ಕಂಪ್ಯೂಟರ್​ನಂತೆಯೇ ನಿಮ್ಮ ಮೆದುಳು ಚುರುಕಾಗಿ ಕೆಲಸ ಮಾಡಬೇಕಾ? ಹಾಗಾದ್ರೆ ಈ ಅಭ್ಯಾಸಗಳನ್ನು ರೂಢಿಸಿಕೊಳ್ಳಿ!

ಮೆದುಳು (Brain) ದೇಹದ ಅತ್ಯಂತ ಮುಖ್ಯವಾದ ಅಂಗ. ಮೆದುಳು ಉತ್ತಮವಾಗಿ ಕಾರ್ಯನಿರ್ವಹಿಸಲು ದೇಹದ (Body) ಇತರ ಭಾಗಗಳಂತೆ ಅವುಗಳಿಗೂ ನಿಯಮಿತ ಆರೈಕೆಯ ಅಗತ್ಯವಿದೆ. ನಮ್ಮ ದಿನಚರಿಯಲ್ಲಿ ಕೆಲವು ಸರಳ ಅಭ್ಯಾಸಗಳನ್ನು (Habits) ಮಾಡಿಕೊಳ್ಳುವುದು ಮೆದುಳನ್ನು ಚುರುಕುಗೊಳಿಸಲು ಮತ್ತು ಹಾನಿಯಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಹಾಗಾದ್ರೆ ಮೆದುಳಿನ ಆರೋಗ್ಯವನ್ನು (Brain Health) ಹೆಚ್ಚಿಸಲು ಏನು ಮಾಡಬೇಕೆಂದು ತಿಳಿಯೋಣ ಬನ್ನಿ.

ಮೆದುಳಿನ ಆರೋಗ್ಯವನ್ನು ಹೆಚ್ಚಿಸಲು ಈ 7 ಸರಳ ಅಭ್ಯಾಸಗಳು

ಕಲಿಕೆಯನ್ನು ಎಂದಿಗೂ ನಿಲ್ಲಿಸಬೇಡಿ

ಹೊಸ, ಹೊಸ ವಿಷಯಗಳನ್ನು ಕಲಿಯುವುದು ಮೆದುಳಿನ ಆರೋಗ್ಯಕ್ಕೆ ಒಳ್ಳೆಯದು. ಹಾಗಂತ ಸಂಕೀರ್ಣವಾದ, ಕಷ್ಟಕರವಾದ ವಿಷಯಗಳನ್ನು ಓದಬೇಕು ಎಂದರ್ಥವಲ್ಲ. ಬದಲಾಗಿ ಹೊಸ ಪುಸ್ತಕವನ್ನು ಓದುವುದು, ಹೊಸ ಭಾಷೆಯನ್ನು ಕಲಿಯುವುದು ಅಥವಾ ಹೊಸ ಹವ್ಯಾಸವನ್ನು ರೂಢಿಸಿಕೊಳ್ಳುವಂತಹ ಸರಳ ಚಟುವಟಿಕೆಗಳು ಮೆದುಳನ್ನು ಉತ್ತೇಜಿಸಬಹುದು.

ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆನ್ ಏಜಿಂಗ್ ನಡೆಸಿದ ಅಧ್ಯಯನದ ಪ್ರಕಾರ, ನಿರಂತರ ಕಲಿಕೆಯು ಮೆದುಳಿನ ಪ್ಲಾಸ್ಟಿಟಿಯನ್ನು ಉತ್ತೇಜಿಸುತ್ತದೆ. ಇದು ಅರಿವಿನ ಕಾರ್ಯಗಳನ್ನು ಸುಧಾರಿಸಲು ಸಹಾಯ ಮಾಡುವುದರೊಂದಿಗೆ ಬುದ್ಧಿಮಾಂದ್ಯತೆಯ ಅಪಾಯವನ್ನು ಕಡಿಮೆ ಮಾಡುತ್ತದೆ.

ಎಲ್ಲಾ ಇಂದ್ರಿಯಗಳನ್ನು ಬಳಸಿಕೊಳ್ಳಿ

ನಮ್ಮ ಎಲ್ಲಾ ಇಂದ್ರಿಯಗಳನ್ನು ತೊಡಗಿಸಿಕೊಳ್ಳುವುದು ನಮ್ಮ ಮೆದುಳನ್ನು ಸಕ್ರಿಯವಾಗಿ ಮತ್ತು ಎಚ್ಚರವಾಗಿರಿಸಲು ಸಹಾಯ ಮಾಡುತ್ತದೆ. ದೃಷ್ಟಿ, ಧ್ವನಿ, ಸ್ಪರ್ಶ, ರುಚಿ ಮತ್ತು ವಾಸನೆಯನ್ನು ಒಳಗೊಂಡಿರುವ ಚಟುವಟಿಕೆಗಳು ಮೆದುಳಿನ ವಿವಿಧ ಭಾಗಗಳನ್ನು ಉತ್ತೇಜಿಸಬಹುದು. ಉದಾಹರಣೆಗೆ, ಹೊಸ ಪಾಕವಿಧಾನವನ್ನು ಪ್ರಯತ್ನಿಸುವುದು ಬಹು ಇಂದ್ರಿಯಗಳನ್ನು ತೊಡಗಿಸಿಕೊಳ್ಳಬಹುದು. ಇದು ನರ ಸಂಪರ್ಕಗಳನ್ನು ಬಲಪಡಿಸುತ್ತದೆ. ಟೆಕ್ಸಾಸ್ ವಿಶ್ವವಿದ್ಯಾನಿಲಯದ ಸಂಶೋಧನೆಯು ಸಂವೇದನಾ-ಸಮೃದ್ಧ ಅನುಭವಗಳು ಅರಿವಿನ ಸಾಮರ್ಥ್ಯಗಳನ್ನು ಮತ್ತು ನೆನಪಿನ ಶಕ್ತಿಯನ್ನು ಹೆಚ್ಚಿಸುವುದಾಗಿ ಹೇಳುತ್ತವೆ.

ಧ್ಯಾನದ ಅಭ್ಯಾಸ

ಧ್ಯಾನವು ಮೆದುಳಿನ ಮೇಲೆ ಅದ್ಭುತ ಪರಿಣಾಮ ಬೀರುತ್ತದೆ. ನಿಯಮಿತ ಧ್ಯಾನವು ಕಲಿಕೆ, ಸ್ಮರಣೆ ಮತ್ತು ಭಾವನಾತ್ಮಕ ನಿಯಂತ್ರಣಕ್ಕೆ ಸಂಬಂಧಿಸಿದ ಮೆದುಳಿನ ಪ್ರದೇಶಗಳಲ್ಲಿ ಬೂದು ದ್ರವ್ಯವನ್ನು ಹೆಚ್ಚಿಸುತ್ತದೆ. ಫ್ರಾಂಟಿಯರ್ಸ್ ಇನ್ ಹ್ಯೂಮನ್ ನ್ಯೂರೋಸೈನ್ಸ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನವು ಧ್ಯಾನವು ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ವಯಸ್ಸಿಗೆ ಸಂಬಂಧಿಸಿ ನೆನಪಿನ ಶಕ್ತಿ ಕಡಿಮೆಯಾಗುವುದನ್ನು ನಿಧಾನಗೊಳಿಸುತ್ತದೆ ಎಂದು ತಿಳಿಸಿದೆ.

ಸಕ್ಕರೆ ಸೇವನೆ ಕಡಿಮೆ ಮಾಡುವುದು

ಸಕ್ಕರೆ ಸೇವನೆಯನ್ನು ಕಡಿಮೆ ಮಾಡುವುದು ನಮ್ಮ ಮೆದುಳಿನ ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಹೆಚ್ಚಿನ ಸಕ್ಕರೆ ಸೇವನೆಯು ನೆನಪಿನ ಶಕ್ತಿ ಕಡಿಮೆಯಾಗುವುದು ಮತ್ತು ಆಲ್ಝೈಮರ್‌ನಂತಹ ನ್ಯೂರೋ ಡಿಜೆನೆರೆಟಿವ್ ಕಾಯಿಲೆಗಳ ಅಪಾಯಕ್ಕೆ ಸಂಬಂಧಿಸಿದೆ.

ನ್ಯೂಟ್ರಿಷನಲ್ ನ್ಯೂರೋಸೈನ್ಸ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಸಂಸ್ಕರಿಸಿದ ಸಕ್ಕರೆಗಳಲ್ಲಿ ಹೆಚ್ಚಿನ ಆಹಾರಗಳು ಮೆದುಳಿನಲ್ಲಿ ಉರಿಯೂತ ಮತ್ತು ಆಕ್ಸಿಡೇಟಿವ್ ಒತ್ತಡವನ್ನು ಉಂಟು ಮಾಡಬಹುದು. ಇದು ನೆನಪಿನ ಶಕ್ತಿ ಕಡಿಮೆಯಾಗಲು ಕಾರಣವಾಗುತ್ತದೆ.

ಏರೋಬಿಕ್ ವ್ಯಾಯಾಮ

ಏರೋಬಿಕ್ ವ್ಯಾಯಾಮ ನಮ್ಮ ದೇಹಕ್ಕೆ ಮಾತ್ರವಲ್ಲ, ನಮ್ಮ ಮೆದುಳಿಗೂ ಅತ್ಯುತ್ತಮವಾಗಿದೆ. ವಾಕಿಂಗ್, ಈಜು ಮತ್ತು ಸೈಕ್ಲಿಂಗ್‌ನಂತಹ ಚಟುವಟಿಕೆಗಳು ಮೆದುಳಿಗೆ ರಕ್ತದ ಹರಿವನ್ನು ಹೆಚ್ಚಿಸಬಹುದು. ಇವು ಹೊಸ ನ್ಯೂರಾನ್‌ಗಳ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಮತ್ತು ಒಟ್ಟಾರೆ ಮೆದುಳಿನ ಕಾರ್ಯವನ್ನು ಸುಧಾರಿಸುತ್ತದೆ. ನಿಯಮಿತ ಏರೋಬಿಕ್ ವ್ಯಾಯಾಮವು ಸ್ಮರಣೆಯನ್ನು ಹೆಚ್ಚಿಸಲು, ಆತಂಕವನ್ನು ಕಡಿಮೆ ಮಾಡಲು ಮತ್ತು ವಯಸ್ಸಿಗೆ ಸಂಬಂಧಿಸಿದ ಮೆದುಳಿನ ಕ್ಷೀಣತೆಯಿಂದ ರಕ್ಷಿಸಲು ಸಹಾಯ ಮಾಡುತ್ತದೆ.

ಸರಳವಾದ ಗಣಿತದ ಲೆಕ್ಕ ಬಿಡಿಸಲು ಪ್ರಯತ್ನಿಸುವುದು

ಸರಳವಾದ ಗಣಿತದ ಲೆಕ್ಕದ ಸಮಸ್ಯೆಗಳನ್ನು ಬಿಡಿಸಲು ಪ್ರಯತ್ನಿಸುವುದು ನಮ್ಮ ಮೆದುಳನ್ನು ತೀಕ್ಷ್ಣವಾಗಿಡಲು ಉತ್ತಮ ಮಾರ್ಗವಾಗಿದೆ. ಇದು ತ್ವರಿತವಾಗಿ ಯೋಚಿಸಲು ನಮ್ಮ ಮಿದುಳಿಗೆ ಸವಾಲು ಹಾಕುತ್ತದೆ ಮತ್ತು ಸಮಸ್ಯೆ-ಪರಿಹರಿಸುವ ಕೌಶಲ್ಯಗಳನ್ನು ಸುಧಾರಿಸುತ್ತದೆ. ಮಾನಸಿಕ ಅಂಕಗಣಿತವು ಮೆದುಳಿನ ಪ್ರದೇಶಗಳನ್ನು ಸಕ್ರಿಯಗೊಳಿಸುತ್ತದೆ. ಇದು ಅರಿವಿನ ಕಾರ್ಯ ಮತ್ತು ಮೆದುಳಿನ ಪ್ಲಾಸ್ಟಿಟಿಯನ್ನು ಹೆಚ್ಚಿಸುತ್ತದೆ ಎಂದು ಅಧ್ಯಯನಗಳು ಸೂಚಿಸುತ್ತವೆ.

ಮೆದುಳಿಗೆ ವಿಶ್ರಾಂತಿ ನೀಡುವುದು

ನಮ್ಮ ಮೆದುಳಿಗೆ ಚಟುವಟಿಕೆ ಎಷ್ಟು ಮುಖ್ಯವೋ ವಿಶ್ರಾಂತಿಯೂ ಅಷ್ಟೇ ಮುಖ್ಯ. ನಮ್ಮ ಮೆದುಳಿಗೆ ನಿಯಮಿತ ವಿರಾಮಗಳನ್ನು ನೀಡುವುದರಿಂದ ಗಮನ, ಸೃಜನಶೀಲತೆ ಮತ್ತು ಉತ್ಪಾದಕತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಮೆದುಳಿಗೆ ವಿಶ್ರಾಂತಿ ಎಂದರೆ ಆಗಾಗ್ಗೆ ಸಣ್ಣ, ಸಣ್ಣ ವಿರಾಮಗಳನ್ನು ತೆಗೆದುಕೊಳ್ಳುವುದಾಗಿದೆ. ಅಮೇರಿಕನ್ ಸೈಕಲಾಜಿಕಲ್ ಅಸೋಸಿಯೇಷನ್‌ ​ಪ್ರಕಾರ, ನಿಯಮಿತವಾದ ಸಣ್ಣ ವಿರಾಮಗಳು ಮಾನಸಿಕ ಆಯಾಸವನ್ನು ಕಡಿಮೆ ಮಾಡಲು ಮತ್ತು ನೆನಪಿನ ಶಕ್ತಿ ಸುಧಾರಿಸಲು ಸಹಾಯ ಮಾಡುತ್ತವೆ.

Source : https://kannada.news18.com/news/lifestyle/these-daily-habits-that-help-you-to-keep-the-mind-young-and-sharp-stg-mnk-1769175.html

Leave a Reply

Your email address will not be published. Required fields are marked *