ಚಿತ್ರದುರ್ಗ: ಚಿನ್ಮೂಲಾದ್ರಿ ರಾಷ್ಟ್ರೀಯ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಅಂತರಾಷ್ಟೀಯ ಚೆಸ್ ದಿನಾಚರಣೆಯನ್ನು ಆಚರಿಸಲಾಯಿತು.

ಕಾಲೇಜಿನ ಡೀನ್ ಗೋಪಾಲ್ ಅವರು ನಮ್ಮ ಬುದ್ದಿ ಚುರುಕುಗೊಳ್ಳಲು, ಮಾನಸಿಕವಾಗಿ ಸ್ಥೈರ್ಯಗೊಳ್ಳಲು ಚದುರಂಗದ ಆಟ ತುಂಬಾ ಸಹಾಯಕ ಎಂದರು.


ಕಾಲೇಜಿನ ಪ್ರಾಚಾರ್ಯ ಬಿ.ನಾಗರಾಜ್ ಮತ್ತು ಉಪನ್ಯಾಸಕ ವರ್ಗದವರು ವಿದ್ಯಾರ್ಥಿಗಳಿಗೆ ಚದುರಂಗ ಸ್ಪರ್ಧೆಗಳನ್ನು ಏರ್ಪಡಿಸಿದ್ದರು. ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು.