ಮಣಿಪಾಲ ಆರೋಗ್ಯ ಕಾರ್ಡ್ 2026: ನೋಂದಣಿಗೆ ಆಗಸ್ಟ್ 31 ಕೊನೆಯ ದಿನ.

ಚಿತ್ರದುರ್ಗ ಆ. 6

ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್

ಮಣಿಪಾಲದ ಕಸ್ತೂರ್ಬಾ ಆಸತ್ರೆಯ ಮಣಿಪಾಲ ಆರೋಗ್ಯ ಕಾರ್ಡ್ 2026ಕ್ಕೆ ನೋಂದಣಿ ಆರಂಭವಾಗಿದ್ದು, ಆಗಸ್ಟ್ 31 ಕೊನೆ ದಿನಾಂಕವಾಗಿದೆ ಎಂದು ಮಣಿಪಾಲ್ ಕಸ್ತೂರ್ಬಾ ಆಸ್ಪತ್ರೆಯ ಮಾರ್ಕೆಟಿಂಗ್ ವಿಭಾಗದ ಮುಖ್ಯಸ್ಥರಾದ ಸಚಿನ್ ಕಾರಂತ್ ತಿಳಿಸಿದರು. 

ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಪ್ರದೇಶದ ಅತ್ಯಂತ ವಿಶ್ವಾಸಾರ್ಹ ಆರೋಗ್ಯ ರಕ್ಷಣಾ ಪ್ರಯೋಜನ ಕಾರ್ಯಕ್ರಮಗಳಲ್ಲಿ ಒಂದಾದ ಮಣಿಪಾಲ ಆರೋಗ್ಯ ಕಾರ್ಡ್, ಕಳೆದ 26 ವರ್ಷಗಳಿಂದ ಗುಣಮಟ್ಟದ ವೈದ್ಯಕೀಯ ಆರೈಕೆಯನ್ನು ಹೆಚ್ಚು ಕೈಗೆಟುಕುವ ಮತ್ತು ಪ್ರವೇಶಿಸುವಂತೆ ಮಾಡುವ ಮೂಲಕ ಸಮುದಾಯಗಳಿಗೆ ಸೇವೆ ಸಲ್ಲಿಸುತ್ತಿದೆ. ಮಣಿಪಾಲದ ಸಂಸ್ಥಾಪಕ ಡಾ.ಟಿ.ಎಂ.ಎ. ಪೈ ಅವರ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತದೆ, ಅವರ ಧೈಯವೆಂದರೆ ಸಮಾಜದ ಪ್ರತಿಯೊಂದು ವರ್ಗವನ್ನು, ವಿಶೇಷವಾಗಿ ಗ್ರಾಮೀಣ ಸಮುದಾಯಗಳನ್ನು ಗುಣಮಟ್ಟದ ಆರೋಗ್ಯ ಸೇವೆ ತಲುಪುವಂತೆ ಮಾಡುವುದು.ಮಾಹೆ ಮಣಿಪಾಲದ ಈಗಿನ ಕುಲಾಧಿಪತಿ ಡಾ. ರಾಮದಾಸ್ ಎಂ. ಪೈ ಅವರ ಮಾರ್ಗದರ್ಶನದಲ್ಲಿ 2000 ರಲ್ಲಿ ಪ್ರಾರಂಭವಾದ ಈ ಕಾರ್ಯಕ್ರಮವು, 26 ವರ್ಷಗಳಲ್ಲಿ ಗಮನಾರ್ಹ ಬೆಳವಣಿಗೆಯನ್ನು ಕಂಡಿದೆ. ತನ್ನ ಆರಂಭಿಕ ವರ್ಷದಲ್ಲಿ ಕೇವಲ 3,200 ಕುಟುಂಬಗಳನ್ನು ದಾಖಲಿಸಿಕೊಂಡಿದ್ದ ಈ ಯೋಜನೆ ಗಣನೀಯವಾಗಿ ವಿಸ್ತರಿಸಿದೆ. ಕಳೆದ ಹಣಕಾಸು ವರ್ಷದಲ್ಲಿ. ಸುಮಾರು 2 ಲಕ್ಷ ಕುಟುಂಬಗಳು ದಾಖಲಾಗಿವೆ ಮತ್ತು ಪ್ರಸ್ತುತ ಈ ಕಾರ್ಯಕ್ರಮದಡಿ ಸುಮಾರು 6.5 ಲಕ್ಷ ಸದಸ್ಯರು ಪ್ರಯೋಜನ ಪಡೆಯುತ್ತಿದ್ದಾರೆ, ಈ ಮೂಲಕ ಕರ್ನಾಟಕ ಮತ್ತು ನೆರೆಯ ರಾಜ್ಯಗಳಾದ್ಯಂತ ಲಕ್ಷಾಂತರ ಜನರಿಗೆ ಪ್ರಯೋಜನವನ್ನು ನೀಡುತ್ತಿದೆ ಎಂದರು.

ಈ ಉಪಕ್ರಮದ ಕುರಿತು ಮಾತನಾಡಿದ ಆಸ್ಪತ್ರೆ ಪ್ರತಿನಿಧಿಗಳು, ಮಣಿಪಾಲ ಆರೋಗ್ಯ ಕಾರ್ಡ್ ಒಂದು ವರ್ಷದ ಸದಸ್ಯತ್ವ ಕಾರ್ಯಕ್ರಮವಾಗಿದ್ದು, ವ್ಯಕ್ತಿಗಳು ಮತ್ತು ಕುಟುಂಬಗಳಿಗೆ ಕೈಗೆಟುಕುವ ಆರೋಗ್ಯ ಸೇವೆಯನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ. “ಸಂಪೂರ್ಣ ಕುಟುಂಬಕ್ಕಾಗಿ, ಶ್ರೇಷ್ಠ ಮೌಲ್ಯ, ವಿಶ್ವಾಸಾರ್ಹ ಸೇವೆ ” ಎಂಬ ಟ್ಯಾಗ್ ಲೈನ್ ಅಡಿಯಲ್ಲಿ, ಕಾರ್ಡ್ ಮಾಹೆ ಸಮೂಹ ಆಸ್ಪತ್ರೆಗಳಲ್ಲಿ ವ್ಯಾಪಕ ಶ್ರೇಣಿಯ ಆರೋಗ್ಯ ಪ್ರಯೋಜನಗಳನ್ನು ನೀಡುತ್ತಿದೆ ಎಂದು ತಿಳಿಸಿದರು.

ಪ್ರತಿ ವರ್ಷದಂತೆ ಈ ವರ್ಷವೂ ಸಹ ರಿಯಾಯಿತಿ ದರದಲ್ಲಿ ನೀಡುವ ಮಣಿಪಾಲ್ ಆರೋಗ್ಯ ಕಾರ್ಡ್ ಜೂನ್ ತಿಂಗಳಿನಿಂದ ಆರಂಭವಾಗಿ ಆಗಸ್ಟ್ 31ಕ್ಕೆ ಕೊನೆಗೊಳ್ಳಲಿದೆ ನಂತರ ಬಂದ ಯಾವುದೇ ಅಪ್ಲಿಕೇಶನ್‍ಗಳನ್ನು ತೆಗೆದುಕೊಳ್ಳುವುದಿಲ್ಲ ಮಣಿಪಾಲ್ ಆರೋಗ್ಯ ಕಾರ್ಡಿನಿಂದ ಮಣಿಪಾಲ್ ಸಮೂಹ ಸಂಸ್ಥೆಯ ಆಸ್ಪತ್ರೆಗಳಲ್ಲಿ ಪಡೆಯುವ ಚಿಕಿತ್ಸೆಗೆ ರಿಯಾಯಿತಿ ಇರುತ್ತದೆ, ಕರ್ನಾಟಕ ಮತ್ತು ನೆರೆಯ ರಾಜ್ಯಗಳಾದ್ಯಂತ ಕುಟುಂಬಗಳು ಕೈಗೆಟುಕುವ ಗುಣಮಟ್ಟದ ಆರೋಗ್ಯ ಸೇವೆಯಿಂದ ಪ್ರಯೋಜನ ಪಡೆಯುವಂತೆ ತಿಳಿಸಿದರು. ಈ Manipal ArogyaCard ಮಣಿಪಾಲ್ ಆರೋಗ್ಯ ಕಾರ್ಡ್ ಪ್ರಯೋಜನಗಳು ನೋಂದಣೆಯ ನಂತರ ತಿಂಗಳ 15ನೇ ತಾರೀಖಿನಿಂದ ಜಾರಿಗೆ ಬರುತ್ತವೆ ಮತ್ತು 15 ಆಗಸ್ಟ್ 2027 ರವರೆಗೆ ಮಾನ್ಯವಾಗಿರುತ್ತವೆ ಎಂದು ಹೇಳಿದರು.

ವೈಯಕ್ತಿಕ ಸದಸ್ಯತ್ವಕ್ಕೆ ಒಂದು ವರ್ಷಕ್ಕೆ 350 ರೂ ಗಳು, ಕೌಟಂಬಿಕ ಸದಸ್ಯತ್ವಕ್ಕೆ ಒಂದು ವರ್ಷಕ್ಕೆ 1700 (ಸ್ವಯಂ ಮತ್ತು ಸಂಗಾತಿ ಹಾಗೂ 25 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯಾವುದೇ ಅವಿವಾಹಿತ ಮಕ್ಕಳು) ಕೌಟಂಬಿಕ ಪ್ಲಸ್ ಸದಸ್ಯತ್ವಕ್ಕೆ ಒಂದು ವರ್ಷಕ್ಕೆ 1900 (ಸ್ವಯಂ, ಸಂಗಾತಿ. 25 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯಾವುದೇ ಅವಿವಾಹಿತ ಮಕ್ಕಳು, ತಂದೆ ತಾಯಿ ಮತ್ತು ಸಂಗಾತಿಯ ತಂದೆ. ತಾಯಿ ಸೇರಿದಂತೆ ನಾಲ್ಕು ಪೋಷಕರಿಗೆ ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.ಸದಸ್ಯರು 88675 79797 ಗೆ ಮಿಸ್ ಕಾಲ್ ನೀಡುವ ಮೂಲಕ ತಮ್ಮ ಕಾರ್ಡ್ ನೋಂದಣಿ ಸ್ಥಿತಿ ಮತ್ತು ಸಿಂಧು ವಿವರವನ್ನು ಪರಿಶೀಲಿಸಬಹುದು.  ಇತರ ಆಸ್ಪತ್ರೆಗಳಲ್ಲಿನ ರಿಯಾಯಿತಿಗಳು, ಸದಸ್ಯತ್ವ ಪ್ರಯೋಜನಗಳು ಮತು ನೋಂದಣಿ ಕುರಿತು ವಿವರಗಳಿ ಗಾಗಿ www.manipalhealthcard.com ಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದು ನಂ. 998085 4700/ 0820-2923748 ಸಂಪರ್ಕಿಸಬಹುದು ಎಂದು ತಿಳಿಸಿದರು. 

ದಾವಣಗೆರೆಯಲ್ಲಿ ಅಧಿಕೃತ ಪ್ರತಿನಿಧಿಗಳಾಗಿ ಕಸ್ತೂರ್ಬಾ ಆಸ್ಪತ್ರೆ ಮಾಹಿತಿ ಕೇಂದ್ರ, ಕೆಂಚನಗೌಡ 9731709177,-8904219373,9353720350, ರವಿ ಎಂ, 897174030, ಉಮೇಶ್ ಜೆ.ಜೆ. 9481291499 ಇವರನ್ನು ಸಂಪರ್ಕಿಸಬಹುದಾಗಿದೆ ಎಂದರು.  ಸುದ್ದಿಗೋಷ್ಠಿಯಲ್ಲಿ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ವ್ಯವಸ್ಥಾಪಕರಾದ ಕೃಷ್ಣ ಪ್ರಸಾದ್, ಪ್ರತಿನಿಧಿ ಅನಿಲ್ ಮಣಿಪಾಲ ಆರೋಗ್ಯ ಕಾರ್ಡ್ ಮುಖ್ಯ ಸಂಯೋಜಕ ಕೆಂಚನಗೌಡ ಕೆ. ಬಿ. ಭಾಗವಹಿಸಿದ್ದರು. 

Leave a Reply

Your email address will not be published. Required fields are marked *