ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಬೇಸತ್ತಿದ್ದೀರಾ? ಈ ಮನೆಮದ್ದುಗಳನ್ನು ಬಳಸಿ ಒಮ್ಮೆಗೆ ಹಗುರಾಗುತ್ತೀರಿ.

ಗ್ಯಾಸ್ಟ್ರಿಕ್ಹೊಟ್ಟೆಗೆ ಸಂಬಂಧಿಸಿದ ಈ ಸಮಸ್ಯೆ ಒಂದಿಲ್ಲೊಂದು ಬಾರಿ ನಮ್ಮೆಲ್ಲರನ್ನು ಕಾಡಿಯೇ ಇರುತ್ತದೆ. ಹಸಿವಾಗುತ್ತದೆ, ಆದರೆ ಆಹಾರವನ್ನು ಸೇವಿಸಲು ಆಗದಂತಹ ಪರಿಸ್ಥಿತಿ, ಅಥವಾ ತಿಂದರೂ ಹೊಟ್ಟೆ ಉಬ್ಬಿಸಿದಂತೆ ಭಾಸವಾಗುವಂತೆ ಮಾಡುತ್ತದೆ ಈ ಜಠರದ ಉರಿಯೂತ ಎಂಬ ಪೆಡಂಭೂತ. ಇದಕ್ಕೆ ಕಾರಣಗಳು ಹಲವಾರು. ಅತಿಯಾದ ಮಸಾಲೆಯುಕ್ತ ಪದಾರ್ಥಗಳ ಸೇವನೆ, ಮದ್ಯಪಾನ, ಕೆಲವು ನಿರ್ದಿಷ್ಟ ಔಷಧಿಗಳನ್ನು ತೆಗೆದುಕೊಳ್ಳುವುದು ಅಥವಾ ಕೆಲವು ಬಗೆಯ ಬ್ಯಾಕ್ಟೀರಿಯಾಗಳು ಈ ಜಠರದುರಿತಕ್ಕೆ ಕಾರಣವಾಗಬಹುದು.

ಹೊಟ್ಟೆಯಲ್ಲಿರುವ ಗ್ಯಾಸ್ಟ್ರಿಕ್ ಗ್ರಂಥಿಯು ಹೆಚ್ಚು ಆಮ್ಲವನ್ನು ಸ್ರವಿಸಿದಾಗ ಅಸಿಡಿಟಿ ಉಂಟಾಗುತ್ತದೆ. ಹೆಚ್ಚು ಆಮ್ಲ ಇದ್ದಾಗ, ಅದು ಅನಿಲ ರಚನೆ, ಕೆಟ್ಟ ಉಸಿರು, ಹೊಟ್ಟೆ ನೋವು ಮತ್ತು ಇತರ ರೋಗಲಕ್ಷಣಗಳಿಗೆ ಕಾರಣವಾಗುತ್ತದೆ. ಆದರೆ, ನಿಮಗೆ ಗೊತ್ತೆ, ಇವೆಲ್ಲವನ್ನು ಹೊರತುಪಡಿಸಿ, ಗ್ಯಾಸ್ಟ್ರಿಕ್ ಗೆ ಬೇರೆ ಕಾರಣಗಳೂ ಇವೆ. ಹೌದು, ಗ್ಯಾಸ್ಟ್ರಿಕ್‌ ಎಂಬುದು ಕಾಯಿಲೆಯಲ್ಲ. ಬದಲಾಗಿ, ಅದೊಂದು ಮನೋಸ್ಥಿತಿ.

ಮಾನವನ ಮನಸ್ಸಿಗೂ ಜೀರ್ಣಾಂಗದ ಕಾರ್ಯಕ್ಷಮತೆಗೂ ನಂಟಿದೆ. ಮೇಲ್ನೋಟಕ್ಕೆ ಇದೇನೂ ವಿಚಿತ್ರ ಎನಿಸಿದರೂ, ಬೇಸರವಾದಾಗ ಹಸಿವಾಗದಿರುವುದು ತೀರಾ ಹೆದರಿದಾಗ ಭೇದಿಯಾದಂತೆನಿಸುವುದು, ಇತ್ಯಾದಿಗಳನ್ನು ಗಮನಿಸಿದರೆ, ಇದು ಸತ್ಯ ಎನ್ನಿಸದಿರದು. ಮಾನವನ ಮಾನಸಿಕ ಸಮತೋಲನದಲ್ಲಿ ಸಮಸ್ಯೆಯಾದಾಗ ಜೀರ್ಣಾಂಗದ ಕಾರ್ಯಕ್ಷಮತೆ ಮೇಲೆ ಪರಿಣಾಮ ಬೀರುತ್ತದೆ.. ಗಲಿಬಿಲಿಗೊಂಡ ಮನಸ್ಸು ಜೀರ್ಣಾಂಗಕ್ಕೆ ಸರಿಯಾದ ಸೂಚನೆ ನೀಡಲು ಸಾಧ್ಯವಾಗುವುದಿಲ್ಲ. ಆಗ ಕಂಡುಬರುವುದೇ ಈ ಗ್ಯಾಸ್ಟ್ರಿಕ್‌ ಸಮಸ್ಯೆ!

ಹಾಗಾದರೆ, ಇದಕ್ಕೆ ಪರಿಹಾರವೇನು?

ಗ್ಯಾಸ್ಟ್ರಿಕ್ ಸಮಸ್ಯೆಗಳಿಗೆ ಬೇರೆಲ್ಲಾ ಔಷಧಿಗಳಿಂತ ಮನೆಮದ್ದು ಸೂಕ್ತ ಎಂದು ಸಾಕಷ್ಟು ವೈದ್ಯರೇ ಹೇಳುತ್ತಾರೆ. ಹಾಗಾದರೆ, ಯಾವ್ಯಾವ ಪದಾರ್ಥಗಳು ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಇಲ್ಲಿದೆ ನೋಡಿ ಪಟ್ಟಿ.

1. ಮಜ್ಜಿಗೆ

ಮಜ್ಜಿಗೆ ಉತ್ತಮವಾದ ಬ್ಯಾಕ್ಟೀರಿಯಾಗಳಿಂದ ತುಂಬಿರುವುದರಿಂದ ಆರೋಗ್ಯಕ್ಕೆ ಬಹಳ ಉತ್ತಮ. ಇದು ಪ್ರೋಟೀನ್‌ನ ಅತ್ಯುತ್ತಮ ಮೂಲವಾಗಿದ್ದು, ದೇಹವು ಆರೋಗ್ಯಕರ ಸ್ನಾಯುಗಳು ಮತ್ತು ಮೂಳೆಗಳನ್ನು ನಿರ್ಮಿಸಲು ಸಹಾಯ ಮಾಡುತ್ತದೆ. ಮಜ್ಜಿಗೆ ಚರ್ಮದ ಆರೋಗ್ಯವನ್ನೂ ಸುಧಾರಿಸುತ್ತದೆ.

ಆಮ್ಲೀಯತೆ ಸಮಸ್ಯೆಯುಂಟಾದಾಗ ಲ್ಯಾಕ್ಟಿಕ್ ಆಮ್ಲವನ್ನು ಹೊಂದಿರುವ ಒಂದು ಲೋಟ ಮಜ್ಜಿಗೆಯನ್ನು ಸೇವಿಸುವುದರಿಂದ ಹೊಟ್ಟೆಯಲ್ಲಿ ಗ್ಯಾಸ್ಟ್ರಿಕ್ ಆಮ್ಲೀಯತೆಯನ್ನು ಸಮತೋಲಗೊಳ್ಳುತ್ತದೆ.

2. ಲವಂಗಗಳು

ಲವಂಗವು ಉತ್ಕರ್ಷಣ ನಿರೋಧಕಗಳಿಂದ ತುಂಬಿದ್ದು, ಇದು ವಿವಿಧ ಕಾಯಿಲೆಗಳನ್ನು ತಂದೊಡ್ಡುವ ರಾಡಿಕಲ್ ಕೋಶಗಳ ವಿರುದ್ಧ ಹೋರಾಡಲು ದೇಹಕ್ಕೆ ಸಹಾಯ ಮಾಡುತ್ತದೆ. ಲವಂಗವು ಜಠರಗರುಳಿನಲ್ಲಿ ಗಾಳಿ ತುಂಬಿಕೊಳ್ಳುವುದನ್ನು ತಡೆಯಲು ದೇಹಕ್ಕೆ ಸಹಾಯ ಮಾಡುತ್ತದೆ.

3. ಜೀರಿಗೆ

ಜೀರಿಗೆ ಬೀಜಗಳು ಅತ್ಯುತ್ತಮ ನ್ಯೂಟ್ರಾಲೈಸರ್ ಆಗಿದ್ದು ನೋವು ನಿವಾರಕ ಗುಣಗಳನ್ನು ಹೊಂದಿದೆ. ಜೊತೆಗೆ, ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಊಟದ ನಂತರ, ಸ್ವಲ್ಪ ಹುರಿದ ಜೀರಿಗೆಯನ್ನು ಒಂದು ಲೋಟ ನೀರಿನಲ್ಲಿ ಬೆರೆಸಿ ಸೇವಿಸುವುದರಿಂದ ದೇಹವು ಆಹಾರವನ್ನು ಹೆಚ್ಚು ಪರಿಣಾಮಕಾರಿಯಾಗಿ ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಗಾಳಿ ಸೇರಿಕೊಳ್ಳುವುದನ್ನು ತಡೆಯುತ್ತದೆ.

4. ಆಪಲ್ ಸೈಡರ್ ವಿನೆಗರ್

ಆಪಲ್ ಸೈಡರ್ ವಿನೆಗರ್ ಅನ್ನು ದಿನಕ್ಕೆ ಎರಡು ಬಾರಿ ಒಂದು ಕಪ್ ನೀರಿನಲ್ಲಿ ಹಾಕಿ ಕುಡಿಯುವುದರಿಂದ ಗ್ಯಾಸ್ಟ್ರಿಕ್ ರೋಗಲಕ್ಷಣಗಳು ನಿವಾರಣೆಯಾಗುತ್ತವೆ.

5. ಬಾಳೆಹಣ್ಣುಗಳು

ಬಾಳೆಹಣ್ಣುಗಳು ಹೆಚ್ಚಿನ ಮಟ್ಟದ ಆಂಟಾಸಿಡ್ಗಳನ್ನು ಹೊಂದಿದ್ದು ಅದು ರಿಫ್ಲಕ್ಸ್ ಅನ್ನು ತಡೆಯಲು ಸಹಾಯ ಮಾಡುತ್ತದೆ. ಬಾಳೆಹಣ್ಣುಗಳು ಆಮ್ಲೀಯತೆಯನ್ನು ಕಡಿಮೆ ಮಾಡಲು ಮತ್ತು ರೋಗಲಕ್ಷಣಗಳನ್ನು ಕಡಿಮೆ ಮಾಡಲು ಸಹಾಯ ಮಾಡುವ ಪ್ರಮುಖ ಮನೆಮದ್ದುಗಳಲ್ಲಿ ಒಂದಾಗಿದೆ. ಬಾಳೆಹಣ್ಣನ್ನು ನಿಯಮಿತವಾಗಿ ಸೇವಿಸುವುದು ಆರೋಗ್ಯಕ್ಕೆ ಬಹಳ ಒಳ್ಳೆಯದು.

6. ದಾಲ್ಚಿನ್ನಿ

ದಾಲ್ಚಿನ್ನಿ, ನೈಸರ್ಗಿಕ ಆಂಟಾಸಿಡ್ ಆಗಿದ್ದು, ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ಆಹಾರ ಹೀರಿಕೊಳ್ಳುವಿಕೆಯನ್ನು ಹೆಚ್ಚಿಸುವ ಮೂಲಕ ಗ್ಯಾಸ್ಟ್ರಿಕ್ ಸಮಸ್ಯೆಗಳ ಲಕ್ಷಣಗಳನ್ನು ನಿವಾರಿಸಲು ನೆರವಾಗುತ್ತದೆ.

7. ತುಳಸಿ ಎಲೆಗಳು

ಮನೆಮದ್ದುಗಳ ಪಟ್ಟಿಯಲ್ಲಿ ಮತ್ತೊಂದು ಪ್ರಮುಖ ಪದಾರ್ಥ ತುಳಸಿ ಎಲೆಗಳು. ಈ ಎಲೆಗಳು ಆರೋಗ್ಯವನ್ನು ಸುಧಾರಿಸುತ್ತವೆ ಮತ್ತು ಉರಿಯೂತದ ವಿರುದ್ಧ ಹೋರಾಡಲು ದೇಹಕ್ಕೆ ಸಹಾಯ ಮಾಡುತ್ತವೆ.

8. ಬೆಚ್ಚಗಿನ ನಿಂಬೆ ನೀರು

ಬೆಚ್ಚಗಿನ ನಿಂಬೆ ನೀರನ್ನು ಕುಡಿಯುವುದರಿಂದ, ಹೆಚ್ಚಿನ ಮಟ್ಟದ ಆಮ್ಲ ಶೇಖರಣೆಯಾಗುವುದನ್ನು ತಡೆಗಟ್ಟಬಹುದು. ಒಂದು ಚಮಚ ತಾಜಾ ನಿಂಬೆ ರಸವನ್ನು ಒಂದು ಲೋಟ ನೀರಿನಲ್ಲಿ ಬೆರೆಸಿ, ಊಟಕ್ಕೆ 20 ನಿಮಿಷಗಳ ಮೊದಲು ಕುಡಿಯುವುದು ಆಹಾರವು ಪ್ರಚೋದಿಸಬಹುದಾದ ರೋಗಲಕ್ಷಣಗಳನ್ನು ತಡೆಯಲು ಸಹಾಯ ಮಾಡುತ್ತದೆ.

Leave a Reply

Your email address will not be published. Required fields are marked *