Ways to Remove Tartar from Your Teeth :ಹಲ್ಲುಗಳ ಮೇಲೆ ಪ್ಲೇಕ್ ಸಂಗ್ರಹವಾಗಿದ್ದರೆ,ಅದನ್ನು ತೆಗೆದುಹಾಕಲು ಕೆಲವು ಮನೆಮದ್ದುಗಳನ್ನು ಅನುಸರಿಸಬಹುದು. ಈ ಮನೆ ಮದ್ದುಗಳ ಸಹಾಯದಿಂದ ಕೇವಲ 5 ನಿಮಿಷಗಳಲ್ಲಿ ಹಲ್ಲುಗಳ ಮೇಲೆ ಸಂಗ್ರಹವಾದ ಪ್ಲೇಕ್ ಅನ್ನು ಸುಲಭವಾಗಿ ತೆಗೆದುಹಾಕಬಹುದು.
- ಹಲ್ಲುಗಳ ಮೇಲೆ ಹಳದಿ ಕಲೆಗಳು ಅಂಟಿಕೊಂಡಾಗ ಹಲ್ಲುಗಳು ತುಂಬಾ ಅಸಹ್ಯವಾಗಿ ಕಾಣುತ್ತವೆ.
- ಹಲ್ಲು ಮತ್ತು ಒಸಡುಗಳ ನಡುವೆ ಹಳದಿ ಅಥವಾ ಬಿಳಿ ಪದರಗಳು ಕಾಣಿಸಿಕೊಳ್ಳುತ್ತವೆ
- ಹಲ್ಲಿನ ಮೇಲೆ ಸಂಗ್ರಹವಾಗಿರುವ ಪ್ಲೇಕ್ ಒಂದು ರೀತಿಯ ಮುಜುಗರವನ್ನು ಉಂಟು ಮಾಡುತ್ತದೆ.

Ways to Remove Tartar from Your Teeth :ನಿಮ್ಮ ಹಲ್ಲುಗಳ ಮೇಲೆ ಹಳದಿ ಕಲೆಗಳು ಅಂಟಿಕೊಂಡಾಗ ಹಲ್ಲುಗಳು ತುಂಬಾ ಅಸಹ್ಯವಾಗಿ ಕಾಣುತ್ತವೆ.ಈ ಹಳದಿ ಕಲೆಗಳು ಗಟ್ಟಿಯಾಗಿ ಹಲ್ಲುಗಳ ಮೇಲೆ ಪದರಗಟ್ಟಿದಂತೆ ಕುಳಿತರೆ ಅದನ್ನು ಹಲ್ಲುಗಳ ಪ್ಲೇಕ್ ಎಂದು ಕರೆಯುತ್ತಾರೆ. ಈ ಪ್ಲೇಕ್ ಕಾರಣ,ಹಲ್ಲು ಮತ್ತು ಒಸಡುಗಳ ನಡುವೆ ಹಳದಿ ಅಥವಾ ಬಿಳಿ ಪದರಗಳು ಕಾಣಿಸಿಕೊಳ್ಳುತ್ತವೆ.ಹಲ್ಲಿನ ಮೇಲೆ ಸಂಗ್ರಹವಾಗಿರುವ ಪ್ಲೇಕ್ ಒಂದು ರೀತಿಯ ಮುಜುಗರವನ್ನು ಉಂಟು ಮಾಡುತ್ತದೆ.ಆದರೆ,ಈ ಪ್ಲೇಕ್ ಕಾರಣದಿಂದ ಮುಜುಗರಕ್ಕೆ ಒಳಪಡುವ ಅಗತ್ಯವಿಲ್ಲ. ಹಲ್ಲುಗಳ ಮೇಲೆ ಪ್ಲೇಕ್ ಸಂಗ್ರಹವಾಗಿದ್ದರೆ,ಅದನ್ನು ತೆಗೆದುಹಾಕಲು ಕೆಲವು ಮನೆಮದ್ದುಗಳನ್ನು ಅನುಸರಿಸಬಹುದು.ಈ ಮನೆ ಮದ್ದುಗಳ ಸಹಾಯದಿಂದ ಕೇವಲ 5 ನಿಮಿಷಗಳಲ್ಲಿ ಹಲ್ಲುಗಳ ಮೇಲೆ ಸಂಗ್ರಹವಾದ ಪ್ಲೇಕ್ ಅನ್ನು ಸುಲಭವಾಗಿ ತೆಗೆದುಹಾಕಬಹುದು.
ಕಿತ್ತಳೆ ಸಿಪ್ಪೆ :
ಕಿತ್ತಳೆ ಸಿಪ್ಪೆಯು ಹಲ್ಲುಗಳಿಂದ ಪ್ಲೇಕ್ ಅನ್ನು ತೆಗೆದುಹಾಕುವಲ್ಲಿ ಬಹಳ ಪ್ರಯೋಜನಕಾರಿ ಕೆಲಸ ಮಾಡುತ್ತದೆ. ಇದನ್ನು ನೇರವಾಗಿ ಹಲ್ಲುಗಳ ಮೇಲೆ ಬಳಸಬಹುದು.ಇದಕ್ಕಾಗಿ, ತಾಜಾ ಕಿತ್ತಳೆ ಸಿಪ್ಪೆಯನ್ನು ತೆಗೆದುಕೊಂಡು, ಹಲ್ಲುಗಳ ಮೇಲೆ ಸುಮಾರು 2 ರಿಂದ 3 ನಿಮಿಷಗಳ ಕಾಲ ಉಜ್ಜಿಕೊಳ್ಳಿ.ನಂತರ, ನಿಮ್ಮ ಹಲ್ಲುಗಳನ್ನು ಸಾಮಾನ್ಯ ನೀರಿನಿಂದ ಸ್ವಚ್ಛಗೊಳಿಸಿ.ಇದು ಹಲ್ಲುಗಳ ಮೇಲೆ ಸಂಗ್ರಹವಾದ ಪ್ಲೇಕ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಎಳ್ಳು ಬೀಜಗಳನ್ನು ಬಳಸಿ :
ಹಲ್ಲುಗಳ ಮೇಲೆ ಸಂಗ್ರಹವಾಗಿರುವ ಪ್ಲೇಕ್ ಅನ್ನು ತೆಗೆದುಹಾಕಲು ಎಳ್ಳು ಬೀಜಗಳನ್ನು ಬಳಸುವುದು ತುಂಬಾ ಪ್ರಯೋಜನಕಾರಿಯಾಗಿದೆ. ಇದು ಹಲ್ಲುಗಳ ಮೇಲೆ ಹಲ್ಲಿನ ಸ್ಕ್ರಬ್‌ನಂತೆ ಕೆಲಸ ಮಾಡುತ್ತದೆ. ಇದಕ್ಕಾಗಿ ನೀವು ಎಳ್ಳನ್ನು ಅಗಿಯಬಹುದು.ಎಳ್ಳನ್ನು ಅಗಿದ ನಂತರ ಇದನ್ನು ನುಂಗಬೇಡಿ. ಇದಲ್ಲದೇ ಎಳ್ಳನ್ನು ಒರಟಾಗಿ ಅರೆದು ಹಲ್ಲಿನ ಮೇಲೆ ಹಚ್ಚಿದರೆ ಪ್ಲೇಕ್ ಸಮಸ್ಯೆ ಕಡಿಮೆಯಾಗುತ್ತದೆ.
ಗ್ಲಿಸರಿನ್ ಮತ್ತು ಅಲೋವೆರಾ :
ಹಲ್ಲುಗಳಿಂದ ಪ್ಲೇಕ್ ಅನ್ನು ತೆಗೆದುಹಾಕಲು ಅಲೋವೆರಾ ಮತ್ತು ಗ್ಲಿಸರಿನ್ ಅನ್ನು ಬಳಸಬಹುದು.ಅಲೋವೆರಾ ಒಂದು ಆಯುರ್ವೇದ ಔಷಧವಾಗಿದ್ದು, ಇದು ತ್ವಚೆಯ ಸೌಂದರ್ಯವನ್ನು ವೃದ್ಧಿಸುತ್ತದೆ. ಹಲ್ಲುಗಳ ಹೊಳಪನ್ನು ಸುಧಾರಿಸುತ್ತದೆ.ಇದನ್ನು ಬಳಸಲು, 1 ಕಪ್ ನೀರು ತೆಗೆದುಕೊಂಡು ಅರ್ಧ ಕಪ್ ಅಡಿಗೆ ಸೋಡಾ, 4 ಟೇಬಲ್ಸ್ಪೂನ್ ತರಕಾರಿ ಗ್ಲಿಸರಿನ್, 1 ಚಮಚ ಅಲೋವೆರಾ ಜೆಲ್ ಅನ್ನು ಮಿಶ್ರಣ ಮಾಡಿ. ಸಿದ್ಧಪಡಿಸಿದ ಮಿಶ್ರಣವನ್ನು ಬ್ರಷ್ ಸಹಾಯದಿಂದ ಹಲ್ಲುಗಳ ಮೇಲೆ ಉಜ್ಜಿಕೊಳ್ಳಿ.ಇದರೊಂದಿಗೆ ಪ್ಲೇಕ್ ಸಮಸ್ಯೆಯನ್ನು ಕಡಿಮೆ ಮಾಡಬಹುದು.
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Samagra suddi ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.)
Source: https://zeenews.india.com/kannada/health/remedy-to-remove-palque-from-teeth-within-5-minut-202784
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group: https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1