ಕಳೆದ ಕೆಲವು ದಿನಗಳಿಂದ ಬಿಸಿಲಿನ ಧಗೆ ಹೆಚ್ಚಾಗುತ್ತಿದೆ. ಹೊರಗಡೆ ಕಾಲಿಡಲು ಸಾಧ್ಯವಾಗುತ್ತಿಲ್ಲ. ಯಾಕಾದ್ರೂ ಬೇಸಿಗೆ ಕಾಲ ಶುರುವಾಗಿದೆ ಎನ್ನುವಂತಾಗಿದೆ. ಬಿಸಿ ಗಾಳಿ, ಉರಿ ಉರಿ ಸೆಕೆಯನ್ನು ತಡೆದುಕೊಳ್ಳಲು ಆಗುತ್ತಿಲ್ಲ. ಹೀಗಾಗಿ ಹೆಚ್ಚಿನವರು ತಣ್ಣನೆಯ ಪಾನೀಯಗಳತ್ತ ಮುಖ ಮಾಡುತ್ತಿದ್ದಾರೆ. ಈಗಾಗಲೇ ಮಾರುಕಟ್ಟೆ ಯಲ್ಲಿ ಜ್ಯೂಸ್ ಗಳಿಗೆ ಬಾರಿ ಬೇಡಿಕೆ ಬಂದಾಗಿದೆ. ಮನೆಯಲ್ಲೇ ಲಭ್ಯವಿರುವ ಬಾರ್ಲಿ ಹಾಗೂ ಎಳ್ಳಿನಿಂದ ಕೂಲ್ ಆಗಿಸುವ ಪಾನೀಯವನ್ನು ಹತ್ತೇ ಹತ್ತು ನಿಮಿಷದಲ್ಲಿ ಮಾಡಿ ಕುಡಿಯಬಹುದು.

ಬೇಸಿಗೆಯ ಸಮಯದಲ್ಲಿ ಉರಿ ಬಿಸಿಲು ಸೆಕೆಯ ನಡುವೆ ಬಾಯಾರಿಕೆ ಹೆಚ್ಚು. ಎಷ್ಟೇ ನೀರು ಕುಡಿದರೂ ಆಗಾಗ ತಣ್ಣನೆಯ ಏನಾದರೂ ಬೇಕು ಎಂದೆನಿಸುತ್ತದೆ. ಅದಲ್ಲದೇ ಸುಡು ಬಿಸಿಲಿನ ಪರಿಣಾಮವಾಗಿ ದೇಹದಲ್ಲಿ ಸಹಜವಾಗಿ ನೀರಿನಂಶ ಕಡಿಮೆಯಾಗುತ್ತದೆ. ಇದರಿಂದಾಗಿ ಸುಸ್ತು, ವಿಪರೀತ ದಾಹ, ಉರಿಮೂತ್ರ ಹೀಗೆ ನಾನಾ ರೀತಿಯ ಆರೋಗ್ಯ ಸಮಸ್ಯೆಗಳು ಕಾಡುವುದೇ ಹೆಚ್ಚು. ಬೇಸಿಗೆಯ ಸಮಯದಲ್ಲಿ ದೇಹಕ್ಕೆ ನೀರು ಮಾತ್ರ ಸಾಕಾಗುವುದಿಲ್ಲ. ದೇಹವನ್ನು ತಣ್ಣಗೆ ಇರಿಸುವ ದ್ರವ ರೂಪದ ಆಹಾರ ಸೇವನೆಯೂ ಉತ್ತಮವಾಗಿದೆ. ಮನೆಯಲ್ಲೇ ಕೆಲ ಜ್ಯೂಸ್ ಮಾಡಿ ಕುಡಿದರೆ ದೇಹಕ್ಕೂ ತಂಪು ಹಾಗೂ ಆರೋಗ್ಯವು ಉತ್ತಮವಾಗಿರುತ್ತದೆ.
ಬಾರ್ಲಿ ಜ್ಯೂಸ್ : ಬೇಕಾಗುವ ಸಾಮಗ್ರಿ:
* ಬಾರ್ಲಿ ಪುಡಿ
* ರಾಗಿಪುಡಿ
* ಶುಂಠಿ
* ಏಲಕ್ಕಿ
* ಬೆಲ್ಲ

ತಯಾರಿಸುವ ವಿಧಾನ:
* ಮೊದಲಿಗೆ ಬಾರ್ಲಿಯನ್ನು ಬಿಸಿಲಲ್ಲಿಟ್ಟು ಪುಡಿಮಾಡಿಕೊಳ್ಳಬೇಕು.
* ಗ್ಯಾಸ್ ಮೇಲೆ ನಾಲ್ಕು ಲೋಟ ನೀರು ಇಟ್ಟು ಬಿಸಿ ಮಾಡಿಟ್ಟುಕೊಳ್ಳಿ.
* ಈ ನೀರಿಗೆ ಬಾರ್ಲಿಪುಡಿ ಹಾಗೂ ರಾಗಿಪುಡಿ ಸೇರಿಸಿಕೊಳ್ಳಿ, ಗಂಟಿಲ್ಲದಂತೆ ಕಲಸಿ ಕುದಿಸಿಕೊಳ್ಳಿ. ಆಗಾಗ ಕೈಯಾಡಿಸುತ್ತಾ ಇರಿ.
* ಅದಕ್ಕೆ ಮತ್ತೆರಡು ಲೋಟ ದಪ್ಪ ಹಾಲು, ಬೆಲ್ಲ ಹಾಗೂ ಏಲಕ್ಕಿ ಪುಡಿಯನ್ನು ಹಾಕಿ. ತಣ್ಣಗಾದ ಬಳಿಕ ರುಚಿ ರುಚಿಯಾದ ಬಾರ್ಲಿ ಹಾಲು ಸವಿಯುವುದಕ್ಕೆ ಸಿದ್ಧ.
ಎಳ್ಳು ಜ್ಯೂಸ್: ಬೇಕಾಗುವ ಸಾಮಗ್ರಿ:
* ಬಿಳಿ ಎಳ್ಳು
* ತೆಂಗಿನ ತುರಿ
* ಹಾಲು
* ಬೆಲ್ಲ
* ಐಸ್ ಪೀಸ್
ಎಳ್ಳಿನ ಜ್ಯೂಸ್ ಮಾಡುವ ವಿಧಾನ :
* ಮೊದಲಿಗೆ ಎಳ್ಳನ್ನು ಹತ್ತು ನಿಮಿಷ ನೆನೆಸಿಟ್ಟುಕೊಳ್ಳಿ. ಆ ಬಳಿಕ ಎರಡು ಮೂರು ಸಲ ನೀರಿನಲ್ಲಿ ತೊಳೆದು, ತೆಂಗಿನತುರಿಯೊಂದಿಗೆ ನುಣ್ಣಗೆ ರುಬ್ಬಿಕೊಳ್ಳಿ.
* ಇದಕ್ಕೆ ಬೇಕಾಗುವಷ್ಟು ನೀರು, ಹಾಲು, ಬೆಲ್ಲ ಹಾಗೂ ಐಸ್ಪೀಸ್ ಸೇರಿಸಿಕೊಂಡರೆ ಸವಿಯಲು ಜ್ಯೂಸ್ ರೆಡಿ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group: https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1