದರೆ ವೈದ್ಯರನ್ನು ಸಂಪರ್ಕಿಸಿ.
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ಸಮಗ್ರ ಸುದ್ದಿ ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.)
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group: https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1