Viral Video:ಒಂದು ಅಂಗಡಿ ಎದುರು ಮೂವರು ಬಾಲಕಿಯರು ತಿಂಡಿ ತಿನ್ನುತ್ತಿರುತ್ತಾರೆ. ಇಬ್ಬರು ಹುಡುಗಿಯರು ಬೆಂಚ್ ಮೇಲೆ ಕುಳಿತುಕೊಂಡು ಇನ್ನಿಬ್ಬರು ಪಕ್ಕದಲ್ಲೇ ನಿಂತು ಫ್ರೆಂಚ್ ಫ್ರೈಸ್ ಸವಿಯುತ್ತಿರುತ್ತಾರೆ. ಕುಳಿತಿದ ಹುಡುಗಿ ಇದ್ದಕ್ಕಿದ್ದಂತೆ ಆ ಏನೋ ಬರುತ್ತಿರುವುದನ್ನು ಗಮನಿಸುತ್ತಾರೆ. ಇನ್ನೇನು ಎದ್ದು ಓಡಬೇಕು ಅನ್ನೊವಷ್ಟರಲ್ಲಿ ಎಲ್ಲಿಂದಲೋ ಓಡಿ ಬಂದ ಎರಡು ದನಗಳು ಏಕಾಏಕಿ ಹುಡುಗಿಯರ ಮೇಲೆ ಎರಗಿವೆ. ದನಗಳ ನಡುವಿನ ಫೈಟ್‌ಗೆ ಒಬ್ಬಳು ಹುಡುಗಿ ಕೆಳಗೆ ಬಿದ್ದು ಅಪ್ಪಚ್ಚಿಯಾದರೆ ಮತ್ತೊಬ್ಬಳು ದೂರ ಹೋಗಿ ಬಿದ್ದಿದ್ದಾಳೆ.

ನವದೆಹಲಿ: ಕೆಲವೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ಶೇರ್ ಆಗುವ ವಿಡಿಯೋ(Viral video) ಬೆಚ್ಚಿ ಬೀಳಿಸುತ್ತೆ. ಇದೀಗ ಅಂತಹದ್ದೇ ಒಂದು ಘಟನೆ ದೆಹಲಿ(Delhi)ಯಲ್ಲಿ ನಡೆದಿದ್ದು, ಎರಡು ಹಸುಗಳ ನಡುವಿನ ಬಿಗ್ ಫೈಟ್(Cow fight)ನಿಂದಾಗಿ ಇಬ್ಬರು ಬಾಲಕಿಯರು ಗಂಭೀರವಾಗಿ ಗಾಯಗೊಂಡಿದ್ದರು. ಈ ಶಾಕಿಂಗ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ವಿಡಿಯೋದಲ್ಲಿ ಏನಿದೆ?
ಒಂದು ಅಂಗಡಿ ಎದುರು ಮೂವರು ಬಾಲಕಿಯರು ತಿಂಡಿ ತಿನ್ನುತ್ತಿರುತ್ತಾರೆ. ಇಬ್ಬರು ಹುಡುಗಿಯರು ಬೆಂಚ್ ಮೇಲೆ ಕುಳಿತುಕೊಂಡು ಇನ್ನಿಬ್ಬರು ಪಕ್ಕದಲ್ಲೇ ನಿಂತು ಫ್ರೆಂಚ್ ಫ್ರೈಸ್ ಸವಿಯುತ್ತಿರುತ್ತಾರೆ. ಕುಳಿತಿದ ಹುಡುಗಿ ಇದ್ದಕ್ಕಿದ್ದಂತೆ ಆ ಏನೋ ಬರುತ್ತಿರುವುದನ್ನು ಗಮನಿಸುತ್ತಾರೆ. ಇನ್ನೇನು ಎದ್ದು ಓಡಬೇಕು ಅನ್ನೊವಷ್ಟರಲ್ಲಿ ಎಲ್ಲಿಂದಲೋ ಓಡಿ ಬಂದ ಎರಡು ದರನಗಳು ಏಕಾಏಕಿ ಹುಡುಗಿಯರ ಮೇಲೆ ಎರಗಿವೆ. ದನಗಳ ನಡುವಿನ ಫೈಟ್‌ಗೆ ಒಬ್ಬಳು ಹುಡುಗಿ ಕೆಳಗೆ ಬಿದ್ದು ಅಪ್ಪಚ್ಚಿಯಾದರೆ ಮತ್ತೊಬ್ಬಳು ದೂರ ಹೋಗಿ ಬಿದ್ದಿದ್ದಾಳೆ. ಅಲ್ಲೇ ಇದ್ದ ಮೂರನೇ ಹುಡುಗಿ ಜಸ್ಟ್ ಮಿಸ್ ಆಗಿದ್ದಾಳೆ. ಕೆಳಗೆ ಬಿದ್ದಿದ್ದ ಬಾಲಕಿಗೆ ಹಸುವಿನ ಕಾಲಿನಡಿಗೆ ಬಿದ್ದು, ತುಳಿಯಲ್ಪಟ್ಟಿದ್ದಾಳೆ. ಆಕೆ ಗಂಭೀರವಾಗಿ ಗಾಯಗೊಂಡಿದ್ದಾಳೆ.
ತಕ್ಷಣ ಅಲ್ಲಿದ್ದ ಜನ ಓಡಿ ಬಂದು ಬಾಲಕಿಯನ್ನು ಹಿಡಿದೆಳೆದು ರಕ್ಷಿಸಿ, ಹಸುಗಳನ್ನು ಓಡಿಸಿದ್ದಾರೆ. ಘಟನೆಯಲ್ಲಿ ಬಾಲಕಿ ಗಂಭೀರವಾಗಿ ಗಾಯಗೊಂಡಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, 1.1 ಮಿಲಿಯನ್‌ಗೂ ಅಧಿಕ ವೀಕ್ಷಣೆ ಗಳಿಸಿದೆ.