Rashi Bhavishya: 2024 ಏಪ್ರಿಲ್ 25 ಗುರುವಾರದಂದು 12 ರಾಶಿಗಳ ರಾಶಿಫಲ ಹೇಗಿದೆ ಎನ್ನುವುದು ತಿಳಿದುಕೊಳ್ಳಿ. ಈ ದಿನ ಯಾರಿಗೆ ಯೋಗ, ಶುಭ ಸಂಯೋಗ, ಗ್ರಹಗಳ ಸ್ಥಾನ ಬದಲಾವಣೆಗಳಿಂದ ಮೇಷದಿಂದ ಮೀನ ರಾಶಿವರೆಗಿನ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಇಂದಿನ ಶುಭಕಾಲ ಹೇಗಿದೆ? ಯಾವ ರಾಶಿಯವರಿಗೆ ಅದೃಷ್ಟ ಕಾದಿದೆ ಎಂಬಿತ್ಯಾದಿ ಮಾಹಿತಿಯನ್ನು ನಿತ್ಯ ಭವಿಷ್ಯದಿಂದ ತಿಳಿಯಿರಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ: ಅಶ್ವಿನೀ, ಮಾಸ: ಚೈತ್ರ, ಪಕ್ಷ: ಶುಕ್ಲ, ವಾರ: ಗುರು, ತಿಥಿ: ದ್ವಿತೀಯಾ, ನಿತ್ಯನಕ್ಷತ್ರ: ಅನೂರಾಧಾ, ಯೋಗ: ವ್ಯತಿಪಾತ್, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 14 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 47 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 02:05 ರಿಂದ 03:39ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 06:14 ರಿಂದ 07:48 ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 09:22 ರಿಂದ 10:57ರ ವರೆಗೆ.
ಮೇಷ ರಾಶಿ : ಇಂದು ನಿಮಗೆ ಗೊತ್ತಿಲ್ಲದೇ ದೈವವೊಂದು ನಿಮ್ಮನ್ನು ಅನುಕೂಲವಾದ ವಾತಾವರಣಕ್ಕೆ ಕರೆದೊಯ್ಯುತ್ತಿದೆ ಎನ್ನುವುದು ನಿಮಗೆ ಆಶ್ಚರ್ಯಕರ ಎನಿಸುವುದು. ಅದನ್ನು ಸ್ವೀಕರಿಸುವ ಮನಸ್ಸನ್ನು ಬೆಳೆಸಿಕೊಳ್ಳುವುದು ಉತ್ತಮ. ಕಳೆದುಹೋದ ಬಗ್ಗೆ ನೆನೆನೆನೆದು ಕೊರಗಿ ಕಣ್ಣೀರಾಗುವುದಕ್ಕಿಂತ ಉತ್ತಮ ಆಲೋಚನೆಗಳಿಂದ ಮುಂದಿನದನ್ನು ಚಿಂತಿಸಿ. ಇಂದು ನೀವು ದೊಡ್ಡ ಸಮಸ್ಯೆಗಳಿಂದ ಪರಿಹಾರವನ್ನು ಪಡೆಯಬಹುದು. ಗಾಯವನ್ನು ಹೆಚ್ಚು ಮಾಡಿಕೊಳ್ಳುವ ಸಾಧ್ಯತೆ ಇದೆ. ನಿಮ್ಮ ನ್ಯಾಯಯುತವಾದ ವಿಷಯಕ್ಕೂ ವಿರೋಧವಿರಬಹುದು. ಯಾರಿಂದಲೂ ಏನನ್ನೂ ಪಡೆಯುವ ಮನಸ್ಸಾಗದು. ಯಾವುದನ್ನೂ ತೋರಿಕೆಗೆ ಮಾಡುವುದು ಬೇಡ. ಏಕಾಂತದಲ್ಲಿ ಇರಲು ನಿಮಗೆ ಅನಿವಾರ್ಯವಾದೀತು. ನೀವು ಯಾರಿಂದಲೂ ಸಲಹೆಯನ್ನು ಪಡೆಯಲು ಇಷ್ಟಪಡುವುದಿಲ್ಲ.
ವೃಷಭ ರಾಶಿ : ಮನಸ್ಸಿನ ನಿಯಂತ್ರಣವೇ ನಿಮ್ಮ ಗುಟ್ಟಾಗಿದ್ದು, ಎಲ್ಲರೊಂದಿಗೆ ಸೌಹಾರ್ದವಾಗಿ ಇರಲಿದ್ದೀರಿ. ಅತಿಯಾದ ಪ್ರಯಾಣದಿಂದ ಅನಾರೋಗ್ಯ ಉಂಟಾಗುವ ಸಾಧ್ಯತೆ ಇದೆ. ಕಛೇರಿಯಲ್ಲಿ ನಿಮ್ಮ ಕೆಲಸಗಳನ್ನು ಕಂಡು ನಿಮ್ಮನ್ನು ಪ್ರಶಂಸಿಸಿದರೂ ನಿಮ್ಮೊಳಗೆ ಆತಂಕ ಇರುವುದು. ಹೊಸ ಕೆಲಸವನ್ನು ಆರಂಭಿಸುವ ಹುನ್ನಾರ ನಡೆಸುವಿರಿ. ನಂಬುಗೆಯನ್ನು ಉಳಿಸಿಕೊಳ್ಳುವ ಕಾರ್ಯವನ್ನು ಮಾಡಬೇಕು. ನಿಮ್ಮನ್ನು ಇಷ್ಟಪಟ್ಟವರೊಡನೆ ಸಮಯವನ್ನು ಕಳೆಯಿರಿ. ಉದ್ಯೋಗಕ್ಕಾಗಿ ಪಡೆಯುವ ಪ್ರಯತ್ನಗಳು ಸಫಲವಾಗುವುವು. ಧನಾತ್ಮಕ ಮತ್ತು ಋಣಾತ್ಮಕ ಅಂಶಗಳನ್ನು ವಿಭಾಗ ಮಾಡಿ. ಇದು ಸಮಸ್ಯೆಯನ್ನು ಪರಿಹರಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಮಕ್ಕಳಿಗೆ ಬೇಕಾದ ವಸ್ತುಗಳನ್ನು ಕೊಡಿಸುವಿರಿ. ಅಧಿಕ ಓಡಾಟದಿಂದ ದಣಿವಾಗಲಿದೆ. ಸಂಗಾತಿಯಿಂದ ಅಧಿಕ ಸಂಪತ್ತನ್ನು ನಿರೀಕ್ಷಿಸುವಿರಿ.
ಮಿಥುನ ರಾಶಿ : ವಿದ್ಯಾರ್ಥಿಗಳು ಶ್ರದ್ಧೆಯಿಂದ ಅಭ್ಯಾಸದ ಕಡೆ ಗಮನವಿಡಿ. ಅದೇ ಉತ್ತರವಾಗಲಿದೆ. ನಿಮ್ಮ ಎಂದಿನ ನಿಚ್ಚಲ ಮನಸ್ಸಿನಿಂದ ವಿಚಲಿತರಾಗಬೇಡಿ. ಶೈಕ್ಷಣಿಕ ಪ್ರಗತಿಯನ್ನು ಸಾಧಿಸಬಹುದಾಗಿದೆ. ನಿಮ್ಮ ಕಿವಿ ಮಾತು ಅನೇಕರಿಗೆ ಸ್ಫೂರ್ತಿಯಾಗಬಹುದು. ಒಂದಿಲ್ಲೊಂದು ವಿಷಯಗಳಿಂದ ಸುಖವನ್ನು ಪಡೆಯುವ ನಿಮಗೆ ಮುಂಬರುವ ವಿಷಯಗಳನ್ನು ಹೇಗೆ ನಿಭಾಯಿಸಬೇಕು ಎನ್ನುವ ಸ್ಪಷ್ಟತೆಯನ್ನು ಇಟ್ಟುಕೊಂಡಿರುತ್ತೀರಿ. ಶತ್ರುಗಳಿಂದ ಎಚ್ಚರವಾಗಿರಿ. ಸಂತೋಷದ ಸಮಯವನ್ನು ಮೆಲುಕು ಹಾಕುವಿರಿ. ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಿ. ಅನುಭವಿ ವ್ಯಕ್ತಿಗಳ ಜೊತೆ ಸಂಪರ್ಕ ಸಾಧಿಸುವ ಮೂಲಕ ಭವಿಷ್ಯದಲ್ಲಿ ಲಾಭವನ್ನು ಗಳಿಸುವಿರಿ. ಯಾವ ಕಾರಣಕ್ಕೂ ಸಾಲವನ್ನು ಮಾಡಲು ಹೋಗುವುದು ಬೇಡ. ನೀವು ಕಾರ್ಯದಲ್ಲಿ ಮಗ್ನರಾಗಿದ್ದು ಯಾವ ವಿಷಯಕ್ಕೂ ಭಾಗಿಯಾಗಲಾರಿರಿ.
ಕರ್ಕ ರಾಶಿ : ಇಂದು ನೀವು ಸಂಗಾತಿಯ ಜೊತೆ ದೂರದ ಊರಿಗೆ ಪ್ರಯಾಣ ಮಾಡುವಿರಿ. ನಿಮ್ಮೊಳಗಿದ್ದ ಮೋಡಗಟ್ಟಿದ ವಾತಾವರಣ, ಕರಗಿಹರೊಯವುದು. ಮಕ್ಕಳಿಂದ ಮಾನಸಿಕ ಹಿಂಸೆ ಎದುರಾದೀತು. ಖರ್ಚು ಹೆಚ್ಚಾಯಿತು ಎನ್ನುವ ಭಯವಿರುವುದು. ಉದ್ಯಮಿಗಳಿಗೆ ವ್ಯಾಪಾರಕ್ಕೆ ಸಂಬಂಧಿಸಿದ ಅನಿರೀಕ್ಷಿತ ಪ್ರಯಾಣವು ಬರಲಿದೆ. ಇಂದು ಯಾವದೋ ಆತಂಕದಲ್ಲಿ ಇರುವಿರಿ. ನಿಮ್ಮ ಕೀರ್ತಿ ಹೆಚ್ಚಲಿದೆ. ದೂರದಿಂದ ಒಳ್ಳೆಯ ಸುದ್ದಿ ಸಿಗಲಿದೆ. ಹಣಕಾಸಿನ ಸುಧಾರಣೆಗಳು ದೀರ್ಘಾವಧಿಯ ಬಾಕಿ ಮತ್ತು ಬಿಲ್ಗಳನ್ನು ಇತ್ಯರ್ಥಗೊಳಿಸುವ ಪ್ರಕ್ರಿಯೆಯನ್ನು ಸುಲಭಗೊಳಿಸುತ್ತದೆ. ದಿನಚರಿಯನ್ನು ಬದಲಾಯಿಸಿಕೊಳ್ಳುವುದು ಬೇಕಾಗಬಹುದು. ಇಂದು ಕಡಿಮೆ ಕಾರ್ಯದಲ್ಲಿ ಹೆಚ್ಚು ಲಾಭವನ್ನು ನಿರೀಕ್ಷಿಸುವಿರಿ. ಹಳೆಯ ಕೆಲಸಗಳು ವ್ಯರ್ಥವಾಗಬಹುದು. ಯಾರಿಗಾದರೂ ನೀವು ಹಣವನ್ನು ಕೊಡುವ ಸಂದರ್ಭವು ಬರಬಹುದು. ಜಾಣತನದಿಂದ ಇಂದಿನ ಕಾರ್ಯವನ್ನು ಮಾಡುವಿರಿ.
ಸಿಂಹ ರಾಶಿ : ಸಿಕ್ಕಿದ್ದರಲ್ಲಿ ಸಂತೃಪ್ತಿಯಿಂದ ಅನುಭವಿಸುವ ವ್ಯಕ್ತಿತ್ವ ಅವಶ್ಯಕ. ಇನ್ನೊಬ್ಬರನ್ನು ಗೌರವಿಸುವ ಅಭ್ಯಾಸದಿಂದ ನಿಮಗೆ ಶ್ರೇಷ್ಠವಾದ ಮಾರ್ಗವು ತೆರೆದುಕೊಳ್ಳಬಹುದು. ಸ್ಥಾನವನ್ನೂ, ಬುದ್ಧಿಯನ್ನೂ ಸ್ಥಳವನ್ನೂ ಸಂದರ್ಭವನ್ನೂ ವ್ಯಕ್ತಿಯನ್ನೂ ನಗಣ್ಯಗೊಳಿಸಬೇಡಿ. ನಿಮ್ಮ ಕುಟುಂಬದ ಬಗ್ಗೆ ಹೆಮ್ಮೆಯ ಭಾವ ಮೂಡುತ್ತದೆ. ನೀವು ಆರಾಮಾಗಿದ್ದೀರಿ ಎಂದು ತೋರಿಸಲು ಹೋಗಬೇಡಿ. ವ್ಯಾಪಾರ ಚೆನ್ನಾಗಿ ನಡೆಯಲಿದೆ. ಕುಟುಂಬದ ಬೆಂಬಲವು ಕೇಳದೆಯೂ ಸಿಗುತ್ತದೆ. ಸೃಜನಾತ್ಮಕ ಚಟುವಟಿಕೆಗಳಲ್ಲಿ ತೊಡಗುವುದರಿಂದ ವಿಶ್ರಾಂತಿ ದೊರೆಯುವುದು. ನೀವು ಕೆಲಸಕ್ಕೆ ಸಂಬಂಧಿಸಿದಂತೆ ಯಾರೊಂದಿಗಾದರೂ ಸಂವಹನ ನಡೆಸಲು ಪ್ರಯತ್ನಿಸುತ್ತಿದ್ದರೆ, ಇಂದು ನಿಮಗೆ ಅದೃಷ್ಟವನ್ನು ತರಬಹುದು. ಸಂಗಾತಿಯ ವಿಷಯದಲ್ಲಿ ವಾಗ್ವಾದ ನಡೆಯಲಿದೆ. ಮಕ್ಕಳಿಂದ ನಿಮಗೆ ಅಸಮಾಧಾನ ಇರಲಿದೆ.
ಕನ್ಯಾ ರಾಶಿ : ನಿಮ್ಮ ವ್ಯವಹಾರದಲ್ಲಿ ಕೆಲವು ಬದಲಾವಣೆಗಳನ್ನು ಮಾಡಬೇಕೆಂದು ಅನ್ನಿಸಬಹುದು. ಮನೆಯಲ್ಲಿ ಸಣ್ಣ ಸಣ್ಣ ಖರ್ಚುಗಳಿಗೆ ಧನವನ್ನು ಖರ್ಚು ಮಾಡಬೇಕಾಗಬಹುದು. ನಿಮ್ಮ ಜೀವನವನ್ನು ಲಘುವಾಗಿ ಕಾಣುವುದು ಬೇಡ. ಕಾಲವೇ ಅದಕ್ಕೆ ಉತ್ತರಿಸಬೇಕು. ಅಲ್ಲಿಯ ತನಕ ತಾಳ್ಮೆಯಿಂದ ಇರಬೇಕಾದ ಕರ್ತವ್ಯವಿದೆ. ಕಾರ್ಯ ನೆರವೇರಿದ ಖುಷಿಯು ಹೆಚ್ಚಾಗುವುದು. ಉನ್ನತ ವ್ಯಕ್ತಿಗಳ ಜೊತೆ ಸಂವಹನ ನಡೆಸುವಾಗ ಶಾಂತವಾಗಿರಿ ಮತ್ತು ನಿಮ್ಮ ವಿಶ್ವಾಸವನ್ನು ಕಾಪಾಡಿಕೊಳ್ಳಿ. ಹಿಂದಿನ ಹಣಕಾಸಿನ ನಿರ್ಧಾರಗಳು ಲಾಭದಾಯಕ ಆದಾಯವನ್ನು ನೀಡಬಹುದು. ಮನೆಯಲ್ಲಿ ನಿಮ್ಮ ಬಗ್ಗೆ ಏನಾದರೂ ಮಾತುಗಳು ಬರಬಹುದು. ವಾಹನದ ಅಪಘಾತವನ್ನು ನಿಮ್ಮದೇ ತಪ್ಪಿನಿಂದ ಆಗಲಿದೆ. ಯಾರ ಮಾತನ್ನೂ ಕೇಳುವ ಸಹನೆ ಇಲ್ಲವಾದೀತು. ವಿದ್ಯಾರ್ಥಿಗಳು ಓದಿನ ಬಗ್ಗೆ ಗಮನವನ್ನು ಕೊಡುವುದು ಕಷ್ಟವಾಗಬಹುದು.
ತುಲಾ ರಾಶಿ : ನಿಮ್ಮ ನಡೆ ಹಾಗು ನುಡಿಗಳು ವಿರೋಧದಂತೆ ಭಾಸವಾಗಬಹುದು. ಮನಸ್ಸು ಶಕ್ತಿಯನ್ನು ಉಲ್ಬಣಗೊಳಿಸಿಕೊಳ್ಳುವುದು. ಪರಿಹಾರದ ದಾರಿಗಳು ಆ ಕ್ಷಣದಲ್ಲಿ ಸ್ಫುರಿಸುವುದು. ವಿಶ್ವಸಘಾತಕ ಕಾರ್ಯಗಳಿಗೆ ಮುನ್ನುಗ್ಗದಿರಿ. ಪೆಟ್ಟು ತಿಂದರೆ ಮತ್ತೇಳುವುದು ಕಷ್ಟ. ಸುಳ್ಳಾಡಿ ಸಿಕ್ಕಿಕೊಳ್ಳಬಹುದು. ವ್ಯಾಪಾರ ಚೆನ್ನಾಗಿ ನಡೆಯಲಿದೆ. ಬುದ್ಧಿವಂತಿಕೆಯಿಂದ ಹೂಡಿಕೆ ಮಾಡಿ. ಇಂದು ನಿಮಗೆ ಹೆಚ್ಚಿನ ಶಕ್ತಿ ತುಂಬಿದ ದಿನವಾಗಿರದಿರಬಹುದು. ಕೆಲಸದಲ್ಲಿ ಧನಾತ್ಮಕ ಬದಲಾವಣೆಗಳು ನಿಮಗೆ ಪ್ರಯೋಜನಕಾರಿ ಆಗುತ್ತವೆ. ಸ್ನೇಹಿತರ ಮೇಲೆ ಕೂಗಾಡುವಷ್ಟು ಸಲುಗೆ ಬೇಡ. ಉದ್ಯೋಗದಲ್ಲಿ ಒತ್ತಡವನ್ನು ನಿವಾರಿಸಿಕೊಳ್ಳಲು ಯಾರದ್ದಾದರೂ ಸಹಾಯವನ್ನು ಪಡೆಯುವಿರಿ. ನಿಮಗೆ ಸಿಗಬೇಕಾದ ಗೌರವವು ಗೊಂದಲದಲ್ಲಿ ಇದ್ದು ಕೊನೆಗೂ ನಿಮಗೇ ಸಿಗಲಿದೆ. ತಾಳ್ಮೆಯನ್ನು ಕಳೆದುಕೊಳ್ಳದೇ ಎಲ್ಲರ ಜೊತೆ ವ್ಯವಹರಿಸಿ. ನಿಮ್ಮ ವಿರುದ್ಧ ನಡೆಸುವ ತಂತ್ರಗಾರಿಕೆಯು ಹೊಸ ವಿಧಾನದಲ್ಲಿ ಇರಲಿದೆ.
ವೃಶ್ಚಿಕ ರಾಶಿ : ಇಂದು ನಿಮಗೆ ಅಂದುಕೊಂಡಂತೆ ಏನೂ ನಡೆಯದು ಎನ್ನುವ ಸತ್ಯದರ್ಶನವಾಗಬಹುದು. ಕ್ರೀಡೆಯಲ್ಲಿ ಮನಸ್ಸುಳ್ಳವರಾಗುವಿರಿ. ಸರ್ಕಾರಿ ಕೆಲಸಗಳು ನಿಧಾನಗತಿಯಲ್ಲಿರುವುದು. ಸಿಟ್ಟಿನನ್ನು ಕಡಿಮೆಮಾಡಿಕೊಳ್ಳಿ. ನಿಮ್ಮ ಹಾದಿಯನ್ನು ನೋಡಿಕೊಳ್ಳುವ ಸಮಯವಿದಾಗಿರುತ್ತದೆ. ನಿಮ್ಮ ಆಲೋಚನೆಗಳನ್ನು ಇತರೊಂದಿಗೆ ಹಂಚಿಕೊಂಡರೆ ನಿಮ್ಮ ಸ್ಥಾನಕ್ಕೆ ಚ್ಯುತಿ ಬಂದೀತು. ಪ್ರಯಾಣದಲ್ಲಿ ಆತುರದಿಂದ ಅವಘಡವಾದೀತು. ಬೆಲೆಬಾಳುವ ವಸ್ತುಗಳನ್ನು ಸುರಕ್ಷಿತವಾಗಿ ಇರಿಸಿ. ನಿಮ್ಮನ್ನು ನೋಡು ದೃಷ್ಟಿಯು ಇದರಿಂದ ಬದಲಾದೀತು. ನೂತನ ಉದ್ಯಮಕ್ಕೆ ಹೆಚ್ಚು ಆದ್ಯತೆ ಇರಲಿದೆ. ಗೃಹೋಪಯೋಗಿ ವಸ್ತುಗಳನ್ನು ಖರೀದಿಸುವಾಗ ನಿಮ್ಮ ಖರ್ಚಿನ ಅಂದಾಜು ತಪ್ಪಿಹೋಗಬಹುದು. ಅನಿರೀಕ್ಷಿತವಾಗಿ ಪ್ರಭಾವಿ ವ್ಯಕ್ತಿಗಳ ಸಂಪರ್ಕವು ಸಿಗುವುದು.
ಧನು ರಾಶಿ : ಮನೆಯಲ್ಲಾಗಲಿ ಕಛೇರಿಯಲ್ಲಾಗಲಿ ನಿಮ್ಮ ಮಾತನ್ನು ಬೆಂಬಲಿಸತ್ತಾರೆ. ಅನಿರೀಕ್ಷಿತ ಸಂಪತ್ತು ಸಿಗುವ ಸಾಧ್ಯತೆ ಇದೆ. ಇಂದು ಬಂದ ಅತಿಥಿಯ ಜೊತೆ ಹರಟೆಯನ್ನು ಹೊಡೆಯುತ್ತೀರಿ. ಕಲಾತ್ಮಕ ಮತ್ತು ಸೃಜನಶೀಲವ್ಯಕ್ತಿತ್ವಕ್ಕೆ ಬಹಳಷ್ಟು ಮೆಚ್ಚುಗೆ ಬರಲಿದೆ. ನಿರೀಕ್ಷೆಗಿಂತಲೂ ಹೆಚ್ಚಿನ ಫಲವು ಸಿಗಲಿದೆ. ಪ್ರೇಮ ವ್ಯವಹಾರಗಳಲ್ಲಿ ಹೊಂದಾಣಿಕೆ ಬೇಕೆನಿಸುವುದು. ಅದೃಷ್ಟ ನಿಮ್ಮ ಕಡೆ ಇದ್ದರೂ ಅದನ್ನು ಅನುಭವಿಸುವ ಮನೋಭಾವ ಇರಲಿ. ನಿಮ್ಮ ಸಹೋದರರ ಸಹಯೋಗವು ಇಂದು ಆರ್ಥಿಕ ಲಾಭಕ್ಕೆ ಕಾರಣವಾಗುತ್ತದೆ. ಅತ್ಯಂತ ಸಂಭ್ರಮ ಪಡುವಿರಿ. ಕಾನೂನಿನ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸುವಿರಿ. ಆಸ್ತಿಯನ್ನು ಮಾಡುವ ಚಿಂತನೆ ಅಧಿಕವಾಗಿರುವುದು. ಹಠದ ಸ್ವಭಾವವು ಎಲ್ಲರ ಪ್ರೀತಿಯಿಂದ ನಿಮ್ಮನ್ನು ದೂರಮಾಡಬಹುದು. ಇಂದು ಹಣಕಾಸಿನ ವ್ಯವಹಾರ ಮಾಡಲು ಧೈರ್ಯವು ಸಾಕಾಗದು. ಮಕ್ಕಳ ಒತ್ತಾಯಕ್ಕೆ ಇಂದು ಪ್ರಯಾಣವನ್ನು ಮಾಡುವಿರಿ.
ಮಕರ ರಾಶಿ : ನಿಮಗೆ ನಿಸ್ಸ್ವಾರ್ಥ ಸೇವೆಯಲ್ಲಿ ಸಂತೋಷ ಇರಲಿದೆ. ಅನೇಕ ಶುಭ ಸೂಚನೆಗಳನ್ನು ನೀವು ಗಮನಿಸಿಕೊಂಡಾಗ ನಿಮ್ಮ ನೀವು ನಿಮ್ಮ ಸನ್ಮಾರ್ಗವನ್ನು ಬಿಡಬೇಡಿ. ಹಣದಕ್ಕೆ ಸಂಬಂಧಿಸಿದ ತೊಂದರೆಗೆ ಮನೆಯಿಂದ ಸಹಾಯ ದೊರೆಯಬಹುದು. ನಿಮ್ಮವರನ್ನು ಮಾತನಾಡಿಸಿ, ಅವರೊಂದಿಗೆ ಕೆಲವು ಮಾತನಾಡಿ. ಸಂಬಂಧಗಳು ಸುಂದರವಾಗಿರಲಿ. ವಿದ್ಯಾರ್ಥಿಗಳು ಯಶಸ್ಸು ಸಾಧಿಸುವರು. ಹಿರಿಯ ಪ್ರಬುದ್ಧ ವ್ಯಕ್ತಿಯಿಂದ ನೀವು ಮಾರ್ಗದರ್ಶನ ಮತ್ತು ಬೆಂಬಲವನ್ನು ಸ್ವೀಕರಿಸುತ್ತೀರಿ. ಕುಟುಂಬದ ಕಡೆಯಿಂದ ಸಂತೋಷದ ಮಾತುಗಳು ಇರುವುದು. ಹಳೆಯ ವಾಹನದ ಮಾರಾಟ ಮಾಡಿ ಹೊಸ ವಾಹನವನ್ನು ಖರೀದಿಸುವಿರಿ. ಉನ್ನತ ಶಿಕ್ಷಣವನ್ನು ಪಡೆಯಲು ನೀವು ಸಫಲರಾಗಬಹುದು. ಉದ್ಯೋಗದಲ್ಲಿ ನಿಮ್ಮ ಕಣ್ತಪ್ಪಿನಿಂದ ಆದ ತಪ್ಪಿಗೆ ನೀವೇ ಜವಾಬ್ದಾರಿ ಆಗಿರುವಿರಿ. ಭೂಮಿಯ ವ್ಯವಹಾರದಲ್ಲಿ ಸುಮ್ಮನೆ ಕೆಲವನ್ನು ನಿಮ್ಮ ಮೇಲೆ ಬರುವಂತೆ ಮಾಡಿಕೊಳ್ಳುವಿರಿ.
ಕುಂಭ ರಾಶಿ : ಆತುರದ ನಿರ್ಧಾರವನ್ನು ತೆಗದುಕೊಳ್ಳಬೇಡಿ. ಪ್ರತ್ಯಕ್ಷವಾಗಿ ಕಂಡಿದ್ದು ಮಾತ್ರ ಸತ್ಯವಲ್ಲವೆಂಬುದನ್ನು ನೀವು ಅರಿತುಕೊಳ್ಳಬೇಕು. ಎಷ್ಟೋ ದಿನದ ಸಾಲಗಳು ಇಂದು ಮುಕ್ತಾಯಗೊಳ್ಳುವುವು. ಆಫೀಸ್ ನಲ್ಲಿ ಒತ್ತಡದ ವಾತಾವರಣವಿರುವುದು. ಸಮಾಧಾನದಿಂದ ನಿಭಾಯಿಸಿ. ಅದೃಷ್ಟ ನಿಮ್ಮ ಕಡೆ ಇರುತ್ತದೆ. ಇಂದು ಧಾರ್ಮಿಕ ಚಟುವಟಿಕೆಗಳಲ್ಲಿ ನಿಮ್ಮ ಹಣವನ್ನು ಹೂಡಿಕೆ ಮಾಡುವುದನ್ನು ಪರಿಗಣಿಸಿ, ಇದು ಮಾನಸಿಕ ಶಾಂತಿ ಮತ್ತು ಸ್ಥಿರತೆಗೆ ಕಾರಣವಾಗಬಹುದು. ಪ್ರೀತಿಪಾತ್ರರ ಜೊತೆ ವಾದಗಳನ್ನು ಹುಟ್ಟುಹಾಕುವ ವಿಷಯಗಳಿಂದ ದೂರವಿರಿ. ನಿಮಗೆ ನಿಮ್ಮವರ ಭಾವವನ್ನು ಸರಿಯಾಗಿ ಅಂದಾಜು ಮಾಡಲಾಗದು. ಸುಮ್ಮನೇ ಯಾರ ಬೆಂಬಲಕ್ಕೂ ನಿಲ್ಲಲು ಹೋಗುವುದು ಬೇಡ. ಬಂಧುಗಳನ್ನು ನೀವು ಆಡಿಕೊಳ್ಳುವಿರಿ. ಯಾರ ಮೇಲಾದರೂ ದೋಷಾರೋಪ ಮಾಡುವ ಸಂಭವವಿದೆ. ಬರುವ ಆದಾಯಕ್ಕೆ ವಿಘ್ನವು ಬರಬಹುದು. ಅಂತರ್ಜಾಲದಿಂದ ನಿಮಗೆ ಕೆಲಸಕ್ಕೆ ಕರೆ ಬರಬಹುದು.
ಮೀನ ರಾಶಿ : ಧಾರ್ಮಿಕ ಕಾರ್ಯಗಳಿಂದ ನಿಮ್ಮ ಹಣವು ವ್ಯಯವಾಗುವ ಸಾಧ್ಯತೆ ಇದೆ. ಇದು ನಿಮ್ಮ ಮನಸ್ಸಿಗೆ ಶಾಂತಿಯನ್ನೂ ನೆಮ್ಮದಿಯನ್ನೂ ನೀಡುತ್ತದೆ. ಹಾಸ್ಯದಿಂದ ಇನ್ನೊಬ್ಬರಿಗೆ ನೋವಾಂಟಾಗಬಹುದು. ಹಿರಿಯ ಹಾಗೂ ಪ್ರಮುಖವ್ಯಕ್ತಿಗಳನ್ನು ಇಂದು ಭೇಟಿಯಾಗುತ್ತೀರಿ. ನೀವು ಮಾಡುವ ಕಾರ್ಯಕ್ಕೆ ಇತರರ ಸಹಾಯವೂ ಲಭ್ಯವಾಗಲಿದೆ. ನಿಮ್ಮ ಹಾಸ್ಯ ಪ್ರಜ್ಞೆಯು ಇತರರಿಗೆ ಬೇಸರ ತರಿಸೀತು. ನಿಜವಾದ ಸಂತೋಷವು ಭೌತಿಕ ಆಸ್ತಿಯಲ್ಲಿ ಕಂಡುಬರುವುದಿಲ್ಲ. ವೃತ್ತಿಯ ಸ್ಥಳದಲ್ಲಿ ಬದಲಾವಣೆಯನ್ನು ಬಯಸುವಿರಿ. ನಿಮ್ಮ ವಸ್ತುಗಳನ್ನು ರಕ್ಷಣೆ ಮಾಡಿಕೊಳ್ಳುವುದು ಉತ್ತಮ. ಶತ್ರುಗಳ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಇರಲಿದೆ. ಕಛೇರಿಗೆ ವಿರಾಮವಿದ್ದರೂ ಅನಿರೀಕ್ಷಿತ ಮೀಟಿಂಗ್ ಗೆ ಹಾಜಾರಾಗಬೇಕಾದೀತು. ನಿಮ್ಮ ಪ್ರಾಮಾಣಿಕತೆಯ ಮಾರ್ಗವನ್ನು ಬಿಡುವುದು ಬೇಡ. ನಿಮಗೆ ಕೊಟ್ಟ ಜವಾಬ್ದಾರಿಯನ್ನು ಪೂರ್ಣ ಮಾಡುವಿರಿ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group: https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1