Tea Beauty tips : ಚಹಾ ಅಂದ್ರೆ ಯಾರಿಗೆ ಇಷ್ಟವಿಲ್ಲ ಹೇಳಿ. ಭಾರತೀಯರ ದಿನ ಪ್ರಾರಂಭವಾಗುವುದೇ ಒಂದು ಕಪ್ ಟೀ ಇಂದ. ನಿಮಗೆ ದಿನಕ್ಕೆ ಮೂರು ಬಾರಿ ಚಹಾ ಕುಡಿಯುವ ಅಭ್ಯಾಸವಿದೆಯೇ? ಹಾಗಿದ್ರೆ ನಿಮಗೆ ಒಂದು ಒಳ್ಳೆಯ ಸುದ್ದಿ ಇಲ್ಲಿದೆ ನೋಡಿ..
- ಭಾರತೀಯರ ದಿನ ಪ್ರಾರಂಭವಾಗುವುದೇ ಒಂದು ಕಪ್ ಚಹಾದಿಂದ.
- ಬೇಸರ ಹೀಗೆ ಏನಾದ್ರೂ ಒಂದ ಕಪ್ ಟೀ ಕುಡಿಯುತ್ತಾರೆ.
- ನಿಮಗೆ ಪ್ರತಿದಿನ ಚಾಯ್ ಕುಡಿಯುವ ಅಭ್ಯಾಸವಿದೆಯೇ?

Tea for Anti-aging : ಭಾರತೀಯರ ದಿನ ಪ್ರಾರಂಭವಾಗುವುದೇ ಒಂದು ಕಪ್ ಚಹಾದಿಂದ. ತಲೆನೋವು, ಒತ್ತಡ, ಬೇಸರ ಹೀಗೆ ಏನಾದ್ರೂ ಒಂದ ಕಪ್ ಟೀ ಕುಡಿದ್ರೆ ತಕ್ಷಣ ಮಾಯವಾಗುತ್ತೆ ಅಂತ ಕೆಲವರು ತಿಳಿದುಕೊಂಡಿದ್ದಾರೆ. ಜಹ ಅವರಿಗೆ ಬೂಸ್ಟ್ ಇದ್ದ ಹಾಗೆ. ಒಂದು ವೇಳೆ ನಿಮಗೆ ಪ್ರತಿದಿನ ಚಾಯ್ ಕುಡಿಯುವ ಅಭ್ಯಾಸವಿದೆಯೇ? ಇದ್ರೆ ಈ ಸುದ್ದಿ ನಿಮಗಾಗಿ.
ಹೌದು.. ಪ್ರತಿ ದಿನ ಟೀ ಕುಡಿಯುವುದರಿಂದ ಸೌಂದರ್ಯ ಹೆಚ್ಚಾಗುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಚಾಯ್ ಬಗ್ಗೆ ಸಂಶೋಧನೆ ಮಾಡಿದ ನಂತರ ಅವರು ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಯುರೋಪ್ ಮತ್ತು ಚೀನಾದಲ್ಲಿ ಯುವಕರು ಮತ್ತು ವಯಸ್ಕರ ಮೇಲೆ ಸಂಶೋಧನೆ ನಡೆಸಿ, ಅವರ ರಕ್ತದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷಿಸಿದ ನಂತರ ಈ ವಿಷಯ ಬಹಿರಂಗಗೊಂಡಿವೆ. ವಾಸ್ತವವಾಗಿ ಟೀ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಆದರೆ, ಈ ವಿಜ್ಞಾನಿಗಳ ಸಂಶೋಧನೆ ಹೀಗೆ ಹೇಳುತ್ತಿದೆ..
ಅನೇಕರಿಗೆ, ಬೆಳಿಗ್ಗೆ ಎದ್ದಾಗ ಚಹಾ, ಟಿಫಿನ್ ತಿಂದ ನಂತರ ಮತ್ತು ಸಂಜೆ ಟೀ ಕುಡಿಯುವ ಅಭ್ಯಾಸ ಹೊಂದಿರುತ್ತಾರೆ. ಆದ್ರೆ ವಿಜ್ಞಾನಿಗಳು ಹೇಳುತ್ತಿರುವುದು ಎಲ್ಲಾ ಬಗೆಯ ಚಹಾಗಳ ಬಗ್ಗೆ ಅಲ್ಲ, ಬದಲಿದೆ ಗ್ರೀನ್ ಚಹಾ, ಕಪ್ಪು ಚಹಾ ಒಳ್ಳೆಯದು ಎಂದು ವಿಜ್ಞಾನಿಗಳು ಹೇಳುತ್ತಾರೆ.
ಗ್ರೀನ್ ಟೀ ಮತ್ತು ಬ್ಲ್ಯಾಕ್ ಟೀ ಆಂಟಿ ಏಜಿಂಗ್ ಗುಣಗಳನ್ನು ಹೊಂದಿವೆ ಎಂದು ಚೀನಾದ ಸಂಶೋಧನಾ ತಂಡ ಬಹಿರಂಗಪಡಿಸಿದೆ. ಈ ಎರಡು ಚಹಾಗಳಲ್ಲಿರುವ ಆರೋಗ್ಯಕರ ರಾಸಾಯನಿಕಗಳು ದೇಹದಲ್ಲಿನ ಕೆಲವು ಜೀವಕೋಶಗಳು ಹಾನಿಗೊಳಗಾಗುವುದನ್ನು ತಡೆಯುತ್ತದೆ ಮತ್ತು ವಯಸ್ಸಿನ ಲಕ್ಷಣಗಳ ಮೇಲೆ ಪರಿಣಾಮ ಬೀರುತ್ತದೆ ಹಾಗೂ ಎಲ್ಲಾ ಅಂಗಗಳ ಸರಿಯಾದ ಕಾರ್ಯನಿರ್ವಹಣೆಗೆ ಉಪಯುಕ್ತವಾಗಿದೆ ಎಂದು ಹೇಳಲಾಗುತ್ತದೆ.
37-73 ವರ್ಷ ವಯಸ್ಸಿನ 5,998 ಬ್ರಿಟನ್ ಮತ್ತು ಚೀನಾದ 7,931 ಜನರ ಮೇಲೆ ಈ ಸಂಶೋಧನೆ ನಡೆಸಲಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಗ್ರೀನ್ ಟೀ, ಬ್ಲಾಕ್ ಟೀ ಕುಡಿಯುವವರ ಬಗ್ಗೆ ಈ ಸಂಶೋಧನೆ ನಡೆಸಿ ವರದಿ ನೀಡಲಾಗಿದೆ. ಚಹಾದಲ್ಲಿನ ಪಾಲಿಫಿನಾಲ್ಗಳು ಕರುಳಿನ ಮೈಕ್ರೋಬಯೋಟಾವನ್ನು ಮಾಡ್ಯುಲೇಟ್ ಮಾಡುತ್ತದೆ. ಇದು ಚಯಾಪಚಯ ಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ವಯಸ್ಸಿಗೆ ಸಂಬಂಧಿಸಿದ ಲಕ್ಷಣಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಇವುಗಳ ಜೊತೆಯಲ್ಲಿ ಕೆಫೀನ್ ಮತ್ತು ಥೈನೈನ್ ಸೌಂದರ್ಯವನ್ನು ಹೆಚ್ಚಿಸುತ್ತವೆ ಎಂದು ತಿಳಿಸಿದ್ದಾರೆ. ಅಲ್ಲದೆ, ಚಹಾ ಮಿತಿಮೀರಿ ಕುಡಿದ್ರೆ ದೇಹಕ್ಕೆ ಹಾನಿಕಾರಕವೆಂದೂ ಸಹ ಎಚ್ಚರಿಸಿದ್ದಾರೆ.
ಗಮನಿಸಿ: ವಿವಿಧ ಅಧ್ಯಯನಗಳು, ಸಂಶೋಧನೆಗಳು ಮತ್ತು ಆರೋಗ್ಯ ಜರ್ನಲ್ಗಳಿಂದ ಸಂಗ್ರಹಿಸಿದ ಮಾಹಿತಿಯನ್ನು ನಿಮ್ಮ ತಿಳುವಳಿಕೆಗಾಗಿ ಮಾತ್ರ ಇಲ್ಲಿ ಒದಗಿಸಲಾಗಿದೆ. ಇನ್ನು ಅನುಸರಿಸುವ ಮುನ್ನ ವೈದ್ಯರ ಅಭಿಪ್ರಾಯ ಪಡೆಯುವುದು ಉತ್ತಮ.. ಲೇಖನದಲ್ಲಿ ಉಲ್ಲೇಖಿಸಲಾದ ವಿಷಯಗಳಿಗೆ ಸಮಗ್ರ ಸುದ್ದಿ ಜವಾಬ್ದಾರರಾಗಿರುವುದಿಲ್ಲ..
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group: https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1