ಕಾಲಿನಲ್ಲಿ ಈ ಲಕ್ಷಣಗಳು ಕಂಡು ಬಂದರೆ ಅರ್ಥ ಮಾಡಿಕೊಳ್ಳಿ ಕಿಡ್ನಿ ಆರೋಗ್ಯ ಹದಗೆಡುತ್ತಿದೆ ಎಂದು

Kidney damage Symptoms :ಮೂತ್ರ ಪಿಂಡದಲ್ಲಿಯೇ ಸಮಸ್ಯೆ ಕಾಣಿಸಿಕೊಂಡರೆ  ದೇಹದ ಇತರ ಅಂಗಗಳ ಮೇಲೆಯೂ ಪರಿಣಾಮ ಬೀರುತ್ತದೆ.  ಮೂತ್ರಪಿಂಡದಲ್ಲಿ ಸಣ್ಣ ಸಮಸ್ಯೆ ಕಾಣಿಸಿಕೊಂಡರೂ ಅದರ ಲಕ್ಷಣ ಕಾಲುಗಳಲ್ಲಿ  ಗೋಚರಿಸುತ್ತದೆ.

  • ಮೂತ್ರಪಿಂಡ ಅಥವಾ ಕಿಡ್ನಿ ನಮ್ಮ ದೇಹದ ಬಹಳ ಮುಖ್ಯ ಅಂಗ.
  • ದೇಹದಿಂದ ಹೆಚ್ಚುವರಿ ದ್ರವವನ್ನು ಹೊರ ಹಾಕುವ ಕೆಲಸವನ್ನು ಮೂತ್ರಪಿಂಡ ಮಾಡುತ್ತದೆ.
  • ಮೂತ್ರಪಿಂಡ ಆರೋಗ್ಯವಾಗಿದ್ದರೆ, ದೇಹದ ಇತರ ಅಂಗಗಳು ಕೂಡಾ ಸರಿಯಾಗಿ ಕಾರ್ಯ ನಿರ್ವಹಿಸುತ್ತದೆ

Kidney damage Symptoms : ಮೂತ್ರಪಿಂಡ ಅಥವಾ ಕಿಡ್ನಿ ನಮ್ಮ ದೇಹದ ಬಹಳ ಮುಖ್ಯ ಅಂಗ. ದೇಹದಿಂದ ಹೆಚ್ಚುವರಿ ದ್ರವವನ್ನು ಹೊರ ಹಾಕುವ ಕೆಲಸವನ್ನು ಮೂತ್ರಪಿಂಡ ಮಾಡುತ್ತದೆ. ಮಾತ್ರವಲ್ಲ ಇದರೊಂದಿಗೆ ರಕ್ತವನ್ನು ಶುದ್ದೀಕರಿಸುವ ಕೆಲಸ ಕೂಡಾ ಮಾಡುತ್ತದೆ.ಮೂತ್ರಪಿಂಡ ಆರೋಗ್ಯವಾಗಿದ್ದರೆ, ದೇಹದ ಇತರ ಅಂಗಗಳು ಕೂಡಾ ಸರಿಯಾಗಿ ಕಾರ್ಯ ನಿರ್ವಹಿಸುವುದು ಸಾಧ್ಯವಾಗುತ್ತದೆ.ಆದರೆ,ಮೂತ್ರ ಪಿಂಡದಲ್ಲಿಯೇ ಸಮಸ್ಯೆ ಕಾಣಿಸಿಕೊಂಡರೆ  ದೇಹದ ಇತರ ಅಂಗಗಳ ಮೇಲೆಯೂ ಪರಿಣಾಮ ಬೀರುತ್ತದೆ.  ಮೂತ್ರಪಿಂಡದಲ್ಲಿ ಸಣ್ಣ ಸಮಸ್ಯೆ ಕಾಣಿಸಿಕೊಂಡರೂ ಅದರ ಲಕ್ಷಣ ಕಾಲುಗಳಲ್ಲಿ  ಗೋಚರಿಸುತ್ತದೆ. 

ಕಿಡ್ನಿ ಡ್ಯಾಮೇಜ್ ಆಗಿರುವ ಲಕ್ಷಣಗಳು : 
ಕಾಲುಗಳಲ್ಲಿ ಕಾಣಿಸಿಕೊಳ್ಳುವ ನೋವು :

ಮೂತ್ರಪಿಂಡವು ಸರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗದೇ ಹೋದಾಗ ನಮ್ಮ ರಕ್ತದಲ್ಲಿ ವಿಷ ಮತ್ತು ಕೊಳಕು ಸಂಗ್ರಹಗೊಳ್ಳಲು ಪ್ರಾರಂಭವಾಗುತ್ತದೆ. ಇದರಿಂದಾಗಿ ದೇಹದ ಎಲ್ಲಾ ಭಾಗಗಳಿಗೂ ಸರಿಯಾಗಿ ರಕ್ತ ಪೂರೈಕೆ ಆಗುವುದಿಲ್ಲ. ದೇಹದ ಎಲ್ಲಾ ಭಾಗಗಳಿಗೂ ರಕ್ತ ಪೂರೈಕೆಯಾಗದ ಕಾರಣ ಯಾವುದೇ ಸಣ್ಣ ಕೆಲಸ ಮಾಡಿದರೂ ಸುಸ್ತಾಗುತ್ತದೆ.ಕಾಲುಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ.ಇದು ಮೂತ್ರಪಿಂಡಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎನ್ನುವುದರ ಸ್ಪಷ್ಟ ಸಂಕೇತವಾಗಿದೆ.

ಒಣ ಮತ್ತು ಒರಟು ಚರ್ಮ : 
ಮೂತ್ರಪಿಂಡಗಳು ದೇಹದಿಂದ ವಿಷವನ್ನು ಹೊರ ಹಾಕಲು ಸಾಧ್ಯವಾಗದೇ  ಹೋದಾಗ, ದೇಹದಲ್ಲಿ ಕೆಂಪು ರಕ್ತ ಕಣಗಳು ವೃದ್ದಿಯಾಗುವುದಿಲ್ಲ.ಇದು ದುರ್ಬಲ ಮೂಳೆಗಳು ಮತ್ತು ಒರಟು ಚರ್ಮಕ್ಕೆ ಕಾರಣವಾಗುತ್ತದೆ.ಚರ್ಮವು ಅದರ ಬಣ್ಣವನ್ನು ಕಳೆದುಕೊಳ್ಳುವುದರಿಂದ ಚರ್ಮವು ನಿರ್ಜೀವಗೊಂಡು ಶುಷ್ಕವಾಗುತ್ತಾ ಹೋಗುತ್ತದೆ.ಒಣ ಮತ್ತು ಒರಟು ಚರ್ಮ ಕೂಡಾ ಮೂತ್ರಪಿಂಡ ಕಾಯಿಲೆಯ ಪ್ರಮುಖ ಲಕ್ಷಣವಾಗಿದೆ.

ಸ್ನಾಯುಗಳಲ್ಲಿ ಕಾಣಿಸಿಕೊಳ್ಳುವ ಸೆಳೆತ : 
ಮೂತ್ರಪಿಂಡಗಳು ಸರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗದೇ ಹೋದಾಗ ದೇಹದಲ್ಲಿ ಎಲೆಕ್ಟ್ರೋಲೈಟ್ ಅಸಮತೋಲನದ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದರಿಂದಾಗಿ ಸ್ನಾಯು ಸೆಳೆತ ಕಾಣಿಸಿಕೊಳ್ಳುತ್ತದೆ. ದೇಹದಲ್ಲಿ ಕ್ಯಾಲ್ಸಿಯಂ ಪ್ರಮಾಣ ಕಡಿಮೆಯಾಗಿ,ರಂಜಕವನ್ನು ಸರಿಯಾಗಿ ನಿಯಂತ್ರಿಸಲು ಸಾಧ್ಯವಾಗದಿದ್ದಾಗ,ಸ್ನಾಯು ಸೆಳೆತ ಪ್ರಾರಂಭವಾಗುತ್ತದೆ.

ಪಾದಗಳಲ್ಲಿ ನೋವು : 
ದೇಹದಲ್ಲಿ ಟಾಕ್ಸಿನ್‌ಗಳು ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹವಾದಾಗ, ಅದು ನೇರವಾಗಿ ಪರಿಣಾಮ ಬೀರುವುದು ಪಾದಗಳ ಮೇಲೆ. ಹೀಗಾಗಿ ಪಾದಗಳು ಊದಿಕೊಳ್ಳುತ್ತವೆ.ಮೂತ್ರಪಿಂಡವು ಸರಿಯಾಗಿ ಕಾರ್ಯನಿರ್ವಹಿಸಲು ಅಸಮರ್ಥವಾದಾಗ  ಸೋಡಿಯಂ ರಿಟೆನ್ಶನ್ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಹೀಗಾದಾಗ ಪಾದಗಲಲ್ಲಿ ನೋವು ಕಾಣಿಸಿಕೊಳ್ಳುತ್ತದೆ.ಊತವೂ ಇರುತ್ತದೆ. 

( ಸೂಚನೆ : ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಸಮಗ್ರ ಸುದ್ದಿ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ.)

Source : https://zeenews.india.com/kannada/health/these-symptoms-on-feet-shows-the-problems-in-kidney-205085

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group: https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

 

Leave a Reply

Your email address will not be published. Required fields are marked *