ಸೊಳ್ಳೆ ಕಚ್ಚಿ ಎಷ್ಟು ದಿನಗಳ ನಂತರ ಡೆಂಗ್ಯೂ ಬರುತ್ತದೆ.. ತಡೆಯುವುದು ಹೇಗೆ..?

  • ಡೆಂಗ್ಯೂ ಈಜಿಪ್ಟಿ ಹೆಣ್ಣು ಸೊಳ್ಳೆಗಳಿಂದ ಹರಡುತ್ತದೆ
  • ಈ ಸೊಳ್ಳೆಗಳ ಜೀವಿತಾವಧಿ ಕೇವಲ ಒಂದು ತಿಂಗಳು ಮಾತ್ರ

Dengue Fever: ಡೆಂಗ್ಯೂ ಈಜಿಪ್ಟಿ ಹೆಣ್ಣು ಸೊಳ್ಳೆಗಳಿಂದ ಹರಡುತ್ತದೆ. ಈ ಸೊಳ್ಳೆಗಳ ಜೀವಿತಾವಧಿ ಕೇವಲ ಒಂದು ತಿಂಗಳು ಮಾತ್ರ. ಆದರೆ ಈ ಅವಧಿಯಲ್ಲಿ ಅವು 500 ರಿಂದ 1000 ಸೊಳ್ಳೆಗಳಿಗೆ ಜನ್ಮ ನೀಡುತ್ತವೆ. ಈ ಸೊಳ್ಳೆಗಳು ಕೇವಲ ಮೂರು ಅಡಿಗಳಷ್ಟು ಮಾತ್ರ ಹಾರಬಲ್ಲವು. ಈ ಕಾರಣಕ್ಕಾಗಿ ಅವು ಮನುಷ್ಯನ ಕೆಳಗಿನ ಅಂಗಗಳನ್ನು ಮಾತ್ರ ಕಚ್ಚುತ್ತವೆ. 

ಡೆಂಗ್ಯೂ ಸೊಳ್ಳೆಗಳು ಕೂಲರ್‌ಗಳು, ಹೂವಿನ ಕುಂಡಗಳು, ಹಳೆಯ ಪಾತ್ರೆಗಳು ಅಥವಾ ಮನೆಯ ಮೇಲ್ಛಾವಣಿ, ಟೈರ್‌ಗಳು, ರಸ್ತೆಯ ಗುಂಡಿಗಳು ಇತ್ಯಾದಿಗಳಲ್ಲಿ ಮೊಟ್ಟೆಗಳನ್ನು ಇಡುತ್ತವೆ. ಡೆಂಗ್ಯೂ ಸೊಳ್ಳೆಗಳು ಒಮ್ಮೆಗೆ 100 ರಿಂದ 300 ಮೊಟ್ಟೆಗಳನ್ನು ಇಡುತ್ತವೆ. 4 ದಿನಗಳ ನಂತರ ಅವು ಸೊಳ್ಳೆ ರೂಪಕ್ಕೆ ರೂಪಾಂತರಗೊಳ್ಳುತ್ತವೆ. ಸೊಳ್ಳೆಗಳ ರೂಪವನ್ನು ಪಡೆದ ಬಳಿಕ 2 ದಿನಗಳಲ್ಲಿ ಹಾರಲು ಪ್ರಾರಂಭಿಸುತ್ತವೆ..

ಡೆಂಗ್ಯೂ ಸೊಳ್ಳೆ ಕಚ್ಚಿದ ತಕ್ಷಣ ಡೆಂಗ್ಯೂನ ಯಾವುದೇ ರೋಗಲಕ್ಷಣಗಳು ಕಾಣಿಸಿವುದಿಲ್ಲ.. ಆದರೆ ಕೆಲವು ದಿನಗಳ ನಂತರ ಅದರ ಪರಿಣಾಮವು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ. ಈಡಿಸ್ ಸೊಳ್ಳೆಗಳು ಕಚ್ಚಿದ 3 ರಿಂದ 5 ದಿನಗಳ ನಂತರ ಡೆಂಗ್ಯೂ ಜ್ವರ ಬರುತ್ತದೆ. ಈ ಸೊಳ್ಳೆಗಳು ಬೆಳಿಗ್ಗೆ ಮತ್ತು ಸಂಜೆ ಮಾತ್ರ ಮನುಷ್ಯರ ಮೇಲೆ ದಾಳಿ ಮಾಡುತ್ತವೆ.. ಮಧ್ಯಾಹ್ನ ಮತ್ತು ರಾತ್ರಿ ವೇಳೆ ಡೆಂಗ್ಯೂ ಸೊಳ್ಳೆಗಳು ಮನೆಗಳ ಮೂಲೆಗಳಲ್ಲಿ, ತೆರೆಮರೆಯಲ್ಲಿ, ಸೊಳ್ಳೆಗಳಿರುವ ಸ್ಥಳಗಳಲ್ಲಿ ಅಡಗಿಕೊಳ್ಳುತ್ತವೆ.  

ಡೆಂಗ್ಯೂ ಜ್ವರದ ಲಕ್ಷಣಗಳು: ತೀವ್ರ ಜ್ವರ, ತಲೆನೋವು, ಸ್ನಾಯು ನೋವು, ಚರ್ಮದ ಮೇಲೆ ಕೆಂಪು ಗುಳ್ಳೆಗಳು, ಕಣ್ಣುಗಳ ಕೆಳಗೆ ನೋವು, ಮೊಣಕಾಲು ನೋವು, ಊತ, ಹಲ್ಲು, ಮೂಗು ಮತ್ತು ವಸಡುಗಳಿಂದ ರಕ್ತಸ್ರಾವ.

ಡೆಂಗ್ಯೂ ತಡೆಗಟ್ಟುವುದು ಹೇಗೆ: ದೇಹವನ್ನು ಸಂಪೂರ್ಣವಾಗಿ ಆವರಿಸುವ ಬಟ್ಟೆಗಳನ್ನು ಧರಿಸಿ. ಮಲಗುವಾಗ ಸೊಳ್ಳೆ ಪರದೆಗಳನ್ನು ಬಳಸಿ, ಸೊಳ್ಳೆ ಕಡಿತವನ್ನು ತಡೆಯಲು ದೇಹಕ್ಕೆ ಎಣ್ಣೆ ಅಥವಾ ಕೆನೆ ಹಚ್ಚಿ. ನಿಮ್ಮ ಮನೆ ಮತ್ತು ಸುತ್ತಮುತ್ತ ನೀರು ಸಂಗ್ರಹವಾಗದಂತೆ ನೋಡಿಕೊಳ್ಳಿ. ಅಲ್ಲದೆ ಕೂಲರ್ ಅನ್ನು ಕಾಲಕಾಲಕ್ಕೆ ಸ್ವಚ್ಛಗೊಳಿಸಬೇಕು. ಡೆಂಗ್ಯೂ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸಿ.

Source : https://zeenews.india.com/kannada/health/dengue-mosquito-after-how-many-days-after-a-mosquito-bite-dengue-comes-how-to-prevent-it-220546

Leave a Reply

Your email address will not be published. Required fields are marked *