ಬೆಂಗಳೂರು : ನಿಯಂತ್ರಣ ತಪ್ಪಿ 120 ಅಡಿ ಎತ್ತರದ ತೇರು ನೆಲಕ್ಕುರುಳಿದ ಘಟನೆ ಬೆಂಗಳೂರು ಹೊರವಲಯದ ಅನೇಕಲ್ ತಾಲೂಕಿನ ಹೀಲಲಿಗೆ ಗ್ರಾಮದಲ್ಲಿ ನಡೆದಿದೆ.

ನೂರಾರು ವರ್ಷಗಳ ಇತಿಹಾಸ ಹೊಂದಿರುವ ಪ್ರಸಿದ್ದ ಹುಸ್ಕೂರು ಮದ್ದೂರಮ್ಮ ಜಾತ್ರೆಯಲ್ಲಿ ಈ ಅವಘಡ ಸಂಭವಿಸಿದೆ. ದೇವಿಯ ಪವಾಡದಿಂದ ಜನರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ, ಅದೃಷ್ಟವಶಾತ್ ಒಬ್ಬರಿಗೂ ಯಾವುದೇ ಗಾಯಗಳಾಗಿಲ್ಲ.
ಹೀಲಲಿಗೆ ಗ್ರಾಮದಿಂದ ಹುಸ್ಕೂರಿಗೆ ಬರುತ್ತಿದ್ದ ತೇರು ಕಮ್ಮಸಂದ್ರದ ಹೈಪರ್ ಮಾರ್ಕೆಟ್ ತಿರುವಿನಲ್ಲಿ ಪಲ್ಟಿಯಾಗಿದೆ. ತೇರು ಪಲ್ಟಿಯಾಗುವ ದೃಶ್ಯಗಳು ಭಕ್ತರ ಮೊಬೈಲ್ ನಲ್ಲಿ ಸೆರೆಯಾಗಿದೆ. ತೇರು ಪಲ್ಟಿಯಾಗುತ್ತಿದ್ದಂತೆ ಜನರು ಹೋ..ಎಂದು ಕೂಗುತ್ತಾ ಪಕ್ಕಕ್ಕೆ ಸರಿದಿದ್ದಾರೆ. ಮಕ್ಕಳ ಆಟಿಕೆ ವಸ್ತುವಿನಂತೆ ತೇರು ನೆಲಕ್ಕುರುಳಿದೆ.
ಪಲ್ಟಿಯಾಗುತ್ತಿದ್ದಂತೆ ಜನರು ಹೋ..ಎಂದು ಕೂಗುತ್ತಾ ಪಕ್ಕಕ್ಕೆ ಸರಿದಿದ್ದಾರೆ. ಮಕ್ಕಳ ಆಟಿಕೆ ವಸ್ತುವಿನಂತೆ ತೇರು ನೆಲಕ್ಕುರುಳಿದೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group: https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1