Health Care Tips:ಹಾಲಿಗೆ ಸಕ್ಕರೆ ಬದಲು ಬೆಲ್ಲ ಹಾಕಿ ಕುಡಿಯಿರಿ ;ಆರೋಗ್ಯದಲ್ಲಾಗುತ್ತೆ ಮ್ಯಾಜಿಕ್!

ಸಿಹಿ ತಿಂಡಿಗಳಲ್ಲಿ ಸಿಹಿಕಾರಕವಾಗಿ ಬೆಲ್ಲವನ್ನು ಬಳಸುವುದೇ ಹೆಚ್ಚು. ಈ ಮಧುಮೇಹಿಗಳು ಸಕ್ಕರೆಗಿಂತ ಬೆಲ್ಲವೇ ಬೆಸ್ಟ್ ಎನ್ನಬಹುದು. ಈ ಬೆಲ್ಲದಲ್ಲಿ ಜೀವಸತ್ವಗಳು, ಖನಿಜಗಳು, ಪ್ರೋಟೀನ್, ಕ್ಯಾಲ್ಸಿಯಂ ಮತ್ತು ಕಬ್ಬಿಣದಂತಹ ಅಗತ್ಯ ಪೋಷಕಾಂಶಗಳಿವೆ. ಹೀಗಾಗಿ ಈ ಬೆಲ್ಲ ಸೇವನೆಯಿಂದ ಆರೋಗ್ಯ ಪ್ರಯೋಜನಗಳು ಅಧಿಕ. ಅದಲ್ಲದೇ ಹಾಲಿಗೆ ಬೆಲ್ಲ ಹಾಕಿ ಸೇವಿಸುವುದರಿಂದ ನಾನಾ ರೀತಿಯ ಆರೋಗ್ಯ ಸಮಸ್ಯೆಗಳನ್ನು ದೂರವಾಗಿಸಿಕೊಳ್ಳಬಹುದು.

ಹಾಲಿಗೆ ಬೆಲ್ಲ ಹಾಕಿ ಸೇವಿಸುವುದರಿಂದ ದೇಹದಲ್ಲಿರುವ ಅಧಿಕ ಕೊಬ್ಬು ಕಡಿಮೆಯಾಗುತ್ತದೆ. ಸ್ಥೂಲಕಾಯ ನಿವಾರಣೆಯಾಗಿ ದೇಹವನ್ನು ಆರೋಗ್ಯಯುತವಾಗಿಸುತ್ತದೆ.

ಬೆಲ್ಲದ ಹಾಲಿನಲ್ಲಿ ನೈಸರ್ಗಿಕ ಆಂಟಿ ಬಯೋಟಿಕ್‌ ಮತ್ತು ಆಂಟಿ ವೈರಲ್‌ ಗುಣಗಳು ಅಧಿಕವಾಗಿದ್ದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಅರೋಗ್ಯ ಸಮಸ್ಯೆಗಳು ಕಾಡದಂತೆ ನೋಡಿಕೊಳ್ಳುತ್ತದೆ.

ಬೆಲ್ಲದ ಹಾಲಿನ ಸೇವನೆಯಿಂದಾಗಿ ರಕ್ತಹೀನತೆ ಸಮಸ್ಯೆ ನಿವಾರಣೆಯಾಗುತ್ತದೆ.

ಬೆಲ್ಲದ ಹಾಲಿನಲ್ಲಿರುವ ಪೋಷಕಾಂಶಗಳು ಕೂದಲಿನ ರಕ್ಷಣೆಗೆ ಪ್ರಯೋಜನಕಾರಿ. ಇದು ಕೂದಲಿನ ಹೊಳಪನ್ನು ಹೆಚ್ಚಿಸಿ, ಕೂದಲು ಉದುರುವುದು ಹಾಗೂ ತಲೆಹೊಟ್ಟಿನ ಸಮಸ್ಯೆಯು ನಿವಾರಿಸುತ್ತದೆ.

    ತಿಂಗಳ ಮುಟ್ಟಿನ ಸಮಯದಲ್ಲಿ ಕಾಡುವ ಅತಿಯಾದ ಹೊಟ್ಟೆ ನೋವು, ಬೆನ್ನು ನೋವಿಗೆ ಈ ಬೆಲ್ಲದ ಹಾಲು ಉತ್ತಮವಾದ ಔಷಧಿಯಾಗಿದೆ. ಇದು ನೋವನ್ನು ಕಡಿಮೆ ಮಾಡುತ್ತದೆ.

    ವಯಸ್ಸಾದಾಗ ಕಾಡುವ ಕೀಲು ನೋವು ಸಮಸ್ಯೆ, ಸಂಧಿವಾತದಂತಹ ಸಮಸ್ಯೆಯನ್ನು ದೂರ ಮಾಡುತ್ತದೆ.

    Source : https://tv9kannada.com/health/milk-with-jaggery-what-are-the-health-benefits-of-drinking-jaggery-in-milk-siu-813770.html

    ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

    WhatsApp Group: https://chat.whatsapp.com/KnDIfiBURQ9G5sLEJLqshk

    Facebook page: https://www.facebook.com/samagrasudii

    Sharechat: https://sharehat.com/profile/edu514826335?d=n

    Twitter: https://twitter.com/SuddiSamagra

    Threads: https://www.threads.net/@samagrasuddi.co.in

    Instagram: https://www.instagram.com/samagrasuddi.co.in/

    Telegram: https://t.me/+E1ubNzdguQ5jN2Y1

    Leave a Reply

    Your email address will not be published. Required fields are marked *