IPL 2024, SRH vs RR: ರಾಜಸ್ಥಾನ್​ ಗೆಲುವಿನ ಓಟಕ್ಕೆ ಬ್ರೇಕ್​ ಹಾಕಿದ ಹೈದರಾಬಾದ್​, ಎಸ್​​ಆರ್​​ಎಚ್​ಗೆ ರೋಚಕ ಗೆಲುವು

ಐಪಿಎಲ್ 2024ರಲ್ಲಿ ಹೈದರಾಬಾದ್​ನ ಉಪ್ಪಲ ಸ್ಟೇಡಿಯಂನಲ್ಲಿ ರಾಜಸ್ಥಾನ್​ ರಾಯಲ್ಸ್​ ಮತ್ತು ಸನ್​ರೈಸರ್ಸ್​ ಹೈದರಾಬಾದ್ (SRH vs RR) ವಿರುದ್ಧ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಮೊದಲು ಟಾಸ್ ಗೆದ್ದ ಹೈದರಬಾದ್ ತಂಡದ ನಾಯಕ ಪ್ಯಾಟ್​​ ಕಮಿನ್ಸ್​ ಮೊದಲಿಗೆ ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡರು. ಈ ಮೂಲಕ ತವರು ಮೈದಾನದಲ್ಲಿ ಬೃಹತ್​ ಮೊತ್ತ ಕಲೆಹಾಕು ಗುರಿ ಹೊಂದಿದ್ದರು. ಆದರೆ ಅದೆಕೋ ಕಳೆದೆರಡು ಪಂದ್ಯದಿಂದ ಎಸ್​​ಆರ್​​ಎಚ್​​ ಬ್ಯಾಟಿಂಗ್​ ಆರಂಭದ ಹೊಳಪಿನಲ್ಲಿಲ್ಲ. ಅಂತಿಮವಾಗಿ ರಾಜಸ್ಥಾನ ತಂಡದ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಹೈದರಾಬಾದ್ ತಂಡ ನಿಗದಿತ 20 ಓವರ್​ಗೆ 3 ವಿಕೆಟ್ ನಷ್ಟಕ್ಕೆ 201 ರನ್ ಪೇರಿಸಿತು. ಈ ಟಾರ್ಗೆಟ್ ಬೆನ್ನಟ್ಟಿದ ರಾಜಸ್ಥಾನ್​ ರಾಯಲ್ಸ್​ ತಂಡವು ನಿಗಿದತ 20 ಓವರ್​ಗೆ 6 ವಿಕೆಟ್ ನಷ್ಟಕ್ಕೆ  200 ರನ್​ ಗಳಿಸುವ ಮೂಲಕ 4 ವಿಕೆಟ್​​  ಗಳಿಂದ ಸೋಲನ್ನಪ್ಪಿತು. ಈ ಮೂಲಕ 1 ರನ್​ಗಳ ರೋಚಕ ಹೈದರಾಬಾದ್ ಗೆಲುವು ದಾಖಲಿಸಿತು. ಈ ಮೂಲಕ ರಾಜಸ್ಥಾನ್​ ರಾಯಲ್ಸ್​ ತಂಡದ ಗೆಲುವಿನ ಓಟಕ್ಕೆ SRH ಬ್ರೇಕ್​ ಹಾಕಿದೆ.

ಪರಾಗ್​ – ಯಶಸ್ವಿ ಸೂಪರ್​ ಬ್ಯಾಟಿಂಗ್​:

ಇನ್ನು, ಹೈದರಾಬಾದ್​​ ನೀಡಿದ 201 ರನ್​ ಟಾರ್ಗೆಟ್ ಬೆನ್ನಟ್ಟಿದ ರಾಜಸ್ಥಾನ್​ ರಾಯಲ್ಸ್ ತಂಡಕ್ಕೆ ಆರಂಭದಲ್ಲಿಯೇ ಆಘಾತ ಎದುರಾಯಿತು. ಮೊದಲ ಓವರ್​ ನಲ್ಲಿಯೇ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಕೇವಲ 1 ರನ್​ಗೆ 2 ವಿಕೆಟ್ ಕಳೆದುಕೊಂಡ ರಾಜಸ್ಥಾನ್​ ತಂಡಕ್ಕೆ ಯಶಸ್ವಿ ಜೈಸ್ವಾಲ್​ ಮತ್ತು ರಿಯಾನ್​ ಪರಾಗ್​ ಈ ಜೋಡಿ ಮುರಿಯದ 134 ರನ್​ ಜೊತೆಯಾಟವಾಡಿದರು. ಇದು ತಂಡದ ಗೆಲುವಿಗೆ ಪ್ರಮುಖ ಕಾರಣ ಎಂದರೂ ತಪ್ಪಾಗಲಾರದು. ಈ ವೇಳೆ ಯಶಸ್ವಿ ಜೈಸ್ವಾಲ್​ 40 ಎಸೆತದಲ್ಲಿ 2 ಸಿಕ್ಸ್​ ಮತ್ತು 7 ಫೋರ್​ ಮೂಲಕ 67 ರೆನ್​ ಸಿಡಿಸಿದರು. ಆದರೆ ಜೋಸ್​ ಬಟ್ಲರ್​ ಮತ್ತು ನಾಯಕ ಸಂಜು ಸ್ಯಾಮ್ಸನ್​ ಇಬ್ಬರೂ ಸಹ ಶೂನ್ಯಕ್ಕೆ ಫೆವೆಲಿಯನ್​ ಸೇರಿದರು. ರಿಯಾನ್​ ಪರಾಗ್​ 49 ಎಸೆತದಲ್ಲಿ 4 ಸಿಕ್ಸ್​ ಮತ್ತು 8 ಫೋರ್​ ಮೂಲಕ 77 ರನ್​ ಗಳಿಸಿದರು. ಹಿಟ್​​ಮ್ಯಾಯರ್​ 13 ರನ್​ ಸಿಡಿಸಿದರು.

ಮತ್ತೆ ಅಬ್ಬರಿಸಿದ ಲೋಕಲ್​ ಬಾಯ್​:

ಟಾಸ್ ಗೆದ್ದು ಮೊದಲು ಬ್ಯಟಿಂಗ್​ ಮಾಡಿದ ಸನ್​ರೈಸರ್ಸ್​ ಹೈದರಾಬಾದ್ ತಂಡವು ನಿಗದಿತ 20 ಓವರ್​ಗೆ 3 ವಿಕೆಟ್ ನಷ್ಟಕ್ಕೆ 201 ರನ್ ಗಳಿಸಿತು. ಎಂದಿನಂತೆ ಟ್ರಾವಿಸ್ ಹೆಡ್ ಹಾಗೂ ಅಭಿಷೇಕ್ ಶರ್ಮಾ ಆರಂಭಿಕರಾಗಿ ಮೈದಾನಕ್ಕಿಳಿದರು. ಆದರೆ ಈ ಜೋಡಿ ಆರಂಭಿಕ ಪಂದ್ಯಗಳಂತೆ ಅಬ್ಬರಿಸಲು ಸಾಧ್ಯವಾಗಲಿಲ್ಲ. ಅಭಿಷೇಕ್ ಶರ್ಮಾ 10 ಎಸೆತಗಳಲ್ಲಿ ಕೇವಲ 12 ರನ್ ಗಳಿಸಿ ಔಟಾದರು. ನಂತರ ಬಂದ ಅನ್ಮೋಲ್ಪ್ರೀತ್ ಸಿಂಗ್ 5 ರನ್ ಗಳಿಸಿ ಔಟಾದರು. ನಂತರ ಹೆಡ್ ಮತ್ತು ನಿತೀಶ್ ರೆಡ್ಡಿ ಜೋಡಿ ಉತ್ತಮವಾಗಿ ಆಟವಾಡುವ ಮೂಲಕ ಹೈದರಾಬಾದ್​ ರನ್ ಹೆಚ್ಚಿಸಲು ಸಹಾಯಕರಾದರು.

ಇವರಿಬ್ಬರು 3ನೇ ವಿಕೆಟ್‌ಗೆ 96 ರನ್‌ಗಳ ಜೊತೆಯಾಟ ನೀಡಿದರು. ಹೆಡ್ 44 ಎಸೆತದಲ್ಲಿ 3 ಸಿಕ್ಸ್​ ಮತ್ತು 6 ಫೋರ್​ ಮೂಲಕ 58 ರನ್ ಗಳಿಸಿದ್ದಾಗ ಅವೇಶ್ ಖಾನ್ ಬೌಲಿಂಗ್​ ನಲ್ಲಿ ಔಟಾದರು. ನಂತರ ನಿತೀಶ್ ರೆಡ್ಡಿ ಜತೆಗೂಡಿದ ಹೆರಿಕ್ ಕ್ಲಾಸೆನ್ ರನ್ ಸೇರಿಸಿದರು. ಕ್ಲಾಸನ್ 19 ಎಸೆತಗಳಲ್ಲಿ 3 ಸಿಕ್ಸರ್‌ಗಳೊಂದಿಗೆ 42 ರನ್ ಸೇರಿಸಿದರೆ, ನಿತೀಶ್ ರೆಡ್ಡಿ 42 ಎಸೆತಗಳಲ್ಲಿ 8 ಸಿಕ್ಸರ್‌ಗಳೊಂದಿಗೆ 76 ರನ್ ಗಳಿಸಿದರು. ಹೈದರಾಬಾದ್ ತಂಡ 20 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 201 ರನ್ ಗಳಿಸಿತು.

Source : https://kannada.news18.com/news/sports/ipl-2024-srh-vs-rr-match-sunrisers-hyderabad-won-by-1-runs-skb-1682173.html

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsAppGroup:https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *