ಕಿಡ್ನಿ ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಬೆಳಗ್ಗೆ ಎದ್ದ ಕೂಡಲೇ ಕಾಣಿಸುತ್ತದೆ ಈ ಲಕ್ಷಣಗಳು!ಒಮ್ಮೆ ಗಮನಿಸಿ ನೋಡಿ !

Kidney symptoms :ಕಿಡ್ನಿ ನಮ್ಮ ದೇಹದ ಪ್ರಮುಖ ಅಂಗಗಳಲ್ಲಿ ಒಂದಾಗಿದೆ. ಮತ್ತು ಇದರಲ್ಲಿ ಸ್ವಲ್ಪ ಸಮಸ್ಯೆ ಕಂಡು ಬಂದರೂ ನಮ್ಮ ಆರೋಗ್ಯದಲ್ಲಿ ಏರುಪೇರಾಗುತ್ತದೆ. ಮೂತ್ರಪಿಂಡಗಳು ನಮ್ಮ ದೇಹದಲ್ಲಿ ಇರುವ ತ್ಯಾಜ್ಯವನ್ನು ಫಿಲ್ಟರ್ ಮಾಡುವ ಮೂಲಕ ನಮ್ಮನ್ನು ಆರೋಗ್ಯವಾಗಿಡುವ ಕೆಲಸ ಮಾಡುತ್ತವೆ.ಮೂತ್ರಪಿಂಡಗಳು ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ,ನಾವು ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. 

ಬೆಳಗ್ಗೆ ನಮ್ಮ ದೇಹದಲ್ಲಿ ಕಾಣಿಸಿಕೊಳ್ಳುವ ಈ ಲಕ್ಷಣಗಳು ಮೂತ್ರ ಪಿಂಡದ ಆರೋಗ್ಯ ಕೆಡುತ್ತಿದೆ ಎನ್ನುವುದನ್ನು ಸೂಚಿಸುತ್ತದೆ.   

ಬೆಳಿಗ್ಗೆ ಎದ್ದ ತಕ್ಷಣ ಚಳಿ ಚಳಿ ಅನಿಸಿದರೆ ಅದು ಕಿಡ್ನಿ ಹಾನಿಯ ಲಕ್ಷಣವಾಗಿರಬಹುದು. ಚಳಿಗಾಲ ಬೇಸಿಗೆ ಕಾಲ ಯಾವಾಗ ಬೇಕಾದರೂ ಈ ಲಕ್ಷಣ ಕಾಣಿಸಿಕೊಳ್ಳಬಹುದು.   

ಮೂತ್ರದಲ್ಲಿ ಫೋಮ್ ಅಥವಾ ನೊರೆ ಕಾಣಿಸುತ್ತಿದ್ದರೆ ಅದು ಮೂತ್ರದಲ್ಲಿರುವ  ಪ್ರೋಟೀನ್ ಅನ್ನು ಸೂಚಿಸುತ್ತದೆ.ಮೂತ್ರಪಿಂಡಗಳು ಪೋಷಕಾಂಶಗಳನ್ನು ಸರಿಯಾಗಿ ಫಿಲ್ಟರ್ ಮಾಡಲು ಸಾಧ್ಯವಾಗದಿದ್ದಾಗ ಹೀಗಾಗುತ್ತದೆ.

ಮೂತ್ರಪಿಂಡದ ಹಾನಿಯ ಸಂದರ್ಭದಲ್ಲಿ, ಸ್ವಲ ಸ್ವಲ್ಪ ಪ್ರಮಾಣದಲ್ಲಿ ಮಾತ್ರ ಮೂತ್ರ ಬರುತ್ತದೆ. ಸರಾಗವಾಗಿ ಮೂತ್ರ ವಿಸರ್ಜನೆಗೆ ಕಷ್ಟವಾಗುತ್ತದೆ.

ನಮ್ಮ ಕೈ, ಕಾಲು ಅಥವಾ ದೇಹದ ಯಾವುದೇ ಭಾಗದಲ್ಲಿ ಊತ ಕಾಣಿಸಿಕೊಂಡರೆ ನಾವು ಸುಲಭವಾಗಿ ಅದನ್ನು ನಿರ್ಲಕ್ಷಿಸಿ ಬಿಡುತ್ತೇವೆ.ಆದರೆ ಇದು ಮೂತ್ರಪಿಂಡದ ಹಾನಿಯ ಸಂಕೇತವಾಗಿರಬಹುದು.

ದೇಹದಲ್ಲಿ ಅನಗತ್ಯವಾಗಿ ತುರಿಕೆ ಕಾಣಿಸಿಕೊಂಡರೆ ಅದು ಮೂತ್ರಪಿಂಡದ ಹಾನಿಯ ಸಮಸ್ಯೆಯಾಗಿರಬಹುದು. ಈ ಚಿಹ್ನೆಯು ಮುಖ್ಯವಾಗಿ ಮೂತ್ರಪಿಂಡದ ಕಲ್ಲು ಅಥವಾ ದೇಹಕ್ಕೆ ಸಂಬಂಧಿಸಿದ ಯಾವುದೇ ಕಾಯಿಲೆಯ ಸಂಕೇತವಾಗಿರಬಹುದು.

ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ.ಈ ಮಾಹಿತಿಯ ಹೊಣೆಯನ್ನು ಸಮಗ್ರ ಸುದ್ದಿ ಹೇಳಿಕೊಳ್ಳುವುದಿಲ್ಲ.

Source : https://zeenews.india.com/kannada/photo-gallery/if-you-find-these-symptoms-in-body-in-the-morning-check-your-kidney-health-211220/kidney-health-problem-211221

Leave a Reply

Your email address will not be published. Required fields are marked *