Daughters of Ambani Family :ಅಂಬಾನಿ ಸಹೋದರರಾದ ಅನಿಲ್ ಅಂಬಾನಿ ಮತ್ತು ಮುಖೇಶ್ ಅಂಬಾನಿ ಬಗ್ಗೆ ಎಲ್ಲರಿಗೂ ತಿಳಿದಿರುತ್ತದೆ. ಆದರೆ ಅವರ ಇಬ್ಬರು ಸಹೋದರಿಯರ ಬಗ್ಗೆ ಕೆಲವೇ ಕೆಲವರಿಗೆ ಮಾತ್ರ ಮಾಹಿತಿ ಇದೆ. ಪ್ರಚಾರದ ವಿಷಯದಲ್ಲಿ ಇವರಿ ದೂರ ಉಳಿದಿದ್ದಾರೆಯಾದರೂ ವ್ಯಾಪಾರ ಮತ್ತು ಸಂಪತ್ತಿನ ವಿಷಯದಲ್ಲಿ ಸಹೋದರರಿಗೆ ಸಮಾನವಾಗಿ ನಿಂತಿದ್ದಾರೆ.

Daughters of Ambani Family : ಏಷ್ಯಾದ ಶ್ರೀಮಂತ ಉದ್ಯಮಿ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಯಾರಿಗೆ ತಾನೇ ಗೊತ್ತಿಲ್ಲ.ಅವರ ಪತ್ನಿ ನೀತಾ ಅಂಬಾನಿ,ಮಕ್ಕಳಾದ ಆಕಾಶ್,ಇಶಾ ಮತ್ತು ಅನಂತ್ ಅಂಬಾನಿ ಯಾವಾಗಲೂ ಸುದ್ದಿಯಲ್ಲಿರುತ್ತಾರೆ. ಅಂಬಾನಿ ಸಹೋದರಿಯರಾದ ನೀನಾ ಕೊಠಾರಿ ಮತ್ತು ದೀಪ್ತಿ ಸಲಗಾಂವ್ಕರ್ ಬಗ್ಗೆ ಹೆಚ್ಚಿನವರಿಗೆ ಮಾಹಿತಿ ಇಲ್ಲ. ಆದರೆ ಆಸ್ತಿ ಸಂಪತ್ತಿನ ವಿಚಾರದಲ್ಲಿ ಇವರು ಕೂಡಾ ಸಹೋದರರಿಗೆ ಸರಿ ಸಮಾನವಾಗಿ ನಿಲ್ಲುತ್ತಾರೆ.
ಏಷ್ಯಾದ ಶ್ರೀಮಂತ ಉದ್ಯಮಿ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಯಾರಿಗೆ ತಾನೇ ಗೊತ್ತಿಲ್ಲ.ಅವರ ಪತ್ನಿ ನೀತಾ ಅಂಬಾನಿ, ಮಕ್ಕಳಾದ ಆಕಾಶ್, ಇಶಾ ಮತ್ತು ಅನಂತ್ ಅಂಬಾನಿ ಕೂಡಾ ಎಲ್ಲರಿಗೂ ಪರಿಚಯ.ಅಂಬಾನಿ ಸಹೋದರರಾದ ಅನಿಲ್ ಅಂಬಾನಿ ಮತ್ತು ಮುಖೇಶ್ ಅಂಬಾನಿ ಬಗ್ಗೆ ಎಲ್ಲರಿಗೂ ತಿಳಿದಿರುತ್ತದೆ. ಆದರೆ ಅವರ ಇಬ್ಬರು ಸಹೋದರಿಯರ ಬಗ್ಗೆ ಕೆಲವೇ ಕೆಲವರಿಗೆ ಮಾತ್ರ ಮಾಹಿತಿ ಇದೆ. ಪ್ರಚಾರದ ವಿಷಯದಲ್ಲಿ ಇವರು ದೂರ ಉಳಿದಿದ್ದಾರೆಯಾದರೂ ವ್ಯಾಪಾರ ಮತ್ತು ಸಂಪತ್ತಿನ ವಿಷಯದಲ್ಲಿ ಸಹೋದರರಿಗೆ ಸಮಾನವಾಗಿ ನಿಂತಿದ್ದಾರೆ.
ಮುಖೇಶ್ ಅಂಬಾನಿಗೆ ಇಬ್ಬರು ಸಹೋದರಿಯರಿದ್ದಾರೆ.ನೀನಾ ಕೊಠಾರಿ ಮತ್ತು ದೀಪ್ತಿ ಸಲ್ಗಾವ್ಕರ್.ಪ್ರಚಾರದಿಂದ ದೂರ ಉಳಿದಿರುವ ಅಂಬಾನಿ ಕುಟುಂಬದ ಸಹೋದರಿಯರಿಬ್ಬರೂ ಕಾರ್ಪೊರೇಟ್ ಜಗತ್ತಿನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಅಕ್ಕ ನೀನಾ ಕೊಠಾರಿ, ಕೊಠಾರಿ ಶುಗರ್ಸ್ ಮತ್ತು ಕೆಮಿಕಲ್ಸ್ ಲಿಮಿಟೆಡ್‌ನ ಅಧ್ಯಕ್ಷರಾಗಿದ್ದಾರೆ. ಇವರು ಬಹುಕೋಟಿ ವ್ಯವಹಾರವನ್ನು ನಿರ್ವಹಿಸುತ್ತಿದ್ದಾರೆ. ಈ ಕಂಪನಿಯು ದೇಶೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಾರ ಮಾಡುತ್ತದೆ.
ಮುಖೇಶ್ ಅಂಬಾನಿ ಮತ್ತು ಅನಿಲ್ ಅಂಬಾನಿಯವರ ಸಹೋದರಿ ನೀನಾ ಕೊಠಾರಿ, 2003 ರಲ್ಲಿ ಕಾಫಿ ಮತ್ತು ಫುಡ್ ಚೈನ್ ನೊಂದಿಗೆ ತಮ್ಮ ವ್ಯಾಪಾರ ವೃತ್ತಿಜೀವನವನ್ನು ಪ್ರಾರಂಭಿಸಿದರು.ಸಹೋದರರ ಸಹಾಯವಿಲ್ಲದೆ ತನ್ನ ಸ್ವಂತ ವ್ಯವಹಾರವನ್ನು ಸ್ಥಾಪಿಸಿದವರು. 1986 ರಲ್ಲಿ, ನೀನಾ ಕೊಠಾರಿ ಉದ್ಯಮಿ ಭದ್ರಶ್ಯಾಮ್ ಕೊಠಾರಿ ಅವರನ್ನು ವಿವಾಹವಾದರು.2015 ರಲ್ಲಿ ಪತಿ ಕ್ಯಾನ್ಸರ್‌ನಿಂದ ನಿಧನರಾದ ನಂತರ, ನೀನಾ ಕೊಠಾರಿ ಕೊಠಾರಿ ಶುಗರ್ಸ್ ಮತ್ತು ಕೆಮಿಕಲ್ಸ್ ಲಿಮಿಟೆಡ್‌ನ ಜವಾಬ್ದಾರಿಯನ್ನು ವಹಿಸಿಕೊಂಡರು. ವರದಿಗಳ ಪ್ರಕಾರ, ನೀನಾ ಕೊಠಾರಿ ಅವರ ನಿವ್ವಳ ಆಸ್ತಿ ಮೌಲ್ಯ 52.4 ಕೋಟಿ ರೂ.
ದೀಪ್ತಿ ಸಲ್ಗಾಂವ್ಕರ್ ನಾಲ್ವರು ಒಡಹುಟ್ಟಿದವರಲ್ಲಿ ಕಿರಿಯವರು. ಕಾನೂನು ಅಧ್ಯಯನದ ನಂತರ, ಅವರು ತಮ್ಮ ಸಹೋದರ ಮುಖೇಶ್ ಅಂಬಾನಿಯವರ ಸ್ನೇಹಿತ ದತ್ತರಾಜ್ ಸಲ್ಗಾಂವ್ಕರ್ ಅವರನ್ನು ವಿವಾಹವಾದರು.ದತ್ತರಾಜ್ ಗೋವಾದ ಖ್ಯಾತ ಉದ್ಯಮಿ. ವ್ಯಾಪಾರದ ಜೊತೆಗೆ ದತ್ತರಾಜ್ ಸಲಗಾಂವ್ಕರ್ ಫುಟ್ಬಾಲ್ ತಂಡದ ಭಾಗವಾಗಿದ್ದಾರೆ. ವರದಿಗಳ ಪ್ರಕಾರ, ದೀಪ್ತಿ ಸುಮಾರು 1 ಬಿಲಿಯನ್ ಡಾಲರ್ ನಿವ್ವಳ ಸಂಪತ್ತನ್ನು ಹೊಂದಿದ್ದಾರೆ.
ಕ್ರಿಶಾ ಶಾ ತಮ್ಮದೇ ಆದ ಡಿಸ್ಕೋ ಕಂಪನಿಯನ್ನು ಪ್ರಾರಂಭಿಸಿದರು. ಡಿಸ್ಕೋ ಸಾಮಾಜಿಕ ನೆಟ್‌ವರ್ಕಿಂಗ್ ಪ್ಲಾಟ್‌ಫಾರ್ಮ್ ಆಗಿದ್ದು, ಅದರ ಸಿಒಒ ಕ್ರಿಶಾ ಶಾ.ಇದಲ್ಲದೆ, ಅವರು ತಮ್ಮ ತಂದೆಯ ಕಂಪನಿಯಲ್ಲಿ ನಿರ್ದೇಶಕರಾಗಿಯೂ ಕೆಲಸ ಮಾಡುತ್ತಾರೆ. ಅನಿಲ್ ಅಂಬಾನಿ ಅವರ ಹಿರಿಯ ಮಗ ಜೈ ಅನ್ಮೋಲ್ ಅನಿಲ್ ಅಂಬಾನಿ ಅವರ ಪತ್ನಿ ಕ್ರಿಶಾ ಶಾ.ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಿಂದ ಉತ್ತೀರ್ಣರಾದ ಕ್ರಿಶಾ ತಮ್ಮದೇ ಆದ ಸಾಮಾಜಿಕ ಜಾಲತಾಣ ಕಂಪನಿಯನ್ನು ನಡೆಸುತ್ತಿದ್ದಾರೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group: https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1