ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಆ. 22 : ಕೊಲ್ಕತ್ತಾದಲ್ಲಿ ಟ್ರೈನಿ ವೈದ್ಯೆ ಮೇಲೆ ಅತ್ಯಾಚಾರವೆಸಗಿ ಕೊಲೆಗೈದಿರುವ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಇನ್ನರ್ವೀಲ್ಹ್ ಕ್ಲಬ್ನಿಂದಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಕಚೇರಿಯ ಶಿರಸ್ತೆದಾರ್ಗೆ ಮನವಿ ಸಲ್ಲಿಸಲಾಯಿತು.
ಮದಕರಿನಾಯಕ ಸರ್ಕಲ್ನಿಂದ ಮೆರವಣಿಗೆ ಮೂಲಕ ಆಗಮಿಸಿದ ಪ್ರತಿಭಟನಾಕಾರರು ಟ್ರೈನಿ ವೈದ್ಯೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಹತ್ಯೆಗೈದಿರುವುದು ಇಡೀ ಮನುಕುಲವೆ ನಾಚಿ ತಲೆತಗ್ಗಿಸುವಂತಾಗಿದೆ. ಈ ವಿಚಾರವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿ ಅಮಾನವೀಯ ಕೃತ್ಯವೆಸಗಿರುವವರಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಇನ್ನರ್ವೀಲ್ಹ್ ಕ್ಲಬ್ ಅಧ್ಯಕ್ಷೆ ಪೂಜಾ ಪ್ರದೀಪ್ ಒತ್ತಾಯಿಸಿದರು.
ಇನ್ನರ್ವೀಲ್ಹ್ ಕ್ಲಬ್ ಕಾರ್ಯದರ್ಶಿ ನಮ್ರತಾ ದೇವರಾಜ್, ವೈಸ್ ಪ್ರೆಸಿಡೆಂಟ್ ವಿಜಯಕಿರಣ್, ಐ.ಪಿ.ಪಿ. ಮೋಕ್ಷರುದ್ರಸ್ವಾಮಿ, ಶ್ಯಾಮಲಶಿವಪ್ರಕಾಶ್, ಜ್ಯೋತಿಲಕ್ಷ್ಮಣ್,ಭಾಗ್ಯಮೂರ್ತಿ, ಬಿಜೆಪಿ. ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಶೈಲಜಾರೆಡ್ಡಿ ಹಾಗೂ ಕ್ಲಬ್ನ ಎಲ್ಲಾ ಸದಸ್ಯರು, ಚೈತನ್ಯ ಪಿ.ಯು.ಕಾಲೇಜಿನ ವಿದ್ಯಾರ್ಥಿಗಳು, ರೋಟರಿ ಹಾಗೂ ವಾಸವಿ ಸಂಸ್ಥೆಯವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.