Nitya Bhavishya 17 February: ಈ ರಾಶಿಯವರು ಮಕ್ಕಳ ಜೊತೆ ಸಂತೋಷದಿಂದ ಸಮಯವನ್ನು ಕಳೆಯುವಿರಿ.

ಮೇಷ ರಾಶಿ: ದುಡುಕಿ ಏನನ್ನಾದರೂ ಮಾಡಿಕೊಳ್ಳಬಹುದು. ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಕಷ್ಟಪಡುವಿರಿ. ವಾಹನ ಚಾಲನೆಯಿಂದ ಆಯಾಸವಾದೀತು. ಸಹೋದ್ಯೋಗಿಗಳ ಜೊತೆ ತೆರೆಮರೆಯ ಗುದ್ದಾಟವಿರುವುದು. ಹತ್ತಿರದಿಂದ ತಿಳಿಯದೇ ಯಾರ ಮೇಲೂ ಆರೋಪವನ್ನು ಮಾಡುವುದು ಬೇಡ. ಮನೆಯ ಬೇಕಾದ ವಸ್ತುಗಳನ್ನು ಖರೀದಿ ಮಾಡುವಿರಿ. ವಾಹನ ಖರೀದಿಗೆ ಮನೆಯಲ್ಲಿ ಮನಸ್ಸು ಮಾಡುವುದಿಲ್ಲ. ಹತ್ತಾರು ವಿಚಾರವು ನಿಮ್ಮ ತಲೆಯಲ್ಲಿ ಓಡುವುದು. ಗೊಂದಲದಲ್ಲಿ ನೀವು ಇರಬೇಕಾದೀತು. ನಿಮ್ಮೆದುದು ಅಸಭ್ಯವಾಗಿ ಯಾರಾದರೂ ವರ್ತಿಸಿದರೆ ಅದಕ್ಕೆ ಪ್ರತಿಕ್ರಿಯೆ ಕೊಡುವುದು ಬೇಡ. ಇಂದು ಗಳಿಸಿದ ಹಣವು ಇಂದೇ ಖಾಲಿಯಾಗುವುದು. ನಿಮ್ಮನ್ನು ಕೆಲಸಕ್ಕೋಸ್ಕರ ಪ್ರಶಂಸಿಸಬಹುದು. ನಿಮ್ಮ‌ ಇಂದಿನ‌ ನೋವನ್ನು‌ ನೀವೇ ಇಟ್ಟುಕೊಳ್ಳುವಿರಿ. ನಿಮ್ಮವರನ್ನು ನೀವು ಬಿಟ್ಟಕೊಡಲು ಇಷ್ಟಪಡುವುದಿಲ್ಲ. ವಿದ್ಯಾಭ್ಯಾಸಕ್ಕೆ ಬೇಕಾದ ವಾತಾವರಣವನ್ನು ನೀವು ನಿರ್ಮಿಸಿಕೊಳ್ಳುವಿರಿ.‌

ವೃಷಭ ರಾಶಿ: ಕಾನೂನಿಗೆ ವಿರುದ್ಧವಾದ ಕಾರ್ಯಗಳಿಂದ ನಿಮಗೆ ತೊಂದರೆಯಾದೀತು. ಅಪರಿಚಿತರು ನಿಮ್ಮ ಸಖ್ಯವನ್ನು ಬಯಸಬಹುದು. ಉದ್ಯಮಕ್ಕೆ ಸಂಬಂಧಿಸಿದ ನಿರ್ಧಾರದಲ್ಲಿ ಗೊಂದಲವಿರುವುದು. ನಿಮ್ಮವರನ್ನು ಕಂಡು ನೀವು ಅಸೂಯೆಪಡಬಹುದು. ದೂರ ಪ್ರಯಾಣದಿಂದ ಆರೋಗ್ಯವು ಹದಗೆಟ್ಟು ವಿಶ್ರಾಂತಿಯನ್ನು ಪಡಯಬೇಕಾದೀತು. ಕಾರ್ಯದ ಆರಂಭದಲ್ಲಿ ಒತ್ತಡವು ಹೆಚ್ಚು ಇರುವುದು. ಉಪಕಾರದ ಕೃತಜ್ಞತೆ ಇರಲಿ. ನಿಮ್ಮ ಇಂದಿನ ಖರ್ಚಿಗೆ ಕಡಿವಾಣ ಹಾಕುವುದು ಅಸಾಧ್ಯವಾಗಬಹುದು. ದುರ್ಬಲರ ಮೇಲೆ ನೀವು ಸಿಟ್ಟಾಗುವಿರಿ. ಸಂಗಾತಿ ಮತ್ತು ಮಕ್ಕಳನ್ನು ಅವರಷ್ಟಕ್ಕೆ ಬಿಟ್ಟು ನೀವು ನಿಮ್ಮ ಕಾರ್ಯದಲ್ಲಿ ಮಗ್ನರಾಗುವಿರಿ. ಯಾವುದೇ ಕಾರ್ಯಕ್ಕೂ ನೀವು ಮುನ್ನುಗ್ಗುವುದು ಇಷ್ಟವಾಗದು. ನಿಮ್ಮ ಬಗ್ಗೆ ಇತರರು ಏನಂದುಕೊಂಡಾರು ಎಂಬ ಭಯವಿರುವುದು.

ಮಿಥುನ ರಾಶಿ: ಇಂದು ಯಾರಿಂದಲಾದರೂ ನಿಮಗೆ ಬೇಕಾದುದನ್ನು ಪಡೆದುಕೊಳ್ಳುವಿರಿ. ಹಲವರ ಮಾತಿನಿಂದ ನಿಮ್ಮ ನಿರ್ಧಾರವು‌ ಗೊಂದಲವಾಗಿಯೇ ಉಳಿಯುವುದು. ನೀವು ಹೊಗಳಿಕೆ ನಾಚಿಕೊಳ್ಳುವಿರಿ. ಆದರೆ ನಿಮ್ಮನ್ನು ಇನ್ನೂ ಹೆಚ್ಚು ಗುರುತಿಸಬೇಕು ಎನ್ನುವುದು ಇರುವುದು. ಏನಾದರೊಂದು ಕಾರ್ಯವನ್ನು ನೀವು ಮಾಡುತ್ತಲೇ ಇರುವುದು ನಿಮಗೆ ಇಷ್ಟವಾಗುವುದು. ಕಛೇರಿಯಲ್ಲಿ ಸ್ತ್ರೀಯರಿಂದ ಅಪಮಾನವಾಗಬಹುದು. ನಿಮ್ಮ ತಪ್ಪುಗಳು ನಿಮಗೆ ಗೊತ್ತಾಗದೇ ಇನ್ನೊಬ್ಬರು ತಿಳಿಸಬೇಕಾಗುವುದು. ಪ್ರಯಾಣವು ಅನಿವಾರ್ಯವಾದರೂ ಅದರಿಂದ ಶುಭ ಸುದ್ದಿಯು ನಿಮಗೆ ಇರುವುದು. ಪ್ರಾಣಿಗಳ ಮೇಲೆ‌ ಪ್ರೀತಿಯು ಅತಿಯಾದೀತು. ನಿಮ್ಮದೊಂದೇ ಸಮಸ್ಯೆ ಎನ್ನುವಂತೆ ಬಹಳ ಚಿಂತೆಯಿಂದ ಇರುವಿರಿ. ಇಂದು ನಿಮಗೆ ಕುಟುಂಬದ ಜೊತೆ ಇರುವುದು ಖುಷಿ ಕೊಡದು.

ಕರ್ಕ ರಾಶಿ: ಸ್ಥಿರಾಸ್ತಿಯ ವಿಚಾರಕ್ಕಾಗಿ ಕುಟುಂಬದ ಹಿರಿಯರ ಜೊತೆ ಮಾತುಕತೆ ನಡೆಸುವಿರಿ. ನಿಮ್ಮಮೇಲೇ‌ ನಿಮಗೆ ಅಪನಂಬಿಕೆ ಉಂಟಾಗಬಹುದು. ಯಾವುದೂ ಸರಿಯಾಗಿ ಕೈಗೂಡದು ಎಂಬ ಹತಾಶೆಯು ನಿಮ್ಮಲ್ಲಿ‌ ಮೂಡುವುದು. ವಿದ್ಯಾರ್ಥಿಗಳ ಕನಸು ಸಾಕಾರವಾಗಿ ಸಂತೋಷಪಡುವರು. ಉದ್ಯೋಗದಲ್ಲಿ ವರ್ಗಾವಣೆ ಆಗುವ ಸಾಧ್ಯತೆ ಇದ್ದು, ಮನೆಯಿಂದ ದೂರವಿರಬೇಕಾದೀತು. ಇಷ್ಟಾರ್ಥವು ನಿನಗೆ ಸಿದ್ಧಿಯಾಗುವ ಬಗ್ಗೆ ನಿಮಗೆ ಅನುಮಾನವಿರಲಿದೆ. ಇನ್ನೊಬ್ಬರ ಬಗ್ಗೆ ಸದಾ ಅಸಮಾಧಾನವಿರಲಿದೆ. ಕೋಪಗೊಂಡ ಸಂಗಾತಿಯನ್ನು ನೀವು ಸಮಾಧಾನ ಮಾಡಬೇಕಾದೀತು. ಅತಿಯಾದ ಆತ್ಮವಿಶ್ವಾಸವು ನಿಮ್ಮ ಕಾರ್ಯವನ್ನು ಹಾಳುಮಾಡಬಹುದು. ವ್ಯವಸ್ಥೆ ವ್ಯವಹಾರದಿಂದ ಚುರುಕುತನದ ಅವಶ್ಯಕತೆ ಇರುವುದು. ನಿಮ್ಮ‌ ಮಾತು ನೇರವಾಗಿಯೂ ಸ್ಪಷ್ಟವಾಗಿಯೂ ಇರಲಿ.‌ ಹುಡುಗಾಟದ ಮನೋಭಾವದಿಂದ ಹೊರಬರುವಿರಿ.

ಸಿಂಹ ರಾಶಿ: ಇಂದು ನೋವನ್ನು ಮನದಲ್ಲಿಯೇ ಇಟ್ಟುಕೊಂಡು ಸಂಕಟಪಡುವಿರಿ. ನೌಕರರಿಗೆ ಉದ್ಯೋಗದಲ್ಲಿ ಇರಬೇಕಾದ ಪ್ರಾಮಾಣಿಕತೆ ಕಡಿಮೆಯಾಗುವುದು. ಸತ್ಯವನ್ನು ಹೇಳುವ ತೀರ್ಮಾನವನ್ನು ಮಾಡುವಿರಿ. ಅನಾರೋಗ್ಯದಿಂದ ಕುಗ್ಗುವಿರಿ. ನಿಮ್ಮ ಮಾತುಗಳು ನೀವು ಗಳಿಸಿದ ವಿದ್ಯೆಯನ್ನು ತಿಳಿಸುವುದು. ಕೆಲವು ಘಟನೆಗಳು ನಿಮ್ಮನ್ನು ಕಾಡಬಹುದು. ಇಂದು ನಿಮಗೆ ದಾನದಲ್ಲಿ ಮನಸ್ಸಾಗುವುದು. ಹಳೆಯ ಮಿತ್ರನ ಭೇಟಿಯಾಗಿದ್ದು ಅವರ ಹೆಚ್ಚು ಸಮಯವನ್ನು ಕಳೆಯುವಿರಿ. ನಿಮ್ಮ ಮೇಲೆ‌ ನಂಬಿಕೆಯು ಕಡಿಮೆಯಾದೀತು. ಹೂಡಿಕೆಯ ವಿಚಾರದ ಬಗ್ಗೆ ಚರ್ಚೆ ನಡೆಸುವಿರಿ. ಕಛೇರಿಯಲ್ಲಿ ಒತ್ತಡದ ಕಾರ್ಯವನ್ನು ಮುಗಿಸಿದರೂ ನಿಮ್ಮಲ್ಲಿ ಉತ್ಸಾಹವು ಅಧಿಕವಾಗಿರುವುದು. ಆರ್ಥಿಕತೆಯ ಬಗ್ಗೆ ಸರಿಯಾದ ಮಾಹಿತಿ ಸಿಗದೇ ಹೂಡಿಕೆ ಕಷ್ಟವಾದೀತು.

ಕನ್ಯಾ ರಾಶಿ: ಅತಿಯಾದ ಲೋಭದಿಂದ ನಿಮ್ಮದನ್ನೂ ನೀವು ಕಳೆದುಕೊಳ್ಳುವಿರಿ. ಕಾರ್ಯದ‌ ದಕ್ಷತೆಗೆ ಮೆಚ್ಚಗೆ ಸಿಗಬಹುದು. ವಾಹನವನ್ನು ಖರೀದಿಸುವ ಮನಸ್ಸಾಗುವುದು. ಸಮಸ್ಯೆಗೆ ವೇಗದಲ್ಲಿ ಸ್ಪಂದಿಸಿ ಎಡವಟ್ಟು ಮಾಡಿಕೊಳ್ಳುವಿರಿ. ‌ಸಾವಧಾನದಿಂದ‌ ಚಿಂತಿಸುವ ಅವಶ್ಯಕತೆ ಇರಲಿದೆ. ಎಲ್ಲದಕ್ಕೂ ತಂದೆ ತಾಯಿಗಳನ್ನು ದೂರುತ್ತ ಇರುವುದು ಬೇಡ. ಬಂಧುಗಳ ನಡುವೆ ವಾಗ್ವಾದವು ನಡೆದು ವೈಮನಸ್ಯ ಉಂಟಾಗಬಹುದು. ಬೆನ್ನಿನ‌ ನೋವಿನಿಂದ ಸಂಕಟಪಡುವಿರಿ. ಸಂಗಾತಿಯು ನಿಮ್ಮ ಜೊತೆ ಸರಿಯಾಗಿ ಮಾತನಾಡದೇ ಇರಬಹುದು. ಅನಪೇಕ್ಷಿತ ಮಾತನ್ನು ಕಡಿಮೆ ಮಾಡುವುದು ಉಚಿತ. ಯಾವುದೋ ಆಲೋಚನೆಯಲ್ಲಿ ನೀವು ಮುಳುಗಿ ಕಾರ್ಯವನ್ನು ಅಸ್ತವ್ಯಸ್ತ ಮಾಡಿಕೊಳ್ಳುವಿರಿ. ರಹಸ್ಯವನ್ನು ಗೊತ್ತಾಗದಂತೆ ಹೇಳುವಿರಿ. ಅನಪೇಕ್ಷಿಯ ಮಾತನ್ನು ಆಡುವುದು ಬೇಡ.

ತುಲಾ ರಾಶಿ: ನಿಮ್ಮ ಬಂಧುಗಳಿಗೆ ನಿಮ್ಮ‌ ಮೇಲೆ‌ ಪ್ರೀತಿ ಹೆಚ್ಚಾದೀತು. ನಿಮ್ಮ ಕೆಲಸಕ್ಕೆ ತಂದೆಯಿಂದ ಆಕ್ಷೇಪ ಬರಬಹುದು. ಎಲ್ಲವನ್ನೂ ತಿಳಿದಿದ್ದೇನೆ ಎಂಬ ಮನೋಭಾವು ಎದ್ದು ತೋರುವುದು. ಹೂಡಿಕೆಯಲ್ಲಿ ವಿಶ್ವಾಸವು ಹೆಚ್ಚಾಗಲಿದೆ. ಸಣ್ಣ ವ್ಯಾಪಾರದಲ್ಲಿ ಅಲ್ಪ ಆದಾಯಕ್ಕೆ ಸಂತೋಷಪಡಬೇಕಾದೀತು. ಸಾಲ ಕೊಟ್ಟವರು ನಿಮ್ಮನ್ನು ಕೇಳುವುದು ಹಿಂಸೆಯಾದೀತು. ಕೆಲಸದ ಸುಲಭ ಮಾರ್ಗವು ನಿಮಗೆ ಸೂಚಿಸದೇ ಇರಬಹುದು. ಮಕ್ಕಳ ವಿವಾಹವನ್ನು ನಿಶ್ಚಯಿಸಿ ನಿಶ್ಚಿಂತರಾಗುವಿರಿ. ಆದಾಯವನ್ನು ಹೆಚ್ಚು ಮಾಡಿಕೊಳ್ಳಲು ನಿಮಗೆ ಆಗದು. ಆಕಸ್ಮಿಕವಾಗಿ ಸಿಕ್ಕ ಉದ್ಯೋಗವನ್ನು ಸರಿಯಾಗಿ ಬಳಸಿಕೊಳ್ಳಿ. ಬೇಡದ ಕಡೆಗೆ ನಿಮ್ಮ‌ ಮನಸ್ಸನ್ನು ಹರಿದುಬಿಡುವಿರಿ. ಬಂಧುಗಳು ನಿಮ್ಮ‌ ಬಗ್ಗೆ ಸಲ್ಲದ ಅಭಿಪ್ರಾಯವನ್ನು ಹೇಳಿಯಾರು. ಯಾರ ಮೇಲೂ ಪಕ್ಷಪಾತ ಮಡುವುದು ಬೇಡ. ದ್ವಂದ್ವವು ನಿಮ್ಮ ನೆಮ್ಮದಿಯ ಮನಸ್ಸನ್ನು ಹಾಳುಮಾಡೀತು.

ವೃಶ್ಚಿಕ ರಾಶಿ: ಸಣ್ಣದಾಗಿ ಆರಂಭವಾದ ಮಾತುಕತೆ ಕೊನೆಯಲ್ಲಿ ಕಲಹವಾಗಿ ಮುಕ್ತಾಯವಾದೀತು.‌ ಕೆಲವರ ಜೊತೆ ಮೊಂಡುತನವನ್ನು ತೋರಿಸುವಿರಿ. ಈಗಾಗಲೇ ಮಾಡಿರುವ ಹೂಡಿಕೆಯಲ್ಲಿ ಅಲ್ಪ ಪ್ರಮಾಣದ ಲಾಭದಿಂದ ಖುಷಿಯಾಗುವುದು. ನಿಮ್ಮ ಕಾರ್ಯದಲ್ಲಿ ಅನುಭವದ ಕೊರತೆ ಕಾಣಿಸಲಿದ್ದು, ಮಾರ್ಗದರ್ಶನದ ಅವಶ್ಯಕತೆ ಇರಲಿದೆ. ತಾಯಿಯ ಆರೋಗ್ಯಕ್ಕಾಗಿ ಹೆಚ್ಚು ಓಡಾಟ ಮಾಡಬೇಕಾದೀತು. ಹಿತಶತ್ರುಗಳ ವಂಚನೆಯಾಗಿರುವುದು ಸಮಯ ಸರಿದಂತೆ ಗೊತ್ತಾಗುತ್ತದೆ. ಸಂಬಂಧದಲ್ಲಿ ಸಕಾರಾತ್ಮಕ ಮಾತುಗಳು ಅಗತ್ಯ. ನೌಕರರು ನಿಮ್ಮ‌ಆಪ್ತರಾಗಿ ನಿಮ್ಮ ಕೆಲಸದಲ್ಲಿ ಭಾಗಿಯಾಗುವರು. ನಿಮ್ಮ ಸಂಪತ್ತನ್ನು ಸದುಪಯೋಗ ಮಾಡಿಕೊಳ್ಳುವ ದಾರಿಯನ್ನು ಕಂಡುಕೊಳ್ಳಿ. ಮಕ್ಕಳ ಜೊತೆ ಸಂತೋಷದಿಂದ ಸಮಯವನ್ನು ಕಳೆಯುವಿರಿ. ನೀವು ಜೊತೆಗಿದ್ದರೆ ಮಿತ್ರರು ಎಂತಹ ಕೆಲಸವನ್ನು ಮಾಡಲೂ ಹಿಂಜರಿಯರು.

ಧನು ರಾಶಿ: ಹಲವು ವರ್ಷಗಳ ಹೂಡಿಕೆಯ ಹಣವನ್ನು ನೀವು ಪಡೆಯುವಿರಿ. ಸ್ನೇಹಿತರ ಜೊತೆ ಇಂದಿನ‌ ಸಮಯವನ್ನು ಕಳಡಯುವಿರಿ. ಆತ್ಮಪ್ರಶಂಸೆಯು ಸರಿಯಾಗಿ ಕಾಣದು. ನಿಮ್ಮ ಸಾಮರ್ಥ್ಯದ ಮೇಲಿನ ವಿಶ್ವಾಸ ಕಡಿಮೆ ಆಗಲಿದೆ. ಹಿತಶತ್ರುಗಳ ಚಾಡಿ ಮಾತಿನಿಂದ ಒಳ್ಳೆಯ ಅವಕಾಶಗಳು ಕೈ ತಪ್ಪಬಹುದು. ಉದ್ಯೋಗಕ್ಕೆ ಸಂಬಂಧಿಸಿದಂತೆ ನೀವು ಬಂಧುಗಳ ಸಹಾಯವನ್ನು ಕೇಳುವಿರಿ. ಕೊಟ್ಟ ಹಣಕ್ಕೆ ಸರಿಯಾದ ಕೆಲಸವನ್ನು ಮಾಡಿಕೊಡುವಿರಿ.‌ ಗ್ರಾಹಕರಲ್ಲಿ ಸಂತುಷ್ಟಿ ಇರುವುದು. ಆಸ್ತಿಯನ್ನು ಸ್ವಂತಕ್ಕೆ ಮಾಡಿಕೊಳ್ಳುವ ಉಪಾಯವು ಹೊಳೆಯಬಹುದು. ಅಧ್ಯಾತ್ಮದಲ್ಲಿ ಹೆಚ್ಚು ತೊಡಗಿಕೊಳ್ಳುವಿರಿ. ಪ್ರೇಮ ವಿವಾಹವು ನಿಮಗೆ ಖಷಿಕೊಡದು. ಯಾರನ್ನಾದರೂ ಪ್ರೀತಿಸುವ ಮನಸ್ಸಾಗುವುದು. ನಿಮ್ಮ ಅಸ್ಮಿತೆಯನ್ನು ನೀವು ಬಿಟ್ಟಕೊಡಲಾರಿರಿ.‌ ಮನ ಬಂದಂತೆ ಮಾತನಾಡುವುದು ಸರಿಯಾಗದು.

ಮಕರ ರಾಶಿ: ನಿಮ್ಮ ಕೆಲಸದಿಂದ ಮನೆಯ ಹಿರಿಯರು ಕೋಪಗೊಳ್ಳುವರು. ಯಾರದೋ ಕಾರಣಕ್ಕೆ ನಿಮ್ಮ ಅವಕಾಶವನ್ನು ಬಿಟ್ಟುಕೊಡಬೇಕಾದೀತು. ಹಿರಿಯ ಅಧಿಕಾರಿಗಳ ಆದೇಶ ಪಾಲನೆಯಲ್ಲಿ ವ್ಯತ್ಯಾಸವಾಗಿ, ಕೆಲ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ತಾಳ್ಮೆ ಹಾಗೂ ಏಕಾಗ್ರತೆಯಿಂದ ದಿನವನ್ನು ಮುನ್ನಡೆಸುವಿರಿ. ಪಾಲುದಾರಿಕೆಯಲ್ಲಿ ನಿಮಗೆ ಸೂಕ್ತ ವ್ಯಕ್ತಿಗಳ ಕೊರತೆ ಕಾಣಿಸುವುದು. ವಿದೇಶೀಯ ವ್ಯವಹಾರದ ಮಾರ್ಗವು ನಿಮಗೆ ತೆರೆದುಕೊಳ್ಳುವುದು. ಹೂಡಿಕೆಗೆ ಒತ್ತಡವು ಇರುವುದು. ನಿಮ್ಮ‌ ಬಗ್ಗೆ ನಿಮ್ಮ ಶ್ರಮದಿಂದ ಎಣಿಸಿದಷ್ಟು ಲಾಭವು ಆಗುವುದು. ಲಾಭದ ಮುಂದೆ ಆಯಾಸವು ನಗಣ್ಯವಾಗಲಿದೆ. ಪುಣ್ಯಕ್ಷೇತ್ರಗಳ ದರ್ಶನದ ಬಗ್ಗೆ ನೀವು ಹೆಚ್ಚು ಉತ್ಸುಕರಾಗಿರುವಿರಿ. ಕಳೆದ ಸಮಯವನ್ನು ಚಿಂತಿಸಿ ಪ್ರಯೋಜನವಾಗದು. ನಿಮ್ಮ ಕಡೆಯಿಂದ ಆದ ತಪ್ಪಿಗೆ ಕ್ಷಮೆಯನ್ನು ಕೇಳಿ ಸರಿ ಮಾಡಿಕೊಳ್ಳಿ. ಹಳೆಯ ನೆನಪು ನಿಮಗೆ ಹಿತವೆನಿಸುವುದು.

ಕುಂಭ ರಾಶಿ: ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚು ಶ್ರಮಿಸಬೇಕಾಗುವುದು. ಎಲ್ಲವನ್ನೂ ನಿಮ್ಮಷ್ಟಕ್ಕೇ ಅಂದುಕೊಂಡು ಮನಸ್ಸನ್ನು ಕುಗ್ಗಿಸಿಕೊಳ್ಳುವಿರಿ. ವಿದೇಶದ ಪ್ರವಾಸಕ್ಕೆ ಯೋಜನೆ ಮಾಡಿಕೊಳ್ಳುವಿರಿ. ಸಂಗಾತಿಯ ಮಾತಿನಿಂದ ಉದ್ವೇಗಕ್ಕೆ ಒಳಗಾಗುವಿರಿ. ಮನೋರಂಜನೆಯ ಅವಧಿಯಲ್ಲಿ ಸ್ನೇಹಿತರ ಜೊತೆ ಸಮಯವನ್ನು ಕಳೆಯುವಿರಿ. ಸ್ನೇಹಿತರು ಕೊಟ್ಟ ಹಣವನ್ನು ಪುನಃ ಕೇಳಿದ್ದು ನಿಮಗೆ ಅಪಮಾನವಾಗುವುದು. ಅಪಘಾತಗಳು ಸಂಭವಿಸಬಹುದು. ನಿಮ್ಮ ಮನಸ್ಸಿಗೆ ಇಷ್ಟವಾಗದ ಘಟನೆಯು ದಿನವಿಡೀ ನಿಮ್ಮನ್ನು ಕಾಡುವುದು. ಏನನ್ನಾದರೂ ಮಾಡಬೇಕು ಎಂಬ ಮಹತ್ತರವಾದ ಯೋಜನೆಯನ್ನು ತಯಾರಿಸುವಿರಿ. ಉದ್ಯೋಗದ ಬಗ್ಗೆ ಅನೇಕ ಸಲಹೆಗಳು ಬರಬಹುದು. ಎಲ್ಲವನ್ನೂ ಸಮಾಧಾನ ಚಿತ್ತದಿಂದ ಆಲಿಸಿ. ಸಿಕ್ಕಷ್ಟಲ್ಲಿ ಸಂತೃಪ್ತಿ ಪಡುವ ಅವಶ್ಯಕತೆ ಇದೆ.

ಮೀನ ರಾಶಿ: ಇಂದು ನಿಮ್ಮ ಉಳಿತಾಯದ ಹಣವು ಯಾವುದೋ ಸಣ್ಣ ತಪ್ಪಿನಿಂದ ಖಾಲಿಯಾಗಬಹುದು. ಆದಾಯ ವೃದ್ಧಿಗೊಳಿಸಲು ಕಾನೂನಿಗೆ ವಿರುದ್ಧವಾದ ಕಾರ್ಯಗಳ‌ ಕಡೆ ಗಮನವಿರುವುದು. ಬಂಧುಗಳಿಂದ ನಿರ್ಲಕ್ಷ್ಯಕ್ಕೆ ಒಳಗಾದಂತೆ ಅನ್ನಿಸಬಹುದು. ನಿಮ್ಮ‌ ಅರೋಗ್ಯದ ಬಗ್ಗೆ ಮಕ್ಕಳು ಹೆಚ್ಚಿನ ಕಾಳಜಿ ವಹಿಸುವರು. ನಿಮ್ಮ ಒತ್ತಡಗಳು ಎಂದಿಗಿಂತ ಕಡಿಮೆ ಇರುವ ಕಾರಣ ಮನಸ್ಸು ‌ಸಮಾಧಾನದಿಂದ ಇರುವುದು. ದುರಭ್ಯಾಸದಿಂದ ದೂರವಿರಬೇಕು ಎನ್ನಿಸಬಹುದು. ಮನಸ್ಸು ಅಮೂರ್ತವಾದ ಅನಂದದಲ್ಲಿ ಇರಲಿದೆ. ಉನ್ನತವಾದ ಸ್ಥಾನಕ್ಕೆ ಏರಲು ನಿಮ್ಮೆದುರು ಅವಕಾಶವು ತೆರೆದುಕೊಳ್ಳುವುದು. ಆಪ್ತರನ್ನು ಅನುಮಾನಿಸುವುದು ಬೇಡ. ನಿಮ್ಮ ಸಂಬಂಧಿಸದ ವಿಚಾರದಲ್ಲಿ ಮಧ್ಯಪ್ರವೇಶವನ್ನು ಮಾಡುವುದು ಬೇಡ. ಸ್ವಂತ ಸ್ಥಳದ ಅಗತ್ಯವು ನಿಮಗೆ ಅರ್ಥವಾದೀತು.

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group: https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *