ಬೆಂಗಳೂರು: ಇಂಧನ ಇಲಾಖೆ ವತಿಯಿಂದ ಎಲ್ಲಾ ಎಸ್ಕಾಂಗಳು ಸೇರಿ ಒಂದೇ ಆನ್ಲೈನ್ ಸೇವೆ ವೇದಿಕೆ ಕಲ್ಪಿಸಲು ಮಾರ್ಚ್ 10 ರಿಂದ 19 ರವರೆಗೆ 10 ದಿನಗಳ ಕಾಲ ರಾಜ್ಯದ ಎಲ್ಲಾ ಎಸ್ಕಾಂಗಳ ಆನ್ಲೈನ್ ಸೇವೆಗಳ ಸ್ಥಗಿತಗೊಳ್ಳಲಿವೆ.
ನಿನ್ನೆಯಿಂದಲೇ ರಾಜ್ಯದ ಎಲ್ಲಾ ಎಸ್ಕಾಂಗಳ ವ್ಯಾಪ್ತಿಯಲ್ಲಿ ಒಟ್ಟು ಹತ್ತು ದಿನಗಳ ಕಾಲ ವಿದ್ಯುತ್ ಬಿಲ್ ಪಾವತಿ, ಹೊಸ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಕೆ, ಹೆಸರು, ಜಕಾತಿ ಬದಲಾವಣೆ ಸೇರಿ ಯಾವುದೇ ಆನ್ಲೈನ್ ಸೇವೆಗಳು ಈ ಅವಧಿಯಲ್ಲಿ ಲಭ್ಯ ಇರುವುದಿಲ್ಲ. ಆನ್ಲೈನ್ ಸೇವೆಗಳು ಮಾತ್ರ ತಾತ್ಕಾಲಿಕವಾಗಿ ಸ್ಥಗಿತಗೊಳ್ಳಲಿದ್ದು, ವಿದ್ಯುತ್ ಪೂರೈಕೆಯಲ್ಲಿ ಯಾವುದೇ ಬದಲಾವಣೆ ಕಡಿತ ಮಾಡುವುದಿಲ್ಲವೆಂದು ಇಂಧನ ಇಲಾಖೆ ತಿಳಿಸಿದೆ. ತಂತ್ರಾಂಶ ಕಾರ್ಯಾರಂಭವಾದ ನಂತರ ಸ್ಥಿರಗೊಳ್ಳಲು ಸುಮಾರು 15 ದಿನ ಕಾಲಾವಕಾಶ ಬೇಕಿದೆ. ಈ ಅವಧಿಯಲ್ಲಿ ತಂತ್ರಾಂಶ ಕಾರ್ಯನಿರ್ವಹಣೆಯಲ್ಲಿ ಸ್ವಲ್ಪ ವ್ಯತ್ಯಯ ಉಂಟಾಗಬಹುದಾಗಿದೆ. ಆದರೆ ಸಾಫ್ಟ್ವೇರ್ ಉನ್ನತೀಕರಣ ಸಂದರ್ಭದಲ್ಲಿ ವಿದ್ಯುತ್ ಪಾವತಿ ಸಾಧ್ಯವಾಗದ ಕಾರಣ ವಿದ್ಯುತ್ ಸಂಪರ್ಕ ಕಡಿತಗೊಳಿಸುವುದಿಲ್ಲ ಎಂದು ಹೇಳಲಾಗಿದೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group: https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1