Sprouted Ragi : ಮೊಳಕೆ ಕಾಳು ಆರೋಗ್ಯಕ್ಕೆ ಉತ್ತಮವಾಗಿವೆ ಅನ್ನೋದು ಸಾಬೀತಾದ ವಿಚಾರ. ಇನ್ನೂ ಮಿಲೆಟ್‌ಗಳಲ್ಲೇ ಆರೋಗ್ಯವಾಗಿರುವ ರಾಗಿಯನ್ನು ಮೊಳಕೆ ಬಂದ ನಂತರ ತಿಂದರೆ ಏನೆಲ್ಲಾ ಆರೋಗ್ಯ ಅಂಶಗಳು ನಮಗೆ ಸಿಗಬಹುದು ನೀವೇ ಊಹಿಸಿ ನೋಡಿ.

ಹಿಂದಿನಿಂದಲೂ ಪೋಷಣೆ ಮತ್ತು ಆರೋಗ್ಯಕರ ಆಹಾರವಾಗಿ (Healthy Food) ಗುರುತಿಸಿಕೊಂಡಿರುವುದು ರಾಗಿ. ಈಗಲೂ ಭಾರತದಲ್ಲಿ ರಾಗಿ ಬಳಸದ ಮನೆಗಳಿಲ್ಲ. ಹಿಂದಿನ ಕಾಲದ ಜನಕ್ಕಂತೂ ಬಿಸಿ ರಾಗಿ ಮುದ್ದೆ ಇದ್ದರೆನೇ ಊಟ ರುಚಿಸೋದು.
ಮೊಳಕೆ ಕಟ್ಟಿದ ರಾಗಿ
ಕ್ಯಾಲ್ಸಿಯಂ, ಫೈಬರ್, ಕಬ್ಬಿಣ, ಪ್ರೋಟೀನ್, ಖನಿಜಗಳು ಮತ್ತು ಅಯೋಡಿನ್ ಸಮೃದ್ಧವಾದ ರಾಗಿಯನ್ನು ಮುದ್ದೆ, ಗಂಜಿ ರೂಪದಲ್ಲಿ ಸೇವಿಸೋದು ವಾಡಿಕೆ. ಆದರೆ ಇವೆಲ್ಲಕ್ಕಿಂತ ವಿಶೇಷವಾಗಿರುವುದು ಮೊಳಕೆ ಕಟ್ಟಿದ ರಾಗಿ.
ಮೊಳಕೆ ಕಾಳು ಆರೋಗ್ಯಕ್ಕೆ ಉತ್ತಮವಾಗಿವೆ ಅನ್ನೋದು ಸಾಬೀತಾದ ವಿಚಾರ. ಇನ್ನೂ ಮಿಲೆಟ್‌ಗಳಲ್ಲೇ ಆರೋಗ್ಯವಾಗಿರುವ ರಾಗಿಯನ್ನು ಮೊಳಕೆ ಕಟ್ಟಿ ತಿಂದರೆ ಏನೆಲ್ಲಾ ಆರೋಗ್ಯ ಅಂಶಗಳು ನಮಗೆ ಸಿಗಬಹುದು ನೀವೇ ಊಹಿಸಿ ನೋಡಿ.
ಈ ಮೊಳಕೆ ಕಟ್ಟಿದ ರಾಗಿಯೂ ಮಕ್ಕಳಿಂದ ದೊಡ್ಡವರವರೆಗೂ ವಿಶೇಷ ಆಯ್ಕೆಯಾದರೂ, ಮಹಿಳೆಯರಿಗೆ ಈ ಪದಾರ್ಥ ಮತ್ತಷ್ಟು ಹೇಳಿ ಮಾಡಿಸಿದೆ. ಅದರಲ್ಲೂ ತೂಕ ಕಳೆದುಕೊಳ್ಳಲು ಪ್ರಯತ್ನಿಸುತ್ತಿರುವ ಮಹಿಳೆಯರಿಗೆ ಡಯೆಟ್‌ಗೆ ಸೂಕ್ತ ಈ ಮೊಳಕೆ ಕಟ್ಟಿದ ರಾಗಿ.
ಮೊಳಕೆ ಕಟ್ಟಿದ ರಾಗಿಯನ್ನು ಹೀಗೆಲ್ಲಾ ತಿನ್ಬೋದು
ಮೊಳಕೆ ಕಟ್ಟಿದ ರಾಗಿಯನ್ನು ಹೇಗೆ ತಿನ್ನೋದು ಅನ್ಬಹುದು ನೀವು, ಆದರೆ ಇದನ್ನು ಕೂಡ ಹಲವಾರು ರುಚಿಕರ ವಿಧಾನಗಳಲ್ಲಿ ಸವಿಯಬಹುದು. ಹಾಲು ಅಥವಾ ನೀರಿನಿಂದ ಬೇಯಿಸಿ ತಿನ್ನಬಹುದು, ಗಂಜಿ ಮಾಡ್ಕೊಬಹುದು, ದೋಸೆ, ಸಲಾಡ್, ಉಪ್ಮಾಗಳು, ಪ್ಯಾನ್‌ಕೇಕ್‌ಗಳು, ಇಡ್ಲಿಗಳು, ರೊಟ್ಟಿಗಳು, ಸ್ಮೂಥಿ, ಖಿಚಡಿ ಹೀಗೆ ಬೇರೆ ಬೇರೆ ತರದಲ್ಲಿ ಮೊಳಕೆ ಕಟ್ಟಿದ ರಾಗಿಯನ್ನು ಸವಿಯಬಹುದು.
ಈ ರಾಗಿ ಸಾಮಾನ್ಯ ರಾಗಿತ ವಿಭಿನ್ನ ರುಚಿಯನ್ನು ನಿಮಗೆ ಉಣಬಡಿಸುತ್ತದೆ. ಮೊಳಕೆ ಕಟ್ಟಿದ ರಾಗಿ ಪೌಷ್ಟಿಕ, ಮಣ್ಣಿನ ರುಚಿಯನ್ನು ಹೊಂದಿರುತ್ತದೆ. ಮುಂದೆ ನಾವಿಲ್ಲಿಮಹಿಳೆಯರು ತಮ್ಮ ಆಹಾರದಲ್ಲಿ ಪೌಷ್ಠಿಕ ಪದಾರ್ಥವಾದ ಮೊಳಕೆ ಕಟ್ಟಿದ ರಾಗಿಯನ್ನು ಏಕೆ ಸೇರಿಸಬೇಕು ಎಂಬುದಕ್ಕೆ ಕೆಲವು ಕಾರಣಗಳನ್ನು ನೋಡೋಣ.
ಮೊಳಕೆ ಕಟ್ಟಿದ ರಾಗಿಯು ಮಹಿಳೆಯರಿಗೆ ಹೇಗೆ ಉಪಯುಕ್ತ?
- ಇದು ಕ್ಯಾಲ್ಸಿಯಂನ ಉತ್ತಮ ಮೂಲವಾಗಿದೆ ಮತ್ತು ಆಸ್ಟಿಯೊಪೊರೋಸಿಸ್ ಮತ್ತು ವಯಸ್ಸಿಗೆ ತಕ್ಕಂತೆ ಬರುವ ಇತರ ಮೂಳೆ ಸಮಸ್ಯೆಗಳ ಅಪಾಯಗಳನ್ನು ನಿರ್ವಹಿಸಲು ನಿಮಗೆ ಸಹಾಯ ಮಾಡುತ್ತದೆ.
- ಹೆರಿಗೆಯ ಸಮಯದಲ್ಲಿ, ಕಬ್ಬಿಣದ ಕೊರತೆಯ ರಕ್ತಹೀನತೆ, ದೌರ್ಬಲ್ಯ ಮತ್ತು ಆಯಾಸದ ವಿರುದ್ಧ ಹೋರಾಡುತ್ತದೆ.
- ನಾರಿನಂಶ ಹೆಚ್ಚಿರುವುದರಿಂದ, ಹೊಟ್ಟೆ ತುಂಬಿದ ಅನುಭವ ನೀಡುತ್ತದೆ. ಸಕ್ಕರೆ, ಎಣ್ಣೆ ಪದಾರ್ಥಗಳ ಕಡುಬಯಕೆಗಳನ್ನು ಕಡಿಮೆ ಮಾಡಿ, ತೂಕ ನಿರ್ವಹಣೆಯಲ್ಲಿ ನಿಮಗೆ ಸಹಾಯ ಮಾಡುತ್ತದೆ. ಜೊತೆಗೆ ನಿಮ್ಮ ದೈನಂದಿನ ಪೌಷ್ಠಿಕಾಂಶದ ಅವಶ್ಯಕತೆಗಳನ್ನು ನಿಮಗೆ ಪೂರೈಸುತ್ತದೆ.
- ಮೊಳಕೆಯೊಡೆದ ರಾಗಿಯು ನಿಮ್ಮ ದೇಹದ ಮೇಲೆ ಈಸ್ಟ್ರೊಜೆನ್ನ ಪರಿಣಾಮಗಳನ್ನು ಅನುಕರಿಸುತ್ತದೆ. ಇದು ನಿಮ್ಮ ಹಾರ್ಮೋನುಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಮತ್ತು ಋತುಬಂಧ ಮತ್ತು ಮುಟ್ಟಿನ ಸಮಸ್ಯೆಗಳನ್ನು ನಿಭಾಯಿಸಲು ಸಹಕರಿಸುತ್ತದೆ..
- ಕಾಲಜನ್ ಉತ್ಪಾದನೆಯು ಮೊಳಕೆಯೊಡೆದ ರಾಗಿಯ ಮತ್ತೊಂದು ಪ್ಲಸ್ ಪಾಯಿಂಟ್ ಆಗಿದ್ದು, ಇದು ವಿಟಮಿನ್ ಸಿ, ಉತ್ಕರ್ಷಣ ನಿರೋಧಕಗಳು, ಪ್ರೋಟೀನ್ ಮತ್ತು ಸಾಕಷ್ಟು ಚರ್ಮಕ್ಕೆ ಜಲಸಂಚಯನವನ್ನು ನೀಡುತ್ತದೆ.
ಸಂಭವನೀಯ ಅಡ್ಡಪರಿಣಾಮಗಳು
ಯಾವುದೇ ಆಹಾರ ಪದಾರ್ಥಗಳಂತೆ, ಮೊಳಕೆಯೊಡೆದ ರಾಗಿಯು ಪ್ರತಿಯೊಬ್ಬರ ದೇಹಕ್ಕೆ ಹೊಂದಿಕೆಯಾಗುವುದಿಲ್ಲ ಎಂಬುವುದನ್ನು ನೀವು ಗಮನಿಸಬೇಕು. ನಿಮಗೆ ರಾಗಿ ಪದಾರ್ಥಗಳಿಂದ ಏನಾದರೂ ಅಲರ್ಜಿ ಇದ್ದರೆ, ರಾಗಿ ಸೇವನೆಯು ತುರಿಕೆ, ಚರ್ಮದ ದದ್ದುಗಳು, ತುರಿಕೆ ಮತ್ತು ಗ್ಯಾಸ್ಟ್ರೊನೊಮಿಕಲ್ ಸಮಸ್ಯೆಗಳಂತಹ ಅಲರ್ಜಿಯನ್ನು ಉಂಟುಮಾಡಬಹುದು. ನೀವು ಮಧುಮೇಹಿಗಳಾಗಿದ್ದರೆ, ಅದರಲ್ಲಿರುವ ಕಾರ್ಬೋಹೈಡ್ರೇಟ್‌ಗಳು ನಿಮ್ಮ ರಕ್ತದಲ್ಲಿನ ಸಕ್ಕರೆಯ ಮಟ್ಟದ ಮೇಲೆ ಪರಿಣಾಮ ಬೀರಬಹುದು ಮತ್ತು ಆದ್ದರಿಂದ, ನಿಮ್ಮ ವೈದ್ಯರೊಂದಿಗೆ ಸಮಾಲೋಚಿಸಿದ ನಂತರ ಮೊಳಕೆ ಕಟ್ಟಿದ ರಾಗಿಯನ್ನು ಸೇವಿಸುವುದು ಉತ್ತಮ.