Virat Kohli Record: ವಿರಾಟ್ ಕೊಹ್ಲಿ ಅಬ್ಬರ ಇನ್ನಷ್ಟು ಬಿರುಸಾಯಿತು. ಈ ಮೂಲಕ ರಾಜಸ್ಥಾನ್ ವಿರುದ್ಧ ಭರ್ಜರಿ ಶತಕವನ್ನೂ ಸಿಡಿಸಿದರು. ಈ ಮೂಲಕ ವಿರಾಟ್ ಕೊಹ್ಲಿ ಐಪಿಎಲ್ ನಲ್ಲಿ 8ನೇ ಶತಕ ಸಿಡಿಸಿ ಮಿಂಚಿದ್ದಾರೆ. ಅಲ್ಲದೇ ಐಪಿಎಲ್ 17ನೇ ಸೀಸನ್ನ ಮೊದಲ ಶತಕ ಸಹ ಇದೇ ಆಗಿದೆ.

ಗೆಲ್ಲೇಲಬೇಕಾದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಟಾಸ್ ಗೆದ್ದ ರಾಜಸ್ಥಾನ್ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಆದರೆ ಬ್ಯಾಟಿಂಗ್ ಆರಂಭಿಸಿದ ಬೆಂಗಳೂರು ತಂಡಕ್ಕೆ ವಿರಾಟ್ ಕೊಹ್ಲಿ ಮತ್ತು ಫಾಫ್ ಶತಕದ ಆರಂಭ ಒದಗಿಸಿದರು. ಅಂತಿಮವಾಗಿ ತಂಡವು ನಿಗದಿತ 20 ಓವರ್ಗೆ 3 ವಿಕೆಟ್ ನಷ್ಟಕ್ಕೆ 183 ರನ್ ಸಿಡಿಸಿದರು..
ಜೈಪುರದ ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ ರಾಜಸ್ಥಾನ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB vs RR) ನಡುವಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಭರ್ಜರಿ ಬ್ಯಾಟಿಂಗ್ ಮಾಡುವ ಮತ್ತೊಮ್ಮೆ ಅಬ್ಬರಿಸಿ ಬೊಬ್ಬಿರಿದರು. ಈ ಮೂಲಕ ಐಪಿಎಲ್ 17ನೇ ಸೀಸನ್ ನಲ್ಲಿ 3ನೇ ಅರ್ಧಶತಕ ಸಿಡಿಸಿದರು.
ಇದಾದ ಬಳಿಕ ವಿರಾಟ್ ಕೊಹ್ಲಿ ಅಬ್ಬರ ಇನ್ನಷ್ಟು ಬಿರುಸಾಯಿತು. ಈ ಮೂಲಕ ರಾಜಸ್ಥಾನ್ ವಿರುದ್ಧ ಭರ್ಜರಿ ಶತಕವನ್ನೂ ಸಿಡಿಸಿದರು. ಈ ಮೂಲಕ ವಿರಾಟ್ ಕೊಹ್ಲಿ ಐಪಿಎಲ್ ನಲ್ಲಿ 8ನೇ ಶತಕ ಸಿಡಿಸಿ ಮಿಂಚಿದ್ದಾರೆ. ಅಲ್ಲದೇ ಐಪಿಎಲ್ 17ನೇ ಸೀಸನ್ನ ಮೊದಲ ಶತಕ ಸಹ ಇದೇ ಆಗಿದೆ. ಕೊಹ್ಲಿ ಆರ್ಆರ್ ವಿರುದ್ಧ 67 ಎಸೆತದಲ್ಲಿ 9 ಬೌಂಡರಿ ಮತ್ತು 4 ಸಿಕ್ಸ್ ಮೂಲಕ 100 ರನ್ ಗಳಿಸಿ ಅಬ್ಬರಿಸಿದರು. ಮೂಲಕ ತಂಡವು ನಿಗದಿತ 20 ಓವರ್ಗೆ 72 ಎಸೆತದಲ್ಲಿ 12 ಫೋರ್ ಮತ್ತು 4 ಸಿಕ್ಸ್ ಮೂಲಕ 113 ರನ್ ಸಿಡಿಸಿದರು.
ರಾಜಸ್ಥಾನ್ ರಾಯಲ್ಸ್ ತಂಡದ ವಿರುದ್ಧ ಭರ್ಜರಿ ಬ್ಯಾಟಿಂಗ್ ಮಾಡಿದ ವಿರಾಟ್ ಕೊಹ್ಲಿ ಕೇವಲ 39 ಎಸೆತದಲ್ಲಿ ಭರ್ಜರಿ ಅರ್ಧಶತಕ ಸಿಡಿಸಿದರು. ಈ ಮೂಲಕ ವಿರಾಟ್ ಕೊಹ್ಲಿ ಹೊಸ ದಾಖಲೆಯನ್ನೂ ನಿರ್ಮಿಸಿದರು. ವಿರಾಟ್ ಕೊಹ್ಲಿ ಈಗ ಐಪಿಎಲ್‌ನಲ್ಲಿ 7500 ರನ್‌ಗಳನ್ನು ತಲುಪಿದ್ದಾರೆ, ಐಪಿಎಲ್ ಇತಿಹಾಸದಲ್ಲಿ ಈ ಸಾಧನೆ ಮಾಡಿದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಹೌದು, ವಿರಾಟ್ ಈ ಬೃಹತ್ ಮೈಲುಗಲ್ಲು ಕೇವಲ 34 ರನ್‌ಗಳ ಅಂತರದಲ್ಲಿದ್ದರು. ಈ ವೇಳೆ ರಾಜಸ್ಥಾನ್ ವಿರುದ್ಧ 7ನೇ ಓವರ್‌ನಲ್ಲಿಯೇ ಕೊಹ್ಲಿ ಈ ಸಾಧನೆಯನ್ನು ಪೂರ್ಣಗೊಳಿಸಿದರು. ಈ ಮೂಲಕ ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿ ಅಗ್ರಸ್ಥಾನಕ್ಕೇರಿದ್ದಾರೆ..
ಇನ್ನು, ಐಪಿಎಲ್ ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿ ನೋಡುವುದಾರೆ, 7500* ರನ್ ಗಳಿಸುವ ಮೂಲಕ ವಿರಾಟ್ ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ. 2ನೇ ಸ್ಥಾನದಲ್ಲಿ ಶಿಖರ್ ಧವನ್ ಇದ್ದು 6755 ರನ್ ಸಿಡಿಸಿದ್ದಾರೆ. ಬಳಿಕ 3ನೇ ಸ್ಥಾನದಲ್ಲಿ ಡೇವಿಡ್ ವಾರ್ನರ್: 6545 ರನ್, 4ನೇ ಸ್ಥಾನದಲ್ಲಿ ರೋಹಿತ್ ಶರ್ಮಾ: 6280 ರನ್ ಮತ್ತು 5ನೇ ಸ್ಥಾನದಲ್ಲಿ ಸುರೇಶ್ ರೈನಾ: 5528 ರನ್ ಗಳಿಸಿದ್ದಾರೆ.
ಇನ್ನು, ವಿರಾಟ್ ಕೊಹ್ಲಿ ಐಪಿಎಲ್ ನಲ್ಲಿ ಈವರೆಗೆ 241 ಪಂದ್ಯವನ್ನಾಡಿದ್ದು, 7500ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಈ ವೇಳೆ ವಿರಾಟ್ 660ಕ್ಕೂ ಬೌಂಡರಿ ಮತ್ತು 245 ಸಿಕ್ಸ್ ಸಿಡಿಸಿದ್ದಾರೆ. ಇನ್ನು, ಕೊಹ್ಲಿ 130.3ರ ಸರಾಸರಿಯಲ್ಲಿ ರನ್ ಮಳೆಯನ್ನೇ ಹರಿಸಿದ್ದಾರೆ. ಈ ಮೂಲಕ ಕೊಹ್ಲಿ ಐಪಿಎಲ್ ನಲ್ಲಿ ಅಗ್ರ ಸ್ಕೋರರ್ ಆಗಿದ್ದಾರೆ.
ಆರ್ಸಿಬಿ ಪ್ಲೇಯಿಂಗ್ 11: ಫಾಫ್ ಡುಪ್ಲೇಸಿಸ್ (ನಾಯಕ), ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಗ್ಲೇನ್ ಮ್ಯಾಕ್ಸ್ವೆಲ್, ಕ್ಯಾಮರೂನ್ ಗ್ರೀನ್, ಸೌರಭ್ ಚೌಹಾಣ್, ರೀಸೆ ಟೋಪ್ಲೆ, ಮಾಯಾಂಕ್ ದಾಗರ್, ಮೊಹಮ್ಮದ್ ಸಿರಾಜ್, ಯಶ್ ದಯಾಳ್.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group: https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1