ಉಗುರಿನ ಬಣ್ಣವೂ ತಿಳಿಸುತ್ತೆ ನಿಮ್ಮ ಆರೋಗ್ಯದ ಗುಟ್ಟು!

  • ನಿಮ್ಮ ಉಗುರುಗಳಿಂದಲೂ ತಿಳಿಯುತ್ತೇ ನಿಮ್ಮ ಆರೋಗ್ಯ
  • ಉಗುರುಗಳ ಮೇಲೆ ಕಂಡು ಬರುವ ಕೆಲವು ಲಕ್ಷಣಗಳು ಅನಾರೋಗ್ಯದ ಎಚ್ಚರಿಕೆಯ ಗಂಟೆಗಳು!

Health Tips: ಕೈ ಬೆರಳಿನ ಉಗುರುಗಳು ನಮ್ಮ ಆರೋಗ್ಯ ಸ್ಥಿತಿಯನ್ನು ಸಹ ಸಂಕೇತಿಸುತ್ತವೆ. ಉಗುರುಗಳಲ್ಲಿ ಕಂಡುಬರುವ ಕೆಲವು ಲಕ್ಷಣಗಳು ನಮ್ಮ ದೇಹದಲ್ಲಿ ಕೆಲ ರೋಗ ಲಕ್ಷಣಗಳ ಬಗ್ಗೆ ಎಚ್ಚರಿಕೆಯ ಗಂಟೆಯಾಗಿರುತ್ತದೆ ಎಂದು ಹೇಳಲಾಗುತ್ತದೆ. ಹಾಗಿದ್ದರೆ, ಉಗುರು ಯಾವ ಬಣ್ಣದಲ್ಲಿದ್ದರೆ ಇದು ಯಾವ ಅನಾರೋಗ್ಯದ ಸಂಕೇತವಾಗಿರುತ್ತದೆ ಎಂದು ತಿಳಿಯೋಣ… 

ಉಗುರುಗಳ ಮೇಲೆ ಕಂಡು ಬರುವ ಈ ಲಕ್ಷಣಗಳನ್ನು ಎಂದಿಗೂ ನಿರ್ಲಕ್ಷಿಸಬೇಡಿ:- 
ಬಲಹೀನ ಉಗುರುಗಳು:

ವೀಕ್ ಆಗಿರುವ ಉಗುರುಗಳು (Weak Nails) ನಮ್ಮ ದೇಹದಲ್ಲಿ ವಿಟಮಿನ್ ಎ, ವಿಟಮಿನ್ ಸಿ ಕೊರತೆಯನ್ನು ಸೂಚಿಸುತ್ತದೆ. 

ಹಳದಿ ಉಗುರುಗಳು: 
ಹಳದಿ ಬಣ್ಣದ ಉಗುರುಗಳು (Yellow Nails) ಮಧುಮೇಹ, ಥೈರಾಯ್ಡ್ ಹಾಗೂ ಫಂಗಸ್ ಲಕ್ಷಣಗಳನ್ನು ಸೂಚಿಸುತ್ತದೆ. 

ಉಗುರಿನ ಮೇಲೆ ಕಪ್ಪು ಗೆರೆ: 
ಉಗುರಿನ ಮೇಲೆ ಕಪ್ಪುಗೆರೆಗಳಿದ್ದರೆ ಅದು ರಕ್ತನಾಳಗಳು, ಹೃದಯದ ಸೋಂಕು ಹಾಗೂ ಚರ್ಮದ ಸಮಸ್ಯೆಯ ಸಂಕೇತವಾಗಿದೆ.

ಉಗುರಿನ ಮೇಲೆ ಉದ್ದ ರೇಖೆಗಳು: 
ಉಗುರಿನ ಮೇಲೆ ಉದ್ದ ರೇಖೆಗಳು ಕಂಡು ಬಂದರೆ ಇದು ದೇಹದಲ್ಲಿ ಕಬ್ಬಿಣದ ಕೊರತೆ, ರಕ್ತ ಹೀನತೆಯ ಸಾಮಾನ್ಯ ಲಕ್ಷಣವಾಗಿದೆ. 

ಉಗುರಿನ ಮೇಲೆ ಅಡ್ಡರೇಖೆಗಳು: 
ದೇಹದಲ್ಲಿ ಜಿಂಕ್ ಕೊರತೆ, ಮೂತ್ರಪಿಂಡದ ತೊಂದರೆಯಂತಹ ಸಮಸ್ಯೆಗಳಿದ್ದರೆ ಉಗುರುಗಳ ಮೇಲೆ ಅಡ್ಡರೇಖೆಗಳು ಕಾಣಿಸಿಕೊಳ್ಳುತ್ತದೆ. 

ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ಸಮಗ್ರ ಸುದ್ದಿ ಇದನ್ನು ಖಚಿತಪಡಿಸುವುದಿಲ್ಲ. 

Source : https://zeenews.india.com/kannada/health/disease-symptoms-in-fingernails-never-ignore-these-symptoms-found-on-your-fingernails-225691

Leave a Reply

Your email address will not be published. Required fields are marked *