ಈ ಬೇಸಿಗೆಗೆ ತಂಪು ತಂಪು ರಾಗಿ ಅಂಬಲಿ ಕುಡಿದು ಆರೋಗ್ಯ ಕಾಪಾಡಿಕೊಳ್ಳಿ

Health Tips: ನಮ್ಮ ರಾಜ್ಯದ ಬಯಲುಸೀಮೆ, ಅರೆ ಮಲೆನಾಡು, ಮೈಸೂರು ಭಾಗದಲ್ಲಿ ಹೆಚ್ಚಾಗಿ ಬಳಸಲಾಗುವ ರಾಗಿ ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ರಾಗಿಯಲ್ಲಿ ಹೆಚ್ಚಿನ ಪ್ರಮಾಣದ ನಾರಿನಂಶವಿದೆ ಮತ್ತು ಇದು ದೇಹದ ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಜೊತೆಗೆ ದೇಹವನ್ನು ತಂಪಾಗಿ ಇರಿಸುತ್ತದೆ.ಈ ಬಿರು ಬೇಸಿಗೆಯ ಸಮಯದಲ್ಲಿ ರಾಗಿಯನ್ನು ಹೆಚ್ಚಾಗಿ ಬಳಸುವುದು ಆರೋಗ್ಯದ ದೃಷ್ಠಿಯಿಂದ ತುಂಬಾ ಒಳ್ಳೆಯದು.

ರಾಗಿಯನ್ನು ಮುದ್ದೆ, ರಾಗಿ ರೊಟ್ಟಿ, ರಾಗಿ ದೋಸೆ, ರಾಗಿ ಹಾಲು, ಅಂಬಲಿ, ರಾಗಿ ಸಿಹಿ ಉಂಡೆ ಸೇರಿದಂತೆ ಹಲವು ರೀತಿಯಲ್ಲಿ ಬಳಸಲಾಗುತ್ತದೆ. ಈ ಬೇಸಿಗೆಯಲ್ಲಿ ರಾಗಿ ಅಂಬಲಿ ಅಥವಾ ರಾಗಿ ಗಂಜಿಯನ್ನು ಸೇವಿಸುವುದು ತುಂಬಾ ಒಳ್ಳೆಯದು. ಈ ರಾಗಿ ಅಂಬಲಿ ಅಥವಾ ಗಂಜಿ ರಾಜ್ಯದ ಹಲವು ಪ್ರದೇಶಗಳಲ್ಲಿ ಬಹಳ ಜನಪ್ರಿಯವಾಗಿದೆ. ಇದು ದೇಹದ ಉಷ್ಣತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಬಾಯಿ ಹುಣ್ಣು, ಅಜೀರ್ಣ ಅಥವಾ ಮಲಬದ್ಧತೆಯಿಂದ ಬಳಲುತ್ತಿದ್ದರೆ ರಾಗಿ ಗಂಜಿ ಕುಡಿಯುವುದು ತುಂಬಾ ಒಳ್ಳೆಯದು. ಬೆಂಗಳೂರಿನ ಅನೇಕ ರಸ್ತೆಗಳಲ್ಲಿ ಬಿರು ಬಿಸಿಲಿನ ಮಧ್ಯೆ ರಾಗಿ ಗಂಜಿ ಮಾರುವವರನ್ನು ಕಾಣಬಹುದು. ಈ ಅಂಬಲಿಯನ್ನು ತಯಾರಿಸುವುದು ಕೂಡ ತುಂಬಾ ಸುಲಭ.

ರಾಗಿ ಅಂಬಲಿಯನ್ನು ಕಡಿಮೆ ವಸ್ತುಗಳನ್ನು ಬಳಸಿ ತಯಾರಿಸಲಾಗುತ್ತದೆ. ರಾಗಿ ಹಿಟ್ಟು, ಮಜ್ಜಿಗೆ, ಉಪ್ಪು, ಈರುಳ್ಳಿ ಮತ್ತು ಕರಿಬೇವಿನ ಎಲೆಗಳನ್ನು ಬಳಸಿ ಸುಲಭವಾಗಿ ಹೆಲ್ತಿ ಡ್ರಿಕ್ಸ್ ತಯಾರಿಸಲಾಗುತ್ತದೆ.

ಇದನ್ನು ಮೊಸರು, ಉಪ್ಪಿನಕಾಯಿ, ಹಸಿ ಮೆಣಸಿನ ಕಾಯಿಯ ಜೊತೆಗೂ ತಿನ್ನಬಹುದು ಅಥವಾ ಕುಡಿಯಬಹುದು. ಇದು ಮಕ್ಕಳ ಆರೋಗ್ಯಕ್ಕೂ ಒಳ್ಳೆಯದು.ರಾಗಿ ಅಂಬಲಿ ಮಾಡಲು ಬೇಕಾದ ಪದಾರ್ಥಗಳು* 2 ರಿಂದ 3 ಚಮಚ ರಾಗಿ ಹಿಟ್ಟು* 2 ಕಪ್ ನೀರು* 1 ಕಪ್ ಹಾಲು ಅಥವಾ ಮಜ್ಜಿಗೆ* ನಿಮ್ಮ ರುಚಿಗೆ ತಕ್ಕಂತೆ ಉಪ್ಪು* ಸಣ್ಣದಾಗಿ ಹಚ್ಚಿದ ಈರುಳ್ಳಿ ಅರ್ಧ* 4 ರಿಂದ 5 ಕರಿಬೇವಿನ ಎಲೆಗಳು* ನುಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪು (ಬೇಕಿದ್ದರೆ ಬಳಸಬಹುದು)* ಚಿಕ್ಕ ತುಂಡು ಶುಂಠಿ (ಬೇಕಿದ್ದರೆ ಬಳಸಬಹುದು) ರಾಗಿ ಅಂಬಲಿ ತಯಾರಿಸುವ ವಿಧಾನಒಂದು ಬಟ್ಟಲಿನಲ್ಲಿ ರಾಗಿಹಿಟ್ಟನ್ನು ತೆಗೆದುಕೊಳ್ಳಿ. ಅರ್ಧ ಕಪ್ ನೀರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಯಾವುದೇ ಗಂಟು ಬಿಡದಂತೆ ನೋಡಿಕೊಳ್ಳಿ.

ಕುದಿಯಲು ಉಳಿದ ಒಂದೂವರೆ ಕಪ್‌ಗಳಷ್ಟು ನೀರನ್ನು ಇಟ್ಟುಕೊಳ್ಳಿ. ನೀರು ಕುದಿಯಲು ಪ್ರಾರಂಭಿಸಿದಾಗ ಮಿಕ್ಸ್ ಮಾಡಿರುವ ರಾಗಿ ಹಿಟ್ಟನ್ನು ನಿಧಾನಕ್ಕೆ ಸೇರಿಸಿ, ಉಪ್ಪು ಹಾಕಿ ಐದು ನಿಮಿಷ ಬೇಯಿಸಿಕೊಳ್ಳಿ.ನಂತರ ಸ್ಟವ್ ಆಫ್ ಮಾಡಿ ಮತ್ತು ಸಂಪೂರ್ಣವಾಗಿ ತಣ್ಣಗಾಗುವವರೆಗೆ ಕಾಯಿರಿ. ಅದಕ್ಕೆ ಉಪ್ಪಿನಕಾಯಿ ಅಥವಾ ಮೊಸರಿನ ಜೊತೆಗೆ ಸೇರಿಸಿ ಕುಡಿಯಲು ಕೊಡಿ. ಬೇಕಿದ್ದರೇ ಸಣ್ಣಗೆ ಹೆಚ್ಚಿದ ಈರುಳ್ಳಿ, ನುಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪು ಮತ್ತು ಕತ್ತರಿಸಿದ ಕರಿಬೇವಿನ ಎಲೆ ಹಾಕಿ ಕೊಡಬಹುದು.ಇನ್ನು, ಗಂಜಿಯನ್ನು ಖಾರ ಮಾಡಲು ಬಯಸುವವರು ಸ್ವಲ್ಪ ಖಾರದ ಪುಡಿ ಸೇರಿಸಿ ಕುದಿಸಬಹುದು.

ಇನ್ನು ಸಿಹಿ ಮಾಡಲು ಬಯಸುವವರು ಇದಕ್ಕೆ ಸಕ್ಕರೆ ಮತ್ತು ಹಾಲು ಸೇರಿಸಿ ಗಂಜಿ ಮಾಡಿಕೊಳ್ಳಬಹುದು. ಮಸಾಲೆ ಬೇಕಿದ್ದರೇ, ನೀವು ನುಣ್ಣಗೆ ಕತ್ತರಿಸಿದ ಹಸಿರು ಮೆಣಸಿನಕಾಯಿ ಅಥವಾ ಪುಡಿಮಾಡಿದ ಮೆಣಸು ಸೇರಿಸಬಹುದು. ಜೀರಿಗೆ ಪುಡಿ ಅಥವಾ ಮೆಂತ್ಯ ಪುಡಿ ಕೂಡ ಸೇರಿಸಿ ಸವಿಯಬಹುದು.

Source: https://m.dailyhunt.in/news/india/kannada/oneindia+kannada-epaper-thatskannada/ragi+ambali+recipe+ee+besigege+tampu+tampu+raagi+ambali+kudidu+aarogya+kaapaadikolli-newsid-n591258418?sm=Y

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group: https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *