ವಿಶ್ವದ ಅತ್ಯಂತ ಖಾರದ ಮೆಣಸನ್ನು ಕೇವಲ 30 ಸೆಕೆಂಡ್‌ಗಳಲ್ಲಿ ತಿಂದು ಹೊಸ ದಾಖಲೆ ನಿರ್ಮಿಸಿದ ಯುಎಸ್ ವ್ಯಕ್ತಿ.

ಗಿನ್ನಿಸ್​ ವಿಶ್ವ ದಾಖಲೆ (Guinness World Record) ನಿರ್ಮಿಸಬೇಕೆಂಬ ಉತ್ಸಾಹದಲ್ಲಿ ಸಾಕಷ್ಟು ಜನರು ವಿಶಿಷ್ಟ ರೀತಿಯ ಸಾಧನೆಗಳನ್ನು ಮಾಡುತ್ತಾರೆ. ಯಾರಿಗೂ ಅಸಾಧ್ಯವಾಗಿರುವ ತಮಗೆ ಮಾಡಲು ಸಾಧ್ಯ ಎಂಬುದನ್ನು ಇವರು ಮಾಡಿ ತೋರಿಸಿ ವಿಶ್ವ ದಾಖಲೆ ನಿರ್ಮಿಸುತ್ತಾರೆ.

ಈ ಜನರು ಮಾಡುವ ಸಾಧನೆಗಳು ಹಾಗೂ ದಾಖಲೆಗಳನ್ನು ನೋಡಿ ನಮಗೆಲ್ಲಾ ಈ ರೀತಿ ದಾಖಲೆ ನಿರ್ಮಿಸಲು ಖಂಡಿತ ಸಾಧ್ಯವಿಲ್ಲ ಎಂಬ ಉದ್ಗಾರ ಕೇಳಿಬರುತ್ತದೆ ಏಕೆಂದರೆ ಅತ್ಯಂತ ಕಷ್ಟ ಕಷ್ಟದ ಸಾಧನೆಗಳನ್ನು ಇವರು ಲೀಲಾಜಾಲವಾಗಿ ಮಾಡುತ್ತಾರೆ. ಇವರಿಗೆ ದೇವರು ವಿಶೇಷ ಶಕ್ತಿಯನ್ನು ನೀಡಿದ್ದಾರೋ ಎಂಬಂತಹ ರೀತಿಯಲ್ಲಿ ಈ ಜನರು ಸಾಧನೆ ಮಾಡಿ ಶಹಬ್ಬಾಷ್ ಎಂದೆನ್ನಿಸಿಕೊಳ್ಳುತ್ತಾರೆ. ಇದೀಗ ಯುಎಸ್‌ನ ಗ್ರೆಗ್ ಫೋಸ್ಟರ್ ವಿಶ್ವದ ಅತ್ಯಂತ ಖಾರದ ಮೆಣಸಿನ ಕಾಯಿ ಭಾರತದ ಭೂಟ್ ಜೋಲೋಕಿಯಾವನ್ನು ಕೇವಲ 30 ಸೆಕೆಂಡ್‌ಗಳಲ್ಲಿ ಸೇವಿಸುವ ಮೂಲಕ ತಮ್ಮದೇ ದಾಖಲೆಯನ್ನು ಮುರಿದು ಹೊಸ ಐತಿಹಾಸಿಕ ದಾಖಲೆ ನಿರ್ಮಿಸಿದ್ದಾರೆ. ಇದು ವಿಶ್ವದ ಅತ್ಯಂತ ಖಾರದ ಮೆಣಸಿನ ಕಾಯಿ ಎಂದೇ ಖ್ಯಾತಿ ಪಡೆದಿದ್ದು ಭಾರತದ ಈಶಾನ್ಯ ಭಾಗಗಳಾದ ಮಣಿಪುರ ಮತ್ತು ಅಸ್ಸಾಂನಲ್ಲಿ ಹೆಚ್ಚಾಗಿ ಕಂಡುಬರುತ್ತವೆ.ಖಾರದ ಮೆಣಸನ್ನು ಗಬಗಬನೆ ತಿಂದ ಗ್ರೆಗ್ @thetruth.india ಹಂಚಿಕೊಂಡ ವೀಡಿಯೊದಲ್ಲಿ ಗ್ರೆಗ್ ಒಂದರ ನಂತರ ಒಂದರಂತೆ ಮೆಣಸಿನಕಾಯಿಯನ್ನು ಸೇವಿಸುತ್ತಿರುವುದನ್ನು ಕಾಣಬಹುದು. ಹೆಚ್ಚು ವೇಗವಾಗಿ 30.01 ಸೆಕೆಂಡ್‌ಗಳಲ್ಲಿ 10 ಭುಟ್ ಜೊಲೊಕಿಯಾ ಮೆಣಸಿನಕಾಯಿಯನ್ನು ಗ್ರೆಗ್ ಸೇವಿಸಿ ದಾಖಲೆ ನಿರ್ಮಿಸಿದ್ದಾರೆ ಎಂದು ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್ ಶೀರ್ಷಿಕೆ ಉಲ್ಲೇಖಿಸಿದೆ. ಗ್ರೆಗ್ ಕೂಡ ಈ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದ್ದು, ನನ್ನಲ್ಲಿರುವ ಸಾಮರ್ಥ್ಯಕ್ಕೆ ನಾನೇ ಸವಾಲು ಹಾಕಿಕೊಂಡಿದ್ದು, ಖಾರದ ಮೆಣಸಿನ ಮೇಲೆ ನನ್ನ ಒಲವನ್ನು ಇದು ಮತ್ತೊಮ್ಮೆ ಸಾಬೀತುಪಡಿಸಿದೆ ಎಂದು ಹೇಳಿದ್ದಾರೆ.ನಮ್ಮ ದೇಶದ ಈ ದೇವಾಲಯಗಳಿಗೆ ಪುರುಷರಿಗೆ ‘ನೋ ಎಂಟ್ರಿ’! ಡಿಸೆಂಬರ್ 2021 ರಲ್ಲಿ, ಗ್ರೆಗ್ ಮೂರು ಕೆರೊಲಿನಾ ರೀಪರ್ ಮೆಣಸಿನಕಾಯಿಗಳನ್ನು ದಿಗ್ಭ್ರಮೆಗೊಳಿಸುವ ವೇಗವಾದ 8.72 ಸೆಕೆಂಡ್‌ಗಳಲ್ಲಿ ಸೇವಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದರು. ದಲ್ಲದೆ, 2017 ರಲ್ಲಿ, ಅವರು ಒಂದೇ ನಿಮಿಷದಲ್ಲಿ 120 ಗ್ರಾಂ ಕ್ಯಾರೊಲಿನಾ ರೀಪರ್ ಚಿಲ್ಲಿ ಪೆಪರ್ ಅನ್ನು ಸೇವಿಸುವ ಮೂಲಕ ಹೊಸ ದಾಖಲೆಯನ್ನು ಸ್ಥಾಪಿಸಿದರು.


ಖಾರದ ಮೆಣಸು 30 ಸೆಕೆಂಡ್‌ಗಳಲ್ಲಿ ತಿಂದು ಹೊಸ ದಾಖಲೆ ನಿರ್ಮಿಸಿದ ಯುಎಸ್ ವ್ಯಕ್ತಿ
ಖಾರದ ಆಹಾರ ತಿನ್ನುವುದರಲ್ಲಿ ಗ್ರೆಗ್ ನಿಸ್ಸೀಮ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಗ್ರೆಗ್ ಅವರ ಈ ಸಾಧನೆಯನ್ನು ಬಣ್ಣಿಸಿದ್ದು, ಗೆಗೊರಿಗೆ ಮಸಾಲೆಯುಕ್ತ ಆಹಾರ ಎಂದರೆ ತುಂಬಾ ಪ್ರೀತಿಪಾತ್ರವಾದುದು ಅವರು ಖಾತದ ಆಹಾರಗಳನ್ನೇ ಹೆಚ್ಚು ಇಷ್ಟಪಡುತ್ತಾರೆ.

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group: https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *