
ಫೆಬ್ರವರಿ ಹಾಗೂ ಮಾರ್ಚ್ ನಡುವೆ ನಡೆಯಲ್ಲಿರುವ ಭಾರತ ವಿರುದ್ಧದ 4 ಟೆಸ್ಟ್ ಪಂದ್ಯಗಳ ಬಾರ್ಡರ್- ಗವಾಸ್ಕರ್ (Border Gavaskar Trophy) ಟೆಸ್ಟ್ ಸರಣಿಗಾಗಿ ಕ್ರಿಕೆಟ್ ಆಸ್ಟ್ರೇಲಿಯಾ (Australia) 18 ಸದಸ್ಯರ ಟೆಸ್ಟ್ ತಂಡವನ್ನು ಪ್ರಕಟಿಸಿದೆ. ತವರಿನಲ್ಲಿ ದಕ್ಷಿಣ ಆಫ್ರಿಕಾವನ್ನು ಮಣಿಸಿರುವ ಕಾಂಗರೂಗಳು ಭಾರತವನ್ನು ಭಾರತದಲ್ಲೇ ಮಣಿಸುವ ಸವಾಲಿನೊಂದಿಗೆ ಭಾರತಕ್ಕೆ ಕಾಲಿಡಲಿದ್ದಾರೆ. ಹೀಗಾಗಿ ಆಸ್ಟ್ರೇಲಿಯಾದ ಟೆಸ್ಟ್ ತಂಡದಲ್ಲಿ ಬರೋಬ್ಬರಿ 4 ಸ್ಪಿನ್ನರ್ಗಳಿಗೆ ಸ್ಥಾನ ನೀಡಲಾಗಿದೆ. ಭಾರತದ ಪಿಚ್ಗಳನ್ನು ಗಮನದಲ್ಲಿಟ್ಟುಕೊಂಡು ಆಸ್ಟ್ರೇಲಿಯಾ ತಂಡದ ಆಯ್ಕೆಗಾರರು ಈ ನಿರ್ಧಾರ ಕೈಗೊಂಡಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಆಸ್ಟ್ರೇಲಿಯಾ ತಂಡದಲ್ಲಿ ನಾಲ್ವರು ಸ್ಪಿನ್ನರ್ಗಳಾಗಿ ನಾಥನ್ ಲಿಯಾನ್, ಆಷ್ಟನ್ ಅಗರ್ ಮತ್ತು ಮಿಚೆಲ್ ಸ್ವೆಪ್ಸನ್ ಸೇರಿಕೊಂಡಿದ್ದಾರೆ. ಈ ಮೂವರ ಹೊರತಾಗಿ ವಿಕ್ಟೋರಿಯಾದ ಉದಯೋನ್ಮುಖ ಸ್ಪಿನ್ನರ್ ಟಾಡ್ ಮರ್ಫಿ ಕೂಡ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಮರ್ಫಿಗೆ ಅವಕಾಶ ನೀಡಿದ್ದು ಯಾಕೆ?
ಕಳೆದ 12 ತಿಂಗಳುಗಳಲ್ಲಿ ಮರ್ಫಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ವಿಕ್ಟೋರಿಯಾ, ಆಸ್ಟ್ರೇಲಿಯಾ ಎ ಮತ್ತು ಪ್ರೈಮ್ ಮಿನಿಸ್ಟರ್ಸ್ XI ತಂಡದ ಪರ ಉತ್ತಮ ಪ್ರದರ್ಶನ ನೀಡಿದ ಮರ್ಫಿಗೆ ರಾಷ್ಟ್ರೀಯ ತಂಡದ ಕದ ತೆರೆದಿದೆ. 22 ವರ್ಷದ ಈ ಯುವ ಸ್ಪಿನ್ನರ್ ಕಳೆದ ದೇಶೀ ಸೀಸನ್ನಲ್ಲಿ ಕೇವಲ 3 ಪಂದ್ಯಗಳಲ್ಲಿ 17.71 ರ ಸರಾಸರಿಯಲ್ಲಿ 14 ವಿಕೆಟ್ಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದರು.
IND vs SL: 152, 140 ರನ್.. ಗುವಾಹಟಿಯಲ್ಲಿ ಕಿಂಗ್ ಕೊಹ್ಲಿ- ಹಿಟ್ಮ್ಯಾನ್ ರೋಹಿತ್ನದ್ದೇ ದರ್ಬಾರು..!
ಮರ್ಫಿಯನ್ನು ಹೊರತುಪಡಿಸಿ ತಂಡದಲ್ಲಿ ಮತ್ತೊಬ್ಬ ಸ್ಪಿನ್ನರ್ ಆಗಿ ಆಯ್ಕೆಯಾಗಿರುವ ಮಿಚೆಲ್ ಸ್ವೆಪ್ಸನ್ ಭಾರತ ಉಪಖಂಡದಲ್ಲಿ ಆಡಿದ ಅನುಭವ ಹೊಂದಿದ್ದಾರೆ. ಕಳೆದ ವರ್ಷ ಭಾರತ ಉಪಖಂಡದಲ್ಲಿ ಆಸ್ಟ್ರೇಲಿಯಾ ಪರ 5 ಟೆಸ್ಟ್ಗಳಲ್ಲಿ 4 ಪಂದ್ಯಗಳನ್ನು ಆಡಿದ್ದರು. ಅದರಲ್ಲಿ 45 ರ ಸರಾಸರಿಯಲ್ಲಿ 10 ವಿಕೆಟ್ಗಳನ್ನು ಪಡೆದಿದ್ದರು. ಇದರ ಆಧಾರದ ಮೇಲೆ ಅವರನ್ನು ಬಾರ್ಡರ್ ಗವಾಸ್ಕರ್ ಟ್ರೋಫಿಗೆ ಆಯ್ಕೆ ಮಾಡಲಾಗಿದೆ. ಇವರುಗಳ ಹೊರತಾಗಿ ಆಸ್ಟನ್ ಆಗರ್ ಮೊದಲ ಬಾರಿಗೆ ಭಾರತದಲ್ಲಿ ಆಡಲಿದ್ದಾರೆ. ಅದೇ ಸಮಯದಲ್ಲಿ, ಆಸ್ಟ್ರೇಲಿಯನ್ ಸ್ಪಿನ್ನರ್ಗಳ ಈ ಸೈನ್ಯವನ್ನು ಮುನ್ನಡೆಸುವ ಜವಾಬ್ದಾರಿಯನ್ನು ನಾಥನ್ ಲಿಯಾನ್ ವಹಿಸಿಕೊಳ್ಳಲ್ಲಿದ್ದಾರೆ.
An 18-player Test squad has been assembled for the Qantas Tour of India in February and March.
Congratulations to everyone selected! pic.twitter.com/3fmCci4d9b
— Cricket Australia (@CricketAus) January 11, 2023
3 ವರ್ಷಗಳ ನಂತರ ತಂಡದಲ್ಲಿ ಅವಕಾಶ
ಈ ಸ್ಪಿನ್ನರ್ಗಳ ಹೊರತಾಗಿ ಒಬ್ಬ ಬ್ಯಾಟ್ಸ್ಮನ್ ಕೂಡ 3 ವರ್ಷಗಳ ನಂತರ ಆಸ್ಟ್ರೇಲಿಯಾ ತಂಡಕ್ಕೆ ಮರಳಿದ್ದಾರೆ. ದೇಶೀಯ ಕ್ರಿಕೆಟ್ನಲ್ಲಿ ತೋರಿದ ಉತ್ತಮ ಪ್ರದರ್ಶನದ ಆದಾರದ ಮೇಲೆ ಪೀಟರ್ ಹ್ಯಾಂಡ್ಸ್ಕಾಂಬ್ ಭಾರತ ಪ್ರವಾಸದ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಜನವರಿ 2019 ರ ನಂತರ ತಂಡದ ಪರ ಆಡುತ್ತಿರುವ ಈ ಆಟಗಾರನನ್ನು ಮ್ಯಾಥ್ಯೂ ರೆನ್ಶಾ ಜೊತೆಗೆ ಮೀಸಲು ಬ್ಯಾಟ್ಸ್ಮನ್ ಆಗಿ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
ಭಾರತ ಪ್ರವಾಸಕ್ಕಾಗಿ ಆಸ್ಟ್ರೇಲಿಯಾದ ಟೆಸ್ಟ್ ತಂಡ
ಪ್ಯಾಟ್ ಕಮ್ಮಿನ್ಸ್ (ನಾಯಕ), ಸ್ಕಾಟ್ ಬೋಲ್ಯಾಂಡ್, ಅಲೆಕ್ಸ್ ಕ್ಯಾರಿ, ಕ್ಯಾಮೆರಾನ್ ಗ್ರೀನ್, ಪೀಟರ್ ಹ್ಯಾಂಡ್ಸ್ಕಾಂಬ್, ಜೋಶ್ ಹ್ಯಾಜಲ್ವುಡ್, ಟ್ರಾವಿಸ್ ಹೆಡ್, ಆಷ್ಟನ್ ಅಗರ್, ಉಸ್ಮಾನ್ ಖವಾಜಾ, ಡೇವಿಡ್ ವಾರ್ನರ್, ಮಾರ್ನಸ್ ಲಬುಶೇನ್, ನಾಥನ್ ಲಿಯಾನ್, ಲ್ಯಾನ್ಸ್ ಮೋರಿಸ್, ಟಾಡ್ ಮರ್ಫಿ, ಮ್ಯಾಥ್ಯೂ ರೆನ್ಶಾಮಿ, ಮಿಚೆಲ್ ಸ್ಟಾರ್ಕ್, ಮಿಚೆಲ್ ಸ್ವೆಪ್ಸನ್.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ