Cricket: IPL 2024, GT vs DC: ಐಪಿಎಲ್ 2024 ರ 40 ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ನಾಲ್ಕು ರನ್‌ಗಳಿಂದ ಗುಜರಾತ್ ಟೈಟಾನ್ಸ್ ತಂಡವನ್ನು ಮಣಿಸುವಲ್ಲಿ ಯಶಸ್ವಿಯಾಗಿದೆ. ಡೆಲ್ಲಿ ಉತ್ತಮ ಮೊತ್ತ ಕಲೆಹಾಕಿತು. ಈ ಬಿಗ್ ಟಾರ್ಗೆಟ್ ಬೆನ್ನಟ್ಟಿದ ಗುಜರಾತ್ ತಂಡವು ನಿಗದಿತ 20 ಓವರ್ಗೆ 8 ವಿಕೆಟ್ ನಷ್ಟಕ್ಕೆ 220 ರನ್ ಗಳಿಸುವ ಮೂಲಕ 5 ರನ್ ಗಳಿಂದ ಸೋಲನ್ನಪ್ಪಿತು.

ಐಪಿಎಲ್ 2024 ರ 40 ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ನಾಲ್ಕು ರನ್‌ಗಳಿಂದ ಗುಜರಾತ್ ಟೈಟಾನ್ಸ್ ತಂಡವನ್ನು ಮಣಿಸುವಲ್ಲಿ ಯಶಸ್ವಿಯಾಗಿದೆ. ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಡೆಲ್ಲಿ 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 224 ರನ್ ಗಳಿಸಿತು. ತಂಡದ ಪರ ನಾಯಕ ರಿಷಬ್ ಪಂತ್ 43 ಎಸೆತಗಳಲ್ಲಿ ಅಜೇಯ 88 ರನ್ ಮತ್ತು ಅಕ್ಷರ್ ಪಟೇಲ್ 66 ರನ್ ಗಳಿಸಿದರು. ಉತ್ತರವಾಗಿ ಗುಜರಾತ್ ತಂಡ 20 ಓವರ್‌ಗಳಲ್ಲಿ ಎಂಟು ವಿಕೆಟ್‌ಗೆ 220 ರನ್ ಗಳಿಸಲಷ್ಟೇ ಶಕ್ತವಾಯಿತು. ತಂಡದ ಪರ ಗೆಲುವಿಗಾಗಿ ಹೋರಾಟ ನೀಡಿದ ಸಾಯಿ ಸುದರ್ಶನ್ ಹಾಗೂ ಡೇವಿಡ್ ಮಿಲ್ಲರ್ ತಲಾ ಅರ್ಧಶತಕ ಬಾರಿಸಿದರು. ಆದಾಗ್ಯೂ ತಂಡಕ್ಕೆ ಗೆಲುವು ತಂದುಕೊಂಡಲು ಸಾಧ್ಯವಾಗಲಿಲ್ಲ.
ಐಪಿಎಲ್ 2024ರ 40ನೇ ಪಂದ್ಯ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಗುಜರಾತ್ ಟೈಟಾನ್ಸ್ (GT vs DC) ನಡುವೆ ನಡೆಯಿತು. ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಗುಜರಾತ್ ಟೈಟಾನ್ಸ್‌ಗೆ ನಿಗದಿತ 20 ಓವರ್ ನಲ್ಲಿ 225 ರನ್‌ಗಳ ಸವಾಲನ್ನು ನೀಡಿತು. ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಈ ಈ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ನಾಯಕ ಶುಭಮನ್ ಗಿಲ್ (Shubman Gill) ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು, ಡೆಲ್ಲಿಗೆ ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಈ ಮೂಲಕ ಡೆಲ್ಲಿ ಉತ್ತಮ ಮೊತ್ತ ಕಲೆಹಾಕಿತು. ಈ ಬಿಗ್ ಟಾರ್ಗೆಟ್ ಬೆನ್ನಟ್ಟಿದ ಗುಜರಾತ್ ತಂಡವು ನಿಗದಿತ 20 ಓವರ್ಗೆ 8 ವಿಕೆಟ್ ನಷ್ಟಕ್ಕೆ 220 ರನ್ ಗಳಿಸುವ ಮೂಲಕ 5 ರನ್ ಗಳಿಂದ ಸೋಲನ್ನಪ್ಪಿತು.
ಬ್ಯಾಟಿಂಗ್ನಲ್ಲಿ ಎಗ್ಗರಿಸಿದ ಗುಜರಾತ್:
ಇನ್ನು, ಡೆಲ್ಲಿ ಕ್ಯಾಪಿಟಲ್ಸ್ ನೀಡಿದ 225 ರನ್ ಗಳ ಬೃಹತ್ ಟಾರ್ಗೆಟ್ ಬೆನ್ನಟ್ಟಿದ ಗುಜರಾತ್ ತಂಡಕ್ಕೆ ಆರಂಭದಲ್ಲಿಯೇ ಆಘಾತ ಎದುರಾಯಿತು. ತಂಡದ ನಾಯಕ ಶುಭ್ಮನ್ ಗಿಲ್ 6 ರನ್ ಗಳಿಸಿ ಔಟ್ ಆದರೆ, ಅಜ್ಮತುಲ್ಲಾ ಓರ್ಮಾಝಿ 1 ರನ್ ಗಳಿಸಿ ಪೆವೆಲಿಯನ್ ಸೇರಿದರು. ಆದರೆ ವೃದ್ಧಿಮಾನ ಸಾಹಾ 25 ಎಸೆತದಲ್ಲಿ 39 ರನ್ ಗಳಿಸಿದರು. ಆದರೆ ಸಾಯಿ ಸುದರ್ಶನ್ ಮತ್ತು ಡೇವಿಡ್ ಮಿಲ್ಲರ್ ಕೊಂಚ ಹೋರಾಟ ನಡೆಸಿದರೂ ಸಹ ತಂಡವನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ. ಈ ವೇಳೆ ಸಾಯಿ ಸುದರ್ಶನ್ 39 ಎಸೆತದಲ್ಲಿ 2 ಸಿಕ್ಸ್ ಮತ್ತು 7 ಫೋರ್ ಮೂಲಕ 65 ರನ್ ಮತ್ತು ಡೇವಿಡ್ ಮಿಲ್ಲರ್ 23 ಎಸೆತದಲ್ಲಿ 3 ಸಿಕ್ಸ್ ಮತ್ತು 6 ಫೋರ್ ಮೂಲಕ 55 ರನ್ ಗಳಿಸಿದರೂ ವ್ಯರ್ಥವಾಯಿತು. ಉಳಿದಂತೆ ಶಾರೂಖ್ ಖಾನ್ 8 ರನ್, ರಾಹುಲ್ ತೆವಾಟಿಯಾ 4 ರನ್ ಗಳಿಸಿದರು. ಸಾಯಿ ಕಿಶೋರ್ 13 ರನ್ ಸಿಡಿಸಿದರು
ರಿಷಭ್ ಪಂತ್ ಭರ್ಜರಿ ಬ್ಯಾಟಿಂಗ್:
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 44 ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ನಂತರ ಅಕ್ಷರ್ ಪಟೇಲ್ ಮತ್ತು ರಿಷಬ್ ಪಂತ್ ದೊಡ್ಡ ರನ್ ಗಳಿಸಿದರು. ಅಕ್ಷರ್ ಪಟೇಲ್ 43 ಎಸೆತಗಳಲ್ಲಿ 5 ಬೌಂಡರಿ ಹಾಗೂ 4 ಸಿಕ್ಸರ್ ನೆರವಿನಿಂದ 66 ರನ್ ಗಳಿಸಿದರು. ನಾಯಕ ರಿಷಬ್ ಪಂತ್ 43 ಎಸೆತಗಳಲ್ಲಿ 8 ಸಿಕ್ಸ್ ಮೂಲಕ ಬರೋಬ್ಬರಿ 88 ರನ್ ಗಳಿಸಿದರು. ಈ ಮೂಲಕ ಪಂತ್ ಮತ್ತು ಅಕ್ಷರ್ ಪಟೇಲ್ ನಾಲ್ಕನೇ ವಿಕೆಟ್‌ಗೆ 113 ರನ್‌ಗಳ ಜೊತೆಯಾಟ ನೀಡಿದರು. ಉಳಿಂದತೆ ಜಾಕ್ ಮೆಕರ್ಕ್ 23, ಪೃಥ್ವಿ ಶಾ 11 ಮತ್ತು ಸ್ಟಬ್ಸ್ 26 ರನ್ ಗಳಿಸಿದರು.ಈ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 224 ರನ್ ಗಳಿಸಿತು. ಆದರೆ ಮೋಹಿತ್ ಶರ್ಮಾ ಎಸೆದ ಕೊನೆಯ ಓವರ್‌ನಲ್ಲಿ ಕ್ಯಾಪಿಟಲ್ಸ್ 31 ರನ್ ಗಳಿಸಿತು. ಗುಜರಾತ್ ಟೈಟಾನ್ಸ್ ಟೈಟಾನ್ಸ್ ಬೌಲರ್ ಗಳ ಪೈಕಿ ಸಂದೀಪ್ ವಾರಿಯರ್ ಗರಿಷ್ಠ 3 ವಿಕೆಟ್ ಪಡೆದರೆ, ನೂರ್ ಅಹ್ಮದ್ 1 ವಿಕೆಟ್ ಪಡೆದರು.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group: https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1