ಬಟ್ಟೆ ಒಗೆದ ತಕ್ಷಣ ವಾಷಿಂಗ್ ಮಷೀನ್ ಮುಚ್ಚಬಾರದು ಯಾಕೆ ಗೊತ್ತಾ..?

Tech Tips: ವಾಷಿಂಗ್ ಮಷೀನ್​ನಲ್ಲಿ ಬಟ್ಟೆ ಒಗೆಯುವುದು ಇಂದು ಅನೇಕರ ಜೀವನವನ್ನು ಸುಲಭಗೊಳಿಸಿದೆ. ಆದರೆ, ಇದನ್ನು ಸರಿಯಾಗಿ ಆರೈಕೆ ಮಾಡದಿದ್ದರೆ ದೊಡ್ಡ ಸಮಸ್ಯೆ ಉಂಟಾಗುತ್ತದೆ. ಅಲ್ಲದೆ ಬಟ್ಟೆ ಕೆಟ್ಟ ವಾಸನೆ ಬರುತ್ತಿದೆ. ಈ ಹಿಂದೆ ಬಟ್ಟೆಗಳು ಹೆಚ್ಚು ಕಲೆಯಾದರೆ ಅದನ್ನು ಕೈಯಿಂದ ಒಗೆಯುವುದು ತುಂಬಾ ಕಷ್ಟವಾಗುತ್ತಿತ್ತು. ಆದರೀಗ ವಾಷಿಂಗ್ ಮಷೀನ್​ನಿಂದ ಬಟ್ಟೆಗಳನ್ನು ತೊಳೆಯುವುದು ತುಂಬಾ ಸುಲಭ. ನಿಮಿಷಾರ್ಧದಲ್ಲಿ ಈ ಕೆಲಸವೂ ಆಗಿಬಿಡುತ್ತದೆ.

ಆದರೆ, ನೀವು ವಾಷಿಂಗ್ ಮಷೀನ್ ಬಗ್ಗೆ ಕಾಳಜಿ ವಹಿಸದಿದ್ದರೆ ಇದು ನಿಮ್ಮ ಬಟ್ಟೆಯನ್ನೂ ಹಾಳುಮಾಡುತ್ತದೆ. ಹೌದು, ವಾಷಿಂಗ್ ಮಷೀನ್ ದೀರ್ಘಕಾಲದವರೆಗೆ ಸರಿಯಾಗಿ ಕಾರ್ಯನಿರ್ವಹಿಸಲು, ನೀವು ಅದರ ಬಗ್ಗೆ ವಿಶೇಷ ಕಾಳಜಿಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಇತರ ಎಲೆಕ್ಟ್ರಾನಿಕ್ ಉಪಕರಣಗಳಂತೆ ವಾಷಿಂಗ್ ಮಷೀನ್​ ಶುಚಿತ್ವವೂ ಬಹಳ ಮುಖ್ಯ ಎಂದು ಅನೇಕರಿಗೆ ತಿಳಿದಿಲ್ಲ.

ಹೆಚ್ಚಿನವರು ಮಾಡುವ ತಪ್ಪೆಂದರೆ ವಾಷಿಂಗ್ ಮಷೀನ್​ನಲ್ಲಿ ಬಟ್ಟೆಗಳನ್ನು ಒಗೆದ ಬಳಿಕ ಅದನ್ನು ಆಫ್ ಮಾಡಿ ಮತ್ತು ಸಂಪೂರ್ಣವಾಗಿ ಮುಚ್ಚುವುದು. ಆದರೆ ಎಂದಿಗೂ ಹೀಗೆ ಮಾಡಬೇಡಿ. ಏಕೆಂದರೆ ವಾಷಿಂಗ್ ಮಷೀನ್​ನಲ್ಲಿ ಬಟ್ಟೆ ತೊಳೆದ ನಂತರ ಅದರ ಮುಚ್ಚಳವನ್ನು ಸ್ವಲ್ಪ ಹೊತ್ತು ತೆರೆದಿಡಬೇಕು. ಆದರೆ, ಇದು ಯಾಕೆ ಎಂಬ ಪ್ರಶ್ನೆ ನಿಮ್ಮಲ್ಲಿ ಉದ್ಭವಿಸಬಹುದು. ಈರೀತಿ ಮಾಡುವುದರಿಂದ ಗಾಳಿಯು ವಾಷಿಂಗ್ ಮಷೀನ್​ ಒಳಗೆ ಬಂದಿಯಾಗದೆ ಹೊರಗಡೆ ಹೋಗುತ್ತದೆ. ಅಲ್ಲದೆ, ಇದರಲ್ಲಿ ಯಾವುದೇ ಬ್ಯಾಕ್ಟೀರಿಯಾ ಇದ್ದರೆ ಅದು ಹೋರಗೋಗುತ್ತದೆ.

ಇದಲ್ಲದೇ ಒಮ್ಮೆ ಬಟ್ಟೆ ಒಗೆದ ನಂತರ ವಾಷಿಂಗ್ ಮಷೀನ್​ ಪೂರ್ತಿಯಾಗಿ ಮುಚ್ಚಿದರೆ ಕೆಟ್ಟ ವಾಸನೆ ಬರುತ್ತದೆ. ಇದು ಹೊರಹೋಗಿವುದಿಲ್ಲ. ಹಾಗಾಗಿ ಬಟ್ಟೆ ತೊಳೆದ ಕನಿಷ್ಠ 40-45 ನಿಮಿಷ ಮುಚ್ಚಳವನ್ನು ತೆರೆದಿಟ್ಟರೆ ಮುಂದಿನ ಬಾರಿ ಒಗೆಯಲು ಹಾಕಿದಾಗ ಬಟ್ಟೆ ವಾಸನೆ ಬರುವುದಿಲ್ಲ. ಇದಲ್ಲದೆ, ವಾಷಿಂಗ್ ಮಷೀನ್​ ಅನ್ನು ನಿಯಮಿತವಾಗಿ ಸ್ವಚ್ಛಗೊಳಿಸುತ್ತಿರಬೇಕು. ಇದಕ್ಕಾಗಿ ನೀವು ಅಡುಗೆಮನೆಯಲ್ಲಿ ಇರಿಸಲಾದ ವಿನೆಗರ್ (ಬಿಳಿ ವಿನೆಗರ್) ಅನ್ನು ಬಳಸಬಹುದು.

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group: https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *