ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಸೆ.2 : ಇಂದಿನ ಆಧುನಿಕ ಯುಗದಲ್ಲಿ ಸಂಸ್ಕೃತ ಪದ ಬರೀ ಭಾಷೆಯಾಗಿರದೇ ಭಾರತೀಯರ ಜೀವನಾಡಿಗಳಲ್ಲಿ ಪ್ರತಿಯೊಬ್ಬ ಮನುಷ್ಯನ ನಾಡಿಗಳಲ್ಲಿಯೂ ಹರಿದಾಡುವ ವಾಹಿನಿ ಎಂದರೆ ಸಂಸ್ಕೃತವಾಗಿದೆ. ಸಂಸ್ಕೃತವನ್ನು ಕಲಿತ ವಿದ್ಯಾರ್ಥಿಗಳು ಸಂಸ್ಕಾರವಂತರಾಗುತ್ತಾರೆ.ಸಮಾಜದಲ್ಲಿ ಸತ್ಪ್ರಜೆಗಳಾಗಿ ಹೊರ ಹೊಮ್ಮವುದು ಸಂಸ್ಕೃತ ಭಾಷೆಯಿಂದ ಎಂದು ಸಂಸ್ಕೃತ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕರಾದ ಪ್ರೋ ಸಿ.ಪಾಲಯ್ಯ ತಿಳಿಸಿದರು.
ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಬೆಂಗಳೂರು, ಸಂಸ್ಕೃತ ಶಿಕ್ಷಣ ನಿರ್ದೇಶನಾಲಯ ಬೆಂಗಳೂರು, ಕರ್ನಾಟಕ ಪ್ರೌಢಶಾಲಾ ಸಂಸ್ಕೃತ ಅಧ್ಯಾಪಕ ಸಂಘ ಚಿತ್ರದುರ್ಗ ಶಾಖೆ, ಚಿತ್ರದುರ್ಗ ಜಿಲ್ಲಾ ಸಂಸ್ಕೃತ ಪಾಠಶಾಲಾ ಆಧ್ಯಾಪಕರ ಸಂಘದ ಸಂಯುಕ್ತಾಶ್ರಯದಲ್ಲಿ ನಗರದ ಕಬೀರಾನಂದಾಶ್ರಮದ ಶ್ರೀ ಕಬೀರಾನಂದಸ್ವಾಮಿ ವೇದಿಕೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಂಸ್ಕೃತೋತ್ಸವ ಪ್ರತಿಭಾ ಪುರಸ್ಕಾರ, ಸ್ಫರ್ದೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಸಂಸ್ಕೃತ ಭಾಷೆ ಯಾವುದೇ ಒಂದು ಪಂಗಡಕ್ಕೆ ಸೀಮಿತವಾದ ಭಾಷೆಯಲ್ಲ, ಸುಮಾರು ಸಾವಿರಾರು ವರ್ಷಗಳಿಂದ ಭಾಷೆಯನ್ನು ಪ್ರಾಚೀನರು ಬಳಕೆ ಮಾಡುತ್ತಾ ಬಂದಿದ್ದಾರೆ. ಮಾತೃಭಾಷೆಯಾಗಿ ಸ್ವೀಕಾರ ಮಾಡಿದ್ದರಿಂದ ಇಂದಿನ ತಂತ್ರಜ್ಞಾನ ಯುಗದಲ್ಲಿಯೂ ಸಹಾ ಮಠಗಳಲ್ಲಿ ಆಶ್ರಮಗಳಲ್ಲಿ ಗುರುಕುಲದಲ್ಲಿ ಈ ಭಾಷೆ ನಿರಂತರವಾಗಿದೆ. ಸಂಸ್ಕೃತ ಭಾಷೆಯೂ ಬ್ರಿಟಿಷರ ಆಳ್ವಿಕೆಗಿಂತ ಹಿಂದೆಯೂ ಸಹಾ ಸಂಸ್ಕೃತ ಭಾಷೆ ಇತ್ತು ಎನ್ನುವುದಕ್ಕೆ ದಾಖಲೆ ಇದೆ. ಈ ಬಾಷೆ ಮೂಲಭೂತವಾಗಿ ಸಂಸ್ಕೃತಿಗೆ ಅಡಿಗಲ್ಲು ಆಗಿ ನಿಂತಿದೆ. ಲಾರ್ಡಮೆಖಾಲೆಯ ಪ್ರಕಾರ ಭಾರತ ದೇಶವನ್ನು ಒಡೆಯುವುದು ಅಷ್ಟು ಸುಲಭವಲ್ಲ ಏಕೆಂದರೆ ಇಲ್ಲಿ ಸಂಸ್ಕೃತಿ, ಸಂಸ್ಕಾರಕ್ಕೆ ಮೂಲವಾಗಿ ಇಲ್ಲಿನ ಶಿಕ್ಷಣ ಚನ್ನಾಗಿ ಇದೆ. ಇದರ ಬೆನ್ನು ಮೊಳೆಯನ್ನು ಮುರಿದಾಗ ಮಾತ್ರ ಭಾರತ ದೇಶವನ್ನು ಗೆಲ್ಲಲು ಸಾಧ್ಯ ಎಂದಿದ್ದರು ಇದರ ಅರ್ಥದಲ್ಲಿ ನಮ್ಮ ದೇಶದಲ್ಲಿ ಶಿಕ್ಷಣ ಚನ್ನಾಗಿ ಇದೆ ಇದನ್ನು ಮುರಿಯಲು ಯಾರಿಂದಲೂ ಸಹಾ ಸಾಧ್ಯವಿಲ್ಲ ಎಂದರು.
ಸಾಕ್ಷರತಾ ಇಲಾಖೆಯ ಉಪ ನಿರ್ದೆಶಕರಾದ ಎಂ.ಆರ್.ಮಂಜುನಾಥ್ ಮಾತನಾಡಿ, ಸಂಸ್ಕೃತ ಭಾಷೆ ಎಲ್ಲಾ ಭಾಷೆಗಳಿಗೆ ತಾಯಿ ಇದ್ದಂತೆ, ಇದರಲ್ಲಿ ಕಲೆ, ಸಾಹಿತ್ಯ, ಸಂಗೀತ, ಶಿಲ್ಪಕಲೆಗಳು ಅಡಗಿವೆ. ಸಂಸ್ಕೃತ ಭಾಷೆಯಿಂದ ಜ್ಞಾನವನ್ನು ಪಡೆಬಹುದಾಗಿದೆ. ಮಕ್ಕಳಿಗೆ ಸಂಸ್ಕೃತಿಯ ಜೊತೆಗೆ ಸಂಸ್ಕಾರವನ್ನು ಸಹಾ ಕಲಿಸಬೇಕಿದೆ. ಮಠಗಳು ಸಂಸ್ಕೃತ ಬಾಷೆಯನ್ನು ಕಲಿಸುವುದರ ಮೂಲಕ ಹಲವಾರು ಮಕ್ಕಳಿಗೆ ದಾರಿ ದೀಪವಾಗಿದ್ದಾರೆ. ಶಿಕ್ಷಕರು ವಿದ್ಯಾರ್ಥಿಗಳಿಗೆ ಸಂಸ್ಕಾರವನ್ನು ಕಲಿಸುವುದರ ಮೂಲಕ ಅವರನ್ನು ಉತ್ತಮ ಪ್ರಜೆಗಳನ್ನಾಗಿ ಮಾಡಿ, ಮಕ್ಕಳ ಪತ್ರಿಭೆಗೆ ಪ್ರೋತ್ಸಾಹವನ್ನು ನೀಡಿ ಎಂದರು.
ಕಾರ್ಯಕ್ರಮದ ಸಾನಿಧ್ಯವನ್ನು ವಹಿಸಿದ್ದ ಶ್ರೀ ಶಿವಲಿಂಗಾನಂದ ಶ್ರೀಗಳು ತಮ್ಮ ಆಶೀವರ್ಚನದಲ್ಲಿ ಸಂಸ್ಕೃತ ಭಾಷೆ ಎಲ್ಲಾ ಭಾಷೆಗಳಿಗೆ ಮೂಲವಾಗಿದೆ. ಬೇರೆ ಎಲ್ಲಾ ಭಾಷೆಗಳು ಬಳಸುತ್ತಾ ವಿಕೃತವಾಗುತ್ತವೆ ಆದರೆ ಸಂಸ್ಕೃತ ಭಾಷೆ ಈ ರೀತಿಯಾಗದೆ ಯಾಥಾ ಸ್ಥಿತಿಯನ್ನು ಕಾಪಾಡುತ್ತದೆ. ಹಿಂದಿನ ಕಾಲದಲ್ಲಿ ತಪಸ್ಸ್ನ್ನು ಪ್ರತಿಭೆಗೆ ಹೊಲಿಸು ತ್ತಿದ್ದರು, ಈ ಹಿಂದೆ ಸಂಸ್ಕೃತ ಬಾಷೆ ಕಲಿಯುವುದು ಕಷ್ಠವಾಗಿತ್ತು ಆದರೆ ಇಂದಿನ ದಿನಮಾನದಲ್ಲಿ ಅದನ್ನು ಸರಳಿಕರಣಗೊಳಿಸಿ ಸಾಮಾನ್ಯ ವ್ಯಕ್ತಿಯೂ ಸಹಾ ಓದಲು, ಬರೆಯಲು ಕಲಿಯುವಂತೆ ವಾತಾವರವಣವನ್ನು ನಿರ್ಮಾಣ ಮಾಡಿದ್ದಾರೆ. ಇಂದಿನ ದಿನದಲ್ಲಿ ಆಂಗ್ಲ ಬಾಷಾ ವ್ಯಾಮೋಹದಿಂದ ಕನ್ನಡ ಭಾಷೆಯ ಶಾಲೆಗಳು ಮುಚ್ಚುವಂತ ಸ್ಥಿತಿ ಬಂದಿದೆ. ಆದರೆ ಸಂಸ್ಕೃತ ಭಾಷೆಯನ್ನು ಕಲಿಯುವುದರ ಮೂಲಕ ಉತ್ತಮವಾದ ವೇತನವನ್ನು ಪಡೆಯಬಹುದಾಗಿದೆ.
ದೇಶ ವಿದೇಶಗಳಲ್ಲಿಯೂ ಸಹಾ ಮಾನ್ಯತೆಯನ್ನು ಪಡೆಯಬಹುದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಪ್ರೌಢಶಾಲಾ ಅಧ್ಯಾಪಕರ ಸಂಘದ ಸಂಪಾದಕೀಯ ಮಂಡಳಿ ಅಧ್ಯಕ್ಷರಾದ ಡಾ.ಕೆ.ಕೃಷ್ಣಮೂರ್ತಿ,
ಅಧ್ಯಕ್ಷರಾದ ಹೆಚ್.ಸಿ.ಗಂಗಾಧರಯ್ಯ, ಉಪಾಧ್ಯಕ್ಷರಾದ ರಾಜಣ್ಣ, ವಲಯ ಸಂಯೋಜಕರಾದ ಗೀರೀಶ್, ಲಕ್ಷ್ಮೀ ನಾರಾಯಣ,ಚಿತ್ರದುರ್ಗ ಸಂಸ್ಕೃತ ಪಾಠಶಾಲಾ ಅಧ್ಯಾಪಕರ ಸಂಘದ ಅಧ್ಯಕ್ಷರಾದ ಗಣಪತಿ ಶಾಸ್ತ್ರಿ ಉಪಸ್ಥಿತರಿದ್ದರು.
ಸುಬ್ರಾಯ್ ಭಟ್ಟರು ವೇದ ಘೋಷ ಮಾಡಿದರೆ, ಅನನ್ಯ ಮತ್ತು ಸಂಗಡಿಗರು ಪ್ರಾರ್ಥಿಸಿದರು, ಗುರುಮೂರ್ತಿ ಸ್ವಾಗತಿಸಿದರು, ಲಾಸಿಕಾ ಪೌಂಡೇಷನ್ನ ವಿದ್ಯಾರ್ಥಿಗಳಿಂದ ಭರತನಾಟ್ಯ ಕಾರ್ಯಕ್ರಮ ನಡೆಯಿತು. ನಂತರ ಎಸ್.ಎಸ್.ಎಲ್.ಸಿ.ಯಲ್ಲಿ ದ್ವೀತಿಯ, ತೃತೀಯ ಭಾಷೆಯಾಗಿ ಸಂಸ್ಕೃತವನ್ನು ತೆಗೆದುಕೊಂಡು ಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು ಹಾಗೂ ವಿವಿಧ ಸ್ಪರ್ದೆಯಲ್ಲಿ ವಿಜೇತರಾದವರನ್ನು ಗೌರವಿ ಸಲಾಯಿತು.