ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಆ. 22 : ಅಖಿಲ ಭಾರತ ವೀರಶೈವ ಮಹಾಸಭಾ, ಬೆಂಗಳೂರು, ಕರ್ನಾಟಕ ರಾಜ್ಯ ಘಟಕದ ಕಾರ್ಯನಿರ್ವಾಹಕ ಸಮಿತಿಯ ಸಾಮಾನ್ಯ ಸದಸ್ಯರ ಚುನಾವಣೆಯು ಆ. 25. ರ ಭಾನುವಾರ ಬೆಳಿಗ್ಗೆ 8.ರಿಂದ ಸಂಜೆ 5 ರವರೆಗೆ ಡಿ.ಸಿ. ಸರ್ಕಲ್ನ ಎಸ್. ರಾಮ್ರೆಡ್ಡಿ, ಬಿ.ಎಂ. ಶಿವಮೂರ್ತಪ್ಪ,ರೋಟರಿ ಬಾಲ ಭವನದಲ್ಲಿ ನಡೆಯಲಿದೆ ಎಂದು ಚುನಾವಣಾಧಿಕಾರಿಗಳಾದ ಟಿ.ಪಿ. ಜ್ಞಾನ ಮೂರ್ತಿ ತಿಳಿಸಿದ್ದಾರೆ.
![](https://samagrasuddi.co.in/wp-content/uploads/2024/08/image-89.png)
ಕಾರ್ಯನಿರ್ವಾಹಕ ಸಮಿತಿಯ 27 ಸ್ಥಾನಗಳಿಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಒಟ್ಟು 57 ಅಭ್ಯರ್ಥಿಗಳು ಸ್ಪರ್ಧಿಸಿರುತ್ತಾರೆ. ಮಹಾಸಭೆಯ ಉಪಪೋಷಕ (ರೂ.2500/-) ಹಾಗೂ ಮೇಲ್ದಂತದ ಸದಸ್ಯರುಗಳು ಈ ಚುನಾವಣೆಯಲ್ಲಿ ಮತ ಚಲಾಯಿಸಲು ಅರ್ಹರಾಗಿರುತ್ತಾರೆ. ಒಬ್ಬರು 27 ಜನರಿಗೆ ಗರಿಷ್ಠ ಮತ ಚಲಾಯಿಸಲು ಹಕ್ಕುಳ್ಳವರಾಗಿರುತ್ತಾರೆ. ಅದೇ ದಿನದಂದು ಮತಗಳ ಎಣಿಕೆ ಕಾರ್ಯವು ನಡೆಯಲಿದ್ದು,ಎಲ್ಲಾ ಜಿಲ್ಲಾ ಮತ ಕೇಂದ್ರಗಳಿಂದ ವರದಿಗಳನ್ನು ಪಡೆದು ಅಂತಿಮವಾಗಿ ಮತ ಕೇಂದ್ರಗಳಿಂದ ಸ್ವೀಕರಿಸಿದ ಮತಗಳನ್ನು ಕ್ರೋಡಿಕರಿಸಿ.ವಿಜಯಶಾಲಿಗಳಾದ ಅಭ್ಯರ್ಥಿಗಳ ಹೆಸರುಗಳನ್ನು ಬೆಂಗಳೂರಿನಲ್ಲಿರುವ ಮಹಾಸಭೆಯ ಕೇಂದ್ರ ಕಛೇರಿಯಲ್ಲಿ ಘೋಷಿಸಲಾಗುವುದು.
ಚಿತ್ರದುರ್ಗ ಜಿಲ್ಲೆಯ ಆರು ತಾಲ್ಲೂಕುನಿಂದ 438 ಜನ ಸದಸ್ಯರು ಮತದಾನ ಮಾಡಲು ಅರ್ಹತೆಯನ್ನು ಹೊಂದಿದ್ದಾರೆ. ಇದರಲ್ಲಿ ಚಿತ್ರದುರ್ಗ.238, ಚಳ್ಳಕೆರೆ45, ಹಿರಿಯೂರು 27, ಹೊಳಲ್ಕೆರೆ 22, ಹೊಸದುರ್ಗ 49, ಮೊಳಕಾಲ್ಮೂರು 57 ಮತದಾರಿದ್ದಾರೆ. ಅಂದು 6 ತಾಲ್ಲೂಕಿನ ಮತದಾರರು ಚಿತ್ರದುರ್ಗದ ಮತಗಟ್ಟೆಗೆ ಬರುವುದರ ಮೂಲಕ ಮತದಾನ ಮಾಡು ವಂತೆ ಅಖಿಲ ಭಾರತ ವೀರಶೈವ ಮಹಾಸಭಾದ ಸದಸ್ಯರಿಗೆ ಮನವಿ ಮಾಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಘಟಕದ ಅಧ್ಯಕ್ಷರಾದ ಮಹಡಿ ಶಿವಮೂರ್ತಿ(ಮೊಬೈಲ್‍ನಂ:944812255)ಅಥವಾ ಚುನಾವಣಾಧಿಕಾರಿಗಳಾದ ಜ್ಞಾನಮೂರ್ತಿ(ಮೊಬೈಲ್‍ನಂ:9449974004)ದೂರವಾಣಿಯನ್ನು ಸಂಪರ್ಕಿಸಬಹುದಾಗಿದೆ.