Reusing cooking oil side effects : ಅಡುಗೆ ಎಣ್ಣೆಯನ್ನು ಮರುಬಳಕೆ ಮಾಡುವುದು ನಾವೆಲ್ಲರೂ ಅನುಸರಿಸುತ್ತಿರುವ ಸಾಮಾನ್ಯ ಅಭ್ಯಾಸ. ಸಾಕಷ್ಟು ಜನರು ಇದನ್ನು ಮಾಡುತ್ತಾರೆ. ಆದರೆ ಇದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ ಎನ್ನುವ ವಿಚಾರ ತಿಳಿದಿರುವುದು ಮಾತ್ರ ಕೆಲವರಿಗೆ..
- ನೀವು ಅಡುಗೆ ಎಣ್ಣೆಯನ್ನು ಮರುಬಳಕೆ ಮಾಡುತ್ತೀರಾ..?
- ಕರಿದ ಎಣ್ಣೆಯನ್ನು ಮರುಬಳಕೆ ಮಾಡಿದರೆ ಆರೋಗ್ಯಕ್ಕೆ ಹಾನಿಕರ
- ʼಈ ಭಯಾನಕ ರೋಗʼದ ಬಗ್ಗೆ ಎಚ್ಚರವಿರಲಿ
![](https://samagrasuddi.co.in/wp-content/uploads/2024/04/image-31.png)
ಕ್ಯಾನ್ಸರ್ ಅಪಾಯ : ಪೂರಿ, ಪಕೋಡಗಳನ್ನು ಕರಿಯಲು ಬಳಸಿದ ಅಡುಗೆ ಎಣ್ಣೆಯನ್ನು ಮತ್ತೆ ಬಳಸುವ ಅಭ್ಯಾಸವಿರುವವರು ಈ ವಿಷಯದಲ್ಲಿ ಎಚ್ಚರದಿಂದಿರಬೇಕು. ಏಕೆಂದರೆ ಬಳಸಿದ ಅಡುಗೆ ಎಣ್ಣೆಯ ಮರು ಬಳಕೆಯು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. ಬಳಸಿದ ಎಣ್ಣೆಯನ್ನು ಬಳಸುವ ಸರಿಯಾದ ವಿಧಾನ ಯಾವುದು ಮತ್ತು ಅದನ್ನು ಎಷ್ಟು ಬಾರಿ ಬಳಸಬಹುದು ಎಂಬುದನ್ನು ಕಂಡುಹಿಡಿಯೋಣ..
ಸುಟ್ಟ ಎಣ್ಣೆಯನ್ನು ಬಳಸುವುದರಿಂದ ಹಾನಿ : ಬಳಸಿದ ಅಡುಗೆ ಎಣ್ಣೆಯನ್ನು ಮತ್ತೆ ಬಿಸಿ ಮಾಡುವುದು ಹಾಗೂ ಅಡುಗೆಗೆ ಬಳಸುವುದರಿಂದ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸಬಹುದು. ಇದು ಟ್ರಾನ್ಸ್ ಕೊಬ್ಬಿನ ಪ್ರಮಾಣವನ್ನು ದ್ವಗುಣಗೊಳಿಸುತ್ತದೆ. ಏಕೆಂದರೆ ಎಣ್ಣೆಯನ್ನು ಪದೇ ಪದೇ ಬಿಸಿ ಮಾಡುವುದರಿಂದ ಅದರಲ್ಲಿ ಸ್ವತಂತ್ರ ರಾಡಿಕಲ್‌ಗಳು ಬೆಳೆಯಲು ಪ್ರಾರಂಭಿಸುತ್ತವೆ. ಅಲ್ಲದೆ ಎಣ್ಣೆಯಲ್ಲಿರುವ ಆ್ಯಂಟಿ ಆಕ್ಸಿಡೆಂಟ್‌ಗಳು ಕಡಿಮೆಯಾಗುತ್ತವೆ. ಪದೇ ಪದೇ ಬಿಸಿ ಮಾಡುವುದರಿಂದ ಆಸಿಡ್ ಅಂಶ ಮತ್ತು ಕೆಲವು ವಿಷಕಾರಿ ಪದಾರ್ಥಗಳ ಹೆಚ್ಚಳದಿಂದಾಗಿ ಹೊಟ್ಟೆಯ ಕ್ಯಾನ್ಸರ್ ಅಪಾಯವನ್ನು ಹೆಚ್ಚಾಗುತ್ತದೆ..
ಆಹಾರದ ಗುಣಮಟ್ಟ ಮತ್ತು ರುಚಿಯ ಮೇಲೆ ಪರಿಣಾಮ : ಬಳಸಿ ಬಿಟ್ಟ ಎಣ್ಣೆಯನ್ನು ಮತ್ತೆ ಬಿಸಿ ಮಾಡಿ ಬಳಸುವುದು ಆರೋಗ್ಯಕ್ಕೆ ಹಾನಿಕಾರಕ ಎಂದು ತಜ್ಞರು ಹೇಳುತ್ತಾರೆ. ಈ ಎಣ್ಣೆಯಲ್ಲಿ ಬೇಯಿಸಿದ ಆಹಾರವೂ ಸಹ ರುಚಿಯನ್ನು ಕಳೆದುಕೊಳ್ಳುತ್ತದೆ. ಅಡುಗೆ ಎಣ್ಣೆಯ ಮರುಬಳಕೆಯು ಆಹಾರದ ಗುಣಮಟ್ಟ ಕಡಿಮೆಗೊಳಿಸುತ್ತದೆ. ಇದರಿಂದಾಗಿ ಹೊಟ್ಟೆಯ ಕ್ಯಾನ್ಸರ್, ಪಿತ್ತಕೋಶದ ಕ್ಯಾನ್ಸರ್, ಯಕೃತ್ತಿನ ಕ್ಯಾನ್ಸರ್ ಮತ್ತು ಇತರ ರೀತಿಯ ಕಾಯಿಲೆಗಳು ಬರಬಹುದು.
ಹೃದಯದ ಆರೋಗ್ಯದ ಮೇಲೆ ಪರಿಣಾಮ : ಬಳಸಿದ ಎಣ್ಣೆಯಿಂದ ತಯಾರಿಸಿದ ಆಹಾರ ಸೇವಿಸುವುದರಿಂದ ಬೊಜ್ಜು ಹೆಚ್ಚಾಗುತ್ತದೆ. ಆದಷ್ಟು ಒಮ್ಮೆ ಬಳಸಿದ ಎಣ್ಣೆಯನ್ನು ಮತ್ತೆ ಬಿಸಿ ಮಾಡಬೇಡಿ. ಬೇಯಿಸಿದ ಅಡುಗೆ ಎಣ್ಣೆಯಿಂದ ತಯಾರಿಸಿದ ಆಹಾರವನ್ನು ಸೇವಿಸುವುದರಿಂದ ಕೊಬ್ಬಿನಂಶ ಹೆಚ್ಚಾಗಿರುತ್ತದೆ. ಇದರಿಂದಾಗಿ ಹೃದಯ ಸಂಬಂಧಿ ಕಾಯಿಲೆಗಳ ಅಪಾಯವೂ ಹೆಚ್ಚಾಗುತ್ತದೆ.
ಅಡುಗೆ ಎಣ್ಣೆಯನ್ನು ಬಳಸುವ ಸರಿಯಾದ ವಿಧಾನ : ಮೊದಲು ಅಡುಗೆ ಎಣ್ಣೆಯನ್ನು ಚೆನ್ನಾಗಿ ಶೋಧಿಸಿ ನಂತರ ಕಡಿಮೆ ಉರಿಯಲ್ಲಿ ಬಳಸಿ. ಅಡುಗೆ ಎಣ್ಣೆಯನ್ನು ದೋಸೆ ಹುರಿಯಲು, ಚಪಾತಿ ಮಾಡಲು, ತರಕಾರಿಗಳನ್ನು ಬೇಯಿಸಲು ಇತ್ಯಾದಿಗಳಿಗೆ ಬಳಸಬಹುದು. ಕರಿಯಲು ಬಳಸಿದ ಅಡುಗೆ ಎಣ್ಣೆಯನ್ನು ಮತ್ತೆ ಬಳಸಬೇಡಿ.
Source: https://zeenews.india.com/kannada/health/side-effects-of-reusing-cooking-oil-in-kannada-201596
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group: https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1