Betel leaf health benefits : ವೀಳ್ಯದೆಲೆಯನ್ನು ಜಗಿಯುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಅಂತ ಹಿರಿಯರು ಹೇಳ್ತಾರೆ. ಏಕೆಂದರೆ ಇದು ಮಲಬದ್ಧತೆಯಿಂದ ಹಿಡಿದು ಮಧುಮೇಹದವರೆಗಿನ ಎಲ್ಲಾ ಕಾಯಿಲೆಗಳಿಗೂ ಈ ಪುಟ್ಟ ಎಲೆ ರಾಮಬಾಣ. ಹಾಗಾದರೆ ವೀಳ್ಯದೆಲೆ ತಿನ್ನುವುದರಿಂದ ಆಗುವ ಲಾಭಗಳೇನು..? ತಿಳಿಯೋಣ ಬನ್ನಿ…

Betel leaf : ಆಯುರ್ವೇದದಲ್ಲಿ ವೀಳ್ಯದೆಲೆಗೆ ವಿಶೇಷ ಮಹತ್ವವಿದೆ. ಈ ಎಲೆಯು ಉತ್ತಮ ಆರೋಗ್ಯ ಪ್ರಯೋಜನಗಳನ್ನು ಹೊಂದಿದ್ದು, ಇದು ಅನೇಕ ರೀತಿಯ ಸಮಸ್ಯೆಗಳನ್ನು ನಿವಾರಿಸುತ್ತದೆ. ಹಾಗಾದರೆ ನಿತ್ಯವೂ ವೀಳ್ಯದೆಲೆ ತಿನ್ನುವುದರಿಂದ ಆಗುವ ಲಾಭಗಳೇನು ಎಂಬುದನ್ನು ಅರಿತುಕೊಳ್ಳೋಣ…
ವೀಳ್ಯದೆಲೆಯು ಗ್ಯಾಸ್ಟ್ರೋಪ್ರೊಟೆಕ್ಟಿವ್ ಗುಣಗಳನ್ನು ಹೊಂದಿದ್ದು, ಇದು ಗ್ಯಾಸ್ಟ್ರಿಕ್ ಅಲ್ಸರ್ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ ಮತ್ತು ಅಲ್ಸರ್ ರೋಗಿಗಳಿಗೆ ಪ್ರಯೋಜನಕಾರಿ.
ವೀಳ್ಯದೆಲೆಯನ್ನು ಪ್ರತಿದಿನ ತಿನ್ನುವುದರಿಂದ ಶಿಲೀಂಧ್ರಗಳ ಸೋಂಕಿನಿಂದ ಪರಿಹಾರವನ್ನು ಪಡೆಯಬಹುದು. ಇದಕ್ಕೆ ಕಾರಣ ವೀಳ್ಯದೆಲೆಯಲ್ಲಿ ಹೈಡ್ರಾಕ್ಸಿಕಾವಿಕೋಲ್ ಎಂಬ ಜೈವಿಕ ಸಂಯುಕ್ತವಿದೆ.
ಪ್ರತಿದಿನ ವೀಳ್ಯದೆಲೆಯನ್ನು ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆಯ ಸಮಸ್ಯೆಗಳು ಕಡಿಮೆಯಾಗುತ್ತವೆ. ಅಧಿಕ ರಕ್ತದ ಸಕ್ಕರೆ ಹೊಂದಿದ್ದರೆ ವೀಳ್ಯದೆಲೆಯನ್ನು ನಿಯಮಿತವಾಗಿ ಅಗಿಯಿರಿ.
ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿದ್ದವರು ವೀಳ್ಯದೆಲೆಯನ್ನು ಸೇವಿಸಬಹುದು. ವೀಳ್ಯದೆಲೆಯಲ್ಲಿರುವ ಔಷಧೀಯ ಗುಣಗಳು ಮಲಬದ್ಧತೆಗೆ ಪರಿಹಾರ ನೀಡುತ್ತದೆ.
ವೀಳ್ಯದೆಲೆ ತಿಂದರೆ ತಲೆನೋವಿನಿಂದ ಉಪಶಮನ ಪಡೆಯಬಹುದು. ವೀಳ್ಯದೆಲೆಯು ನೋವು ನಿವಾರಕ ಗುಣಗಳನ್ನು ಹೊಂದಿದ್ದು ನೋವಿನಿಂದ ಉಪಶಮನವನ್ನು ನೀಡುತ್ತದೆ.
ಇಲ್ಲಿ ನೀಡಿರುವ ಮಾಹಿತಿ ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ಪಡೆಯುವುದು ಒಳ್ಳೆಯದರು. ಈ ಮಾಹಿತಿಯನ್ನು ಸಮಗ್ರ ಸುದ್ದಿ ಖಚಿತಪಡಿಸಿಲ್ಲ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group: https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1