ಪುಂಡಿ ಪಲ್ಲೆ ಸೇವನೆ ಆರೋಗ್ಯಕ್ಕೆ ಎಷ್ಟು ಒಳ್ಳೆದು ಗೊತ್ತಾ?

  • ಪುಂಡಿ ಪಲ್ಲೆ ಹಸಿವು ಹೆಚ್ಚಿಸುತ್ತದೆ ಹಾಗೂ ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ
  • ಪ್ರತಿದಿನ ಪುಂಡಿ ಪಲ್ಲೆ ಸೇವಿಸಿದರೆ ಹೃದಯ ಹಾಗೂ ನರಗಳಿಗೆ ಶಕ್ತಿ ದೊರೆಯುತ್ತದೆ
  • ನಿಯಮಿತವಾಗಿ ಪುಂಡಿ ಪಲ್ಲೆ ಸೇವನೆಯಿಂದ ಮಲಬದ್ಧತೆ ನಿವಾರಣೆಯಾಗುತ್ತದೆ

Gongura leaves health benefits: ದಕ್ಷಿಣ ಭಾರತದ ರಾಜ್ಯಗಳಲ್ಲಿ ಬೆಳೆಯುವ ಪುಂಡಿ ಪಲ್ಲೆ/ಪುಂಡಿ ಸೊಪ್ಪು ಗ್ರಾಮೀಣ ಹಾಗೂ ರೈತಾಪಿ ಜನರ ಮೆಚ್ಚಿನ ತರಕಾರಿ. ಸಾಮಾನ್ಯವಾಗಿ ಗೊಂಗುರ ಸೊಪ್ಪು ಎಂದು ಕರೆಯಲ್ಪಡುವ ಇದನ್ನು ಪುಂಡಿ ಪಲ್ಲೆ, ಪುಂಡಿ ಸೊಪ್ಪು, ಪುಳಚ ಕೀರೆ ಎಂತಲೂ ಕರೆಯುತ್ತಾರೆ. ಪುಂಡಿ ಸೊಪ್ಪಿನಿಂದ ಪಲ್ಯ, ಚಟ್ನಿ ಮತ್ತು ಉಪ್ಪಿನಕಾಯಿ ತಯಾರಿಸುತ್ತಾರೆ. ಮಾಂಸಾಹಾರ ಅಡುಗೆಗಳಲ್ಲೂ ಇದನ್ನು ಬಳಸುತ್ತಾರೆ. 

ಜೋಳದ ನುಚ್ಚು ಶೇಂಗಾ ಕಾಳು ಅಥವಾ ಹೆಸರು ಕಾಳು ಹಾಕಿ ಅಭಿರುಚಿಗೆ ತಕ್ಕಂತೆ ಪುಂಡಿ ಪಲ್ಲೆಯನ್ನು ಮಾಡಲಾಗುತ್ತದೆ. ಪುಂಡಿ ಪಲ್ಲೆ ಮೊದಲು ಮಣ್ಣಿನ ಗಡಿಗೆಯೊಳಗೆ ಮಾಡಿ ಇಟ್ಟರೆ ಮೂರ್ನಾಲ್ಕು ದಿನವಾದರೂ ಕೆಡುತ್ತಿರಲಿಲ್ಲ. ಜೋಳದ ರೊಟ್ಟಿ/ಖಡಕ್ ಸಜ್ಜಿ ರೊಟ್ಟಿ ಪುಂಡಿ ಪಲ್ಲೆ, ಮೊಸರು, ಕೆಂಪು ಖಾರ, ಉಳ್ಳಾಗಡ್ಡಿ, ಮಿಡಿ ಸೌತೆಕಾಯಿ ಸೇರಿಸಿ ತಿನ್ನುವ ಉತ್ತರ ಕರ್ನಾಟಕದ ಜವಾರಿ ಊಟದ ಮಜಾವೇ ಬೇರೆ ಎಂದು ಹೇಳಬಹುದು.  

ಪುಂಡಿ ಪಲ್ಲೆ ಸೊಪ್ಪಿನಲ್ಲಿ ಅಧಿಕ ಪ್ರಮಾಣದ ಶರ್ಕರ ಪೀಷ್ಠ, ಪೊಟ್ಯಾಷಿಯಂ, ಮೆಗ್ನೀಷಿಯಂ, ಎ ಜೀವಸತ್ವ ಜೊತೆಗೆ ಸಿಟ್ರಿಕ್ ಆಮ್ಲ ಖನಿಜಾಂಶಗಳನ್ನು ಹೊಂದಿದೆ. ಪುಂಡಿ ಪಲ್ಲೆ ಹಲವಾರು ಔಷಧೀಯ ಗುಣಗಳನ್ನು ಹೊಂದಿದೆ. ಪುಂಡಿ ಪಲ್ಲೆ ಸೇವನೆಯಿಂದ ಹಲವಾರು ಆರೋಗ್ಯಕರ ಪ್ರಯೋಜನಗಳನ್ನು ಹೊಂದಿದೆ. 

  • ಪುಂಡಿ ಪಲ್ಲೆ ಮೃದು ವಿರೇಚಕವಾಗಿದ್ದು, ಮಲಬದ್ಧತೆ ನಿವಾರಣೆಯಾಗುತ್ತದೆ
  • ಪುಂಡಿ ಪಲ್ಲೆಯ ವಿಶೇಷ ಹುಳಿಯ ಅಂಶವು ಪಿತ್ತ ಜನಾಂಗಕ್ಕೆ ಬಲ ನೀಡುತ್ತದೆ
  • ಪುಂಡಿ ಪಲ್ಲೆ ಆಹಾರದ ರುಚಿ ಹೆಚ್ಚಿಸುವ ಗುಣವನ್ನು ಹೊಂದಿದೆ
  • ಪುಂಡಿ ಪಲ್ಲೆ ಶುದ್ಧ ರಕ್ತವನ್ನು ಹೆಚ್ಚಿಸಲು ಸಹಕಾರಿಯಾಗಿದೆ
  • ಪುಂಡಿ ಪಲ್ಲೆ ಹಸಿವನ್ನು ಹೆಚ್ಚಿಸುತ್ತದೆ ಹಾಗೂ ಜೀರ್ಣಕ್ರಿಯೆ ಸರಿಯಾಗಿ ನಡೆಯಲು ಸಹಾಯ ಮಾಡುತ್ತದೆ
  • ಪುಂಡಿ ಪಲ್ಲೆ ಹೃದಯ ಹಾಗೂ ನರಗಳಿಗೆ ಶಕ್ತಿ ನೀಡುತ್ತದೆ
  • ಪುಂಡಿ ಹೂಗಳ ರಸಕ್ಕೆ ಕಲ್ಲು ಸಕ್ಕರೆ, ಕರಿ ಮೆಣಸಿನ ಪುಡಿ ಬೆರೆಸಿ ದಿನಕ್ಕೆರಡು ಬಾರಿ ಸೇವಿಸಿದರೆ ಪಿತ್ತದಿಂದ ಉಂಟಾಗುವ ವಾಕರಿಕೆ ನಿವಾರಣೆಯಾಗುತ್ತದೆ
  • ಪುಂಡಿ ಗಿಡದ ಬೀಜಗಳಿಂದ ಎಣ್ಣೆ ತೆಗೆಯುತ್ತಾರೆ. ಆಯುರ್ವೇದಲ್ಲಿ ಇದಕ್ಕೆ ತುಂಬಾ ಪ್ರಾಮುಖ್ಯತೆಯನ್ನು ನೀಡಲಾಗಿದೆ.

Source : https://zeenews.india.com/kannada/health/health-tips-amazing-health-benefits-of-gongura-leaves-222183

 

Leave a Reply

Your email address will not be published. Required fields are marked *