ಚಿತ್ರದುರ್ಗ ಸೆ. 18 : ಸೆ. 28 ರಂದು ನಡೆಯಲಿರುವ ಹಿಂದೂ ಮಹಾ ಗಣಪತಿಯ ಶೋಭಾಯಾತ್ರೆ ಸಾಗುವ ದಾರಿಯಲ್ಲಿನ ಕಟ್ಟಡ, ಅಂಗಡಿ ಮನೆಯ ಮೇಲೆ ಯಾರನ್ನು ಸಹಾ ಹತ್ತಿಸಬಾರದೆಂದು ಪೋಲಿಸ್ ಇಲಾಖೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ದಿ:28.09.2024 ರಂದು ಚಿತ್ರದುರ್ಗ ನಗರದಲ್ಲಿ ಹಿಂದೂ ಮಹಾ ಗಣಪತಿಯ ಶೋಭಾಯಾತ್ರೆಯು ನಡೆಯಲಿದ್ದು ಸದರಿ
ಶೋಭಾಯಾತ್ರೆಯು ತಮ್ಮ ಕಟ್ಟಡದ / ಅಂಗಡಿಯ / ಮನೆಯ ಮುಂಭಾಗ ಸಾಗಲಿದ್ದು ಈ ಹಿಂದಿನ ವರ್ಷಗಳಲ್ಲಿ ಗಮನಿಸಿದಂತೆ
ನೀವುಗಳು ಬಹಳಷ್ಟು ಜನ ಸಾರ್ವಜನಿಕರಿಗೆ ನಿಮ್ಮ ಕಟ್ಟಡದ ಮೇಲ್ಬಾಗ ಶೋಭಾಯಾತ್ರೆಯನ್ನು ವೀಕ್ಷಿಸಲು ಅವಕಾಶ ಕೊಡುತ್ತಿರುವುದು ಇಲಾಖೆಯ ಗಮನಕ್ಕೆ ಬಂದಿರುತ್ತದೆ. ಪ್ರಯುಕ್ತ ನೀವುಗಳು ಈ ಅಂಶಗಳನ್ನು ಪಾಲಿಸಲು ಸೂಚಿಸಿದೆ.
ನಿಮ್ಮ ಕಟ್ಟಡದ ಮೇಲ್ಬಾಗದಲ್ಲಿ ಯಾವುದೇ ಸಾರ್ವಜನಿಕರಿಗೆ ಹತ್ತಲು ಅವಕಾಶ ನೀಡತಕ್ಕದ್ದಲ್ಲ. ನಿಮ್ಮ ಕಟ್ಟಡದ ಸಮೀಪವೇ ವಿದ್ಯುತ್
ತಂತಿ ಹಾದು ಹೋಗಿದ್ದು ನಿಮ್ಮ ಕಟ್ಟಡದ ಮೇಲ್ಬಾಗದಲ್ಲಿ ಹತ್ತುವ ಸಾರ್ವಜನಿಕರಿಗೆ ವಿದ್ಯುತ್ ಸ್ಪರ್ಶವಾಗಿ ಅನಾಹುತಗಳು ಸಂಭವಿಸುವ
ಸಾಧ್ಯತೆ ಇರುತ್ತದೆ. ಕೆಲವು ಕಟ್ಟಡಗಳು ತುಂಬಾ ಹಳೇಯದಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರುಗಳು ಕಟ್ಟಡಗಳನ್ನು
ಹತ್ತುವುದರಿಂದ ಕಟ್ಟಡಗಳು ಕುಸಿದು ಅನಾಹುತಗಳು ಸಂಭವಿಸುವ ಸಾಧ್ಯತೆ ಇರುತ್ತದೆ. ಒಂದು ವೇಳೆ ನಿಮ್ಮ ಕಟ್ಟಡದ ಮೇಲೆ
ಸಾರ್ವಜನಿಕರು ಶೋಭಾಯಾತ್ರೆಯನ್ನು ವೀಕ್ಷಿಸುತ್ತಿರುವಾಗ ನಿಮ್ಮ ಕಟ್ಟಡದ ಕಾರಣದಿಂದಾಗಿ ಏನಾದರೂ ಅನಾಹುತಗಳು
ಸಂಭವಿಸಿದ್ದಲ್ಲಿ ನಿಮ್ಮುಗಳನ್ನೇ ನೇರ ಹೊಣೆಗಾರರನ್ನಾಗಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಆದ್ದುದರಿಂದ ನೀವುಗಳು
ಯಾವುದೇ ಕಾರಣಕ್ಕೂ ಸಾರ್ವಜನಿಕರಿಗೆ/ನಿಮ್ಮ ಸ್ನೇಹಿತರುಗಳಿಗೆ/ ಸಂಬಂಧಿಕರುಗಳಿಗೆ ನಿಮ್ಮ ಕಟ್ಟಡಗಳ ಮೇಲೆ ಹತ್ತಿಸಬಾರದು
ಎಂದು ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಮನವಿ ಮಾಡಿದೆ